ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. […]
ಯಾವುದೇ ಕೃತಿಯೊಂದನ್ನು ಓದುವಾಗಲೂ ನನ್ನನ್ನು ಬಹುವಾಗಿ ಸೆಳೆಯೋದು ಆ ಕೃತಿಯಲ್ಲಿ ಚಿತ್ರಿತವಾಗುವ ಸ್ತ್ರೀ ಪಾತ್ರಗಳ ಪರಿಭಾವನೆಗಳು.ಈ ನಿಟ್ಟಿನಲ್ಲಿ “ಹಾಡ್ಲಹಳ್ಳಿ ನಾಗರಾಜ್” ಸರ್ ಅವರ “ನಿಲುವಂಗಿಯ ಕನಸು ” ಕಾದಂಬರಿಯಲ್ಲಿಯೂ ನನ್ನ ಗಮನ ಸೆಳೆದ ಪ್ರಮುಖ ಸ್ತ್ರೀ ಪಾತ್ರಗಳು ಎರಡು, ಒಂದು”ಅವ್ವ” ನದು ಮತ್ತೊಂದು “ಸೀತೆ” ಯದು.ಇವರಿಬ್ಬರೂ ಇಡೀ ಕಾದಂಬರಿಯಲ್ಲಿ ಹಸಿರಿನೊಂದಿಗೆ ಜೀವ ಬೆಸೆದು ಮಾತನಾಡುವ ಸ್ತ್ರೀ ತತ್ವದ ಸಂಕೇತಗಳಾಗೇ ನನಗೆ ಕಂಡು ಬರುತ್ತಾರೆ. ಕೃಷಿ ಎಂದ ತಕ್ಷಣ ಅದ್ಯಾಕೋ ನನಗೆ ರೈತ ಪುರುಷನ ಚಿತ್ರ ಕಣ್ಮುಂದೆ ಬರೋದೇ […]
Excellent art.