ಪ್ರೇಮ: ಕೊಟ್ರೇಶ್ ಕೊಟ್ಟೂರು

ಈ ಪ್ರೀತಿ ಅನ್ನೋದು ಒಂಥರಾ ಹಾವು ಏಣಿಯ ಆಟ. ಮೊದಮೊದಲು ಪ್ರೀತಿ ನಮಗೆ ಗೊತ್ತಿಲ್ಲದೇ, ಪರಿಚಯ ಇಲ್ಲದೇ ಇರೋರ ಮೇಲೆ ಸಡನ್ ಆಗಿ ಹುಟ್ಕೊಳುತ್ತೆ. ನೋಡಿದ ಕೂಡಲೇ ಹುಟ್ಟುವ ಪ್ರೀತಿ ನಿಜವಾ ಅಥವಾ ಇನ್‍ಫ್ಯಾಚುಯೇಷನ್ನಾ ? ತೀವ್ರ ಗೊಂದಲದಲ್ಲೇ ಇರುತ್ತೇವೆ ಅದು ಮಾನಸಿಕವಾ ? ಅಥವಾ ದೇಹದಲ್ಲಾಗುವ ದೈಹಿಕ ಬದಲಾವಣೆಗಳಾ ? ಹಾಗಂತ ಕಂಡ ಕಂಡವರ ಮೇಲೆ ಪ್ರೀತಿ ಹುಟ್ಟುವುದು ನಿಜವಾದ ಪ್ರೀತಿ ಅಲ್ಲವೇ ಅಲ್ಲ. ಈ ಪ್ರೀತಿಯ ಬಗೆಗೆ ಒಂದಷ್ಟು ಗೊಂದಲ ನನ್ನನ್ನು ಈಗಲೂ ಕಾಡಿದೆ. ಹಾಗಂತ ನಾನು ಯಾರನ್ನೂ ಪ್ರೀತಿಸಿಲ್ಲ ಎಂತಲ್ಲ ನಾನೂ ಪ್ರೀತಿಸಿದ್ದೆ ಆದರೆ ಆ ಪ್ರೀತಿ ನನಗೆ ಸಿಗಲಿಲ್ಲ. ಕಾರಣಗಳನ್ನು ಹೇಳುವ ಅವಶ್ಯಕತೆ ಇಲ್ಲ. ಆ ಪ್ರೀತಿ ಮಾಡುವ ಮನಸಿಗೆ ಅವರ್ಯಾರು ? ಜಾತಿ ಯಾವುದು ? ಉಳ್ಳವರಾ ಅಥವಾ ಇಲ್ಲದವರಾ ? ಅನ್ನೋ ಯಾವ ನಿಬಂದನೇನೂ ಇರಲ್ಲ.

ಅವರಿಗೆ ಪ್ರಪೋಸ್ ಮಾಡೋವರೆಗೆ ಒಂಥರಾ ಯಾರ ಸಹಾಯವಿಲ್ಲದೇ ರೆಕ್ಕೆಗಳು ಬಂದ ಹಕ್ಕಿಗಳಾಗಿ ನಾವೇ ಆಗಸದಲ್ಲಿ ಹಾರಾಡ್ತಾ ಇದೀವೇನೋ ಅನ್ನೋ ಅನುಭವ ಎಷ್ಟೇ ಕಷ್ಟ ಇದ್ರೂ ಸುಖದಲ್ಲಿ ತೇಲಾಡ್ತಾ ಇದೀವಿ ಅಂತ ಅನುಭವಾನೇ ಇರುತ್ತೆ. ಅವಳೊಂದು ಜೊತೆಗಿದ್ದರೆ ಸಾಕು ಇನ್ನೇನೂ ಬೇಡ. ಬರೀ ಅವಳ ನೆರಳಲ್ಲೇ ನಡೆದುಬಿಟ್ಟರೆ ಜೀವನ ಸಾರ್ಥಕ ಎನ್ನುವ ಬಾಲಿಶವಾದ ಮಾತುಗಳು ಆ ಸಂದರ್ಭದಲ್ಲಿ ಬರುವುದು ಸಹಜ. ಇದಕ್ಕೆ ನಾನೂ ಹೊರತಾಗಿಲ್ಲ. ಅವಳು ಒಪ್ಕೊತಾಳೆ ಜೊತೆಯಾಗ್ತಾಳೆ ಲೈಫ್ ಸ್ಟ್ರಗಲ್ ಮಾಡಿದ್ರೂ ನಾನಂದುಕೊಂಡ ಹಾಗೇನೆ ಒಪ್ಕೊಂಡಳು ಅಂತ ಪ್ರಪೋಸ್ ಮಾಡಿ ಅವಳು ಒಪ್ಕೊಂಡ ಮೇಲೆ ಗೊತ್ತಾಗತ್ತೆ. ಅವಳೂ ನನ್ನ ಹಾಗೇ ನನ್ನನ್ನೂ ಪ್ರೀತಿಸುತ್ತಿದ್ದಾಳೆ ಎಂದು.

