ಅವಳ ಡೈರಿಯ ಪುಟಗಳಿಂದ…
ಆತ ವಿಕ್ರಮ್, ಆ ವರುಷ ತಾನೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಎಮ್.ಎನ್.ಸಿ. ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕ.
ಆ ದಿನ ಶನಿವಾರ ಆಫಿಸ್ ಗು ರಜ, ಬೆಳಗ್ಗೆ ಎದ್ದು ಸುಮ್ಮನೆ ಒಂದು ರೌಂಡ್ ತಿರುಗಾಡಿ ಬಂದು ಉಟ ಮಾಡಿ ಮಲಗಿ ಎದ್ದವನಿಗೆ ಏನು ಮಾಡಲೂ ಮನಸಿಲ್ಲದ ಒಂದು ರೀತಿಯ ಜಡತ್ವ ಆವರಿಸಿತ್ತು.
ಆಗಲೇ ನೆನಪಾಗಿದ್ದು ಕಳೆದ ವಾರ ತನ್ನ ಉರಿಗೆ ಹೋದಾಗ ಗೆಳತಿ ಸುನೀತಾ ಫ್ರೆಂಡ್ ಪ್ರೇಮ ಕೊಟ್ಟ ಗಿಫ್ಟ್.
ಬೇರೆ ಯಾರಾದರು ಹುಡುಗರಾಗಿದ್ದರೆ ಆ ಕ್ಷಣವೇ ಓದಿ ಮುಗಿಸಿರುತಿದ್ದರೇನೋ, ಆದರೆ ವಿಕ್ರಮ್ ಗೆ ಮೊದಲಿನಿಂದಲೂ ಸ್ನೇಹಿತರು ಕಡಿಮೆ ಆತ ಒಂಟಿಯಾಗಿರುತಿದ್ದದೆ ಜಾಸ್ತಿಯಾಗಿತ್ತು. ಸುನೀತಾ ಅತನ ಊರಿನ ಸಮೀಪದ ಹುಡುಗಿ. ಇಬ್ಬರೂ ಹೈಸ್ಕೂಲ್ ನಿಂದಲೂ ಕ್ಲಾಸ್ಮೆಟ್.
ಪ್ರೇಮ, ಸುನೀತಾಳೆ ಇದನ್ನು ನನಗೆ ಕೊಡಬಹುದಿತ್ತಲ್ವ?
ಎಂದು ಗಿಫ್ಟ್ ನೋಡುತ್ತ ಕೇಳಿದ್ದ ವಿಕ್ರಮ್.
ಇಲ್ಲ ವಿಕ್ಕಿ, ನಾನೆ ಈ ವಾರದಲ್ಲಿ ಬೆಂಗಳೂರಿಗೆ ಬರುವವನಿದ್ದೆ ಅದಕ್ಕೆ ನನ್ನ ಹತ್ತಿರ ತಲುಪಿಸಲು ಹೇಳಿದ್ಲು ಅಷ್ಟೆ..
ಇರಬಹುದೇನೊ ಎಂದು ಬೇರೆನೂ ಕೇಳದೆ ಬಂದಿದ್ದ ವಿಕ್ರಮ್.
ಅದನ್ನು ನೋಡುತಿದ್ದರೆ ಬಿಚ್ಚುವದೆ ಬೇಡ ಎನಿಸುವಷ್ಟು ಸೋಗಸಾಗಿ ಪ್ಯಾಕ್ ಮಾಡಲಾಗಿತ್ತು. ಏನಿರಬಹುದು ಎಂದುಕೊಳ್ಳುತ್ತಲೇ ಓಪನ್ ಮಾಡಿದವನಿಗೆ ಆಶ್ಚರ್ಯ ವಾಗಿತ್ತು. ಇದ್ದದ್ದು ಒಂದು ಸಾಮಾನ್ಯ ಡೈರಿ.
ಅರೆ! ಇದನ್ನೇಕೆ ನನಗೆ ಕಳಿಸಿದಾಳೆ ಎಂದುಕೊಳ್ಳುತ್ತಲೆ ಓದತೊಡಗಿದ.
