ಯೌವ್ವನ ನೂರಾರು ಕನಸುಗಳ ಸುಂದರ ಲೋಕ. ಇಂಥ ಲೋಕದಲ್ಲಿ ಹತ್ತಾರು ಬಗೆಯ ಕನಸುಗಳನ್ನು ನನಸಾಗಿಸಿಕೋಳ್ಳಲು ಇರುವ ಬಯಕೆ ಅಧಮ್ಯ. ಹಾಗೇ ಬಯಕೆಗಲು ಹೆಚ್ಚಾಗಿ ಬಯಲಾಗುವುದು ತಾರುಣ್ಯದಲ್ಲೇ ಅಲ್ಲವೇ, ಯೌವ್ವನ ತುಂಬೊ ತುಳುಕುತ್ತಿರುವ ಈ ಹಂತದಲ್ಲಿ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕು ಎನ್ನುವ ಮನೋಸ್ಥಿತಿ.ಜೀವನವನ್ನು ಸಮಾಜವನ್ನು ಗಡಿಗಳ ಮೀರಿ ಗ್ರಹಿಸುವುದಕ್ಕೆ ಆಗ ತಾನೇ ಸಿದ್ದವಾಗಿರುವ ಮನಸ್ಸು. ಊಹೆ, ಆಲೋಚನೆಗಳೆಲ್ಲವೂ ರಂಗುರಂಗಾಗಿ ಕಾಣಿಸಿಕೊಂಡು ಎಲ್ಲದರಲ್ಲೂ ಆವೇಶದ ಭರಾಟೆ ಸಾಗುತ್ತಿರುತ್ತದೆ. ಪ್ರಪಂಚವನ್ನೇ ಎದುರಿಸುವ ದೋರಣೆ, ಯಾವುದೋ ಸಾಹಸ ಮಾಡಬೇಕೆಂಬ ಆತುರ, ಕೌತುಕದಲ್ಲಿ ಮಾಗುತ್ತಾ ಮುಳುಗಿರುತ್ತಾರೆ. ಸುಮ್ಮನೆ ಕುರಿಸದ ’ಬಿಸಿ ರಕ್ತ’ ಹಾಗು ಸಿನಿಮಾ ಪ್ರಭಾವದಿಂದ ರೋಮ್ಯಾಂಟಿಕ್ ಥ್ರಿಲ್‌ಗಳಿಗೆ ಕಾತರಿಸುತ್ತಿರುವೆ.
ತನ್ನೋಳಗಿನ ಎಲ್ಲಾ ಕಾತರಗಳಿಗೆ, ಕನಸುಗಳಿಗೆ ಪ್ರೀತಿಯ ಸೂತ್ರವ ಕಟ್ಟಿ ಗಾಳಿಪಟ ಆಡಿಸಲು ಪ್ರಾರಂಭಿಸುತ್ತೇವೆ. ’ಜಗತ್ತಿನಲ್ಲಿ ರೊಟ್ಟಿಗೆ ಹಸಿದವರಿಗಿಂತ ಪ್ರೀತಿಗೆ ಹಸಿದವರು ಹೆಚ್ಚು’ ಎನ್ನುವ ಮಾತಿದೆ. ತಾರುಣ್ಯದ ದೇಹ ಹಾಗು ಮನಸ್ಸುಗಳಲ್ಲಿ ಆಗುವ ಬದಲಾವಣೆಯು ಹಲವು ಕನಸು, ಗೊಂದಲ,ಆತಂಕಗಳೊಂದಿಗೆ ’ಪ್ರೀತಿಯ ಸಾಮೀಪ್ಯವನ್ನು ಹರಸುತ್ತದೆ. ಈ ’ತಾರುಣ್ಯದ ಪ್ರೀತಿ’ಗೆ ಕಾರಣವನ್ನು ಹುಡುಕುತ್ತಾ ಹೋದರೆ ಕಾಲೇಜಿಗೆ ಹೋಗುವ ವಯಸ್ಸಿನಲ್ಲಿ ಬಹುತೇಕ ಯವಕ ಯುವತಿಯರಿಗೆ ತನ್ನ ಜೊತೆಯಲ್ಲಿ ಇರುವಂತಹ, ಆತ್ಮೀಯವಾಗಿ ಮಾತನಾಡಿಸುವಂತಹ ಒಬ್ಬ ಸ್ನೇಹಿತ/ಸ್ನೇಹಿತೆಯ ಬಯಕೆ ಇದ್ದೇ ಇರುತ್ತದೆ. ಸ್ನೇಹ- ಪ್ರೀತಿಗಳ ಸಾಮಿಪ್ಯದ ನಡುವಿನ ಅಂತರ ತಿಳಿಸದ ಸಾಮಾಜಿಕರಣದ ಕಾರಣಕ್ಕೆ ಯುವಜನರು / ನಾವು ಅದಕ್ಕೆ ಪ್ರೀತಿ ಅಂತಲೋ ಟೈಮ್ ಪಾಸ್ ಲವ್ ಎಂದೋ ಹಣೆಪಟ್ಟಿ ಹಚ್ಚಿಕೊಂಡು ಇಲ್ಲದ ತೊಂದರೆಗಳಿಗೆ ,ಗೊಂದಲಗಳಿಗೆ ಸಿಲುಕುವುದು. ಅಪರಾಧಿ ಪ್ರಜ್ಞೆಗೆ ಸಿಲುಕುವುದು, ಹೆಚ್ಚಾಗುತ್ತಿದೆ. ಭಾರತೀಯ ಕುಟುಂಭ ವ್ಯವಸ್ಥೆಯ ಸಾಮಾಜಿಕರಣವು ಪಟ್ಟಭದ್ರ ಅಧಿಕಾರದ ಹಿತಾಸಕ್ತಿಗಳನ್ನು ಪೊಷಿಸುವುದಕ್ಕೆ ಮಾನವ ಸಂಬಂದಗಳನ್ನು ಸರಿಯಾಗಿ ಅರ್ಥೈಸದೆ ಇರುವ ಕಾರಣ ಯುವಜನರು ಹೊಸ ಬದುಕಿಗೆ, ಹೊಸ ಹಾದಿಗಳಿಗೆ,ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ದಿಕ್ಕೆಟ್ಟು, ದಿಕ್ಕಾ ಪಾಲಾಗುವುದೇ ಹೆಚ್ಚು.