ಇವೆಲ್ಲ ಒಂಥರಾ ಮನಸ್ಸು ಮುದಗೊಳಿಸುವ ವಿಷಯಗಳು. ಆದರೂ ಸಹ ಆ ಬದುಕಿನಲ್ಲಿ ನಮ್ಮ ಗುರಿಯ ಕಡೆ ಲಕ್ಷ್ಯ ವಹಿಸಲೇಬೇಕು. ಪ್ರೀತಿ ಇದೆ ಎಂದ ಮಾತ್ರಕ್ಕೆ ಜೀವನ ನಡೆಸಲು ಸಾಧ್ಯವಿಲ್ಲ. ಬದುಕಿಗೆ ಪ್ರೀತಿ ಎಷ್ಟೊಂದು ಮುಖ್ಯವೋ, ಹಾಗೆಯೇ ಜೀವನ ನಡೆಸಲು ನಮ್ಮ ನಮ್ಮದೇ ಆದ ದಾರಿಗಳೂ ಬಹಳ ಮುಖ್ಯ ಆಗ್ತವೆ. ಇಲ್ಲವಾದರೆ ಅದೇ ಪ್ರೀತಿಯೇ ನಮಗೆ ಮುಳ್ಳಾಗಿ ಬಂದಿರುವ ಅದೆಷ್ಟೋ ಜೀವಂತ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ.

