ಲೇಖನ

ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ


ಕಾಲೇಜು ಆರಂಭವಾಗಿ ಆರು ತಿಂಗಳುಗಳೇ ಕಳೆದಿವೆ. ಹೇಳದೆ ಪ್ರೀತಿಸುವ  ಹುಡುಗ ಹುಡುಗಿಯರಿಗೆ ತಮ್ಮ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಒಂದು ವೇದಿಕೆ ಸಿದ್ಧವಾಗಿದೆ. ಹುಡುಗ ಹುಡುಗಿಯರೆಲ್ಲಾ ಸೂಕ್ತ ಪ್ರಿಯತಮ/ಮೆಯ ಹುಡುಕಾಟದಲ್ಲಿದ್ದಾರೆ. ಆ ಪ್ರಯತ್ನದಲ್ಲಿ ಕೆಲವರು  ಯಶಸ್ವಿಯು ಆಗಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯನ್ನು ಹೇಗೆ ಅವಳಿ/ನಿಗೆ ಅರಿಕೆ ಮಾಡಿಕೊಳ್ಳಬೇಕೆಂಬ  ತೋಳಲಾಟದಲ್ಲಿದ್ದಾರೆ. ಈ ಸಂದರ್ಭದಲ್ಲಿಯೇ “ವ್ಯಾಲೇಂಟೆನ್ಶ ಡೇ” ಸಮೀಪಸಿದೆ. ಹುಡುಗ ಹುಡುಗಿಯರ ಎದೆಯಲ್ಲಿ ಲಬ್-ಡಬ್ ಶುರುವಾಗಿದೆ.  ನಾನು ಪ್ರೀತಿಸಿದ ಹುಡುಗ/ಗಿ ನನ್ನಲ್ಲಿ ಬಂದು ಗುಲಾಬಿ ಹಿಡಿದು ಪ್ರೀತಿ ಯಾಚಿಸುತ್ತಾನಾ/ಳಾ??  ನನ್ನ ಪ್ರೀತಿ ಒಪ್ಪುತ್ತಾಳಾ/ನಾ? ಅಥವಾ ಒಪ್ಪದಿದ್ದರೆ ಏನು ಮಾಡುವದು ಎಂಬ ಆತಂಕ  ಮನೆ ಮಾಡಿದೆ.

ಪ್ರೀತಿಸಲಾರದ ಹುಡುಗ/ಗಿ ನನ್ನಲ್ಲಿ ಬಂದು ಪ್ರಪೋಸ್ ಮಾಡಿದರೇನು ಮಾಡುವದು ಎಂಬ ಭಯ ಬೇರೆ. ಇದರಿಂದ ಎಷ್ಟೋ ಮಂದಿ ಆ ದಿನ ಕಾಲೇಜಿನ ಕಡೆ ತಲೆ ಕೂಡಾ ಹಾಕಿ ಮಲಗುವುದಿಲ್ಲಾ ಎಂದು ಶಪಥ ಮಾಡಿರುತ್ತಾರೆ. ಇನ್ನು ಕೆಲವರು ಕಾಲೇಜು ತಪ್ಪಿಸಿ ಗಾರ್ಡನ್, ಸಿನೇಮಾ, ನೋಡುವ ನೆಪದಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾತರರಾಗಿ ಫೆ.14 ನ್ನೇ ಕಾಯುತ್ತಿದ್ದಾರೆ.

