“ಪ್ರೀತಿಗೂ ಒಂದು ದಿನ…”: ಪೂಜಾ ಗುಜರನ್, ಮಂಗಳೂರು

ಪ್ರೇಮಿಗಳ ದಿನ ಅಂದ್ರೆ ಯಾರಿಗೆ ತಾನೇ ನೆನಪಿರಲ್ಲ. ಫೆಬ್ರವರಿ 14 ರಂದು ವಿಶ್ವದದ್ಯಾಂತ “ವ್ಯಾಲೆಂಟೈನ್ಸ್ ಡೇ” ಆಚರಿಸಲಾಗುತ್ತದೆ. ಪ್ರೀತಿ ಪ್ರೇಮ ಅಂದಾಗ ಪ್ರತಿಯೊಬ್ಬರೂ ಕೂಡ ಪ್ರೇಮಿಗಳಾಗುತ್ತಾರೆ. ಈ ದಿನದ ಬಗ್ಗೆ ಕೇಳಿದರೆ ಕೆಲವರು ಸಣ್ಣಗೆ ನಗುತ್ತಾರೆ ಕೆಲವರು ನಾಚುತ್ತಾರೆ ಇನ್ನೂ ಕೆಲವರು ವಿರೋಧಿಸುತ್ತಾರೆ.

ವ್ಯಾಲೆಂಟೈನ್ಸ್ ಡೇ ಅಂದ್ರೆ ಇದು ಬರಿ ಪ್ರೇಮಿಗಳಿಗೆ ಮಾತ್ರ ಇರುವ ದಿನವಲ್ಲ. ಇಲ್ಲಿ ವಯಸ್ಸು ಲಿಂಗ ಭೇದ ಮರೆತು ತಮ್ಮ ಪ್ರೀತಿಯ ನಿವೇದನೆಯನ್ನು ಯಾರು ಬೇಕಾದರೂ ಮಾಡಬಹುದು.. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟಿದ್ದು. ಗುಲಾಬಿ ಹೂ ಕೊಟ್ಟು ಪ್ರೀತಿ ನಿವೇದನೆ ಮಾಡುವವನು ಮಾತ್ರ ಪ್ರೇಮಿಯಲ್ಲ. ಪ್ರೀತಿಸುವ ಪ್ರತಿಯೊಬ್ಬನೂ ಅಪ್ಪಟ ಪ್ರೇಮಿಯೇ ತಾನೇ.

ಪ್ರೇಮಿಗಳ ದಿನವೆಂದರೆ ಬರೀ ಒಂದು ದಿನಕ್ಕೆ ಮುಗಿಸುವ ಹಬ್ಬ ಇದಲ್ಲ. ಇಲ್ಲೂ ಒಂದು ವಿಶಿಷ್ಠವಾದ ದಿನಗಳಿವೆ. ವ್ಯಾಲೆಂಟೈನ್ಸ್ ಡೇ ಗೂ ಮುನ್ನ ಬರುವ ಆ ಏಳು ದಿನಗಳನ್ನು ಆಚರಿಸುವವರು ಇದ್ದಾರೆ. ಮೊದಲನೆ ದಿನ ಬರುವ ರೋಸ್ ಡೇ. ಎರಡನೆ ದಿನ ಪ್ರಪೋಸ್ ಡೇ. ಮೂರನೆ ದಿನ.ಚಾಕಲೇಟ್ ಡೇ.ನಾಲ್ಕನೆ ದಿನ ಟೆಡ್ಡಿ ಡೇ ಐದನೆ ದಿನ ಪ್ರಾಮಿಸ್ ಡೇ. ಆರನೆ ದಿನ ಹಗ್ ಡೇ ಏಳನೆ ದಿನ ಕಿಸ್ ಡೇ.. ಕೊನೆಗೆ ಬರೋದು ಈ ವ್ಯಾಲೆಂಟೈನ್ಸ್ ಡೇ.. ಅಬ್ಬಬ್ಬ ಅದೆಷ್ಟು ದಿನಗಳು ಪ್ರತಿಯೊಂದು ದಿನವನ್ನು ಚಂದಗಾಣಿಸುವ ಪ್ರೇಮಿಗಳು ಇದ್ದಾರೋ ಗೊತ್ತಿಲ್ಲ. ಆದರೂ ಈ ಹಬ್ಬಗಳನ್ನು ಪ್ರೇಮಿಸುವ ಪ್ರತಿಯೊಬ್ಬರು ಇದನ್ನೆಲ್ಲ ಮುಕ್ತವಾಗಿ ಸ್ವೀಕರಿಸುತ್ತಾರೆ.

