ಪ್ರೇಮ ವೈಫಲ್ಯ: ವಾಸುಕಿ ರಾಘವನ್

ಎರಡು ಕನಸು, ಬಂಧನ, ಪಲ್ಲವಿ ಅನುಪಲ್ಲವಿ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಮಾನಸ ಸರೋವರ…ಹಾಗೂ “ಏ” ಚಿತ್ರಗಳಲ್ಲಿ ಮುಖ್ಯವಾಗಿ ಏನು ಕಾಮನ್ ಆಗಿದೆ? ಹೌದು, “ಪ್ರೇಮ ವೈಫಲ್ಯ”, ಅದರಲ್ಲೂ ಹೀರೋ ವೈಫಲ್ಯವನ್ನು ಅನುಭವಿಸೋದು! ಆದರೆ “ಏ” ಚಿತ್ರಕ್ಕೂ ಬೇರೆ ಚಿತ್ರಗಳಿಗೂ ಒಂದು ಪ್ರಮುಖ ವ್ಯತ್ಯಾಸ ಏನು ಗೊತ್ತಾ? ಈ ಸನ್ನಿವೇಶವನ್ನು ಹೀರೋ ಹ್ಯಾಂಡಲ್ ಮಾಡಿದ ರೀತಿ.

“ಎರಡು ಕನಸು” ಚಿತ್ರದಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಮರೆಯಲಾಗದ ನಾಯಕ, ಹೆಂಡತಿಯನ್ನು ಕಡೆಗಣಿಸುತ್ತಾನೆ.

“ಬಂಧನ” ಚಿತ್ರದಲ್ಲಿ ತಾನು ಇಷ್ಟ ಪಟ್ಟ ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಳ್ಳೋ ಹೊತ್ತಿಗೆ, ಆಕೆಗೆ ಮದುವೆ ಗೊತ್ತಾಗಿಬಿಟ್ಟಿರುತ್ತೆ. ಅವಳು ಸುಖವಾಗಿರಲಿ ಎಂದು ಹರಸಿ, ಕೆಮ್ಮಿ ಕೆಮ್ಮಿ ಪ್ರಾಣ ಬಿಡುತ್ತಾನೆ ಹೀರೋ.

“ಪಲ್ಲವಿ ಅನುಪಲ್ಲವಿ” ಅಲ್ಲಿ ವಿವಾಹಿತೆಯೊಬ್ಬಳಲ್ಲಿ ಅನುರಕ್ತನಾಗಿ ಕಡೆಗೆ ಅವಳಿಂದಲೂ, ತನ್ನ ಪ್ರೇಯಸಿಯಿಂದಲೂ ತಿರಸ್ಕೃತನಾಗುತ್ತಾನೆ ನಾಯಕ.

“ಅಮೆರಿಕಾ ಅಮೆರಿಕಾ” ಸಿನಿಮಾದಲ್ಲಿ ತಾನು ಇಷ್ಟ ಪಡೋ ಹುಡುಗಿಯ ಗಂಡ ಸತ್ತುಹೋದ ಮೇಲೆ ತಾನು ಅವಳನ್ನು ಮದುವೆ ಆಗಲು ಸಿದ್ಧ ಅಂತ ಹೇಳಿ, ಅವಳು ಒಪ್ಪದಿದ್ದಾಗ ಅವಳ ಗೆಳೆಯನಾಗಿ ಉಳಿಯಲು ತೀರ್ಮಾನಿಸುತ್ತಾನೆ.

“ಮಾನಸ ಸರೋವರ”ದಲ್ಲಿ ಪ್ರೀತಿ ಕೈಗೂಡದೇ ಇದ್ದಾಗ, ನಾಯಕ ಆ ಘಾಸಿಯಿಂದ ಹುಚ್ಚನಾಗುತ್ತಾನೆ. “ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ” ಅಂತ ಹಲುಬುತ್ತಾನೆ.

ತಾನು ಆಕರ್ಷಿತನಾಗುವ ಹೆಣ್ಣಿನ ಗಂಡನನ್ನು ಕೊಂದಿದ್ದರೂ, ಅವಳನ್ನು ತುಂಬಾ ಗೌರವದಿಂದ ಕಾಣುತ್ತಾನೆ “ಅಮೃತವರ್ಷಿಣಿ”ಯ ನಾಯಕ ಕಂ ಖಳನಾಯಕ!

