- ಓರ್ವ ಲೇಖಕಿಯಾಗಿ ನಿಮ್ಮನ್ನು ಬೆಳೆಸಿದ ಅಂಶಗಳು
‘ನಾವು ಹುಡುಗಿಯರೇ ಹೀಗೆ’ ಎಂದು ಪ್ರಜಾವಾಣಿಗೆ ಬರೆದೆ ಅದು ಪ್ರಕಟ ಆಯ್ತು. ಅದು ‘ಓವರ್ ನೈಟ್ ಸೆಲೆಬ್ರಿಟಿ’ ಮಾಡಿತ್ತು. ಇದುವರೆಗೂ ಅದರ ಪ್ರಭಾವ ಇದೆ, ಆಮೇಲೆ ಬರೆದಂತ ಹುಡುಗಿಯರು ತುಂಬಾ ಜನ ಅದೇ ಶೈಲಿಯಲ್ಲಿ ಬರೆಯಲು ಶುರು ಮಾಡಿದರು. ಎರಡು ಪೀಳಿಗೆ ಹುಡುಗಿಯರು ಆದ ಮೇಲೆ, ಈಗ ಮೂರನೇ ಪೀಳಿಗೆ ಆಗಿದೆ. ಶ್ರೀನಿವಾಸ ರಾಜು, ಹೆಚ್. ಎಸ್. ರಾಘವೇಂದ್ರ ಇವರು ನಮ್ಮ ಮೇಷ್ಟ್ರು, ಇದನ್ನೆಲ್ಲಾ ಸೇರಿಸಿ, ಮುದ್ದಣ್ಣ ಪ್ರಶಸ್ತಿ ಗೆ ಕಳಿಸಿದರು. ಪ್ರಶಸ್ತಿಯು ಬಂತು. ನಂತರ ಅದನ್ನು ನಾವು ಹುಡುಗಿಯರೇ ಹೀಗೆ ಎಂದು ಕ್ರೈಸ್ಟ್ ಕಾಲೇಜಿನಿಂದ ಪ್ರಕಟಿಸಿದರು. ಅಡಿಗರಿಂದ ಹಿಡಿದು ಎಲ್ಲಾ ಹಿರಿಯರೂ ಚೆನ್ನಾಗಿ ಪ್ರತಿಕಿಯಿಸಿದರು, ತುಂಬಾ ಚೆನ್ನಾಗಿ ಕಾವ್ಯ ಸಮುದಾಯದೊಳಗೆ ನನ್ನನ್ನು ಆಹ್ವಾನಿಸಿದರು..
ನಂತರ ಬರೆದದ್ದು ಈ ತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ ಬಂತು. ಅವಾಗ ಎಲ್ಲಾ ಪತ್ರಿಕೆಗಳಲ್ಲೂ ಕವನಗಳು ಪ್ರಕಟವಾಯ್ತು. ಲಂಕೇಶ್ ನಲ್ಲಿ ಲೇಖನ ಬರೆಯಲು ಆರಂಭಿಸಿದೆ. ಬ್ಯಾಂಡೆಡ್ ಕ್ವೀನ್ ನಲ್ಲಿ ಸೆಕ್ಸ್ ಇದೆ, ಪಾಶ್ಚಾತ್ಯ ರನ್ನು ಆಕಷಿಸಲು ಈ ರೀತಿ ಮಾಡಲು ಸಿನೆಮಾ ತೆಗೆದಿದ್ದಾರೆಂಬ ಚರ್ಚೆ ಮಾಧ್ಯಮದಲ್ಲಿ ನಡೆಯುತ್ತಿತ್ತು. ನಾನು ಆಗ ಲಂಕೇಶ್ ಪತ್ರಿಕೆಯಲ್ಲಿ ಪೂಲನ್ ದೇವಿ- ಸಂಭೋಗ- ಭಾರತೀಯ ನಾರೀ ಲೇಖನ ಬರೆದೆ. ಬದಲಾದ ಪತಿವ್ರತೆಯರು ಇದೆಲ್ಲ ಆಧುನಿಕ ಚಿಂತನೆಯ ಲೇಖನ ಸಹ ವೈಚಾರಿಕತೆಯದ್ದೇ.
