ಪ್ರೀತಿ ಪ್ರೇಮ

ಪ್ರೇಮದ Confession: ಚಂದನ್ ಶರ್ಮ

                   

ತಂದೆ-ತಾಯಿ, ಬಂದು-ಬಳಗದ  ಪ್ರೀತಿ, ವಾತ್ಸಲ್ಯ, ಅಕ್ಕರೆ, ಮಮಕಾರ ಬಿಟ್ಟರೆ ಉಳಿಯೋದು ‘ಗಂಡು-ಹೆಣ್ಣಿನ’ ಪ್ರೇಮ; ಅದೇ ವಿಶ್ವದ ಹಲವಾರು ಕಾದಂಬರಿಗಳ, ನಾಟಕಗಳ, ಚಲನಚಿತ್ರಗಳಲ್ಲಿ ಕಂಡುಬರುವ ಪ್ರೀತಿ; ಇಲ್ಲ ಅದನ್ನ ಹಾಗೆ ಹೇಳಬಾರದು ಪ್ರೀತಿ ತುಂಬಾ ವಿಸ್ತಾರಾವಾದ ವಿಷಯ ಅದು ಮಾನವನ ಮೂಲ. ಈ ಪ್ರೀತಿ ಬಯಕೆಗಳ ಮೂಲ; ಒಂದು ಜೀವದ ಸುತ್ತ ಲಕ್ಷ ಆಕಾರಗಳನ್ನು ಪಡೆದು ಸುತ್ತುತ್ತಲೇ ಇರುತ್ತದೆ ಜೀವ ಹೋಗುವ ತನಕ.

ಲಕ್ಷ ಆಕಾರಗಳನ್ನು ಪಡೆಯುವ ಪ್ರೀತಿಯನ್ನು ವಿವರಿಸುವುದು ಕಷ್ಟ ಆದರೆ ಬಣ್ಣಿಸಬಹುದು. ಹಾಗಾಗಿ ಅದು ಕಾಮನ-ಬಿಲ್ಲಿನಷ್ಟು ಚಂದ. ಮಳೆಬಿಲ್ಲಿನ 7 ಬಣ್ಣಗಳನ್ನ Permutation-Combination ಬಳಸಿ ಕಲರ್  Mixing ಮಾಡಿ ಬೇರೆ ಬೇರೆ ಪಿಕ್ಸೆಲ್ ಗಳಲ್ಲಿ  ನೋಡಿದರೆ ಕಾಣುವ ಬಣ್ಣಗಳ ತರ ಪ್ರೀತಿ-ಪ್ರೇಮ.

‘ವಯಸ್ಸಿಗೆ’, ‘ ಸಂಧರ್ಭಕ್ಕೆ’ , ‘ಅವರವರ ಸಾಂಧರ್ಭಿಕ ಭಾವಕ್ಕೆ’ ತಕ್ಕಂತೆ ಪ್ರೀತಿ ಇರುತ್ತದೆ. ಅದು ಜೀವನದೊಂದಿಗೆ ಹುಟ್ಟಿ ನೆಡೆದು ಜೀವಿಸಿ ಸಾಯುತ್ತದೆ.

ಸುಮಾರಾಗಿ ಒಬ್ಬ ವ್ಯಕ್ತಿ ಸಾಮಾಜಿಕವಾಗಿ- ವೈಜ್ಞಾನಿಕ ವಾಗಿಯೂ ಪ್ರೀತಿಯನ್ನು collage  ದಿನ ಗಳಲ್ಲಿ ಅರ್ಥ ಮಾಡಿಕೊಳ್ಳುವಷ್ಟು ಬೆಳೆದಿರುತ್ತಾನೆ.ಅದು ಯವ್ವನ್ನ ಮತ್ತು ತಾರುಣ್ಯದ ನಡುವಿನ ಮನ್ವOತರದ ದಿನಗಳು ಅಲ್ಲಿ ಆತನಿಗೆ ತನ್ನ ಮತ್ತು ತನ್ನಾಕೆ ಯೊಂದಿಗೆ ಮುಂದಿನ ಜೀವನದ ಸಂಧರ್ಭಗಳನ್ನು ಮತ್ತು ಸಾಧ್ಯತೆಗಳನ್ನು ಊಹಿಸುವ ಶಕ್ತಿ ಇರುತ್ತದೆ ಜೊತೆಗೆ ಎಲ್ಲಾ ಸಾಧ್ಯತೆಯನ್ನು ಸಕಾರಾತ್ಮಕವಾಗಿಯೇ ತೆಗೆದು ಕೊಳ್ಳುವ ಬಿಸಿರಕ್ತ. ಆ ದಿನಗಳನ್ನು ನಾನು ‘ಅವಳೂ ಮತ್ತು ನನ್ನ’ ನಡುವಿನ ಪ್ರೇಮದ ಸುಂದರ ಸಕಾರಾತ್ಮಕ ಸಾಧ್ಯತೆಗಳಲ್ಲೇ ಮತ್ತು ಅದರ ಹುಟ್ಟಲ್ಲೇ ಕಳೆದೆ.

