ಪ್ರೀತಿಯೆ ದೇವರು: ನಂದಾದೀಪ

ಗೆಳೆಯಾ..

ಭೂಮಿಯಲ್ಲಿ ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತ ಪ್ರೀತಿನ ಸೃಷ್ಠಿ ಮಾಡಿದನಂತೆ.. ಯಾಕೆಂದರೆ ನಿಜವಾದ ದೇವರು ನಮ್ಮ ಮುಂದೆ ಪ್ಯತ್ಯಕ್ಷ ಆದ್ರೆ ಅದನ್ನ ತಡೆದುಕೊಳ್ಳೋ ಶಕ್ತಿ ನಮಗಿರೋದಿಲ್ಲ ಅಂತ..
ಈ ಪ್ರೀತಿನ ದೇವರಿಗೆ ಯಾಕೆ ಹೋಲಿಸ್ತಾ ಇದೀನಿ ಅಂದ್ರೆ ನಿಜವಾದ ಪ್ರೀತಿನ ಪಡೆದುಕೊಳ್ಳೋಕು, ಅದರ ತೀವ್ರತೆಯನ್ನು ತಡೆದುಕೊಳ್ಳೋಕು, ಅದನ್ನ ಮತ್ತೆ ಮರಳಿ ನಿಡೋದಕ್ಕೂಅಂತಹದ್ದೊಂದು ಗಟ್ಠಿಯಾದ ಮನಸು ಇರಬೇಕಂತೆ..!
ಇಲ್ಲವಾದಲ್ಲಿ ಆ ಪ್ರೀತಿಯೆಂಬ ದೇವರನ್ನ ಉಳಿಸಿಕೊಳ್ಳೋಕ್ಕೆ ಆಗೋದಿಲ್ಲ ನೋಡು..!

ಅಂಹದೊಂದು ಮನ ನಿನ್ನಲ್ಲಿ ನಾ ಕಾಣಲೂ ಇಲ್ಲ..! ಬಯಸಿದವಳ ಮನವ ಇಲ್ಲಸಲ್ಲದ ನೆಪಗೊಳೊಡ್ಡಿ ಚಿಗುರಿದ ಕನಸುಗಳನ್ನೆಲ್ಲಾ ಚಿವುಟುತ್ತಲೇ ಬಂದೆ.. ಮಿಡಿವ ಹೃದಯದ ಸದ್ದಿನ ತುಡಿತಗಳ ಕೇಳದೆ ಕೊಡುವುತ್ತಲೆ ನಿಂತೆ.. ಮನದಾಳದ ಮೂಕ ಭಾವಗಳ ಪಿಸುಮಾತುಗಳನ್ನು ಆಲಿಸದೆ ಅಲಕ್ಷಿಸುತ್ತಲೆ ಕುಂತೆ..
ಇಷ್ಟಾದರೂ ಈ ಹಾಳು ಮನಸು ನಿನ್ನ ಪ್ರೇಮಿಸುತ್ತಲೆ ಬಂತು..

ಆ ದೇವರನ್ನು ಒಲಿಸಿಕೊಳ್ಳಲು ಮುಗ್ಧ ಮನಸಿನ ಭಕ್ತಿ ಇದ್ದರು ಸಾಕಂತೆ..! ಹಾಗೆಯೇ ಈ ಪ್ರೀತಿಯನ್ನು ಪಡೆದುಕೊಳ್ಳಲು ವಿಶಾಲ ಮನಸಿನ ಶುದ್ಧ ಹೃದಯವೊಂದಿದ್ದರೆ ಸಾಕು..! ಪ್ರೀತಿ ತಾನಾಗೆ ಒಲಿದು ಬರುತ್ತದೆ. ಅಂತಹ ಪ್ರೀತಿಯ ಆಹ್ವಾನಿಸಿಲು ಮೊದಲು ಮನ ಸಾಗರವಾಗಿರಬೇಕು ಪವಿತ್ರ ಗಂಗೆಯಂತೆ.. ಆಗ ಒಲವೆಂಬ ನದಿ ತಾನಾಗೆ ಹರಿದು ಹೃದಯ ಸಮುದ್ರದಲ್ಲಿ ಲೀನವಾಗಿಬಿಡುತ್ತದೆ..

ನಿನ್ನೆಡೆಗಿನ ನನ್ನ ಅದಮ್ಯ ಪ್ರೇಮ ನದಿಯಂತೆಯೆ ಎಲ್ಲ ಸಂಕೋಲೆಗಳನ್ನು ಮೀರಿ ಹರಿದು ಬಂದರು ನಿನ್ನ ಹೃದಯ ಮಾತ್ರ ಸಾಗರವಾಗಿರದೆ ಬೇಡದ ಕಟ್ಟಳೆಗಳನ್ನು ಕಟ್ಟಿಕೊಂಡ ಅಣೆಕಟ್ಟಾಗಿದ್ದು, ನನ್ನ ಹೃದಯವೇ ಒಡೆದುಹೋಗುವಂತೆ ನಲುಗಿಸಿಬಿಟ್ಟಿತು..

