ಪ್ರೇಮೋತ್ಸವದ ನೆಪದಲ್ಲಿ (ಪ್ರೀತಿಯಿಂದ ಪ್ರೀತಿಯ ವಿಮರ್ಶೆ…..)

ಪ್ರೀತಿ ಎಂದರೇನು….?
ಪ್ರೀತಿ ಎಲ್ಲಿದೆ….?
ಪ್ರೀತಿ ಹೇಗಿದೆ….?
ಪ್ರೀತಿ ಏಕೆ ಬೇಕು….?

ಇಂದಿನ ಕಾಲದಲ್ಲಿ ಪ್ರೀತಿಯ ಸ್ಥಿತಿಗತಿ ಏನು…..?

ಹೀಗೆ ಪ್ರೀತಿ ಎಂದರೆ ನಮ್ಮ ಮನಸ್ಸಿನಲ್ಲಿ ಅದೆಷ್ಟು ಪ್ರಶ್ನೆಗಳು, ದ್ವಂದ್ವಗಳು ಕಾಡುತ್ತದೆಯಲ್ಲವೆ…..!

ಪ್ರೀತಿ ಎಂದರೆ  ವಿಶ್ಲೇಷಣೆ ಅವರವರ ಬಾವಕ್ಕೆ, ಭಕುತಿಗೆ, ಖುಷಿಗೆ ಬಿಟ್ಟದ್ದು..

ಕೆಲವರ ಪ್ರಕಾರ ಪ್ರೀತಿ ಎಂದರೆ……

ಕವಿಗಳಿಗೆ ಕಾವ್ಯಕ್ಕೆ ಸ್ಪೂತಿ,

ಪತ್ರಿಕೆಗಳಿಗೆ ಸುದ್ದಿ, ಸಿನಿಮಾದವರಿಗೆ ಬರಿದಾಗದ ಕಥಾ ಸಂಪತ್ತು,

ಇಂದಿನ  ಹುಡುಗ, ಹುಡುಗಿಯರಿಗೆ ಜಾಲಿ, ಟೈಂ ಪಾಸ್, ಕೆಲವರಿಗೆ ಸೆಕ್ಸ್ ,

ಇನ್ನೂ ಕೆಲವರಿಗೆ ಬದುಕು, ಸಾಧನೆ

ಮತ್ತೂ ಕೆಲವರಿಗೆ ವಾತ್ಸಲ್ಯ, ಮಮತೆ ನೋವುಂಡವರಿಗೆ ಗಾಯ

ಹಿರಿಯರಿಗೆ ಮಾಡಬಾರದ ತಪ್ಪು (ಕೆಲಸ) ,ತಿಳಿಯದೆ ಮಾಡಿಕೊಳ್ಳುವ ಯಡವಟ್ಟು, ಹರೆಯದ ಹುಡುಗಾಟ,

ಪ್ರೀತಿಯೇ ಸಿಗದವರಿಗೆ ಪ್ರೀತಿಯೇಂಬುದು ಸುಂದರ ಕನಸು….

ಹೇಳುತ್ತ ಹೋದರೆ ಪ್ರೀತಿಯೆಂಬುದು ಅವರವರ ಯೋಚನೆ ಅನುಭವ ವೃತ್ತಿ ಮನಸ್ಸುಗಳ ವೈಶಾಲ್ಯತೆಯ ಮೇಲೆ ಅವಲಂಬಿಸಿರುತ್ತದೆ.

ಪ್ರೀತಿ ಎಲ್ಲಿದೆ….?ಹೇಗಿದೆ….?  ಎಂದು ಹುಡುಕುತ್ತ  ಹೊರಟ ಕೆಲವರಿಗೆ ಪ್ರೀತಿ ಸಿಕ್ಕಿರ ಬಹುದು, ಆದರೆ…. ಕೆಲವರು ಪ್ರೀತಿಯ ಅವಶೇಷಗಳನ್ನು ನೆನಪಿಸಿಕೊಳ್ಳುವುದಕ್ಕೂ ಬೇಸರಿಸಿಕೊಳ್ಳುತ್ತಾರೆ.