ಆದರೆ “ಏ” ಚಿತ್ರದ ನಾಯಕ ನಾಯಕಿಗೆ ಕಪಾಳಕ್ಕೆ ಹೊಡೆಯುತ್ತಾನೆ. ಎಲ್ಲರೆದುರೂ ಅವಾಚ್ಯ ಶಬ್ದಗಳಿಂದ ಬೈತಾನೆ – ಕೇವಲ ಅವಳನ್ನಲ್ಲ, ಇಡೀ ಸ್ತ್ರೀ ಸಮುದಾಯವನ್ನು!

“ಏ” ಮತ್ತು “ಉಪೇಂದ್ರ” ಎರಡು ಚಿತ್ರಗಳೂ ಕೇವಲ ಸಿನಿಮೀಯ ದೃಷ್ಟಿಯಿಂದ ನೋಡಿದರೆ ಸಕ್ಕತ್ ಸಿನಿಮಾಗಳು. ಆಯ್ದುಕೊಂಡಿರುವ ವಿಷಯ, ಸಿನಿಮಾ ತೆರೆದುಕೊಳ್ಳುವ ರೀತಿ, ನಾನ್-ಲೀನಿಯರ್ ನಿರೂಪಣೆಯ ಬಳಕೆ, ವಿನೂತನವಾದ ಸಂಕಲನ, ವಿಚಿತ್ರವಾದ ಡಾರ್ಕ್ ಹ್ಯೂಮರ್ ಇವುಗಳಿಂದ ವಿಭಿನ್ನ ಚಿತ್ರಗಳು ಅನಿಸಿಕೊಂಡವು. ಕೆಟ್ಟ ಅಂಶಗಳು ಅಂದರೆ ಕಥೆಯಲ್ಲಿ ಸ್ವಲ್ಪ ಅತಿಯಾಯಿತು ಅನಿಸುವಷ್ಟು ತಿರುವುಗಳು, ನಟನೆಯಲ್ಲಿನ ಲೌಡ್ನೆಸ್ಸ್, ಗಟ್ಟಿತನವಿಲ್ಲದ ಪಾತ್ರಗಳು ಮತ್ತು ಸಿನಿಮಾ ಕಥೆಗೆ ಬೇಕಿರುವುದಕ್ಕಿಂತ ಬಹಳ ಹೆಚ್ಚಾಗಿ ಇರುವ ಸ್ತ್ರೀ ದ್ವೇಷ – ಹಾಗು ಅದನ್ನು ವೈಭವೀಕರಿಸಿರುವ ರೀತಿ! ಅಷ್ಟೇ ಆಘಾತಕಾರಿ ವಿಷಯ ಅಂದರೆ ಈ ಸ್ತ್ರೀ ದ್ವೇಷವನ್ನು ಮೆಚ್ಚುವ ಒಂದು ದೊಡ್ಡ ಪ್ರೇಕ್ಷಕ ವರ್ಗ ಸೃಷ್ಟಿ ಆಗಿರುವುದು!!

ಸಮಾಜದಲ್ಲಿ ಸ್ತ್ರೀಯರನ್ನು ಯಾವತ್ತೂ ಸಮಾನತೆಯಿಂದ ಕಂಡಿಲ್ಲ. ಅವರಿಗೆ ಅನೇಕ ಕಟ್ಟುಪಾಡುಗಳನ್ನು ವಿಧಿಸುತ್ತಾರೆ ಇಲ್ಲವೇ  ಅವರನ್ನು ದೇವತೆ, ಕ್ಷಮಯಾಧರಿತ್ರಿ, ಸಂಸ್ಕೃತಿಯನ್ನು ಕಾಪಾಡುವವಳು, ಅದೂ ಇದೂ ಅಂತ ಅನವಶ್ಯಕವಾಗಿ ನಿರೀಕ್ಷೆಗಳ ಹೊರೆಯನ್ನು ಹೇರುತ್ತಾರೆ. ಒಂದು ಹೆಣ್ಣು ತಾನೂ ಗಂಡಿನ ಸರಿಸಮಾನವಾಗಿ ಬದುಕಲು, ತನ್ನ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳಲು ದೊಡ್ಡ ಸಂಘರ್ಷವನ್ನೇ ಮಾಡಬೇಕಾಗುತ್ತೆ. ಈ ಹೋರಾಟಕ್ಕೆ ಸಿದ್ಧವಿಲ್ಲದ ಬಹುತೇಕ ಹೆಂಗಸರು “ಸ್ಟೇಟಸ್ ಕೋ” ಅನ್ನು ಒಪ್ಪಿಕೊಂಡು ಬದುಕುತ್ತಾರೆ. ಯಾರೋ ತಮಾಷೆಗೆ ಈ ಮಾತನ್ನು ಹೇಳಿದ ನೆನಪು – “ಎಲ್ಲಾ ಧರ್ಮಗಳ ಸಾರವೂ ಒಂದೇ. ಅದು ಏನೆಂದರೆ ಹೆಣ್ಣುಮಕ್ಕಳ ಜೀವನವನ್ನು ದುರ್ಭರಗೊಳಿಸುವುದು ಅಂತ”. ಈ ಮಾತಲ್ಲಿ ಸತ್ಯದ ಅಂಶ ಇಲ್ಲದಿಲ್ಲ!