ನನಗೆ ಅದು ಇಂಜಿನಿಯರಿಂಗ್ ಮೊದಲ ವಾರ. ಆಕೆಯನ್ನ ಕಂಡಿದ್ದೇ ತಡ ‘ಲವ್’ ಆಗಿ ಹೋಗಿತ್ತು.  Testosterone, estrogens, dopamine,  oxytocin, and vasopressin ಇಷ್ಟರಲ್ಲಿ ಯಾವ ಕೆಮಿಕಲ್ ಗೊತ್ತಿಲ್ಲ ರಿಯಾಕ್ಷನ್ ನಡೆಸ್ತಾ ಇತ್ತು. ನಮ್ಮ ಎಲ್ಲರ ಪ್ರೀಮದಲ್ಲೂ ಸಾಮ್ಯತೆ ಇದೆ ಕಾರಣ ನಾವೆಲ್ಲರೂ ಮಾನವರೇ ತಾನೇ!!.

ಸುಮಾರು ತಿಂಗಳ ನಂತರ ನನ್ನ ಪ್ರೇಮವನ್ನು ನಿವೇದಿಸಿದೆ. ಆಕೆಗೆ ನನ್ನ ಕಂಡರೆ ಅಷ್ಟಕ್ಕೆ ಅಷ್ಟೇ. ಮತ್ತೊಂದಿಷ್ಟು ದಿನಗಳ ನಂತರ ಮತ್ತೊಮ್ಮೆ commmunicate ಮಾಡಿದೆ. ವಾಟ್ಸ್ಅಪ್ ರೆಪ್ಲ್ ಗಳು ಬಂದವು. ಆಕೆಗೆ ನನ್ನ ಮೇಲೆ ಏನೋ ಪ್ರೀತಿ ಆದರೆ ಪ್ರೇಮದಲ್ಲಿ “ಬೀಳುವುದಕ್ಕೆ” ಇಷ್ಟ ವಿಲ್ಲ. ಏಕೆಂದರೆ ಆಕೆ ‘ಬೀಳಲು’ ಇಷ್ಟ ಪಡುವುದಿಲ್ಲ. ನನಗೆ ಆಕೆಯ ಕಂಡರೆ ಒಲವು ಆದರು ಒಂದಿಷ್ಟು ಕಸಿವಿಸಿ. ನಮ್ಮಲ್ಲಿ ಪ್ರೀತಿ ಮಾತ್ರ ಇದೆ, ಇನ್ನೂ Dependency ಹುಟ್ಟಿಲ್ಲ. ನನಗೆ-ನೀನು; ನಿನಗೆ –ನಾನು ಅನ್ನುವುದೇ ಪ್ರೀತಿ. ಆದರು ಅದು Dependability ನೋಡಿ ಕೊಂಡು ಮೊಹಿಸುವುದು  ಅಲ್ಲ. ಅದು ಎಲ್ಲ ವನ್ನು ಮೀರಿದ ಸ್ವಾತಂತ್ರ್ಯ ಅನುಭವ,  ವಿಜ್ಞಾನ- ಸಮಾಜ-ಸಂಧರ್ಭದ ಒಟ್ಟು ಮೊತ್ತ. ವೈಜ್ಞಾನಿಕ ವಾಗಿ “ಗಂಡು-ಹೆಣ್ಣಿನ” ಸಂಭಂಧ ಒಂದಿಷ್ಟು ವರ್ಷಗಳ ನಂತರ ಹೊಸತನ ಬಯಸುತ್ತದೆ ಅಂತೆ, ಒಂದು ಹಂತದಲ್ಲಿ ಎಲ್ಲವೂ Adjustment ಎಂದು ಭಾವಿಸಲು ಶುರು ವಾಗುವುದಂತೆ. ಹೀಗೆ ಜೀವನ ನೆಡೆದು ಕೊನೆ ಗಾಣುತ್ತದೆ. ಆದರೆ ಅದು ಬರಿಯಾದ  ಸಂಭಂಧ ಪ್ರೇಮವಲ್ಲ.