ಮೊದ ಮೊದಲು ಏನೂ ವಿಷಯ ವಿಲ್ಲದಿದ್ದರೂ ಬರುಬರುತ್ತ ವಿಷಯ ವಿಕ್ರಮ್ ಕಡೆಗೆ ತಿರುಗಲಾರಂಬಿಸಿತ್ತು
ಡೈರಿಯ ಪುಟಗಳಲ್ಲಿ ಅವಳ ಮನದ ಮಾತುಗಳು ಶುರುವಾಗಿದ್ದು, ಅವಳು ಮೆಡಿಕಲ್ ಓದಲೆಂದು ಧಾರವಾಡಕ್ಕೆ ಬಂದು ಹಾಸ್ಟೆಲ್ ನಲ್ಲಿ ಉಳಿದ ಮೇಲೆ.
"ಅದು ನನ್ನ ಹಾಸ್ಟೆಲ್ನ ಮೊದಲ ದಿನ. ಅಪ್ಪ ಬಂದು ಬಿಟ್ಟು ಹೋದ ನಂತರ ಯಾಕೋ ಒಂಟಿ ಎನಿಸುತಿತ್ತು.
ಮನೆಯವರಿಗಿಂತ ಜಾಸ್ತಿ ಅದೆಕೋ ನಿನ್ನ ನೆನಪಾಗುತಿದೆ ಅಳುವಷ್ಟು ಬೇಸರ."
ಇವಳು ನನ್ನ ಇಷ್ಟೊಂದು ಮಿಸ್ ಮಾಡ್ಕೊತಿದ್ಲಾ ಎಂದುಕೊಳ್ಳುತ್ತಲೆ ಮಂದೆ ಓದತೊಡಗಿದ.
ಆ ದಿನ ನನ್ನ ಬರ್ತಡೇ ಮಧ್ಯಾನವಾದರೂ ನೀನು ವಿಶ್ ಮಾಡಲೆ ಇಲ್ಲ. ಅದೇನೊ ಆತಂಕ ಮನಸಲಿ.. ಫ್ರೆಂಡ್ ಎಲ್ಲ ಜೊತೆಲಿದ್ದರೂ ಮನ ನಿನ್ನ ಬಗ್ಗೆ ಯೋಚಿಸುತ್ತಿದೆ. ನೆನಪಿದೆಯ ಗೆಳೆಯ? ಅಂದು ನೀ ವಿಶ್ ಮಾಡಿದಾಗ ಸಂಜೆ ೭ ಗಂಟೆ.. ಅಲ್ಲಿಯವರೆಗೂ ಅದೆಷ್ಟು ಬೇಸರ..
ಮುಂದಿನ ಕೆಲ ಪುಟಗಳಂತೂ ಬರೀ ಐ ಲವ್ ಯು ವಿಕ್ರಮ್ ಎನ್ನುವದರಲ್ಲೆ ತುಂಬಿ ಹೋಗಿದ್ದವು..
ಅಬ್ಬ! ಎನಿಸಿಬಿಟಿತ್ತು ವಿಕ್ರಮ್ ಗೆ ಓದಿ..
ನಿನ್ನ ಬಳಿ ಹೇಳಿಕೊಳ್ಳಲೆ ಬೇಕು.. ಹೇಗೆ ಹೇಳಲಿ? ನೇರವಾಗಿ ಹೇಳುವ ಧೈರ್ಯವಂತೂ ಇಲ್ಲ.. ಡೈರಿ ಬರೆಯುವ ಅಭ್ಯಾಸ ಇದ್ದ ನನಗೆ ಇದನ್ನೆ ನಿನಗೆ ತಲುಪಿಸುವ ಪ್ರಯತ್ನ ಮಾಡಿರುವೆ ನೀ ಓದಿದ ಮೇಲೆ
ಖಂಡಿತ ಕಾಲ್ ಮಾಡ್ತಿಯ ಎನ್ನುವ ಭರವಸೆಯೊಂದಿಗೆ….
ಉಳಿದ ಪುಟಗಳೆಲ್ಲ ಖಾಲಿಯಾಗಿದ್ದವು..
ಓದಿದ ವಿಕ್ರಮ್ ಗೆ ಒಮ್ಮೆ ಮಾತನಾಡಲೇಬೇಕೆಂದು ಕಾಲ್ ಮಾಡಿದ..
ಆದರೆ ಅತ್ತ ಕಡೆಯಿಮದ ಕಾಲ್ ರಿಸಿವ್ ಮಾಡಿದ್ದು ಅವಳ ತಮ್ಮ ಮಹೇಂದ್ರ.
"ಮಹೇಂದ್ರ, ಸುನೀತಾ ಇಲ್ವ?"