ತೀರಾ ಇತ್ತೀಚಿನವರೆಗೂ ಬಹುತೇಕ ಹೆಂಗಸರಿಗೆ ಆರ್ಥಿಕ ಸ್ವಾತಂತ್ರ್ಯ ಇರಲಿಲ್ಲ. ಸಂತೋಷದ ವಿಚಾರ ಅಂದರೆ, ಇಂದು ಎಷ್ಟೋ ಹೆಂಗಸರು ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗಂಡ, ಮನೆ, ಮಕ್ಕಳು – ಇವುಗಳಿಂದ ಆಚೆಗೂ ತಮ್ಮ ಅಸ್ತಿತ್ವ ಇದೆ ಅನ್ನುವುದನ್ನು ಮನಗಂಡಿದ್ದಾರೆ. ಸಮಾನತೆಯ ಗುರಿ ಇನ್ನೂ ಬಹಳ ದೂರ ಇದೆ, ಆದರೆ ಕಳೆದ ಐವತ್ತು ವರ್ಷಗಳಲ್ಲಿ ತಕ್ಕ ಮಟ್ಟಿಗೆ ಪವರ್ ಶಿಫ್ಟ್ ಆಗಿದೆ. ಈ ಬದಲಾದ ಸಾಮಾಜಿಕ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಒಂದು ಹತಾಶ ವರ್ಗ ನಮ್ಮಲ್ಲೇ ಸೃಷ್ಟಿಯಾಗಿಬಿಟ್ಟಿದೆ. ಹಳೆಯ ಸಿನೆಮಾಗಳಲ್ಲಿ ಅಬ್ಬಬ್ಬಾ ಅಂದ್ರೆ “ನೀನೂ ಒಂದು ಹೆಣ್ಣಾ? ನಿನ್ನಂಥವರಿಂದ ಹೆಣ್ಣು ಜಾತಿಗೇ ಅವಮಾನ”, “ನೀನು ಹೆಣ್ಣಲ್ಲ ಕಣೇ, ಹೆಮ್ಮಾರಿ” ಮುಂತಾದ ಸಂಭಾಷಣೆಗಳು ಇರುತ್ತಿದ್ದವು. ಆ ಧೋರಣೆ ಸರಿ ಇಲ್ಲದಿದ್ದರೂ, ಅವರ ಆಕ್ಷೇಪಣೆ ಏನಿದ್ದರೂ ಆ ವ್ಯಕ್ತಿಯ ಮೇಲೆ ಇರುತ್ತಿತ್ತು. ಆದರೆ “ಏ” ಚಿತ್ರದಲ್ಲಿ ನೋಡಿ, ತನ್ನನ್ನು ಮೆಚ್ಚಿ ಬಂದ ಹುಡುಗಿಯನ್ನು ನಯವಾಗಿ ತಿರಸ್ಕರಿಸಲ್ಲ. ಅವಳಿಗೆ ಕಪಾಳಕ್ಕೆ ಬಿಗಿಯುತ್ತಾನೆ. ಅದೂ ತಾಳ್ಮೆತಪ್ಪಿ ಆವೇಶದಲ್ಲಿ ಅಲ್ಲ. ಪದೇಪದೇ, ಎಲ್ಲರ ಮುಂದೆ. ಅದಾದ ನಂತರವೂ ತಾನು ಮಾಡಿದ್ದರ ಬಗ್ಗೆ ಅವನಿಗೆ ಪಶ್ಚಾತ್ತಾಪ ಕೂಡ ಇರಲ್ಲ, ಅಥವಾ ಬೇರೆ ಪಾತ್ರಗಳ ಮೂಲಕ ಅವನ ಪಾತ್ರವನ್ನು ತಪ್ಪಿತಸ್ಥ ಅಂತ ತೋರಿಸಿಲ್ಲ. ಬದಲಿಗೆ ಅದನ್ನು ಹೀರೋಯಿಕ್ ಅನ್ನುವಂತೆ ಬಿಂಬಿಸಲಾಗಿದೆ. “ಉಪೇಂದ್ರ” ಚಿತ್ರದಲ್ಲೂ ಅಷ್ಟೇ, ಯಾರೋ ಒಬ್ಬಳು ಚನ್ನಾಗಿ ಡ್ರೆಸ್ ಮಾಡಿಕೊಂಡು ಹೋಗ್ತಾ ಇದ್ರೆ, ಅವಳನ್ನು ಅಡ್ಡ ಹಾಕಿ, “ಯಾಕೆ ಬೇರೆ ಗಂಡಸರನ್ನು ಮೆಚ್ಚಿಸೋಕೆ ಈ ರೀತಿ ವಯ್ಯಾರ ಮಾಡ್ತೀರೋ ನೀವು ಹೆಂಗಸರು?” ಅಂತ ಕೇಳುತ್ತಾನೆ. ಇಲ್ಲಿ “ಅವನು” ಕೇವಲ ಪಾತ್ರವಾಗದೇ ಆ ಹತಾಶ ವರ್ಗದ ವಕ್ತಾರನಾಗಿದ್ದಾನೆ!