ಹಾಗಾದರೆ ಪ್ರೀತಿಯನ್ನು ಕಂಡವರ ಪ್ರಕಾರ ಪ್ರೀತಿಯ ವರ್ಣನೆ ಏನು…?, ಅವರ ಪ್ರಕಾರ ಪ್ರೀತಿ ಎಂಬುದು ಎಲ್ಲಾರಿಗೂ ಕಾಣಿಸದ ದೇವರ ಮಾದರಿಯದ್ದು. ಶುದ್ದ ಮನಸಿನ, ಒಳ್ಳೆಯ ಉದ್ದೇಶವಿರುವ ಮನಸುಗಳಿಗೆ ಮಾತ್ರ ಕಾಣಿಸುತ್ತದೆ.

ಪ್ರೀತಿ ಎಂಬುದು ಎಲ್ಲಾ ಕಡೆಯು ಅವರಿಸಿರುವ ಶುದ್ದ ಗಾಳಿಯ ಹಾಗೆ ಮಾಲಿನ್ಯದಿಂದ ಹೇಗೆ ಶುದ್ದ ಗಾಳಿ ಅಶುದ್ದವಾಗಿದೆಯೊ, ಹಾಗೆಯೇ ಕಲ್ಮಷ ತುಂಬಿದ ದುರುದ್ದೇಶದ, ವಿಕೃತ ಮನಸುಗಳಿಂದ ಪ್ರೀತಿಯು ಮಲಿನವಾಗಿದೆ ಎಂಬುದು ನಿಜ.

ಹಸಿವಿಗೆ ಅನ್ನ ಬೇಕು, ಉಸಿರಾಡಲು ಗಾಳಿ ಬೇಕು, ಜಾಲಿ ಮಾಡಲು ಹಣ ಬೇಕು, ಹಾಗದರೆ ಪ್ರೀತಿ ಏಕೆ ಬೇಕು….?

ಹೌದಲ್ಲವೆ….!  ಪ್ರೀತಿ ಕೇಲವರಿಗೆ  ಬದುಕಲು ಬೇಕು, ಇನ್ನು ಕೆಲವರಿಗೆ ನೆಮ್ಮದಿಗೆ, ಮತ್ತೆ ಕೆಲವರಿಗೆ ಸಂತೋಷಕ್ಕೆ. ಇದು ಅವರವರ ಅಭಿಪ್ರಾಯ, ಆದರೆ ಪ್ರೀತಿ ಇವೆಲ್ಲವಕ್ಕೂ ಬೇಕು, ಪ್ರೀತಿ ಎಂಬುದು ಕಲ್ಪವೃಕ್ಷವಿದ್ದಂತೆ, ಕೇಳಿದ್ದೆಲ್ಲವನ್ನು ನೀಡುತ್ತದೆ ಆದರೆ ಕಲ್ಪವೃಕ್ಷವೂ ಮುರಿದು ಬಿದ್ದರೆ…. (ಬರಿದಾದರೆ)  ಬದುಕು ಶೂನ್ಯವಾಗುವುದು ಕೂಡ ನಿಜ.

