ಪೋಷಕಾಂಶಗಳೇ ಅಲ್ಲದ ನಾರು ನೀರಿಗೇಕೆ ಅಷ್ಟು ಪ್ರಾಮುಖ್ಯತೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಆಹಾರದ ಘಟಕಗಳು ಎಂದು ಕರೆಯುವ ಕಾರ್ಬೋಹೈಡ್ರೇಟುಗಳು, ಪ್ರೋಟೀನುಗಳು, ವಿಟಮಿನುಗಳು, ಲಿಪಿಡ್ ಗಳು, ಖನಿಜಗಳನ್ನು ಜೀವಿಯ ಪೋಷಕಾಂಶಗಳು ಎನ್ನುತ್ತೇವೆ. ಏಕೆಂದರೆ ಇವು ಜೀವಿಗಳನ್ನು ಪೋಷಿಸುತ್ತವೆ. ಜೀವಿ ಬೆಳೆಯಲು, ಅದರ ಸರ್ವಾಂಗಗಳು ವೃದ್ದಿಸಲು, ಜೀವಿ ಸದಾ ಚಟುವಟಿಕೆಯಿಂದ ಕೆಲಸಮಾಡುವಂತಾಗಲು, ಜೈವಿಕ ಚಟುವಟಿಕೆ ನಡೆಸಲು ಅವಶ್ಯಕ! ನಾರು, ನೀರು ಇವು ಸಹ ಆಹಾರದ ಘಟಕಗಳೇ ಆದರೂ ಪೋಷಕಾಂಶಗಳೇ ಅಲ್ಲ! ಅವು ದೇಹದ ಬೆಳವಣಿಗೆಗಾಗಲಿ, ಅಂಗಾಗಗಳ ವೃದ್ದಿಗಾಗಲಿ ಪೂರಕಗಳಲ್ಲ! ಆದರೆ ಅವಿಲ್ಲದೆ ಪೋಷಕಾಂಶಗಳು ದೇಹಗತವಾಗುವುದಿಲ್ಲ! ಅಷ್ಟೇ ಅಲ್ಲ ಜೀವಿಯ ಯಾವ ಕ್ರಿಯೆಗಳು  ನಡೆಯುವುದಿಲ್ಲ. ಆದ್ದರಿಂದ ಇವು ಬಹು ಮುಖ್ಯ!

     ನೀರು : ನೀರು ಪ್ರಾಕೃತಿಕ ಜೀವಜಲ. ಅತಿ ಅಮೂಲ್ಯ ವಸ್ತು! ಮಾನವ ನೀರಿಲ್ಲದೆ ಪೋಷಕಾಂಶಗಳ ಸೇವಿಸಲಾರ! ಸೇವಿಸುವ ಆಹಾರ ಪೋಷಕಾಂಶದಿಂದಷ್ಟೇ ಅಲ್ಲದೆ ನೀರಿನಿಂದ ಸಹ ಕೂಡಿರುತ್ತದೆ. ನೀರಿಲ್ಲದ ಬರಿ ಪೋಷಕಾಂಶಗಳು ವ್ಯರ್ಥ! ಅಂದರೆ ಸೇವಿಸಲಾಗದು, ಜೀರ್ಣಿಸಿಕೊಳ್ಳಲಾಗದು. ಆಹಾರ ಬೆಳೆಯಲು, ಅಡುಗೆ ಮಾಡಲು, ಆಹಾರ ತಯಾರಿಸಲು, ಆಹಾರ ದೇಹದ ಒಳಕ್ಕೆ ಹೋಗಲು, ಆಹಾರವನ್ನು ಜೀರ್ಣಿಸಿಕೊಳ್ಳಲು, ಚಯಾಪಚಯ ಕ್ರೀಯೆಗಳು ನಡೆಯಲು, ಚಯಾಪಚಯ ಕ್ರಿಯೆಗಳಿಂದುಂಟಾದ ತ್ಯಾಜ್ಯವನ್ನು ವಿಸರ್ಜಿಸಲು ನೀರು ಅತಿ ಅವಶ್ಯಕ! ನೀರಿರದೆ ಜೀವಿಸುವುದು ಕಷ್ಟಸಾಧ್ಯ! ನೀರಿರದಿದ್ದರೆ ಸಸ್ಯಗಳು ಬೆಳೆಯುವುದಿಲ್ಲ. ಜಲಚರ, ಖಗಕುಲ ಬದುಕುವುದಿಲ್ಲ. ಭೂಮಿಯ ಬದುಕಾಗುವುದು ಜಡ! ಇದು ಜೀವಿಗಳಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳಲ್ಲಿ ಅತಿ ಮುಖ್ಯವಾದುದು
      ಭೂಮಿಯ ಸುಮಾರು ಮುಕ್ಕಾಲು ಭಾಗ, ಜೀವಿಯ ದೇಹದ ೭೦ ಭಾಗ ನೀರಿದೆ. ಕೆಲವು ಕಲ್ಲಂಗಡಿಯಂತಹ ಹಣ್ಣುಗಳಲ್ಲಿ, ಸವತೆಕಾಯಿಯಂತಹ ತರಕಾರಿಗಳಲ್ಲಿ ನೀರೇ ಹೆಚ್ಚಿರುತ್ತದೆ. ಸರ್ವವನ್ನು ಸ್ವಚ್ಛಗೊಳಿಸಲು ದೇಹದ ಹೊರಗನ್ನು ಒಳಗನ್ನು ಶುಚಿಗೊಳಿಸಲು ನೀರು ಅವಶ್ಯಕ. ನೀರು ಜೀವಿಗಳ ಉಗಮ, ವಿಕಾಸದ ಮತ್ತು ಬೆಳವಣಿಗೆಯಲ್ಲಿ ಬಹು ಮುಖ್ಯಪಾತ್ರವಹಿಸಿದೆ. ‘ ಜಲಚಿಕಿತ್ಸೆ ‘ ಅಂತನೆ ಒಂದು ನೀರಿನ ಚಿಕಿತ್ಸೆ ಇದ್ದು ಅನೇಕ ಕಾಯಿಲೆಗಳ ವಾಸಿಮಾಡಲಾಗುತ್ತಿದೆ. ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ತುಂಬಾ ಒಳ್ಳೆಯದು. ಒಬೇಸಿಟಿ ಇಲ್ಲವಾಗುತ್ತದೆ. ದೇಹ ಸ್ವಚ್ಛವಾಗುತ್ತದೆ. ದೇಹದೊಳಗಿನ ವಿಷವನ್ನು ಹೊರ ಹಾಕುತ್ತದೆ. ನೀರು ಔಷಧಿ. ಅನೇಕ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಹಿಂದೆಲ್ಲಾ ಮಾನವರು ಅನೇಕ ವ್ಯಾದಿಗಳಿಗೆ ಸಮುದ್ರ, ನದಿ, ಸರೋವರಗಳ, ಕಾರಂಜಿಗಳಲ್ಲಿ ಸ್ನಾನ ಮಾಡುತ್ತಿದ್ದರು. ‘ ಗಂಗಾ ಸ್ನಾನ ತುಂಗಾ ಪಾನ ‘ ಎಂಬ ಪ್ರಸಿದ್ದ ಮಾತು ಕೆಲವು ಚರ್ಮ ವ್ಯಾದಿಗಳ ಮತ್ತು ಕೆಲವು ಒಳಾಂಗಗಳ ವ್ಯಾದಿಗಳ ಗುಣಪಡಿಸುವ ಅರ್ಥ ಹೊಂದಿದೆ ಎಂಬುದನ್ನು ಸಾರುತ್ತದೆ. ಹಬ್ಬಗಳಲ್ಲಿನ ಸ್ನಾನ, ಪುಣ್ಯಕ್ಷೇತ್ರಗಳಲ್ಲಿನ, ಧನುರ್ಮಾಸದ, ಕುಂಭಾಭಿಷೇಕದ ಸ್ನಾನವೂ ಇದರ ಹಿನ್ನೆಲೆಯನ್ನೇ ಹೊಂದಿದೆ. ಬಿಸಿನೀರಿನ ಚಿಲುಮೆಗಳಲ್ಲೂ ಸ್ನಾನ ಮಾಡಿದಾಗ ಅನೇಕ ಕಾಯಿಲೆಗಳು ಶಮನವಾಗುತ್ತಿದ್ದವು. ಏಕೆಂದರೆ ಅದರಲ್ಲಿ ವಿಶಿಷ್ಟರಾಸಾಯನಿಕ ಖನಿಜಯುಕ್ತ ಅಂಶಗಳು ಇರುತ್ತಿರುವುದೇ ಕಾರಣ. ಆದರೂ ಅದು ಜೀವಿಯ ಪೋಷಕಾಂಶವಲ್ಲ! ನಾವು ಸೇವಿಸುವ ನೀರಿನಲ್ಲಿ ಕೆಲವು ಖನಿಜಗಳು ಲವಣಗಳು ಇರುತ್ತವೆ. ತಾಮ್ರದಲ್ಲಿ ಶೇಕರಿಸಿಟ್ಟ ನೀರು ತಾಮ್ರದ ಆಕ್ರಮಣಕ್ಕೊಳಗಾಗುತ್ತದೆ. ಅದು ಜಠರದ, ಕೀಲುವಾತದ, ಮಲಬದ್ದತೆಗೆ, ಅಜೀರ್ಣ ಸಮಸ್ಯೆಗಳಿಗೆ ಉಪಶಮನಕಾರಿ ಎಂದು ಪ್ರಕೃತಿ ಚಿಕಿತ್ಸಕಿ ಡಾ!! ರಾಜೇಶ್ವರಿ ಹೇಳುತ್ತಾರೆ. ಆರು ಲೋಟದ ಅದ್ಬುತ ಚಿಕಿತ್ಸೆ ನಿತ್ಯ ಬೆಳಿಗ್ಗೆ ಆರು ಲೋಟ ನೀರು ಕುಡಿಯುವುದು. ಇದರಿಂದ ಅನೇಕ ಅನುಕೂಲಗಳಿರುವುದರಿಂದ ಇದನ್ನು ಜಪಾನಿನ ಅರೊಗ್ಯ ಸಂಸ್ಥೆಗಳು ನೀರನ್ನು ಒಳಾಂಗಗಳ ಸ್ವಚ್ಛಗೊಳಿಸಲು ಅನೇಕ ತೊಂದರೆಗಳಿಗೆ ಚಿಕಿತ್ಸೆಕೊಡಲು ಉಪಯೋಗಿಸುತ್ತಿವೆ. ಆದರೆ ಪರಿಶುದ್ದ ನೀರಿನಲ್ಲಿ ಯಾವ ಖನಿಜ ಲವಣಗಳೂ ಇರುವುದಿಲ್ಲ! ಆದ್ದರಿಂದ ನೀರು ಆಹಾರದ ಘಟಕ ವಿನಾಃ ಪೋಷಕಾಂಶವಲ್ಲ! ಆದರೂ ನೀರಿಲ್ಲದೆ ಎಲ್ಲಾ ಪೋಷಕಾಂಶಗಳಿದ್ದೂ ವ್ಯರ್ಥ.
      ನಾರು : ನಾರು ಆಹಾರದ ಘಟಕಗಳಲ್ಲಿ ಒಂದು. ಅನೇಕ ಧಾನ್ಯ, ತರಕಾರಿ, ಸೊಪ್ಪು, ಹಣ್ಣು ಮುಂತಾದ ಪದಾರ್ಥಗಳಲ್ಲಿ ನಾರು ಇದೆ. ನಾರು ಸಹ ಆಹಾರದ ಘಟಕವಾದರೂ ಅದು ಪೋಶಕಾಂಶವಲ್ಲ! ಅದರಿಂದ ದೇಹದ ಬೆಳವಣಿಗೆಗಾಗಲಿ, ಶಕ್ತಿ ವರ್ದೀಸಲಾಗಲಿ ಸಹಕಾರಿಯಾಗಿಲ್ಲ‌. ಆದರೆ ನಾರಿರುವ ಆಹಾರದಿಂದ ಆರೋಗ್ಯ! ನಾರು ಜೀರ್ಣಕ್ರಿಯೆಗೆ ಸಹಕಾರಿ. ನಾರೇ ಇರದ ರಾಸಾಯನಿಕದಿಂದ ಮೈದ ಸಿದ್ದವಾಗಿರುತ್ತದೆ. ಗೋಧಿಯಿಂದ ಉಮಿ ಮತ್ತು ತೌಡು ಸೇರಿದಂತೆ ಎಲ್ಲಾ ನಾರಿನ ಅಂಶಗಳನ್ನೂ ತೆಗೆದು ಅದರಲ್ಲಿರುವ ತರಿ ಮತ್ತು ಪುಡಿಯನ್ನು ಬೇರ್ಪಡಿಸಲಾಗುತ್ತದೆ. ಇವೆರಡನ್ನೂ ‘ಬೆನ್ಸೋಯಿಕ್ ಫೆರೋಕ್ಸೈಡ್’ ಬಳಸಿ ಬ್ಲೀಚ್ ಮಾಡಲಾಗುತ್ತದೆ. ಆಗ ಅದು ಬಿಳಿಯ ಬಣ್ಣಕ್ಕೆ ಬರುತ್ತದೆ. ಅದಕ್ಕೆ ಅಲೋಕ್ಸನ್ ಎಂಬ ಕೆಮಿಕಲ್ ಸೇರಿಸಿ ಮೃದುಮಾಡಿದ ಮೇಲೆ ಮೈದಾ ಆಗುತ್ತದೆ. ಇದರ ದುಷ್ಪರಿಣಾಮದಿಂದಾಗಿ 1949ರಲ್ಲಿ ಇಂಗ್ಲೆಂಡಿನಲ್ಲಿ ಇದನ್ನು ನಿಷೇಧಿಸಲಾಗಿತ್ತು ಇನ್ನೂ ಬೇರೆ ದೇಶಗಳಲ್ಲಿಯೂ ಸಹ! ಇದು ಇತಿಹಾಸ ಎಂದು ಡಾ!! ಖಾದರ್ ಹೇಳುತ್ತಾರೆ. ಮೈದಾದಿಂದ ಬೇಕರಿ ತಿನಿಸುಗಳ ತಯಸರಿಸುವರು. ಇವುಗಳ ಸೇವನೆಯಿಂದ ಅನಾರೋಗ್ಯ. ಸರಿಯಾಗಿ ಮಲ ಚಲಿಸದೆ ಮಲಬದ್ದತೆ ಆಗುವುದು, ಆ ಮೂಲಕ ಮೂಲವ್ಯಾದಿ ಉಂಟಾಗುತ್ತದೆ. ಮೂಲವ್ಯಾದಿ ಎಲ್ಲಾ ರೋಗಗಳಿಗೆ ಹಾದಿ! ನಾರು ಈ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತದೆ. ನಾರು ದೇಹವನ್ನು ಶುದ್ದಿ ಮಾಡುತ್ತದೆ. ಆಹಾರವನ್ನು, ಮಲವನ್ನು ವೇಗವಾಗಿ ಮುಂದಕ್ಕೆ ಸಾಗಿಸುತ್ತದೆ. ನಮ್ಮ ಸಾಮಾನ್ಯ ಭಾಷೆಯಲ್ಲಿ ಹೇಳಬೇಕೆಂದರೆ ಚಯಾಪಚಯಗಳಿಂದ ಮಲಗಳು ಉಂಟಾಗುತ್ತವೆ. ಅವು ಹೊರ ಹೋಗುತ್ತವಾದರೂ ಸಾಕಷ್ಟು ನಾರು ಇರದ ಪ್ರಯುಕ್ತ ಪೂರ್ಣ ಪ್ರಮಾಣದಲ್ಲಿ ಹೊರಹೋಗದೆ ಅಲ್ಲಲ್ಲೇ ಸಂಗ್ರಹವಾಗುತ್ತವೆ. ಪೂರ್ಣ ಪ್ರಮಾಣದಲ್ಲಿ ಮಲ ವಿಸರ್ಜನೆಯಾಗದಿದ್ದರೆ ತೊಂದರೆ. ಬೇರೆ ಭಾಷೆಯಲ್ಲಿ ಹೇಳಬೇಕೆಂದರೆ ನೀರು ಎಷ್ಟು ಸಲ ಹಾಕಿದರೂ ಬಾತ್ ರೂಮಿನ ಗಲೀಜು ಪೂರ್ಣಪ್ರಮಾಣದಲ್ಲಿ ಹೊರ ಹೋಗದು. ಬಾತ್ ರೂಮನ್ನು ಬ್ರಷ್ ನಿಂದ ಉಜ್ಜಿ ನೀರು ಸುರಿದರೆ ಎಷ್ಟು ಚೆನ್ನಾಗಿ ಶುಚಿಯಾಗಿ ಗಲೀಜು ಹೊರ ಹೋಗುತ್ತದೋ ಹಾಗೆ ನಾರು ಮಲಗಳನ್ನು ಹೊರ ಹಾಕುವ ಕಾರ್ಯ ಮಾಡುತ್ತದೆಯಲ್ಲವೆ? ” ಯಾವುದೇ ಆಹಾರದಲ್ಲಿ ನಾರಿನಂಶ ಅಧಿಕವಿದ್ದರೆ ಮಾತ್ರ ಪಚನಾಂಗಗಳಲ್ಲಿ ನಿಧಾನವಾಗಿ ಜೀರ್ಣವಾಗುವುದು. ಸಿರಿಧಾನ್ಯಗಳು ಬೇರೆ ಧಾನ್ಯಗಳಿಗಿಂತ ಅಧಿಕ ನಾರಿನಂಶದಿಂದ ಕೂಡಿದ್ದು ರೋಗಗಳನ್ನು ತಡೆಗಟ್ಟುವ ವಿಶೇಷ ಗುಣ ಪಡೆದಿವೆ…. ಮಲಬದ್ದತೆ, ರಕ್ತದೊತ್ತಡ, ಬೊಜ್ಜು, ಹೃದಯಾಘಾತ, ಮಧುಮೇಹದಂತಹ ಕಾಯಿಲೆಯಿಂದ ಮುಕ್ತಗೊಳಿಸುತ್ತವೆ” ಎಂದಿದ್ದಾರೆ ಡಾ!! ಖಾದರ್. ಆದ್ದರಿಂದ ನಾರಿರುವ ಆಹಾರ ಪೋಷಕವಲ್ಲದಿದ್ದರೂ ನಾರಿರುವ ಆಹಾರ ಸೇವನೆ ಆರೋಗ್ಯವಾಗಿರಲು ಬಹು ಮುಖ್ಯ!
     ಬೆಂಗಳೂರಿನ ಬಸವನ ಗುಡಿಯ ಪೋಲೀಸುಠಾಣೆಯ ಬದಿಯಲ್ಲಿರುವ ಜಯಾ ಕ್ಲಿನಿಕ್ಕಿನ ಮಕ್ಕಳ ತಜ್ಞ ಡಾ!! ವಾಸುದೇವ ಧನಂಜಯ ಇತ್ತೀಚೆಗೆ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಮಲಬದ್ದತೆ ಹೆಚ್ವುತ್ತಿರುವುದು ಆತಂಕಕಾರಿ ಎನ್ನುತ್ತಾರೆ. ಬಿಸ್ಕತ್ ಕೇಕು ಕುಕ್ಕೀಸ್ ಪಿಜ್ಜಾ ಬರ್ಗರ್ ನಂತಹ ಸಂಸ್ಕರಿಸಿದ ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದಿರುವರು. ಹಾಗೆ ನೆನಪಿನಶಕ್ತಿಯಮೇಲೂ ಪರಿಣಾಮವಾಗುತ್ತಿದೆ ಎಂದಿರುವರು. ಸೊಪ್ಪು, ತರಕಾರಿ, ಹಣ್ಣು, ನೀರು ಅಗತ್ಯ ಪ್ರಮಾಣದಲ್ಲಿ ಸೇವಿಸುವುದೇ ಪರಿಹಾರ ಎಂದಿರುವರು.
    ನಾರು ನೀರು ಎರಡೂ ದೇಹದ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯುವಂತೆ ಮಾಡಿ ದೇಹವ ಶುದ್ಧೀಕರಿಸುತ್ತವೆ. ಅನೇಕ ಕಾಯಿಲೆಗಳ ಬರದಂತೆ ತಡೆಗಟ್ಟುವುದರಿಂದ ಆಹಾರ ಸೇವನೆಯಲ್ಲಿ ಅವಶ್ಯಕವಾದಷ್ಟು ನೀರನ್ನು ಸೇವಿಸಬೇಕಿದೆ. ನಾರಿರುವ ಪದಾರ್ಥ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಆರೋಗ್ಯ ಕಾಪಾಡುವಲ್ಲಿ ಇವುಗಳ ಪಾತ್ರ ಬಹಳ ಮುಖ್ಯ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x