ಹೆಸರೇ ಸೂಚಿಸುವಂತೆ "ಕಂಕಣ" ಎನ್ನುವುದು ಕನ್ನಡಿಗರಿಂದ, ಕನ್ನಡಕ್ಕಾಗಿ ಜನ್ಮ ತಾಳಿರುವ ಒಂದು ಕನ್ನಡಪರ ಬಳಗ. ಖ್ಯಾತ ಚಲನಚಿತ್ರ ಸಾಹಿತಿ “ಕವಿರಾಜ್” ಈ ತಂಡದ ಸಾರಥಿಯಾಗಿದ್ದು ಸುಮಾರು 150 ಸ್ವಯಂ ಪ್ರೇರಿತ ಕನ್ನಡಿಗ ಸದ್ಯಸರು ಈ ಬಳಗದಲ್ಲಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ, ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯ ಜೀವನದಲ್ಲಿ ಕನ್ನಡ ಬಳಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಿದೆ. ಶಾಪಿಂಗ್ ಮಾಲ್ ಗಳು, ಅಂಗಡಿಗಳು, ಹೋಟೆಲ್ ಗಳು, ಬ್ಯಾಂಕ್ ಗಳು, ಬಸ್ ನಿಲ್ದಾಣಗಳು ಮುಂತಾದ ಸ್ಥಳಗಳಲ್ಲಿ ಕನ್ಮಡಿಗರೇ […]
ಜೋಗುಳ ಹಾಡುವ ತಾಯಿಯ ಇಂಪಾದ ಧನಿಗೆ ತೊಟ್ಟಿಲ ಮಗು ನಿದ್ರೆಗೆ ಜಾರುವುದರೊಂದಿಗೆ ತೆರೆದುಕೊಳ್ಳುವ ಪುರಾಣ, ಇತಿಹಾಸ ಮತ್ತು ಸಮಕಾಲೀನಗಳ ಸಮಾಗಮದ ಸಂದರ್ಭಗಳ ಸಮ್ಮೀಶ್ರಣದ ಹದವಾದ ಪಾಕದಂತಹ ನಾಟಕ ಪ್ರದರ್ಶನ. ಕಾಲಬೇಧ ಮತ್ತು ಭಾಷಾಬೇಧಗಳಿಲ್ಲದೇ ಮಹಿಳಾ ಆಲಾಪದ ಕಲಾಪಗಳು ರಂಗದಲ್ಲಿ ನಡೆಯುತ್ತಾ, ಹಲವಾರು ಪ್ರಸಂಗಗಳ ಚರ್ಚೆ, ವಿಮರ್ಶೆಯ ಗಂಭೀರ ಕಥನವು ಕುತೂಹಲವನ್ನು ಹುಟ್ಟಿಸುತ್ತಲೇ ಪ್ರೇಕ್ಷಕ ಪ್ರಭುವಿನ ಗ್ರಹಿಕೆಯನ್ನು ವಿಸ್ತರಿಸುತ್ತಾ ಸಾಗುವ “ಮಹಿಳಾ ಭಾರತ” ನಾಟಕ ಪ್ರದರ್ಶನವು ಅದ್ಬುತವಾಗಿ ಇತ್ತೀಚೆಗೆ (03.01.2016) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ […]
ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. […]
good in your artek