೨೧ನೇಶತಮಾನದಲ್ಲಿ ಇಂಟರ್ ನೆಟ್ ಯುಗದಲ್ಲಿ, ವೇಗದ ಬದುಕಿನ ಜಂಜಾಟಗಳಲ್ಲಿ. ಪ್ರೀತಿಯ ಸ್ಥಿತಿಗತಿ ಹೇಗಿದೆ ಪರಾಮಶಿ೯ಸಿ ಹೇಳುವುದು ಕಷ್ಟ ಕಷ್ಟ. ಈಗಿನ ಕಾಲದಲ್ಲಿ ಪ್ರೀತಿ ಎಂದರೆ ಸ್ವೇಚ್ಛೆ, ಕೆಲವರಿಗೆ ಕಾಮಕ್ಕೆ ಪ್ರೀತಿಯೇ ಕಳ್ಳದಾರಿ, ಕೆಲವರಿಗೆ ಟೈಂ ಪಾಸ್. ಇದಷ್ಟೆ ಪ್ರೀತಿಯ ಸ್ಥಿತಿಗತಿ ಯಲ್ಲ,  ಈಗಲೂ ಕೂಡ ಶುದ್ದವಾಗಿ ಪ್ರೀತಿ ಮಾಡುವವರು, ಪ್ರೀತಿಸಿ ಮದುವೆಯಾದ ನಂತರವೂ ಬದುಕು ಪೂತಿ೯ ಪ್ರೀತಿಯಿಂದ, ಪ್ರೀತಿಸುತ್ತ ಬದುಕುವ ಪ್ರೇಮಿಗಳೂ ಕೂಡ ಇಂದಿನ ಕಾಲದಲ್ಲೂ ಇದ್ದಾರೆ ಎಂಬುವುದು ಕೂಡ ನಿಜ.

ಅದೇನೆ ಇರಲಿ ಪ್ರೀತಿ ಪರಿಶುದ್ದವಾದದ್ದು, ಪವಿತ್ರವಾದ ಪ್ರೀತಿಗೆ ಎಲ್ಲಾವನ್ನು ಪಡೆಯುವ ಮತ್ತು ನಿಡುವ ಶಕ್ತಿ ಇದೆ, ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದು, ಎಲ್ಲವನ್ನು ಸಾದಿಸಬಹುದು.

ಯಾರದೋ ಮಾತಿಗೆ, ಎಲ್ಲಿಯದೋ ವಿಷಯಕ್ಕೆ, ಪ್ರೀತಿಯ ಪವಿತ್ರಾತೆಯನ್ನು ಹಾಳುಮಾಡುವುದು ಬೇಡ. ಪ್ರೀತಿ ಜಗತ್ತು ಇರುವವರೆಗೂ ಚಿರಸ್ಥಾಯಿಯಾಗಿ ಬದುಕಲಿ ನಮ್ಮಲ್ಲಿ ಮೂಡಲಿ.

ಕೊನೆಯ ಸಾಲುಗಳು….

ಪ್ರೀತಿ ಎಂಬುದು ಎಲ್ಲರ ನಡುವೆಯೂ ಇದೆ ತಾಯಿ- ಮಗುವಿನ ನಡುವೆ, ಅಣ್ಣ- ತಂಗಿ, ಅಕ್ಕ- ತಮ್ಮಂದಿರ ನಡುವೆ, ಗೆಳಯ/ತಿ ಗೆಳಯ/ತಿಯರ  ನಡುವೆ, ಗುರು-ಶಿಷ್ಯರ ನಡುವೆ ಪರಿಶುದ್ಧವಾದ ಪ್ರೀತಿ ಶಾಶ್ವತವಾಗಿ ಇರುತ್ತದೆ. ಹಾಗೆಯೇ ಪ್ರೀತಿಸಲು, ಪ್ರೀತಿ ನಿಡಲು ಮತ್ತು ಪಡೆಯಲು ಗಟ್ಟಿಯಾದ ನಂಬಿಕೆ ಮುಖ್ಯ. ನಂಬಿಕೆ ಇಲ್ಲದಿದ್ದರೆ ಪ್ರೀತಿಯೂ ಇಲ್ಲ.