ಪ್ರೇಮಿಗಳ ದಿನವೆಂದರೆ ಅದೊಂದು ಮನಸ್ಸಿನಲ್ಲಿ ಒಂದು ವಿಶೇಷವಾದ ಸಂಚಲನವನ್ನು ಉಂಟುಮಾಡುವ ಹಬ್ಬವಾಗಿದೆ.
ಈ ದಿನದಲ್ಲಿ ಗುಲಾಬಿ ಹೂವಿಗೆ ವಿಶೇಷವಾದ ಸ್ಥಾನಮಾನವಿದೆ. ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಿದೆ.

ನಮ್ಮ ದೇಶದಲ್ಲಿ ಗುಲಾಬಿ ಹೂ ಗ್ರೀಟಿಂಗ್ಸ್ ಕಾರ್ಡ್ಸ್ ಟೆಡ್ಡಿ ಬೇರ್ ಕೊಟ್ಟು ಪ್ರೀತಿ ನಿವೇದನೆ ಮಾಡುವವರು ಇದ್ದಾರೆ. ಈ ದಿನಕ್ಕಾಗಿ ಕಾದು ಪ್ರಪೋಸ್ ಮಾಡುವವರು ಇದ್ದಾರೆ. ಅದೆಷ್ಟೋ ಪ್ರೇಮಿಗಳು ಈ ದಿನಕ್ಕಾಗಿ ಕಾದಿರುತ್ತಾರೆ. ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಲು ಇದೊಂದು ಸುಸಂದರ್ಭ ಅಂದುಕೊಳ್ಳುತ್ತಾರೆ.

ಇಷ್ಟಕ್ಕೂ ಈ “ವ್ಯಾಲೆಂಟೈನ್ಸ್ ಡೇ” ಮೂಲ ಹುಡುಕಿದರೆ ಬೇರೆ ಕತೆಗಳು ಸಿಗುತ್ತದೆ. ಈ ಹಿಸ್ಟಾರಿಕಲ್ ಕತೆಗಳು ಏನೇ ಇದ್ದರೂ ಯಾರಿಗೂ ಇದರ ಗೊಡವೆಗಳಿಲ್ಲ. ಇಷ್ಟಕ್ಕೂ ವ್ಯಾಲೆಂಟೈನ್ಸ್ ಡೇ ಆಚರಿಸುವ ಯಾವ ಪ್ರೇಮಿಗೂ ಈ ದಿನ ಯಾಕೆ ಹೇಗೆ ಬಂತು ಅನ್ನುವುದು ಗೊತ್ತಿರುವುದಿಲ್ಲ.

ಕೆಲವು ಪ್ರೇಮಿಗಳು ಖುಲ್ಲಂ ಖುಲ್ಲ. ಅವರು ಯಾವುದಕ್ಕೂ ಯಾರಿಗೂ ಹೆದರದೆ ತಮ್ಮದೇ ಲೋಕದಲ್ಲಿ ಮೈ ಮರೆತು ಈ ದಿನವನ್ನು ಇನ್ನಷ್ಟು ಹತ್ತಿರವಾಗಿಸುತ್ತಾರೆ