ಒಂದುವೇಳೆ ಪ್ರಪೋಸ್ ಮಾಡ್ತಿದೀನಿ ಅಂತ ಗೊತ್ತಾದ ತಕ್ಷಣವೇ ಅವಳ ನಿರಾಕರಣೆ ಇದೆಯಲ್ಲ ಅದೊಂಥರಾ ಸೂಸೈಡ್‍ಗಿಂತ ಅಪಾಯ. ಅಂತ ಅಪಾಯಗಳಲ್ಲಿ ಎಲ್ಲಿ ನಮಗೆ ನಾವೇ ನಾಶ ಮಾಡ್ಕೋತೀವೋ ಅನ್ನೋ ಭಯ, ಏನಿಕ್ಕೆ ಬೇಕು ಈ ಜೀವನ ಅವಳಿಲ್ಲದೇ ಬದುಕೋದ್ ಹೇಗೆ ? ಹೇಗಿದ್ದರೂ ಒಂದಿನ ಸಾಯಲೇಬೇಕು ಅದು ಇವತ್ತೇ ಆದರೆ ಆಗಲಿ ಅನ್ನೋ ಮೊಂಡು ಧೈರ್ಯಕ್ಕೆ ಕೈ ಹಾತೊರೆಯುತ್ತೆ. ಸಾವು ಒಂದಿನ ಎಲ್ಲರಿಗೂ ಬಂದೇ ಬರತ್ತೆ ಹುಟ್ಟಿನ ಜೊತೆಗೆ. ಹಾಗಂತ ಸಾಯೋದ್ ಸರೀನಾ ? ತಪ್ಪಾ ಇದೇ ಯೋಚನೆ. ಆದರೆ ನಮ್ಮ ಜೀವವನ್ನೇ ನೆಚ್ಚಿಕೊಂಡು ಮನೆಯಲ್ಲಿ ಉಳಿದ ಜೀವಗಳೂ ಇರುತ್ತವೆ. ಅವರಿಗಾದರೂ ನಾವು ಬದುಕಲೇಬೇಕು. ಅವಳು ಕೈ ಕೊಟ್ಟಳೆಂದು ಸುಮ್ಮನೆ ಏನೇನೋ ಕೆಟ್ಟ ಆಲೋಚನೆಗಳನ್ನು ಮಾಡುವ ಬದಲು ಬದುಕಿನ ದಾರಿಗೆ ಒಂದು ಗುರಿಯಿಟ್ಟು ನಡೆದುಬಿಡಿ. ನಿಮ್ಮನ್ನು ನಿರ್ಲಕ್ಷ್ಯ ಮಾಡಿದವರೇ ಮುಂದೊಂದು ದಿನ ಎಂತವನನ್ನು ನಾನು ಮಿಸ್ ಮಾಡ್ಕೊಂಡೆ ಅನ್ನುವ ಆಲೋಚನೆ ಖಂಡಿತಾ ಬರುತ್ತೆ.

ಆದರೆ ನೀವು ಆ ತರಹ ಬದುಕಬೇಕು. ಸಮಾಜಕ್ಕೆ ನಾವು ಹುಟ್ಟಿದ ಮನೆಗೆ ನಾವು ಏನು ಅನ್ನೋದನ್ನು ತೋರಿಸಲೇಬೇಕು. ಸುಮ್ಮನೆ ಒಂದು ಹುಡುಗಿ ಕೈ ಕೊಟ್ಟಳು, ಅವಳು ಸರಿ ಇಲ್ಲ. ನನಗೇನ್ ಕಡಿಮೆಯಾಗಿತ್ತು ಇಂತಹ ನಾನ್ ಸೆನ್ಸ್ ಆಲೋಚನೆಗಳನ್ನು ಅವರು ತಿರಸ್ಕಾರ ಮಾಡಿದಾಗಲೂ ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಬದುಕು ನಡೆಯುವುದಾದರೂ ಹೇಗೆ ? ಎಲ್ಲರ ಬದುಕಿಗೂ ಒಬ್ಬ ಪ್ರೇಯಸಿ ಬಂದೇ ಬರುತ್ತಾರೆ. ಅದಕ್ಕಾಗಿಯೇ ನೀವು ನಿಮ್ಮೆಲ್ಲ ಸಮಯವನ್ನು ಕಳೆಯುವುದರ ಬದಲು ಬೇರೆಯ ಗುರಿ ಕಡೆಗೆ ಲಕ್ಷ್ಯ ವಹಿಸಿದರೆ ನಿಮ್ಮ ಜೀವನವೂ ಸಹ ಒಂದು ಸ್ಟೀಲ್ ಮೇಟ್ ಬರುತ್ತೆ.