ಪ್ರೀತಿಗೆ ಕಾಲ, ಸ್ಥಳ, ಧಮ೯, ಜಾತಿ, ವಯಸ್ಸುಗಳ ಅಂತರವಿಲ್ಲ ಪಾಶ್ಚಾತ್ಯರಿಂದ ಕಲಿತ ಆಚರಣೆಯಾದರು….. ಪ್ರೇಮಿಗಳ ದಿನದ ಮುಖ್ಯ ಉದ್ದೇಶ… ನಂಬಿಕೆ ಮತ್ತು ನೆಮ್ಮದಿಯನ್ನು ಸಮಾಜದಲ್ಲಿ ಗಟ್ಟಿಗೊಳಿಸುವುದು. ಪಾಶ್ಚಾತ್ಯರಿಂದ ಕಲಿತ ಆಚರಣೆಯಾದರೂ.,

ನಮ್ಮ ಸಂಪ್ರದಯದಂತೆ, ನಮ್ಮ ಸಂಸ್ಕೃತಿಯೊಂದಿಗೆ ಪ್ರೇಮೋತ್ಸವವನ್ನು ಆಚರಿಸೋಣ, ಸಮಾಜದಲ್ಲಿ ಶುದ್ದ ಪ್ರೀತಿಯನ್ನು ನೆಲೆಗೊಳಿಸೋಣ..

ಎಲ್ಲಾ ಪ್ರೀತಿಯ  ಗೆಳಯ ಗೆಳತಿ ಯರಿಗೂ ಪ್ರೇಮೋತ್ಸವದ ಶುಭಾಶಯಗಳು..

-ನಿರಂತರ್ ಉತ್ತಮ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
vinu. aldur
vinu. aldur
11 years ago

nice maga. thnk u..

Santhoshkumar LM
11 years ago

Good Utham!!
ಪ್ರೀತಿ ಅಂದರೆ ಹಾಗೆ, ನಿಷ್ಕಲ್ಮಶ ಪರಿಶುದ್ಧ ಭಾವ!!
keep writing.

M.S.Krishna murthy
M.S.Krishna murthy
11 years ago

ಚೆನ್ನಾಗಿದೆ ಉತ್ತಮ್, ನೀವು ಎಲ್ಲೂ ಉತ್ಪ್ರೇಕ್ಷೆ ಮಾಡದೆ ಎಲ್ಲ ಸಾದ್ಯ ಸದ್ಯಾತೆಗಲನ್ನು ಪರಿಗಣಿಸಿ ಬರೆದಿರುವಿರೆ. ಇನ್ನೂ ಬರೆಯಿರಿ. ಶುಭವಾಗಲಿ

Gubbachchi Sathish
11 years ago

🙂

sharada moleyar
sharada moleyar
11 years ago

we can't see love
we  feel love
love is not only among young lovers
it is among human beings,or anything in nature
it is not only soft words but also harsh words ,which we feel like love in day today life

ಶರತ್ ಚಕ್ರವರ್ತಿ
ಶರತ್ ಚಕ್ರವರ್ತಿ
11 years ago

ಚೆನ್ನಾಗಿದೆ ಉತ್ತಮ್, 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ಚೆನ್ನಾಗಿದೆ ಲೇಖನ,

ಉತ್ತಮ ನಿರೂಪಣೆ, ಧನ್ಯವಾದಗಳು

Roopa Rajesh
Roopa Rajesh
11 years ago

 
Nice Article; Love may be blind; but lovers are not blind right? If there is true love definitely it will not be used for time pass or some other: Everybody {who loves} should read this article. Keep writing; Wish you all the best…..
 

praveenkumar Daivajnacharya
praveenkumar Daivajnacharya
11 years ago

preetiya halavu mukhagalannu theredittiddeeri.. chennaagide uttam…

Utham Danihalli
11 years ago

Nana lekana prakatisida panjuvige danyavadagallu
Estapata hagu anisikegallana hanchikonda yla gellaya gellathiyarigu danyavadagallu

Ajit Khot
Ajit Khot
11 years ago

Nimma lekana tumba channagide 
nimage nanna tumbu hrudayad dannevadgalu 

Sharmila
11 years ago

nice article

12
0
Would love your thoughts, please comment.x
()
x