ನನ್ನ ಪ್ರೇಮ ನಿನಗೆ ಅನಿವಾರ್ಯವೋ ಅವಶ್ಯವೋ ಗೊತ್ತಿಲ್ಲ.. ನಿನ್ನೊಲುಮೆಯ ಬಯಸಿದ ಈ ಮನಸಿಗೆ ನಿನ್ನ ಪ್ರೇಮ ನನಗೊಂದು ಬದುಕು..!* *ಅದು ಉಸಿರಾಟದಷ್ಟೆ ಈ ಬದುಕಿಗೆ ಅವಶ್ಯ..!

ದೇವರು ನಮಗೊಲಿಯಲು ಮೊದಲನೆಯದು ಮುಗ್ಧ ಮನಸಾದರೆ, ಎರಡನೆಯದು ನಂಬಿಕೆ.. ಪ್ರೀತಿಯಲ್ಲಿ ನಾವು ಅನ್ನೋನ್ಯವಾಗಿರಲು ಆ ನಂಬಿಕೆಯ ತಳಹದಿ ಅಷ್ಟೆ ಗಟ್ಟಿಯಾಗಿರಬೇಕು.. ನಿನ್ನ ತಿರಸ್ಕಾರದ ಮಾತುಗಳು, ಅಲಕ್ಷದ ವರ್ತನೆಗಳು ಮನಸನ್ನು ಕಂಗೆಡಿಸಿತಾದರೂ ಮನಗಳ ನಡುವಿನ ಸಂವಹನದಲ್ಲಿ, ನಿರೀಕ್ಷೆಯ ಸುತ್ತ ಸುಳಿದಾಡುತ್ತ ನಂಬಿಕೆಯ ಅಡಿಪಾಯದಲ್ಲೆ ಅಡಿಗಡಿಗೂ ನಾ ಕಾಯುವಾಗ ನನ್ನೆಲ್ಲಾ ಆಸೆಗಳನು ತಿರಸ್ಕಾರದ ಅಡಿಯೊಳಗೆ ಹೂತುಬಿಟ್ಟೆ..!

ಪ್ರೀತಿ ಯಾರಿಗೂ ಮೋಸ ಮಾಡುವುದಿಲ್ಲ.. ದೇವರಂತೆ ನಿಶ್ಚಲ..! ಪ್ರೀತಿ ಪ್ರೀತಿಸುತ್ತದೆಯೇ ಹೊರತು ಬೇರೆನ್ನನ್ನು ಮಾಡುವುದಿಲ್ಲ.. ಪ್ರತಿಯಾಗಿ ಪ್ರೀತಿಯನ್ನೆ ಬಯಸುತ್ತದೆ..! ಅಂತಹ ಪ್ರೀತಿಯನ್ನೆ ಅನುಮಾನಿಸಿ, ಅದನ್ನು ಪಡೆದುಕೊಳ್ಳುವ ಮನ ನಿನ್ನಲ್ಲಿಲ್ಲವೆಂದು ನೀ ತಿಳಿಸಿದಮೇಲೂ ನಿನ್ನ ಮೇಲಿನ ನಂಬಿಕೆಗೆ ನಾಂದಿ ಹಾಡಬೇಕೆನಿಸಿದೆ..

ಅಂದಹಾಗೆ ಕೊನೆಯದಾಗಿ ಮತ್ತೊಂದು ಮಾತು..
ಬಡವ, ಶ್ರೀಮಂತರೆಲ್ಲರಿಗೂ ದೇವರು ಒಬ್ಬನೆ..! ಹಾಗೆಯೇ.. ಎಲ್ಲರ ಹೃದಯಲ್ಲಿ ಅರಳುವ ಪ್ರೀತಿಯೂ ಒಂದೆ..!

ಯಾವ ನ್ಯೂನತೆ ಇರದವರನ್ನು ಪ್ರೀತಿಸಿದರೆ ಅದು ದೊಡ್ಡಸ್ಥಿಕೆಯಲ್ಲ.. ಎಲ್ಲಾ ನ್ಯೂನತೆಗಳನ್ನು ಮೀರಿ ಪ್ರೀತಿಸುವುದೆ ನಿಜವಾದ ಹೃದಯ ಶ್ರೀಮಂತಿಕೆ..!

ನಂದಾದೀಪ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x