ಇನ್ನು ಹುಡುಗಿಯರ ವಿಷಯಕ್ಕೆ ಬಂದರೆ ಅದೆಷ್ಟೋ ಹುಡುಗಿಯರು ನಿಜವಾದ ಪ್ರೀತಿ ಇದ್ದರೂ ಮನಸ್ಸೊಳಗೆ ಇಷ್ಟ ಪಡುತ್ತಲೇ ಮನೆಯವರ ಒತ್ತಾಯಕ್ಕೆ, ಸಮಾಜದ ಒತ್ತಡಕ್ಕೆ, ಜಾತಿಯ ಒತ್ತಡಕ್ಕೆ, ಅಂತಸ್ತಿನ ಒತ್ತಡಕ್ಕೆ ಮಣಿದು ತಮ್ಮೊಳಗಿನ ಪ್ರೀತಿಯನ್ನೇ ಕೊಂದುಬಿಡುತ್ತಾರೆ. ಪ್ರೀತಿ ಇದೆ ಎಂದ ಮೇಲೆ ಕನಿಷ್ಟ ಪಕ್ಷ ತಾನು ಪ್ರೀತಿಸುವ ಹುಡುಗನಿಗಾದರೂ ತಿಳಿಸಲೇಬೇಕು. ಸುಮ್ಮನೆ ಅವನಿಲ್ಲದಿದ್ದರೆ ನಾನು ಇರೋಲ್ಲ. ಬೇರೆ ಮದುವೇನೂ ಆಗಲ್ಲ ಎನ್ನುವಂತಹವರು ಸಹ ನಮ್ಮ ಮಧ್ಯದಲ್ಲಿ ಇದ್ದಾರೆ. ಬಟ್ ಅವರು ತೋರಿಸುವುದಿಲ್ಲ. ಇರಲಿ.

ಈ ಪ್ರೀತಿ ಅನ್ನೋದೇ ಒಂದು ಮಾಯೆ ಇದು ಲೈಫ್ ಸೆಟಲ್ ಆಗಿ ಜೀವನ ಸುಗಮವಾಗಿದೆ ಯಾವ ಆತಂಕಗಳೂ ಇಲ್ಲ. ದುಡಿದೇ ಇದ್ರೂ ಆಸ್ತಿ ಅಂತಸ್ತುಗಳಲ್ಲೇ ಬದುಕಬಹುದು ಎನ್ನುವವರ ಜೀವನದಲ್ಲೇ ಹೆಚ್ಚು ಸಕ್ಸಸ್ ಆಗೋದು ಅಂತದರಲ್ಲಿ ಏನೂ ಇಲ್ಲದವರ ಹತ್ತಿರ ಖಾಲಿ ಕೈಗಳನ್ನು ಪ್ರೀತ್ಸೋಕೆ ಕೆಲವೊಬ್ರು ಹಿಂದುಮುಂದು ನೋಡ್ತಾರೆ ಅದು ತಪ್ಪಲ್ಲ ಅವರಿಗೂ ಎಷ್ಟೋ ಕನಸು ಇರ್ತವೆ. ನಾವ್ ಹೇಗ್ ಲೈಫ್ ಎಂಜಾಯ್ ಮಾಡಬೇಕೆಂದು ಯೋಚಿಸಿರುತ್ತೇವೆಯೋ ಹಾಗೇ ಅವರೂ ಸಹ. ಆದರೆ ಈ ಹೊತ್ತಿನಲ್ಲಿ ಬರೀ ಮುಖ, ಹಣ, ಅಂತಸ್ತು ನೋಡಿ ಪ್ರೀತಿ ಮಾಡೋರ ಸಂಖ್ಯೆಯೇ ಜಾಸ್ತಿ. ಅವನ ಜೀವನವೇ ನನ್ನ ಒಪ್ಪಿಗೆ ಮೇಲೆ ನಿಂತಿದೆ ಅಂತ ಒಂದು ಕ್ಷಣ ಯೋಚಿಸಿದರೆ ಅವನ ಹಿಂದಿರುವ ಕುಟುಂಬನಾ ರಕ್ಷಿಸಿದಂತೆ ಅಂತ ಯಾಕ್ ಯೋಚಿಸಲ್ಲ.

ಲೈಫ್ ಅಂದರೆ ಬರೀ ಹಣ, ಆಸ್ತಿ, ಸಂಪತ್ತೇನಾ ? ಬಡವನಾದವನಿಗೆ ಪ್ರೀತ್ಸೋ ಅರ್ಹತೆಯೇ ಇಲ್ಲವಾ ? ಹಾಗೆ ನೋಡಿದರೆ ಬಡವನಾದವನ ಪ್ರೀತಿಯೇ ಕೊನೆಯವರೆಗೂ ಅದೇ ಅರ್ಧ ರೊಟ್ಟೀಲಿ ಅವಳ್ನ ರಾಣಿ ತರ ನೋಡ್ಕೊಂಡಿರ್ತಾನೆ. ಕೊನೆಯವರೆಗೊ ಜೊತೆಗೇ ಹೆಜ್ಜೆ ಹಾಕ್ತಿರ್ತಾನೆ…

ಈ ಪ್ರೀತಿ ಎನ್ನುವ ವಿಷಯದಲ್ಲಿ ಎಲ್ಲರವೂ ತರಹೇವಾರಿ ಆಯ್ಕೆಗಳು. ಯಾವುದು ಆರಿಸಿಕೊಳ್ಳಬೇಕು ? ಯಾವುದನ್ನು ಬಿಡಬೇಕು ಎನ್ನುವುದು ಅವರವರ ಇಚ್ಛೆ, ಈ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ನಾನು ಬಿದ್ದಿದ್ದೆ ಒಂದು ಕಾಲದಲ್ಲಿ ಎನ್ನುವುದರಿಂದ ಮಾತ್ರ ಈ ಮಾತುಗಳು ನನ್ನಿಂದ ಬರಲು ಸಾಧ್ಯವಾಗಿವೆ. ಈ ಬರಹವನ್ನು ತಾವು ಹೇಗೆ ತೆಗೆದುಕೊಳ್ಳುತ್ತೀರೋ, ವಿಮರ್ಶಿಸುತ್ತಿರೋ ಎಲ್ಲವೂ ನಿಮ್ಮ ಆಯ್ಕೆಗಳೇ…

ಅಂತಿಮವಾಗಿ ನಡೆಯಬೇಕಾದ ದಾರಿಯ ಬಗ್ಗೆ ಎಚ್ಚರವಿರಲಿ ಎಂದು ಪ್ರೀತಿಯಿಂದ ಹೇಳುತ್ತಲೇ, ಪ್ರೇಮಿಗಳಿಗೆ ಪ್ರೇಮಿಗಳ ದಿನದ ಹಾರ್ದಿಕ ಶುಭಾಶಯಗಳು…
ಕೊಟ್ರೇಶ್ ಕೊಟ್ಟೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Varadendra k
Varadendra k
4 years ago

ಲೇಖನ ಚೆನ್ನಾಗಿದೆ, ಪ್ರೀತಿಯಲ್ಲಿ ಬೀಳುವವರಿಗೆ ನಂತರದ ಸ್ಥಿತಿಗತಿಗಳನ್ನು ಎದುರಿಸುವ ಹುಂಬತನವಂತೂ ಇದ್ದೇ ಇರುತ್ತದೆ. ಆದರೆ ಪ್ರೀತಿ ಸಿಕ್ಕು ಒಂದೆಡೆ ನೆಲೆನಿಂತಮೇಲೆ ತೊಂದರೆಗಳು ಎದುರಾದಾಗ ಮೊದಲಿದೇದ ಹುಂಬತನ ಹೋಗಿರುತ್ತದೆ. ಆಗು ಚಿಕ್ಕಪುಟ್ಟ ಸಮಸ್ಯೆಗಳೂ ದೊಡ್ಡವಾಗಿ ಕಂಡು, ಸಹನೆ ಕಳೆದುಕೊಂಡು ಒದ್ದಾಡುತ್ತಾರೆ. ನಿಮ್ಮ ಲೇಖನ ನನ್ನ ಮನದಲ್ಲಿ ಮೂಡಿಸಿದ್ದಿಷ್ಟು. ಸೊಗಸಾಗಿದೆ ರಿ

1
0
Would love your thoughts, please comment.x
()
x