ಈ ತರಹದ ಹೀರೋ ಪಾತ್ರಗಳು ಇತ್ತೀಚಿನ ಚಿತ್ರಗಳಲ್ಲಿ ಸರ್ವೇಸಾಮಾನ್ಯ ಆಗಿಬಿಟ್ಟಿವೆ. ತಾನು ಇಷ್ಟ ಪಟ್ಟ ಹುಡುಗಿ ತನ್ನನ್ನು ಪ್ರೀತಿಸದಿದ್ದರೆ, ಅವಳ ನಿರ್ಧಾರಕ್ಕೆ ಗೌರವ ಕೊಡಲ್ಲ ಹೀರೋ. ಅವಳು ದಡ್ಡಿ, ಅವಳಿಗೆ ಪ್ರೀತಿ ಅರಿವಾಗಿಲ್ಲ, ತಾನು ಅವಳಿಗೆ “ಮನದಟ್ಟು” ಮಾಡಿಸಬೇಕು ಅನ್ನೋ ಭ್ರಮೆಗೆ ಬೀಳ್ತಾನೆ. ಅಥವಾ “ನಂಗೇನೆ ಕಮ್ಮಿ ಆಗಿದೆ, ಎರಡು ಕಣ್ಣಿಲ್ವಾ, ಎರಡು ಕೈ ಇಲ್ವಾ, ಎರಡು ಕಾಲಿಲ್ವಾ?” ಅಂತ ಬಾಲಿಶ ತರ್ಕ ಮುಂದಿಡುತ್ತಾನೆ. ಅದೇ ಬೇರೊಬ್ಬಳು ಇವನ ಮೇಲೆ ಪ್ರೀತಿ ಇಟ್ಟುಕೊಂಡಿದ್ದರೆ, ಅವಳನ್ನು “ಗಂಡುಬೀರಿ” ಅಂತ ಹಂಗಿಸುತ್ತಾನೆ. ಎಂತಹ ಡಬಲ್ ಸ್ಟ್ಯಾಂಡರ್ಡ್ ಆಲ್ವಾ? ನಾನು ಮಾತ್ರ ಕೊಳಕು ಬಟ್ಟೆನೇ  ಹಾಕಿಕೊಳ್ತೀನಿ, ಬೇಜವಾಬ್ದಾರಿತನ ಮೈಗೂಡಿಸ್ಕೊತೀನಿ, ಹುಡುಗಿ ಹತ್ರ ಒರಟುಒರಟಾಗಿ ಮಾತಾಡ್ತೀನಿ – ಆದರೂ ನನ್ನನ್ನು ಹುಡುಗಿ ಮೆಚ್ಕೊಬೇಕು ಅಂತ ನಿರೀಕ್ಷಿಸುವ ಈ ರೀತಿಯ ಪಾತ್ರಗಳ ಬಗ್ಗೆ ನಗಬೇಕೋ ಅಳಬೇಕೋ ಗೊತ್ತಿಲ್ಲ!

ನನಗಿನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಅವನು ನನ್ನ ಕಾಲೇಜಿನವ, ಒಳ್ಳೆಯ ಅನುಕೂಲಸ್ಥ ಸುಶಿಕ್ಷಿತ ಕುಟುಂಬದ, ಚನ್ನಾಗಿ ಓದಿಕೊಂಡಿರುವ ಹುಡುಗ. ತಾನು ನೋಡಿ ಮೆಚ್ಚಿದ “ಏ” ಚಿತ್ರದ ಬಗ್ಗೆ ಸುದೀರ್ಘವಾಗಿ ಮಾತಾಡ್ತಿದ್ದ. “ಆ ಹೀರೋಯಿನ್ ಕೆನ್ನೆಗೆ ಫಟೀರ್ ಅಂತ ಬಾರಿಸಿ, ನಿನ್ನನ್ನು ಮುಟ್ಟಿ ಕೈ ಗಲೀಜಾಗೋಯ್ತು ಕಣೇ, ಅದಕ್ಕೆ ಕೈ ತೊಳ್ಕೊತಿದೇನಿ” ಅಂತ ಸೂಪರ್ರಾಗಿ ಡೈಲಾಗ್ ಹೊಡಿತಾನೆ ಅಂತ ಕಣ್ಣರಳಿಸಿಕೊಂಡು ಉತ್ಸಾಹದಿಂದ ಹೇಳುತ್ತಿದ್ದ. ನಾನೀಗಲೂ ಯೋಚಿಸ್ತೀನಿ – “ಅಸಹ್ಯ ಆಗಬೇಕಾದ ಆ ಸೀನು ಈ ಹುಡುಗನಿಗೆ ಯಾಕೆ ಅಷ್ಟು ಇಷ್ಟ ಆಗಿರಬಹುದು?” ಅಂತ. ಸಿಗೋ ಉತ್ತರ ಈಗಲೂ ನನ್ನನ್ನು ಬೆಚ್ಚಿಬೀಳಿಸುತ್ತೆ!

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
Santhosh Mugoor
Santhosh Mugoor
11 years ago

ನಿಜ. ಬಹಳ ಜನಕ್ಕೆ ಚಲನ ಚಿತ್ರವೊಂದು ಚಲನಚಿತ್ರ ನಿರ್ಮಾಣದ ದೃಷ್ಟಿಯಿಂದ ಚೆನ್ನಾಗಿದೆ ಆದ್ರೆ ಚಲನಚಿತ್ರವಾಗಿ ಅಲ್ಲ ಅಂದ್ರೆ ಅರ್ಥಾನೇ ಆಗಲ್ಲ.  ಸರಳವಾಗಿ ಹೇಳಬೇಕಾದ್ದನ್ನು ಹೇಳಿದ್ದೀಯಾ. ಬರಹ ಚೆನ್ನಾಗಿದೆ.

Utham
11 years ago

Upendrara A mathu upendra chithragalu agina cinima trendne change madidvu a samayadali enthade thumba cinimagallu bandvu yelavu mahila dhveshi agidvu avugalali z kuda ondu
Ennu prema vayfalyada kathegallu kannadadali thumba eve adrali kasthuri nivasada hesru sersbohudu
Thumba chenagidhe lekana shubhavagali

ಪ್ರಮೋದ್
11 years ago

ಪ್ರೇಮ ವೈಫಲ್ಯ ಗ೦ಡಿಗೆ ಕಾಡಿದಷ್ಟು ಹೆಣ್ಣಿಗೆ ಕಾಡುವುದಿಲ್ಲ(ಸಮಾಜದ ಅ೦ಬೋಣ ಹಾಗೆ.) ಪುರುಷ ಪ್ರಧಾನ ಸಮಾಜ ಈ ತರಹದ ಭಾವನೆಗಳನ್ನು ತು೦ಬಾ ಸ್ಟ್ರೋ೦ಗ್ ಆಗಿ ಬಿತ್ತಿದೆ. ತೆಗೆಯುವುದು ಕಷ್ಟ ಸಾಧ್ಯ. ದೇವ್ ದಾಸ್ ತರಹ ಸ್ತ್ರೀ ಪಾತ್ರ ಇಲ್ಲ.(ನನ್ನ ಸಣ್ಣ ತಿಳುವಳಿಕೆಯ ಮಟ್ಟಿಗೆ)
ಸಿನಿಮಾದಲ್ಲಿ ಬ್ಯಾಲೇನ್ಸಿ೦ಗ್ ಆಕ್ಟ್ ಇನ್ನೂ ಕಷ್ಟ. ಸಿನಿಮಾದಲ್ಲಿ ಅತಿಶಯೋಕ್ತಿ, ವಿಜೃ೦ಭನೆ ಇಲ್ಲದಿದ್ದರೆ ಜನರು ಸಪ್ಪ ಅ೦ತ ತಿಳಕೊತ್ತಾರೆ. ನಮ್ಮ ಆಚೆ-ಈಚೆ ನಡೆಯುವ ಕಥೆ ಯಾರಿಗೆ ನೋಡಲು ಇಷ್ಟವಿದೆ. ಮೈನ್ ಕ್ಯಾರೆಕ್ಟರ್ ಅನ್ನು ಮಿತಿಯಾಚೆಗೆ ತಳ್ಳಿ, ಉಳಿದ ಕ್ಯಾರೆಕ್ಟರ್ ಗಳನ್ನು ಶಾಲೋ ಮಾಡಿವುದು ಸದ್ಯದ ಟ್ರೆ೦ಡ್..ಬಹುಶ ಇನ್ನೈವತ್ತು ವರ್ಷಕ್ಕೂ ಇದೇ

Vasuki
11 years ago

ಪ್ರೇಮ ವಿಫಲತೆಯನ್ನು ತೀರಾ ತಲೆಗೆ ಹಚ್ಚಿಕೊಂಡು ಇಡೀ ಜೀವನ ಒದ್ದಾಡಿದ ಹೆಣ್ಣು ಪಾತ್ರಗಳು ಬಹಳ ಕಮ್ಮಿ ಅಂತಾನೆ ಹೇಳಬೇಕು. ಇನ್ಯಾವತ್ತಿಗೂ ಮದುವೆ ಆಗದೇ ಹೀಗೇ ಸನ್ಯಾಸಿನಿ ಥರ ಇದ್ದುಬಿಡ್ತೀನಿ ಅನ್ನೋ ಟೈಪ್ ಬಿಟ್ರೆ ಬೇರೆ ಪಾತ್ರ ನೋಡಿದ ನೆನಪೇ ಇಲ್ಲ!

Rajendra B. Shetty
11 years ago

ಉತ್ತಮ ಲೇಖನ. ನೀವು ಹೇಳಿದ ಎಲ್ಲಾ ಚಿತ್ರಗಳನ್ನು ನೋಡಿಲ್ಲ, ಹಾಗಾಗಿ ಆ ಸಿನೇಮಾಗಳ ಬಗ್ಗೆ ಹೇಳುವುದು ಸರಿಯಲ್ಲ. ಟೆಲಿವಿಷನ್ ನಲ್ಲಿ ಕೆಲವು ಹಾಡಿನ ದೃಶ್ಯಗಳಲ್ಲಿ ಹೆಣ್ಣಿನ ಬಗ್ಗೆ ಕೀಳಾಗಿ ವರ್ತಿಸುವುದನ್ನು ಕಂಡಿದ್ದೇನೆ – ಇದೊಂದು ದುರ್ದೈವದ ವಿಷಯ.
ಸ್ವಾಮಿ ವಿವೇಕಾನಂದರು ವಿದೇಶಿಯರಿಗೆ ಹೇಳಿದ ಮಾತಿನ ನೆನಪಾಗುತ್ತದೆಃ ನಾವು ಸ್ತ್ರೀಯರನ್ನು ನಮ್ಮ ಸಮಾನರಾಗಿ ನೋಡುತ್ತಿಲ್ಲ, ಅವರನ್ನು ನಮಗಿಂತಲೂ ಮೇಲ್ಮಟ್ಟದಲ್ಲಿ ನೋಡುತ್ತೇವೆ. ಈಗ ಇವೆಲ್ಲಾ ಪುಸ್ತಕದ ಮಾತಾಗಿದೆ.
ಬರೇ ಸಿನೇಮಾ ಅಲ್ಲ, ಪತ್ರಿಕೆಗಳೂ ಹೆಣ್ಣನ್ನು ಕೀಳಾಗಿ ಚಿತ್ರಿಸುತ್ತವೆ.

Adesh Kumar C T
11 years ago

ಕೊನೆಯ ಸಾಲಿನ ಪ್ರಶ್ನೆಗೆ ಇದು ಉತ್ತರವಾಗಬಹುದೇನೊ,

ಆ ಚಿತ್ರದಲ್ಲಿ ಹುಡುಗಿ ಅವನನ್ನು ಪ್ರೀತಿಸಿ ಮಧ್ಯದಲ್ಲಿ ಪ್ರೀತಿಸುವುದಿಲ್ಲ ಎಂದೇಳುತ್ತಾಳೆ. ಆಗ ಅವಳ ಹಿಂದೆ ನೀನೇ ಬೇಕು ಎಂದು ಅಲೆಯುವ ಬದಲು, ನೀನಿಲ್ಲದೇ ಬದುಕಬಲ್ಲೇ ಎಂಬುದನ್ನು ತೋರಿಸಿದ್ದು ನನ್ನಂತ ಹುಡುಗರಿಗೆ ಏನೋ ಒಂದು ಹೊಸದಾದ ಕಥೆಯನ್ನೇ ಹೇಳಿದಂತಿತ್ತು, ಆದ್ದರಿಂದಲೇ ಅದು ಇಷ್ಟವಾಗಿದ್ದು. ಕೊನೆಗೆ ಆಕೆ ತಿರಸ್ಕರಿಸಿದ್ದಕ್ಕೆ ಕಾರಣವನ್ನು ತಿಳಿದು ಅದೇ ಹುಡುಗ ಕೊರಗಿರುತ್ತಾನೆ. ಅದರೆ ತಿರಸ್ಕರಿಸಿದ ಹುಡುಗಿಯ ಹಿಂದೆ ಹೋಗದೆ ಹೀಗೂ ಇರಬಹುದು ಎಂಬುದು ಒಂದು ವಿಬಿನ್ನತೆಯಿಂದಾಗಿ ಇಷ್ಟವಾಯಿತೇ ಹೊರತು ಬೇರೆ ಯಾವುದೇ ಕಾರಣದಿಂದಲ್ಲ.

Vasuki
11 years ago

ನಿಮಗೆ "ನಾನು ಚನ್ನಾಗಿ ಬದುಕಿ ತೋರಿಸ್ತೀನಿ" ಅನ್ನೋ ಕಾರಣದಿಂದ ಆ ಪಾತ್ರ ಇಷ್ಟ ಆಗಿದ್ರೆ ಅದು ಸಂತೋಷದ ವಿಚಾರ! 🙂

ವೆಂಕಟೇಶ ಮಡಿವಾಳ ಬೆಂಗಳೂರು ( ಸಪ್ತಗಿರಿವಾಸಿ )
ವೆಂಕಟೇಶ ಮಡಿವಾಳ ಬೆಂಗಳೂರು ( ಸಪ್ತಗಿರಿವಾಸಿ )
11 years ago

 
 
ನೀವ್ ಹೇಳಿದ ಎಲ್ಲ ಚಿತ್ರಗಳನ್ನು ನಾ ನೋಡಿರುವೆ .. ಹಾಗೆಯೇ ಆ ಚಿತ್ರಗಳು ಅವನ್ನು ನೋಡುವ ಪ್ರೇಕ್ಷಕರ  ಮೇಲೆ ಬೀರಿದ ಬೀರುವ ಪರಿಣಾಮ ಸಹ ಅಂದಾಜಿಸಬಹುದು .. 
 
 
ಎ  ಚಿತ್ರ ನಿಜಕ್ಕೂ ವಿಭಿನ್ನ … ಆ ಸಮಯದಲ್ಲಿ ಒಂಥರಾ ವಿ ಚಿತ್ರ .,ಚಿತ್ರ , ಹಾಗೆಯೇ ಉಪೇಂದ್ರ ಚಿತ್ರ ಸಹ..  ಸಮಾಜದ , ಕೆಲ ಕ್ಜನರ ವಿಕೃತಿಯನ್ನ  ಬಹುಪಾಲು ಜನ ಕಣ್ಣಾರೆ ನೋಡದ್ದನ್ನ – ನೋಡಿದರೂ ಹೇಳದ್ದನ್ನ ಓಪನ್ನಾಗಿ  ಹೇಳಿದ ವಿಧಾನ  ಅದು .. 
 