 ಮೊದಲ ಪ್ರೀತಿ ಹಾಗಲ್ಲ; ಅಲ್ಲಿ ಎಲ್ಲವೂ ಹಸಿರು. ಮನಸ್ಸಿಗೆ ಒಂದಿಷ್ಟು ಮುದ. ಆಕೆ ಇನ್ನಾರನ್ನೋ ಅರಿಸ ಬಹುದು. ಆದರು ನನಗೆ ಆಕೆಯ ಪ್ರೀತಿ ಗೆದ್ದ ಖುಷಿ ಅದನ್ನು Adjustment ಹಂತದ ತನಕ ಎಳೆಯದಿರುವುದೇ ಒಳಿತು ಎಂದು ಅನಿಸುವುದುಂಟು. ಎಲ್ಲಾ ಕಡೆಯಿಂದಲೂ positive  possibility ಯೊಂದಿಗೆ ಉಸಿರಾಡುತ್ತಾ ಇದ್ದೇನೆ. ಹಾಗಾಗಿ ಇನ್ನೂ ಬದುಕಿದ್ದೇನೆ! ‘Can Love happen twice?!’ ಎಂದು ಯೋಚಿಸಿ ಅದನ್ನು ಸಮುಜಾಯಿಸಿ ಕೊಳ್ಳಲು ಸಧ್ಯಕ್ಕಂತು ನಾನು ತಯಾರಿಲ್ಲ. 
ಈ ಒಟ್ಟು Confession  ಸುಮಾರು ೨೫-೨೮ ವರ್ಷದವನದ್ದಾಗಿರ ಬಹುದು ಆದರೆ ನಾನು ಅವನಲ್ಲ. ಕೊನೆದಾಗಿ ನೆನಪಿಗೆ ಬರುವುದು ಯೋಗರಾಜ್ ಭಟ್ಟರ ಸಾಲುಗಳು, 

"ಬೆನ್ನಲ್ಲಿ ಹುಣ್ನಂತೆ ಆ firstu ಲವ್ವು, 
ಯಾಮಾರಿ ಅಂಗಾತ ಮಲ್ಕಂಡ್ರೆ ನೋವು 
ಎಲ್ಲಾನು ಮರೆಯೋಕೆ ಹೋಗಬಾರದು ರೀ
ಕೆರೆಯೋಕೆ ಹುಣ್ ಒಂದು ಇರಬೇಕು ರೀ !

-ಚಂದನ್ ಶರ್ಮ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಪ್ರೇಮದ Confession: ಚಂದನ್ ಶರ್ಮ

  1. ನೀವು ಇಂಜಿನಿಯರ್ರ ಅಥವಾ ಮೆಡಿಕಲ್ ಸ್ಟುಡೆಂಟಾ? ?? ಎಲ್ಲಾ hormone ಕರೆಸಿದ್ದೀರಲ್ಲ ಈ ಕನ್ನಡ ಅಂತರ್ಜಾಲ ಲೋಕಕ್ಕೆ? ? Very good writing…

  2. ಪುನಿತ್ ಕುಮಾರ್, ಸ್ಪಂದನೆಗೆ ಧನ್ಯವಾದ. ಇಂಜಿನಿಯರಿಂಗ್ ಮುಗಿಸಿದ್ದೇನೋ ಹೌದು ಆದರೆ ಹಾರ್ಮೋನ್ಗಳು ಪದವಿ ಪೂರ್ವ ಶಿಕ್ಷಣದ ಬಯಾಲಜಿಯ ನೆನೆಪು 🙂

  3. ಚೆನ್ನಾಗಿದೆ ಬರಹ. ಮೆಡಿಕಲ್, ಇಂಜಿನಿಯರಿಂಗ್ಗಳ mixing ಇಷ್ಟ ಆಯ್ತು 😉 ಅಲ್ಲಲ್ಲಿ ಮುದ್ರಾರಾಕ್ಷಸನ ಹಾವಳಿಯಿದೆ.
    Like ವಿಸ್ತಾರಾವಾದ=ವಿಸ್ತಾರವಾದ, ಯವ್ವನ್ನ=ಯೌವನ,  ಪ್ರೀಮದಲ್ಲೂ=ಪ್ರೇಮದಲ್ಲೂ, ಸಂಭಂಧ=ಸಂಬಂಧ, ಅರಿಸ ಬಹುದು=ಆರಿಸಬಹುದು, ಸಧ್ಯ=ಸದ್ಯ, ಹುಣ್ನಂತೆ=ಹುಣ್ಣಂತೆ

Leave a Reply

Your email address will not be published. Required fields are marked *