ಕನ್ನಡ ಪ್ರಭದಲ್ಲಿ ಪ್ರಮೀಳಾ ಆತ್ಮಕತೆ ಬರೆದೆ, ಬದುಕಿನ ಬೇರೆ ಬೇರೆ ವರ್ಗದ ಮಹಿಳೆಯರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಲೇಖನ ಬರೆದದ್ದು ಮಿರ್ಚ್ ಮಸಾಲಾದಲ್ಲಿ ಪ್ರಕಟವಾಯ್ತು. ಕನ್ನಡ ಪ್ರಭಕ್ಕೆ ಒಂದು ಕಾಲಂ ನಿರಂತರ ಐದು ವರ್ಷ ಬರೆದೆ. ಇಡೀ ಕರ್ನಾಟಕದ ಓದುಗರು ಸ್ಪಂಧಿಸಿದ ರೀತಿ, ಚೆನ್ನಾಗಿ ರಿಲೇಟ್ ಆಗುತ್ತಿತ್ತು. ಅಗ್ನಿ ಪತ್ರಿಕೆಯಲ್ಲಿಯೂ ಕಾಲಂ ಬರೆದೆ. ಲೇಖನಗಳು ಮತ್ತು ಕವನಗಳು (ಯಾನ –ಸಂಕಲನ, ಶಶಿದೇಶಪಾಂಡೆ ಭಾಷಾಂತರ-ಆಕ್ರಮಣ, ಪದ್ಮ ಸಚ್ ದೇವ್-ಡೋಗ್ರಿ ಕವನಗಳು ಒಂದು ನಿಯೋಜಿತ ಕಾರ್ಯ. ಪಾಕಿಸ್ತಾನಿ ಮಹಿಳಾ ಕವಿಗಳು- ಭಾಷಾಂತರ ಪುಸ್ತಕ ಬರೆದೆ.
- ಕಂಡದ್ದೆಲ್ಲ ಬಿಡದಂತೆ ಬರೆಯುತ್ತಾ ಹೋದ ನೀವು ಟೀಕೆಗಳನ್ನು ಹೇಗೆ ಎದುರಿಸಿದಿರಿ?
ತುಂಬಾ ಕಡಿಮೆ ಟೀಕೆಗಳು ಬಂತು. ತೊಂಬತ್ತು ಶೇ. ಧನಾತ್ಮಕವಾಗಿದ್ದವು. ಮುಕ್ತ ಮನಸ್ಸಿನಿಂದ 90 ರಷ್ಟು ಜನ ಸ್ವೀಕರಿಸಿದರು. ಓದುಗರು, ಕವಿಗಳು ಎಲ್ಲರೂ ಸ್ವೀಕರಿಸಿದರು.
- ಮಹಿಳಾ ನಿರ್ದೇಶಕಿಯರು ಬೆರಳೆಣಿಕೆಯಷ್ಟು ಇರುವ ಸಿನೆಮಾ ರಂಗದಲ್ಲಿ, ನಿಮಗೆ ಯಾವ ರೀತಿಯ ಪ್ರೋತ್ಸಾಹ ಸಿಗುತ್ತಿದೆ?
It is too early to talk. ನಾನು ಪೂರ್ಣಕಾಲಿಕ ನಿರ್ಧೇಶಕಿ ಅಲ್ಲ. ಸ್ವೀಡನ್, ಲಂಡನ್, ಫಿನ್ ಲ್ಯಾಂಡ್, ಪ್ಯಾರಿಸ್, ಕಟ್ಮಂಡ್ ಮುಂತಾದವುಗಳೆಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ಕವನಗಳನ್ನ ಕವಿ ಎಂದು ಗುರುತಿಸಿ ಆಹ್ವಾನಿಸಿದರು, ಭಾಷಾಂತರ ಮಾಡಿದರು.