ಅಕ್ಕನ ವಿಷಯ ಕೇಳಿದ ಕ್ಷಣ ಬಿಕ್ಕಿ ಬಿಕ್ಕಿ ಅಳತೊಡಗಿದ ಮಹೇಂದ್ರ. ಹೇಗೋ ಸುದಾರಿಸಿಕೊಂಡು ಹೇಳಿದ, "ಇಲ್ಲ ಅಣ್ಣ, ಗಾಡಿಯಲ್ಲಿ ಬರುವಾಗ ಅಕ್ಕನಿಗೆ ಅ್ಯಕ್ಸಿಡೆಂಟ ಆಗಿ ಆಸ್ಪತ್ರೆಗೆ ಸೇರಿಸಿದ್ದಾರೆ, ಇನ್ನು ಪ್ರಜ್ನೆ ಬಂದಿಲ್ಲವಂತೆ."
ವಿಕ್ರಮ್ ಗೆ ಮೊದಲ ಬಾರಿ ತಾನು ಒಂಟಿ ಅನಿಸತೊಡಗಿತ್ತು.. ಮೊದಲ ಬಾರಿ ದೇವರಲ್ಲಿ ಬೇಡಿಕೊಂಡಿದ್ದ ಏನು ಅಗದಿರಲೆಂದು.. ಹೇಗಿದ್ದರೂ ಮರುದಿನ ಭಾನುವಾರ ಹೋಗಿಯೆ ಬರೋಣವೆಂದು ಹೊರಟೆ ಬಿಟ್ಟ..
ಇತ್ತ ಊರು ತಲುಪಿ ಆಸ್ಪತ್ರೆ ಸೇರುವಷ್ಟರಲ್ಲಿ ಬೆಳಗಿನ ೫ ಗಂಟೆ. ಆಗ ತಾನೆ ಪ್ರಜ್ಞೆ ಬಂದಿತ್ತು ಸುನೀತಾ ಗೆ ವಿಕ್ರಮ್ ನ ನೋಡಿದ ಕ್ಷಣ ಹೊಸ ಜನುಮ ಸಿಕ್ಕಂತಾಗಿತ್ತು.. ಇಬ್ಬರ ಬಾಳಲ್ಲೂ ಹೊಸ ಬೆಳಕೊಂದು ಮೂಡತೊಡಗಿತ್ತು.
-ಹರೀಶ್ ಹೆಗಡೆ
ಮಿಂಚುಳ್ಳಿ ಕಣ್ಣ ನೋಟಕ್ಕೆ
ಕಣ್ಣ ನೋಟಕ್ಕೆ ಇಷ್ಟೊಂದು ತಾಕತ್ತಿದೆ ಎಂದು ನೆನ್ನೇ ದಿವಸ ನಿನ್ನ ನಯನಗಳ ಮೋಹಕ ಸೆಳೆತಕ್ಕೊಳಗಾದ ಮೇಲೆ ಅರ್ಥವಾಗುತ್ತಿದೆ. ನಿನ್ನ ಮುಂದೆ ಕಣ್ಣನ್ನು ಮುಚ್ಚಲೇಬಾರದು ಅಂತ ನಾನು ನಿರ್ಧರಿಸುವ ಮುಂಚೆಯೇ ಕಣ್ಣ ರೆಪ್ಪೆಗಳು ತಾವೇ ಖುದ್ದಾಗಿ ಮುಷ್ಕರ ಹೂಡಿವೆ. ನಿನ್ನ ಮುದ್ದಾದ ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ ಯಾವ ಆಯಸ್ಕಾಂತಕ್ಕೂ ಸರಿಸಾಟಿ ಇಲ್ಲದ ನಿನ್ನ ಕಣ್ಣುಗಳಿಗೆ ಕಟ್ಟಾಭಿಮಾನಿಯಾಗಿದ್ದೇನೆ. ನಿನ್ನ ಕಣ್ಣಿನ ಹೊಳಪು ಈ ಏಕಾಂಗಿ ಮನದಲ್ಲಿ ಹೊಸ ಹೊಸ ಕನಸುಗಳಿಗೆ ಜಾಹೀರಾತು ಕೊಡುತ್ತಿದೆ. ಅಷ್ಟೇ ಅಲ್ಲದೇ ಮುಂದೆ ಹೃದಯದಲ್ಲಿ ಶುರುವಾಗುವ ಅನುರಾಗದ ಮಳೆಯ ಹವಮಾನ ಮುನ್ಸೂಚನೆಯು ಕೊಡುತ್ತಿದೆ. ಕಣ್ಣೆಂಬ ಕ್ಯಾಮರಾದಲ್ಲಿ ಕ್ಲಿಕ್ಕಿಸಿಕೊಂಡ ನಿನ್ನ ಕಣ್ಣಿನ ಛಾಯಾ ಚಿತ್ರವನ್ನು ಮನಸ್ಸೆಂಬ ಗ್ಯಾಲರಿಯಲ್ಲಿ ಸೇವ್ ಮಾಡಿ ಇಟ್ಟುಕೊಂಡು ಪದೇ ಪದೇ ನೋಡಿ ಮೈ ಮರೆತಾಗ ಕಣ್ಣಿದ್ದು ಕುರುಡನಾಗಿದ್ದೆನೇನೋ ಅಂತೆನಿಸಿ ಭಾವನಾ ಪ್ರಪಂಚದಲ್ಲಿ ಕಣ್ಮರೆಯಾಗಿದ್ದೇನೆ. ನಿನ್ನ ಕಣ್ಣಿನ ಭಾಷೆ ಅರ್ಥವಾಗದೇ ಸಿಕ್ಕ ಸಿಕ್ಕ ಡಿಕ್ಷನರಿಯಲ್ಲಿ ಅರ್ಥ ಹುಡುಕಿ ಸಿಗದೇ ಸುಸ್ತಾಗಿದ್ದ ನನಗೆ ನಿನ್ನ ಮಿಂಚುಳ್ಳಿ ಕಣ್ಣ ಕಪ್ಪಿನೊಳಗೆ ನನ್ನ ಪ್ರತಿಬಿಂಬವನ್ನು ಕಂಡು ಖುಷಿಯಾಗಿದೆ. ನಿನ್ನ ನಲ್ಮೆಯ ನಗುವಿಗೆಲ್ಲ ಇನ್ನೂ ನನ್ನೇ ಕಣ್ಣೇ ಕನ್ನಡಿ.
ಸದ್ಯಕ್ಕೆ ನೀನು ಕೊಟ್ಟ ಕಿರು ನೋಟಕ್ಕೆ ಮನದ ಪದಕೋಶದಲ್ಲಿ ಶೇಖರಿಸಿಟ್ಟುಕೊಂಡ ಪದಗಳು ಮೂರ್ಛೆಹೋಗಿವೆ. ನಿನಗಾಗಿ ಬರೆಯಲು ಶುರುಮಾಡಿದ್ದ ಒಲವ ಕವಿತೆ ಎರಡೇ ಸಾಲಿಗೆ ಪದಗಳಿಲ್ಲದೇ ಗೋಗರೆಯುತ್ತಾ ನಿಂತಿದೆ. ನಿನ್ನ ಒಂದೇ ಒಂದು ಸಲಿಗೆಯ ನಗುವಿನಿಂದ ಪದಗಳೆಲ್ಲ ಎಚ್ಚೆತ್ತು ಸೊಗಸಾದ ಕವಿತೆ ಮೂಡಬಹುದು ಎಂಬುವುದು ನನ್ನ ನಂಬಿಕೆ. ಮೂಡಿದ ಕವಿತೆಯ ಪ್ರತಿಯೊಂದು ಅಕ್ಷರಕ್ಕೂ ನಿನ್ನ ಕಣ್ಣಿನ ಮೇಲೆ ತೀರಿಸಲಾಗದಷ್ಟು ಋಣ ಇರುತ್ತದೆ. ಮುಂಬರುವ ದಿನಗಳಲ್ಲಿ ನಿನ್ನ ಕಣ್ಣಿನ ಕುರಿತಾಗಿಯೇ ನೂರಾರು ಕವಿತೆ ಬರೆಯುವ ಹುಮ್ಮಸ್ಸು ನನ್ನಲ್ಲಿದೆ. ನಿನ್ನ ಮಿಂಚುಳ್ಳಿ ಕಣ್ಣಿನ ಆಕರ್ಷಣೇಗೆ ನನ್ನ ಹೃದಯದಲ್ಲಿ ಶುರುವಾಗಿದೆ ಆಲಾಪನೆ. ಈ ಪರಿಯನ್ನು ಪ್ರೀತಿಯೋ ಅಥವಾ ಬೇರೆಯೇನೋ ಎಂದು ತಿಳಿಯದೇ ವಿಚಲಿತನಾಗಿದ್ದೆ. ಎಲ್ಲದಕ್ಕೂ ನೀನೇ ನೀಡಬೇಕಾಗಿದೆ ವಿವರಣೆ.
– ಅಭಿಷೇಕ್ ಪೈ