ಉಚಿತ ಚಲನಚಿತ್ರ ಅಭಿನಯ ಮತ್ತು ನಿರ್ದೇಶನ ಕಾರ್ಯಾಗಾರ
“ಸೃಷ್ಟಿ ದೃಶ್ಯ ಕಲಾಮಾಧ್ಯಮ ಅಕಾಡೆಮಿ’ಯು ಕಳೆದ 14 ವರ್ಷಗಳಿಂದ ದೃಶ್ಯಮಾಧ್ಯಮ ಕುರಿತು ತಾಂತ್ರಿಕ ತರಬೇತಿ ಶಿಬಿರಗಳನ್ನು ಆಸಕ್ತ ಯುವಜನರಿಗಾಗಿ ಆಯೋಜಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ (ಎಡಿಟಿಂಗ್), ಕಿರುಚಿತ್ರ ನಿರ್ಮಾಣ, ನಿರ್ದೇಶನ ಮತ್ತು ಅಭಿನಯ ಕುರಿತು 5 ತಿಂಗಳ ಕಾರ್ಯಾಗಾರವನ್ನು ದಿನಾಂಕ 08-04-2014 ರಿಂದ ಪ್ರತಿ ಭಾನುವಾರಗಳಂದು ಹಮ್ಮಿಕೊಳ್ಳಲಾಗಿದೆ.
ಪ್ರತಿ ಭಾನುವಾರ “ಭಾರತ್ ಸ್ಕೌಟ್ಸ ಮತ್ತು ಗೈಡ್ಸ ಆವರಣ”, ಮಹಾರಾಣಿ ವಿಜ್ಞಾನ ಕಾಲೇಜ್ ಪಕ್ಕ, ಸ್ವಾಂತಂತ್ರ್ಯ ಪಾರ್ಕ ಹತ್ತಿರ, ಪ್ಯಾಲೇಸ್ ರಸ್ತೆ, ಬೆಂಗಳೂರು, ಇಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
ಭಾಗವಹಿಸಲಿಚ್ಚಿಸುವವರು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಆಸಕ್ತರು ಹೆಚ್ಚಿನ ವಿವರಗಳಿಗೆ : ಮೊಬೈಲ್ ಸಂಖ್ಯೆ : 98440 25119 ಅನ್ನು ಸಂಪರ್ಕಿಸಬಹುದು.
ದಸರಾ ಕಾವ್ಯ ಸ್ಪರ್ಧೆ
ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರು ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ " ರಾಜ್ಯಮಟ್ಟದ ದಸರಾ ಕಾವ್ಯ ಸ್ಪರ್ಧೆ – 2014" ಹಮ್ಮಿಕೊಂಡಿದ್ದಾರೆ. ಆಸಕ್ತಿಯುಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಬಹುಮಾನಗಳು
ಪ್ರಥಮ ಬಹುಮಾನ – 2000,
ದ್ವೀತಿಯ ಬಹುಮಾನ 1000,
ತೃತೀಯ ಬಹುಮಾನ 500
ಕವನಗಳು ಕಳುಹಿಸಲು ಕೊನೆಯ ದಿನಾಂಕ: ಜುಲೈ 05. 2014
ಕವನಗಳನ್ನು ಕಳುಹಿಸಬೇಕಾದ ವಿಳಾಸ;
ಜೀವನ್ ಪ್ರಕಾಶನ,
ಅಂಚೆ ಪೆಟ್ಟಿಗೆ ಸಂಖ್ಯೆ 03,
ಹೆಚ್ ಎಸ್ ಗಾರ್ಡನ್,
ಚಿಕ್ಕಬಳ್ಳಾಪುರ – 562 101
ಕವನಗಳನ್ನು ನುಡಿ ತಂತ್ರಾಂಶದಲ್ಲಿ ಟೈಪಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. jeevanprakashana@gmail.com
ಹೆಚ್ಚಿನ ಮಾಹಿತಿಗಾಗಿ 9901982195 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.
*****