ಈ ಹಿನ್ನಲೆ ಯಲ್ಲಿ ನಾವು ’ಲವ್ ಅಟ್ ಪಸ್ಟ್ ಸೈಟ್’ – ಎಂಬಂತ ಮಾತುಗಳನ್ನು ವಿವರಿಸಿಕೊಳ್ಳಬೇಕು.ಇದು ಪರಿ ಪಕ್ವ ಪ್ರೇಮದ ಬಗ್ಗೆ ಹೇಳುವುದಿಲ್ಲ . ಇದು ಮೋಹ, ಯೌವ್ವನದ ಸೆಳತದಲಿ ಬಾವುಕರಾಗಿ ಪ್ರೇಮದ ಗೋಡೆಗೆ ಆತು ಬೀಳುವುದು. ನೋಟದಲ್ಲಿ ಹುಟ್ಟಿದ ಪ್ರೀತಿ ಮನಸ್ಸಿನಾಳಕ್ಕೆ ಇಳಿಯುವ ಹೊತ್ತಿಗೆ ಮುದುಡಿಹೋಗಿರುತ್ತದೆ. ವ್ಯಕ್ತಿತ್ವದ ಪಕ್ವತೆಗೆ ಈ ರೀತಿಯ ಪ್ರೇಮದ ಗೋಡೆಯೆ ಬಹುತೇಕ ಸಂದರ್ಭದಲ್ಲಿ ಅಡ್ಡಿಯಾಗುತ್ತದೆ. ಹಾಗಾದರೆ ಪ್ರೀತಿ ಅಂದರೆ ಏನು ? ಪ್ರೀತಿ ಮಾಡಿವುದಕ್ಕೆ ಬೇಕಾದ ಅರ್ಹತೆಗಳೇನು ? ವಯಸ್ಸು ಎಷ್ಟಾಗಿರಬೇಕು ? … ಈ ರೀತಿಯ ಪ್ರಶ್ನೆಗಳಿಗೆ ಇದುವರೆಗೂ ಯಾರು ನಿರ್ಧಿಷ್ಟ ಉತ್ತರಗಳನ್ನು ನೀಡಿಡುವುದಕ್ಕೆ ಸಾಧ್ಯವಾಗಿಲ್ಲ. ಪ್ರೀತಿ ಎನ್ನುವುದು ಅಮೂರ್ತವಾದದ್ದು, ಅನುಭವಕ್ಕೆ ಮಾತ್ರ ದಕ್ಕುವಂತದ್ದು, ಪ್ರೀತಿ ಎನ್ನುವುದು ಒಂದು ಮಾನಸಿಕ ಶಕ್ತಿ- ದೈಹಿಕ ಅಹ್ಲಾದ. ನೆಮ್ಮದಿ ಕೊಡಬಲ್ಲ ಹಬ್ಬದೂಟ. ಬದುಕು ಅನನ್ಯವಾದದು.ಈ ಬದುಕನ್ನು ಪ್ರೀತಿಸಬೇಕು,ಆಸ್ವಾದಿಸಬೇಕು.ಅದಕ್ಕಾಗಿ ಪ್ರೀತಿಬೇಕು.
ಬನ್ನಿ ಪ್ರೀತಿಸೋಣ – ಬದುಕೋಣ ದೇಶ , ಭಾಷೆ, ಜಾತಿ, ಬಣ್ಣಗಳ ಗಡಿಯ ಮೀರಿ…
-ಮುರಳಿ ಮೋಹನ್ ಕಾಟಿ
Muralli brtr
Thumba chenagidhe nimma lekana
Shubhavagali
’ಲವ್ ಅಟ್ ಪಸ್ಟ್ ಸೈಟ್’ ಕುರಿತಾದ ನಿಮ್ಮ ಮಾತುಗಳು ಒಪ್ಪುವಂತಹವು. ಚೆನ್ನಾಗಿದೆ ನಿಮ್ಮ ಲೇಖನ, ಧನ್ಯವಾದಗಳು ಸರ್.