(ಎನ್ ಜಿ ಎಫ್ ನಿಂದ ಸ್ವಯಂ ನಿವೃತ್ತಿ ತೆಗೆದುಕೊಂಡೆ. ಸೂರ್ಯ ಕ್ರಿಯೇಟಿವ್ಸ್ ನಲ್ಲಿ ಡ್ಯಾಕುಮೆಟೆಷನ್, ಸ್ಕ್ರಿಫ್ಟ್, ಭಾಷಾಂತರ,. ಡ್ಯಾಕುಮೆಂಟರಿ, ದಾರಾವಾಹಿ ಮುಂತಾದವುಗಳಿಗೆ ಬರೆದೆ. ಗಿರೀಶ್ ಕಾರ್ನಾಡ್, ಟಿ. ಎಸ್ ರಂಗ ಚೈತನ್ಯಾ, ನಾಗಾಭರಣ ಮುಂತಾದವರಿಗೆ ಬರೆದೆ. ಇಂಡಿಯನ್ ಎಕ್ಸ್ ಪ್ರೆಸ್ ಗೆ ಒಂದು ನಿಗಧಿತ ಆದಾಯಕ್ಕಾಗಿ ಸೇರಿಕೊಂಡೆ. ಅಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಡೆಕ್ಕಾನ್ ಹೆರಾಲ್ಡ್ ಗೆ ಬಂದೆ. ನಾನು ಸಾಹಿತಿ ಮತ್ತು ಪತ್ರಕರ್ತೆಯಾಗಿ ಹತ್ತಾರು ವರ್ಷಗಳು ಗುರುತಿಸಿಕೊಂಡೆ. ನಾನು ದೂರದರ್ಶನಕ್ಕೆ ಸುಮಾರು ಕೆಲಸ ಮಾಡಿದೆ. ಒಂದು ಅವಕಾಶ ಸಹ ನಿರ್ದೇಶಕಿಯಾಗಿ ಬಂದಾಗ ಒಪ್ಪಿ ಹೋದೆ. ಮುಂದೆ ನನ್ನ ಚಿತ್ರ ಮಾಡಬೇಕೆಂಬ ಆಲೋಚನೆ ಇದೆ.) ನಾನು ಒರ್ವ ಲೇಖಕಿ ಎಂಬುದೇ ನನಗೆ ಹೆಮ್ಮೆಯ ವಿಚಾರ.
- ದೇವಿ ಬಗ್ಗೆಗಿನ ನಿಮ್ಮ ರಿಸರ್ಚ್ ದೈವ ಸಾಕ್ಷಾತ್ಕಾರದವರೆಗೆ ಬಂದಿದೆಯೇ?
ಕಲ್ಚರ್ ಮಿನಿಸ್ಟ್ರಿ ಯಲ್ಲಿ ನನಗೆ ಕಲ್ಚರಲ್ ಫೆಲೋಶಿಪ್ ಸಿಕ್ಕಿದೆ. ದೇವಿಯ ಕಲ್ಪನೆಯನ್ನು ರಿ ಡಿಫೈನ್ ಮಾಡುತ್ತಿದ್ದೇನೆ. ನಾನು ಮೊದಲಿನಿಂದ ರಾಶನಲ್ ಆಗಿ ಬೆಳೆದವಳು. ನಾವು ನಮ್ಮ ಒಂದು ಸಾಂಸ್ಕೃತಿಕ ಶಾಖೆಯನ್ನು ತಿರಸ್ಕರಿಸಿದ್ದೇವೆ ಎನ್ನಿಸಿತು. ಅದರಲ್ಲಿಯೇ ನಾನು ತೊಡಗಿಕೊಂಡೆ, ಇದರ ನಂತರ ಚಾಮುಂಡಿ ಬಗ್ಗೆ ಒಂದು ದೊಡ್ಡ ಗ್ರಂಥ ಬರೆಯುತ್ತಿದ್ದೇನೆ. ಚಾಮುಂಡಿ ಎಂಬುದೇ ಒಂದು ಸಾಂಸ್ಕೃತಿಕ ಅಧ್ಯಯನ. ನಮ್ಮಲ್ಲಿ ವೈದಿಕವಲ್ಲದ, ಅವೈದ್ಯಿಕ ಆರಾಧನ – ಗ್ರಾಮ ದೇವತೆ ಆರಾಧನೆಯನ್ನು ಗಮನಿಸಿಕೊಂಡರೆ, ಆರ್ಯ ಮತ್ತು ದ್ರಾವಿಡ ಜೊತೆಗಿನ ನಂಟು ತಿಳಿಯುತ್ತದೆ.