ಮೊದಲು ಈ ಆಚರಣೆಗಳು ನಮ್ಮ ದೇಶದಲ್ಲಿ ಅಷ್ಟಾಗಿ ಪ್ರಸಿದ್ಧಿ ಪಡೆದಿರಲಿಲ್ಲ. ಈಗ ಇದನ್ನು ವ್ಯವಹಾರಿಕವಾಗಿ ಕೂಡ ತುಂಬಾ ಪ್ರಚಲಿಸಲಾಗುತ್ತಿದೆ ಅನ್ನುವುದು ಕೆಲವರ ವಾದ. ಅಷ್ಟೆ ಅಲ್ಲ ಇದನ್ನು ಸಭ್ಯತೆ ಮತ್ತು ನೈತಿಕತೆಯನ್ನು ಅಪಮಾನಗೊಳಿಸುವ ಕಪ್ಪು ದಿನ ಅನ್ನುವವರು ಇದ್ದಾರೆ. ವ್ಯವಹಾರಿಕ ಲಾಭಕ್ಕಾಗಿ ಕೆಲವೊಂದು ಸಂಸ್ಥೆಗಳು ಪ್ರಸಾರ ಮಾಧ್ಯಮಗಳು ಈ ದಿನವನ್ನು ಇನ್ನಷ್ಟು ಬಣ್ಣ ಹಚ್ಚಿ ಇಲ್ಲ ಸಲ್ಲದ ಪ್ರಚಾರಗಳನ್ನು ಕೊಟ್ಟು ಪ್ರೇಮಿಗಳ ದಾರಿ ತಪ್ಪಿಸುತ್ತಿದೆ ಅನ್ನವವರು ಇದ್ದಾರೆ‌.

ಅದೇನೆ ಇರಲಿ ಈ ದಿನವನ್ನು ಆಚರಿಸುವವರು ಆರೋಗ್ಯಕರವಾಗಿ ಆಚರಿಸಿದರೆ ಸಾಕು. ಪ್ರೇಮಿಗಳ ಹೆಸರಲ್ಲಿ ಯಾವುದೇ ಅಸಭ್ಯತನವನ್ನು ತೋರಿಸದೆ ಸುಂದರ ದಿನವನ್ನಾಗಿ ಮಾಡಲಿ. ಪ್ರೇಮಿಸುವ ಪ್ರತಿಯೊಬ್ಬನೂ ಪ್ರೀತಿಯ ಮಹತ್ವವನ್ನು ತಿಳಿದರೂ ಸಾಕು ಇದು ಬರಿ ಒಂದು ದಿನಕ್ಕೆ ಮುಗಿಯುವಂತಹದು ಅಲ್ಲ. ನಿಜವಾದ ಪ್ರೀತಿಗೆ ಎಲ್ಲ ದಿನವೂ ಒಂದೇ. ನಾವು ನಮ್ಮ ಪ್ರೀತಿಯನ್ನು ಯಾವ ರೀತಿ ಇಟ್ಟುಕೊಳ್ಳುತ್ತೇವೆ ಅನ್ನುವುದರ ಮೇಲೆ ನಮ್ಮ ಪ್ರೀತಿಯ ಪಯಣ ಸಾಗುತ್ತದೆ. ಬದುಕು ಪ್ರತಿ ದಿನವೂ ಹಬ್ಬವಾಗುತ್ತದೆ. ಪ್ರೇಮ ಪ್ರೀತಿಗಳು ಬದುಕಿಗೆ ಬೇಕೇ ಬೇಕು.. ಪ್ರೀತಿಯ ಅಮೃತ ಬದುಕನ್ನು ಇನ್ನಷ್ಟು ಅರೋಗ್ಯಕರವಾಗಿ ಮಾಡಲಿ. ಎಲ್ಲರಿಗೂ ಪ್ರೀತಿಯ ದಿನದ ಶುಭಾಶಯಗಳು.

-ಪೂಜಾ ಗುಜರನ್, ಮಂಗಳೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Varadendra k
Varadendra k
4 years ago

ಸೂಪರ್ ರಿ, ಈ ದಿನದಬಗ್ಗೆ ಬಹಳ ತಿಳಿದುಕೊಂಡಂತಾಯಿತು ನಿಮ್ಮ ಲೇಖನದಿಂದ

1
0
Would love your thoughts, please comment.x
()
x