೨೫ ನೆ  ವಿಶೇಷಾ೦ಕಕ್ಕೆ ನೀವು  ಚಿತ್ರ ಜಗತ್ತಿನ – ಚಿತ್ರಗಳ ಬಗ್ಗೆ  ವಿಶೇಷ ಬರಹ (ಜಗತ್ತಿನ ಅತ್ಯುತ್ತಮ ಚಿತ್ರಗಳು /ಕಥೆ /ನಿರ್ದೇಶಕರು / ಕಥಾ ವಸ್ತು /ನಟನೆ ಇತ್ಯಾದಿ )ಬರೆದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನ್ನುವುದು ನನ್ನ ಭಾವನೆ . 
ಅನ್ಯಥಾ ಭಾವಿಸಲಾರಿರಿ ಎನ್ನುವ ಭಾವದಲ್ಲಿ 
 
ಶುಭವಾಗಲಿ 
 
\।/

Vasuki
11 years ago

ಈ ವಿಷಯದ ಬಗ್ಗೆ ಬರೆಯಬೇಕು ಅಂತ ತುಂಬಾ ದಿನದಿಂದ ಅನ್ಸಿತ್ತು! ಒಂದು ಚಿತ್ರದ ಪರಿಚಯ, ಅದರ ಬಗ್ಗೆ ವಿಮರ್ಶೆ – ಈ ವಿಧಾನದಿಂದ ಏಕತಾನತೆ ಉಂಟಾಯಿತೇನೋ ಅನಿಸೋಕೆ ಶುರು ಆಗಿತ್ತು, ಹಾಗಾಗಿ ಬೇರೆ ಪ್ರಯತ್ನ ಮಾಡಿದೆ ಅಷ್ಟೇ. ನಿಮಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಿದ್ದೀರ, "ಅನ್ಯಥಾ ಭಾವಿಸುವ" ಪ್ರಮೇಯವೇ ಇಲ್ಲ!

prashasti.p
11 years ago

ಇಂಗ್ಲೀಷ್ ಸಿನಿಮಾಗಳಿಂದ ಕನ್ನಡಕ್ಕೆ ಬಂದ ಪರಿ ಇಷ್ಟವಾಯಿತು 🙂

Vasuki
11 years ago
Reply to  prashasti.p

ಸಿನಿಮಾ ವಿಚಾರದಲ್ಲಿ ನನಗೆ ಭಾಷೆಯ ಬೇಧಭಾವ ಇಲ್ಲ! ಹಾಗಾಗಿ ಒಂದರಿಂದ ಇನ್ನೊಂದಕ್ಕೆ 'ಬರುವ' ಪ್ರಶ್ನೆ ಉದ್ಭವಿಸೋಲ್ಲ 😉
'ಸಿನಿಮಾ' ಅನ್ನೋದೇ ಒಂದು ಭಾಷೆ ಅನ್ನೋದು ನನ್ನ ಅಭಿಪ್ರಾಯ 🙂

Bhavani Bharawaj
Bhavani Bharawaj
11 years ago

ee baraha tumbaane chennagide. neevu heLiruva "ಇಲ್ಲವೇ  ಅವರನ್ನು ದೇವತೆ, ಕ್ಷಮಯಾಧರಿತ್ರಿ, ಸಂಸ್ಕೃತಿಯನ್ನು ಕಾಪಾಡುವವಳು, ಅದೂ ಇದೂ ಅಂತ ಅನವಶ್ಯಕವಾಗಿ ನಿರೀಕ್ಷೆಗಳ ಹೊರೆಯನ್ನು ಹೇರುತ್ತಾರೆ" anno maatu eshtu nija alva! 'A', 'Upendra' dantaha chitragaLalli heNNannu heege nadesikolluvudakko ee anavashyaka nireekshegaLe kaaraNa. namma sammaja heNNina vishayadalli ondu benchmark srushTisiTTukonDide. obba heNNu mele neevu heLiruvante 'devate'ya category-ge seradiddare avaLu 'naachikegeTTa ganDubeeri'yE aagirabeku annodu samajada niluvu. naanu devateyoo alla nachikegeTTavaLoo alla anta badukabayasuva heNNumakkaLa existence-annu gouravisuvudirali, oppikolluvudE namma samajakke kashTa. 'Upendra' chitravannu kaLeda varsha matte noDidaga nanagoo heegE anisittu. devateyoo aagabayasada, raakshasiyoo allada hudugiyarannu keeLaagi nadesikondu age old aada 'devateyantaha hennumagalu' concept annu glorify maaDuvudE cinemaa-da hidden agenda anisittu. Illi neevu adeshtu chennagi vivarisiddeera!

12
0
Would love your thoughts, please comment.x
()
x