(ಮಾರಿ ಮತ್ತು ಕೋಣದ ಕಥೆ. ಕೀಳು ಜಾತಿಯವಳು ಸುಳ್ಳು ಹೇಳಿ ಮೇಲ್ಜಾತಿಯವಳನ್ನು ಮದುವೆಯಾದಾಗ ಆಕೆಗೆ ನಂತರ ಗೊತ್ತಾಗಿ ಶಾಪ ಕೊಟ್ಟಳು. ವರ್ಣದ ಮತು ಗ್ರಾಮ ದೇವತೆಯ ಪರಿಕಲ್ಪನೆಯೇ ವೈದಿಕ ಧರ್ಮದೊಳಗೆ ಸೇರಿಕೊಂಡಿದೆ. ನಮ್ಮಲ್ಲಿ ಕೋಣ ಮತ್ತು ಎಮ್ಮೆ ಕರೆನ್ಸಿ ಅಗಿತ್ತು. ಮಹಿಷಾಸುರ ಮರ್ಧಿನಿ ಎಂಬುದು ದಕ್ಷಿಣ ಭಾರತದ ದೊಡ್ಡ ರೂಪಕ. ಅದು ಇಲ್ಲಿಂದ ಸಿಲೋನ್, ಜಪಾನ್, ಫಿಲಿಫೈನ್ಸ್ ಗೂ ಇದೇ ಕಾನ್ಸೆಪ್ಟ್ ಹರಡಿದೆ. ಜ್ವಾಲಾಮುಖಿ ಅಮ್ಮನವರು- ನಾನು ನನ್ನೊಂದಿಗೆ ಧಾರ್ಮಿಕತೆಯನ್ನು ಪ್ರಶ್ನಿಸುತ್ತಾ, ಹೊಸ ಬೆಳಕಿನಿಂದ ನೋಡಿಕೊಳ್ಳುವ ಕವನಗಳು. ಅವು ಧಾರ್ಮಿಕ ಕವನಗಳಲ್ಲ. ಬೌದ್ಧಿಕ ಕವನಗಳು. ಇದನ್ನೆಲ್ಲಾ ಅಧ್ಯಯನ ಮಾಡುತ್ತಿರುವವರನ್ನು ಬೇಟಿ ಮಾಡಿ, ಪಳಗಿ, ದೇವಿಯ ಪರಿಕಲ್ಪನೆಯನ್ನು ಇನ್ನಷ್ಟು ಆತ್ಮೀಯವಾಗಿ ನೋಡಲು ಸಾಧ್ಯವಾಗಿದೆ. ಚಾಮುಂದಿ ನನಗೆ ಪ್ರಿಯಳು. ನಾನು ಆಕೆಯನ್ನು ಒಳಗೆ ತೆಗೆದುಕೊಂಡು ಮುಂದೆ ಸಾಗುತ್ತಿದ್ದೇಣೆ. ಮೂಡನಂಭಿಕೆಗಳಿಗೆ ಕಟ್ಟುಬಿದ್ದು, ಅಥವಾ ನಂಬಿಕೆಗೋಸ್ಕರ ಮಾಡುತ್ತಿರುವ ಅಧ್ಯಯನವೂ ಅಲ್ಲ. ಆಧ್ಯಾತ್ಮಿಕ ಅನುಭವಕ್ಕೆ ನಾನು ತೆರೆ ದುಕೊಂಡಿದ್ದೇನೆ. ನನ್ನ ವೈಚಾರಿಕ ಮನೋಭಾವ ನನ್ನನ್ನು ಬಿಟ್ಟುಹೋಗಲ್ಲ. ಹೊಸ ಅನುಭವಗಳಿಗೆ ತೆರೆದುಕೊಂಡಿದ್ದೇನೆ.