‘ಅವಳನ್ನು ತುಂಬಾ ಪ್ರೀತಿಸುತ್ತಿದ್ದೇನೆ, ಅವಳು ಅಂದು ಪ್ರೀತಿ ನಿರಾಕರಿಸಿದರೆ ಏನು ಮಾಡ್ಲೋ? ಏನಾದರೂ ದಾರಿ ತೋರಿಸು’ ಎಂದು ಹುಡುಗರು ತಮ್ಮ ಗೆಳೆಯನ ಮುಂದೆ ತಮ್ಮ ಅಳಲು ತೋಡಿಕೊಂಡರೆ , ಹುಡುಗಿಯರು, ‘ನೋಡೇ ಕಣೆ, ಆತ ನನ್ನನ್ನು ಚುಡಾಯಿಸುತ್ತಿದ್ದಾನೆ, ಹೇಗಾದರು ಮಾಡಿ ಆತನಿಂದ ಬರುವ ಪ್ರಪೋಸಗಳಿಂದ ತಪ್ಪಿಸಿಕೊಳ್ಳಲು  ಕೆಲ ಯುವತಿಯರು ವಾರ ಮೊದಲೆ ಇಂತಹ ಯೋಚನೆಯಲ್ಲಿ ಮುಳುಗಿರುತ್ತಾರೆ, ಇಂತಹ ಸನ್ನಿವೇಶಗಳು ಕಾಲೇಜು ಕ್ಯಾಂಪಸ್, ಕ್ಲಾಸು ಮತ್ತು ಹಾಸ್ಟೇಲುಗಳಲ್ಲಿ ಸಾಮಾನ್ಯ. ಹೇಗಾದರು ಮಾಡಿ  ಆತನಿಂದ ತಪ್ಪಿಸಿಕೊಳ್ಳುವ ಪ್ಲ್ಯಾನ್ ಒಂದೆಡೆ ರೆಡಿಯಾಗುತ್ತಿದ್ದರೆ, ಇನ್ನೊಂದೆಡೆ ಅದನ್ನು ಬೇಧಿಸೋ ಪ್ಲಾನ್ ಕೂಡ ರೆಡಿ.

ಎಲ್ಲಿ ನನ್ನ ಇಷ್ಟು ದಿನದ ಪ್ರೀತಿ ವ್ಯರ್ಥವಾಗುತ್ತೋ ಎಂಬುದು ಹುಡುಗರ ಆತಂಕ, ಇನ್ನು ಹುಡುಗಿಯರಿಗೆ ಪ್ರೀತಿ ಎಲ್ಲಿ ನನ್ನ ಜೀವನ ಕಾಡುತ್ತೇ ಅನ್ನೋ ಭಯ. ಈ ವ್ಯಾಲೆಂಟನ್ಸ್ ಡೀ ಒಂದಷ್ಟು ಹುಡುಗರ ಲವ್‍ನ  ದಾರಿ ಕ್ಲಿಯರ್ ಮಾಡಿದರೆ, ಮತ್ತಷ್ಟು ಹುಡುಗರ ಲವ್‍ನ್ನೇ ಕ್ಲೀನ ಸ್ವೀಪ್ ಮಾಡುವುದಂತು ಸತ್ಯ.. ಈ ಮಧ್ಯೆಯೇ ಪ್ರೀತಿ ಪ್ರೇಮದ ಉಸಾಬರೀಯೇ ಬೇಡ ನಾವು  ಪ್ರೆಂಡ್ ಅಗಿಯೇ  ಬದುಕೋಣ ಎಂದು ನಿರ್ಧರಿಸುವ ಗೆಳೆಯ-ಗೆಳತಿಯರು ಇದ್ದಾರೆ. ಇನ್ನು ಅಂದು ಶ್ರೀರಾಮ ಸೇನೆ ಕಾರ್ಯಕರ್ತರು ಕೈಯಲ್ಲಿ ಒಂದು ತಾಳಿ ಹಿಡಿದುಕೊಂಡು ಪ್ರೇಮಿಗಳನ್ನು ಬೆನ್ನತ್ತುವುದು ಪ್ರೇಮಿಗಳಿಗೆ ಕಿರಿಕಿರಿಯಾಗುತ್ತಿದೆ.

ಏನೇ ಆಗಲಿ ವ್ಯಾಲೇಂಟೆನ್ಸ್ ಡೇ ದಿನ ಕಾಲೇಜು ಹುಡುಗ/ ಹುಡುಗಿಯರಿಗಂತೂ ಒಂದೆಡೆ ಖುಷಿ, ಮತ್ತೋಂದಡೆ ದುಗುಡ. ಲವರ್ಸೆ ಇಲ್ಲ ಅಂತ ಕೊರಗುವರಿಗೆ ತಮ್ಮ ಪ್ರೀತಿಯನ್ನು ಹೇಳಿ ಗೆಳತಿಯನ್ನಾಗಿ ಮಾಡಿಕೊಳ್ಳುವ ಅವಕಾಶ ಸೃಷ್ಟಿಸಿದರೆ, ಹುಡುಗಿಯರಿಗೆ ವ್ಯಾಲೇಂಟೆನ್ಸ್ ಡೇ ನೆಪದಲ್ಲಿ ಪಡ್ಡೆ ಹುಡುಗರ ದೋಸ್ತಿ ಮಾಡಬೇಕಲ್ಲ ಅನ್ನೋ ಚಿಂತೆ ಕಾಡದೇ ಇರದು. ಆದರೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಭಾವ ಮತ್ತು ಸ್ವಾತಂತ್ರ್ಯ ಅವರವರ ಕೈಯಲ್ಲಿದೆ,

