ಸೀಮಾ ಶಾಸ್ತ್ರಿಯವರು ಉತ್ತರ ಕನ್ನಡ ಜಿಲ್ಲೆಯ ಸಿರಸಿಯವರು. ಸದ್ಯಕ್ಕೆ ಆಂಧ್ರಪ್ರದೇಶದ ಮದನಪಲ್ಲಿಯ ಫೌಂಡೇಶನ್ ಫಾರ್ ಎಕಾಲಾಜಿಕಲ್ ಸೆಕ್ಯುರಿಟಿ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಫೋಟೋಗ್ರಾಫಿ ಇವರ ನೆಚ್ಚಿನ ಹವ್ಯಾಸ… ಕನ್ನಡದ ಬರಹಗಳನ್ನು ಹಂಚಿ ಹರಡಿ
ಅವತ್ತು ನಾನು ನಮ್ಮ ಹೊಲಕ್ಕೆ ನೀರಿಡುತ್ತಿದ್ದೆ. ಆ ನೀರಿಡುವ ಸಮಯದಲ್ಲಿ ಹುಳು ಹುಪ್ಪಟೆಗಳು ನೀರಿನಲ್ಲಿ ತೇಲುತ್ತವೆ. ಅಂತಹ ಹುಳುಗಳನ್ನು ತಿನ್ನಲೆಂದು ಒಂದಷ್ಟು ಹಕ್ಕಿ ಪಕ್ಷಿಗಳು ಬರುತ್ತವೆ. ತನ್ನ ಬೆಳಗಿನ ಉಪಹಾರಕ್ಕೆಂದು ಹಾಗೆ ಬಂದ 'ಕಿಂಗ್ ಫಿಷರ್' ನನ್ನ ಮೊಬೈಲ್ ನಲ್ಲಿ ಹೀಗೆ ಸೆರೆಯಾಯ್ತು. ಮೊದಲಿಗೆ ಸ್ವಲ್ಪ ದೂರದಲ್ಲಿ ನಿಂತು ಕ್ಲಿಕ್ಕಿಸಿದೆ. ಆಮೇಲೆ ನಿಧಾನವಾಗಿ ಸದ್ದಾಗದಂತೆ ಹೆಜ್ಜೆಯೂರಿ ಸ್ವಲ್ಪ ಹತ್ತಿರಕ್ಕೆ ಹೋದೆ. ಒಂದೊಂದು ಫೋಟೋಗಳನ್ನ ಕ್ಲಿಕ್ಕಿಸುತ್ತ ಒಂದೊಂದು ಹೆಜ್ಜೆ ಹತ್ತಿರಕ್ಕೆ ಹೋದೆ. ಗೊತ್ತಾದರೆ ಹಾರಿ ಹೋಗಬಹುದೆಂದು ತುಂಬಾ ಎಚ್ಚರವಹಿಸಿದೆ. […]
so nice photography…Best wishes….
Last one is Nice 🙂 🙂 🙂
nice.
nice photos…