- ಮಹಿಳೆಯರಿಗೆ ಕೌಟುಂಬಿಕ, ಉದ್ಯೋಗ ಕ್ಷೇತ್ರ, ಸುತ್ತಮುತ್ತ ಎಲ್ಲೆಲ್ಲೂ ಹೆಚ್ಚುತ್ತಿರುವ ಹಿಂಸೆಯಲ್ಲಿ ಹೆಣ್ಣು ಸಮಾಜದಲ್ಲಿ ಒಂಟಿಯಾಗುತ್ತಾ ಹೋಗುತ್ತಿದ್ದಾಳೆ. ಇಂಥ ಸಂದರ್ಭಗಳನ್ನು ಇಂದಿನ ಹೆಣ್ಣುಮಕ್ಕಳು ಹೇಗೆ ಎದುರಿಸಬೇಕು?
ನಾನು ಲೇಖನ ಬರೆಯುತ್ತಿರುವಾಗ, ಅವರು ಯಾವ ವರ್ತನೆ ಬೆಳೆಸಿಕೊಳ್ಳಬೇಕು, ಎಂದು ಸಾಕಷ್ಟು ಬರೆದೆ. ಕವನಗಳನ್ನು ನಾನು ಪ್ರಚಾರಕ್ಕಾಗಿ ಬರೆಯಲಿಲ್ಲ. ನನ್ನ ಆಲೋಚನೆ ಇನ್ನೊಬ್ಬರಿಗೆ ಸ್ಫೂರ್ತಿ ಕೊಟ್ಟರೆ ಸಂತೋಷ. ನಾನು ಬರೆದದ್ದು ಇನ್ನೊಬ್ಬ ಹೆಣ್ಣುಮಕ್ಕಳಿಗೆ ಮುಟ್ಟಿ ಅವರು ನನ್ನಂತೆಯೇ ಅಂದುಕೊಳ್ಳಬಹುದು. ನಾನು ಬೆಳೆದದ್ದು, ಉಸಿರಾಟದಷ್ಟೇ ಸಹಜವಾಗಿ, ಸೆಕ್ಯುಲರಿಸಂ ಸ್ವಾವಲಂಬನೆ, ಮುಂತಾದವು ಬೆಳೆದು ಬಂದಿದ್ದವು. ತಮ್ಮ ತಂದೆ ತಾಯಿಗಳು ಮುಕ್ತವಾಗಿ ಬೆಳೆಸಿದರು. ನನಗೆ ಇದೆಲ್ಲಾ ರಕ್ತಗತವಾಗಿತ್ತು. ನಾನು ಎಲ್ಲಾ ಅನುಕೂಲಗಳನ್ನು ಒದಗಿಸಿಕೊಳ್ಳುವಂತಹ ಧನಾತ್ಮಕ ಪರಿಸರದಲ್ಲಿ ಬೆಳೆದೆ. ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಇರುವುದಿಲ್ಲ, ಕಟ್ಟುಪಾಡುಗಳಿವೆ ಎಂಬುದು ನನಗೆ ಇಪ್ಪತ್ತೈದು ವರ್ಷಗಳು ದಾಟಿದ ನಂತರ ಗೊತ್ತಾಗಿದ್ದು. ನನ್ನ ಮಕ್ಕಳನ್ನು ನಿರ್ಬೀಡೆಯಿಂದ, ಟಕ್ಕರ್ ಅಗಿಯೇ ಬೆಳೆಸಿದ್ದೇನೆ. ನಾನು ಬರವಣಿಗೆಯಲ್ಲಿ ಅಸಹಾಯಕಳಾಗಿಲ್ಲ. ಎಲ್ಲಾ ಹೆಣ್ಣು ಮಕ್ಕಳು ಇದನ್ನು ಬೆಳೆಸಿಕೊಳ್ಳಬಹುದು. ತಮಗೆ ತಾವೇ ಕೋಟೆ ಕಟ್ಟಿಕೊಂಡಿರುತ್ತಾರೆ. ಯಾವುದೇ ದೌರ್ಜನ್ಯಕ್ಕೂ ಒಳಗಾಗಲ್ಲ, ನಾವು ಹೆಂಗಸರು, ಭಾವನಾತ್ಮಕ – ವೈಚಾರಿಕತೆಯ ತಾಕಾಲಾಟ ಎಲ್ಲಾ ಹೆಂಗಸರಿಗೂ ಇದ್ದೇ ಇರುತ್ತದೆ. ಇದರ ನಡುವೆ ಸಮತೋಲನ ಕಾಯ್ದುಕೊಳ್ಳುವುದೇ ಬದುಕು. ನಾನು ಅತಿರೇಕಗಳನ್ನು ಪ್ರತಿಪಾದಿಸುವುದಿಲ್ಲ. ಎಲ್ಲವನ್ನು ಬಿಟ್ಟು ದಾಸಿ ತರ ಇರು ಎಂದು ಹೇಳುವುದಿಲ್ಲ.
ನಾನು ನಾನಾಗಿಯು ಇರಬೇಕು, ನನ್ನ ಸುತ್ತ ಕುಟುಂಬನೂ ಇರಬೇಕು. ನಮ್ಮ ವ್ಯಕ್ತಿತ್ವದ ವಿಕಾಸಕ್ಕೂ ಗಮನ ಕೊಡಬೇಕು. ಅದು ಆಗಲಿಲ್ಲ ಅಂದರೆ ಇಲ್ಲಿಗೆ, ಇಲ್ಲಿ ಆಗಲಿಲ್ಲ ಅಂತ ಅಲ್ಲಿಗೆ ಹೋಗುವುದನ್ನು ನಾನು ಹೇಳುವುದಿಲ್ಲ. ಮಕ್ಕಳಿಗೆ ಭಾವನಾತ್ಮಕ ಬಧ್ರತೆ, ರಕ್ಷಣೆ ಕೊಡುವುದು ತಾಯಿಯಾದವಳ ಕರ್ತವ್ಯ. ಇದು ನನಗೆ ಹೊರೆ ಎಂದು ಯಾವ ಹೆಣ್ಣೂ ಅಂದುಕೊಳ್ಳಬೇಕಿಲ್ಲ. ಅದೊಂದು ಸಹಜ ಕ್ರಿಯೆ. ನನ್ನ ಬದುಕೇ ಇದಕ್ಕೆ ನಿದರ್ಶನ. ತಾಯಿಯಾಗಿ ನನ್ನ ಕರ್ತವ್ಯ ನಿರ್ವಹಿಸಿರುವ ತೃಪ್ತಿ ಇದೆ. ಒಂದು ಬಾರಿ ಅಂತರಾಷ್ಟ್ರೀಯ ಸಂದರ್ಶದಲ್ಲಿ ’ಬರೆಯುವಾಗ ನೀನು ಯಾರು?” ಎಂದು ಕೇಳಿದ್ದರು. ಅದಕ್ಕೆ ನಾನು ‘I am myself’ ಎಂದು ಹೇಳಿದೆ. ನಾನು ಭಯವಿಲ್ಲದೆ ಬರೆದಿದ್ದೇನೆ. ನನ್ನ ಅಬಿವ್ಯಕ್ತಿಗೆ ನಾನು ನಿಷ್ಟಳಾಗಿದ್ದೇನೆ. ಶಿಷ್ಟ ಸಾಹಿತ್ಯದಲ್ಲಿ ಗಂಡನ ಬೈಯುವದಕ್ಕೆ ಒಂದೇ ಒಂದು ಉದಾಹರಣೆ ಸಿಕ್ಕಲ್ಲ. ಜಾನಪದ ಗೀತೆಯಲ್ಲಿ ಹಾವಾದರೂ ಕಚ್ಚಬಾರದಾ, ಚೇಳಾದ್ರೂ ಕುಟುಕಬಾರದಾ, ಹೀಗೆ ಬಹಳಷ್ಟು ಉದಾಹರಣೆಗಳಿವೆ. ಮುಂದೆ ಬಂದ ಮಹಿಳೆಯರೆಲ್ಲಾ ಮುಸುಕುಗಳನ್ನು ತೊಟ್ಟುಕೊಂಡು ಬಂದಿದ್ದಾರೆ. ಪುರಾಣದ ಹೆಣ್ಣುಗಳೆಲ್ಲರಿಗೂ ಮುಸುಕು ತೊಟ್ಟುಕೊಂಡು ಬರುತ್ತಾರೆ. ’ಪತಿವ್ರತೆ ಅಲ್ಲ”, ಪದ್ಯ ಇದರ ಕುರಿತು ಬರೆದೆ, ಹೆದರಿಸಿ ಹೆಣ್ಣು ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಬೇಕೆಂಬ ಭಯ. ಇವತ್ತು ಯಾಕೆ ಅತ್ಯಾಚಾರ, ಡೊಮೆಸ್ಟಿಕ್ ವೈಯಲೆನ್ಸ್, ಚಿಕ್ಕ ಹುಡುಗರು ಪ್ರಣಯ ಪ್ರೀತಿ, ಮದುವೆ ದಿವಸಾನೆ ಕೊಲೆ ಮಾಡುತ್ತಾರೆ?. ಯಾಕೆ ಇದು ಅಂದರೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. ಆಲೋಚನೆಯಲ್ಲಿ ಬರುವ ದ್ವಂದ್ವನೇ ಜಗಳಕ್ಕೆ ಕಾರಣ. ಅಲೋಚನೆಯಲ್ಲಿರುವ ದ್ವಂದ್ವಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು. ಕತ್ತಿ ಎತ್ತಿ ಹೊಡೆಯುವ, ನಾಶ ಮಾಡುವ ಕಡೆಗೆ ಸಮಾಜ ಸಾಗುತ್ತಿದೆ. ಸರಿ ಇಲ್ವಾ ಹೊಡೆದುಹಾಕು ಎಂಬುದಕ್ಕೆ ಏನು ಕಾರಣ ಎಂದು ಯೋಚಿಸುತ್ತಿದ್ದೇನೆ.
ಮೂವತ್ತು ವರ್ಷದ ಹಿಂದೆ, ಒಂದು ಕಾಲದಲ್ಲಿ ಹೆಣ್ಣು ಗಂಡನ ಜೊತೆ ಕಾಯ ವಾಚ ಮನಸ ಪುರುಷನಿಗೆ ವಶ ಆಗಿದ್ದಳು. ರೇಣುಕೆ ಇದಕ್ಕೆ ಉದಾ. ಯಕ್ಷನ ಪ್ರತಿಬಿಂಬ ಒಂದು ಕ್ಷಣ ನೋಡಿದ ತಕ್ಷಣಾ ’ಆಹಾ ಎಷ್ಟು ಚೆನ್ನಾಗಿದ್ದಾನೆ’ ಎಂದು ಕೊಂಡಿದ್ದಕ್ಕೆ ಆಕೆಯ ಪತಿವ್ರತಾ ಧರ್ಮಕ್ಕೆ ಅಪಚಾರವಾಯ್ತಂತೆ.