ಪ್ರೀತಿ  ಮಾಡೋ ಮುಂಚೆ :

  • ಎಂತವರ ಪ್ರೀತಿ ಮಾಡಬೇಕೆಂಬುದರ ಸ್ಪಷ್ಟ ಕಲ್ಪನೆಯಿರಲಿ.
  • ನಮ್ಮ ವಿಚಾರಧಾರೆಗಳಿಗೆ ಅವನು/ಳು ಹೊಂದಿಕೊಳ್ಳುವರೇ ಖಚಿತಪಡಿಸಿಕೊಳ್ಳಿ,
  • ನಿಮ್ಮ ನೋವು ನಲಿವುಗಳಲ್ಲಿ  ಪಾಲುದಾರರಾಗುತ್ತಾರಾ ಎಂದು ಮೊದಲೇ ತಿಳಿಯಿರಿ.
  • ಪ್ರೀತಿ ಬಯಸಿ ಬರುವವರ ಹಿನ್ನೆಲೆ, ಚಾರಿತ್ರ್ಯ, ಹವ್ಯಾಸ ಮತ್ತು ಗುಣಗಳ, ವ್ಯಕ್ತಿತ್ವದ ಬಗ್ಗೆ ಅರಿವಿರಲಿ.
  • ಹಣವಿದೆಯೆಂದು ಪ್ರೀತಿಸಬೇಡಿ. ಒತ್ತಾಯದಿಂದ ಪ್ರೀತಿ ಮಾಡಬೇಡಿ. ಯಾರಾದರೂ ಒತ್ತಾಯಿಸಿದರೆ ನಯವಾಗಿ ತಿರಸ್ಕರಿಸಿ
  • ಪ್ರೀತಿಯನ್ನು ತಿರಸ್ಕರಿಸಿದರೆ ಉತ್ತಮ ಸ್ನೇಹಿತ/ತೆರಾಗಿರಿ.
  • ಪ್ರೀತಿ ತಿರಸ್ಕರಿಸಿದರೇ ಪ್ರಾಣಕ್ಕೆ ಅಪಾಯಮಾಡಿಕೊಳ್ಳುವ ಕೆಲಸಕ್ಕೇ ಕೈ ಹಾಕದಿರಿ.
  • ಪ್ರೀತಿಗೆ ಮಹತ್ವ ನೀಡುವ ಬದಲು ನಿಮ್ಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ.
  • ಕ್ಷಣಿಕ ಸಂತೋಷಕ್ಕಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ.
  • ಪ್ರೀತಿ ಮಾಡಲು ಇಬ್ಬರ ಒಪ್ಪಿಗೆ ಅಗತ್ಯ.
  • ನಿಮ್ಮ ತಂದೆ ತಾಯಿಯರಿಗೆ ನಿಮ್ಮ ಪ್ರಿತಿಯ ಬಗ್ಗೆ ತಿಳಿಸಿ ಒಪ್ಪಿಗೆ ಪಡೆಯುವದು ಒಳಿತು.
  • ಪರಸ್ಪರ ನಿರ್ಣಯಗಳಿಗೆ ಗೌರವ ನೀಡಿ, ಯಾವುದೇ ವೀಷಯದ ಕುರಿತು ಆತುರದ ನಿರ್ಣಯ ಬೇಡ. ತಪ್ಪಾದಾಗ ಕ್ಷಮಿಸೋ ಗುಣ ಬೆಳೆಸಿಕೊಳ್ಳಿ. ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಿ. ನಿಮ್ಮ ನಡುವಿನ ಸಣ್ಣ ಪುಟ್ಟ ಜಗಳವನ್ನು ಬೀದಿ ರಂಪ ಮಾಡದಿರಿ.

-ಮಲ್ಲಿಕಾರ್ಜುನ  ದಾಸನಕೊಪ್ಪ.



                                                   

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪ್ರೀತಿ ಮಾಡೋ ಮುಂಚೆ: ಮಲ್ಲಿಕಾರ್ಜುನ ದಾಸನಕೊಪ್ಪ

Leave a Reply

Your email address will not be published. Required fields are marked *