ಪತಿಯೇ ಪರದೈವ – ದೇಹ ಮತ್ತು ಮನಸ್ಸು ಪತಿಗೆ ಮೀಸಲು ಎಂದು ಮೊದಲಿತ್ತು. ಶಾರುಖ್ ಖಾನ್ ಅನ್ನು ಇಷ್ಟಪಡಬಹುದು. ದೈಹಿಕ ನಿಷ್ಟೆ. ಮಾನಸಿಕ ಏನನ್ನು ಇಷ್ಟಪಡಬಹುದು. ಮಾನಸಿಕವಾಗಿ ಯಾರನ್ನಾದರೂ ಬಯಸಿದರೂ, ಗಂಡನನ್ನು ತೃಪ್ತಿಪಡಿಸಿದರೆ ಸಾಕು. ನೆವಿ ವೃತ್ತಿಪರವಾದ ದೇಶಕ್ಕೆ ರಕ್ಷಣೆ ಕೊಡುವ ವಲಯ, ನೀತಿ ಅನೀತಿ ಬಿಡಿ, ಇಡೀ ಸಮೂಹಾನೇ ’ವೈಫ್ ಶಾಫಿಂಗ್’ ಒಪ್ಪಿಕೊಂಡಿದ್ದಾರೆ. ಹೆಂಡತಿಯರನ್ನ ಅದಲು ಬದಲು ಮಾಡಿಕೊಳ್ಳುವುದು. ಇಡೀ ನೇವಿನೇ ತನ್ನ ಹೆಂಡತಿಯನ್ನ ಒಂದು ವಾರಕ್ಕೆ ಪರ ಪುರುಷನಿಗೆ ಬಿಟ್ಟುಕೊಡುವ ಹಾಬಿ ಎಗ್ಗಿಲ್ಲದಂತೆ ಸಾಗಿದೆ. ಇಪ್ಪಿಗೆ ಇಲ್ಲದವರ ಒಂದು ಮಟ್ಟದಲ್ಲಿನ ನೈತಿಕ ಸ್ಥಿತಿ ಜಾಗೃತವಾಗಿದೆ. ಒಂದು ಸಮುದಾಯ ವೈಫ್ ಶಾಫಿಂಗ್ ಅನ್ನು ಒಪ್ಪಿಕೊಂಡು ತುತ್ತ ತುದಿಯಲ್ಲಿ ನಿಂತಿದೆ. ಇನ್ನೊಂದು ಸಮುದಾಯದಲ್ಲಿ ಬೇರೆ ಜಾತಿಯ ಯುವಕನನ್ನ ಪ್ರೇಮಿಸಿದ ಮಗಳನ್ನು ಮರ್ಯಾದೆ ಹತ್ಯೆ ಮಾಡಿ ಇನ್ನೊಂದು ತುದಿಯಲ್ಲಿದೆ. ಎರಡರ ನಡುವಿನ ಸಮಾಜ ಗೊಂದಲದಲ್ಲಿದೆ. ಜೀನ್ಸ್ ಹಾಕಬೇಡಿ, ಅನ್ನುತ್ತಾರೆ, ಡ್ರೆಸ್ ಕೋಡ್ ಕೊಡ್ತಾರೆ. ಮಂಗಳೂರು ಕಡೆ ಹೆಣ್ಣು ಮಕ್ಕಳನ್ನ ಹದ್ದುಬಸ್ತಿನಲ್ಲಿ ಇರಿಸುತ್ತೇವೆ ಎಂದು ಹೇಳುತ್ತಾರೆ. ವೇದಿಕೆಗಳಲ್ಲಿ ಸುನಿತಾ ವಿಲಿಯಂಸ್ ಮುಂತಾದ ಉದಾಹರಣೆ ಕೊಡುತ್ತಾರೆ. ಇನ್ನೊಂದು ಕಡೆ ಐಶ್ವರ್ಯ ತರ ಇರು ಅನ್ನುತ್ತಾರೆ. ಒಂದು ಕಡೆ ಸ್ವಾತಂತ್ರ್ಯ ನೀಡುವುದು, ಇನ್ನೊಂದು ಕಡೆ ನಾವು ಹೇಳಿದ ಸ್ವಾತಂತ್ರ್ಯ ವನ್ನ ಮಾತ್ರ ಕೊಡುವುದು ಎನ್ನುತ್ತಾರೆ.
chennaada sandarshana
nice interview with a lady of nice thoughts
It is not wife shopping. It should be Wife swapping.
Olleya prasne nera uthara estavaythu