ಪುಣ್ಯಕೋಟಿ-ಜಾನಪದ ಕಥನ ನಾಟಕ ಪ್ರದರ್ಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಮೈಸೂರು
ಸರ್ಕಾರಿ ಪ್ರೌಢಶಾಲಾ, ಕುಕ್ಕರಹಳ್ಳಿ ಮೈಸೂರು
ಸರ್ವೋದಯ ದಿನಾಚರಣೆ
ಉಪನ್ಯಾಸ ಮತ್ತು ನಾಟಕ ಪ್ರದರ್ಶನ 
ನಮ್ಮೊಂದಿಗೆ
ಶ್ರೀ ಎಂ.ಕೆ.ಬೋರೇಗೌಡ
ನಿವೃತ್ತ ಮುಖ್ಯ ಶಿಕ್ಷಕರು     
ಶ್ರೀ ಎನ್.ಎಸ್.ಗೋಪಿನಾಥ್
ಮಾಜಿ ಸಿಂಡಿಕೇಟ್ ಸದಸ್ಯರು,ಮೈಸೂರು ವಿಶ್ವವಿದ್ಯಾಲಯ

ಮಕ್ಕಳು ಅಭಿನಯಿಸುವ ಜಾನಪದ ಕಥನ
ಪುಣ್ಯಕೋಟಿ
ಪರಿಕಲ್ಪನೆ ಮತ್ತು ವಿನ್ಯಾಸ :ಜೀವನ್ ಹೆಗ್ಗೋಡು
ವಸ್ತ್ರ ವಿನ್ಯಾಸ : ಶೀಲಾ.ಎಸ್ 
ಪರಿಕರ ಮತ್ತು ಪ್ರಸಾಧನ : ಮಂಜು ಕಾಚಕ್ಕಿ
ನಿರ್ದೇಶನ : ದೀಪಕ್ ಮೈಸೂರು

ದಿನಾಂಕ : 30.01.16     ಸಮಯ: ಬೆಳಿಗ್ಗೆ 10ಕ್ಕೆ 
ಸ್ಥಳ: ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣ

ಪುಣ್ಯಕೋಟಿ-ಜಾನಪದ ಕಥನ
ಭಾರತೀಯ ಜನಪದ ಪರಂಪರೆ ಮತ್ತು ಅದನ್ನು ಸೃಷ್ಟಿಸಿದ ಜಾನಪದ ಮನಸ್ಸು ಕಟ್ಟಿಕೊಟಿರುವ ಬಹುದೊಡ್ಡ ಪ್ರತಿಮೆ ‘ಪುಣ್ಯಕೋಟಿ’.

ಸತ್ಯ ಮತ್ತು ಪ್ರೀತಿಗೆ ಸಾವಿಲ್ಲ ಅದು ಅಜರಾಮರ ಎಂದು ಸಾರುವ ಈ ಜನಪದ ರೂಪಕ ಕನ್ನಡದ ಅತ್ಯಂತ ಜನಪ್ರಿಯವಾದ ‘ಜನಪದ ಕಥನಕಾವ್ಯ’, ‘ಗೋವಿನಹಾಡು’ ಎಂದೇ ಚಿರಪರಿಚಿತವಾಗಿರುವ ಈ ಜನಪದ ಕಾವ್ಯ ನೂರಾರು ವರ್ಷಗಳಿಂದ ವರ್ಷಗಳಿಂದ ಮಕ್ಕಳನ್ನು ದೊಡ್ಡವರನ್ನು ಏಕಕಾಲದಲ್ಲಿ ಪ್ರಭಾವಿಸಿದೆ.
ಸಕಲ ಜೀವಿಗಳಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಯ ಅಗತ್ಯವನ್ನು ಸಾರಿಹೇಳುವ ಪುಣ್ಯಕೋಟಿಯ ಕಥನ ನಮಗೆ ಇಂದು ಅತ್ಯಂತ ಜರೂರಾಗಿ ಬೇಕಾಗಿರುವ ಅಂತರ್ ದೃಷ್ಟಿಯಾಗಿದೆ, ಈ ಕಾರಣದಿಂದ ಪ್ರಸ್ತುತ ‘ಪುಣ್ಯಕೋಟಿ’ ಮಕ್ಕಳ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

‘ಪುಣ್ಯಕೋಟಿ’ ಯ ಈ ಕಥನ ಅನೇಕ ಕಡೆಗಳಲ್ಲಿ ಅನೇಕ ರೀತಿಗಳಲ್ಲಿ ರಂಗದ ಮೇಲೆ ಬಂದಿದೆ.  ಪ್ರಸ್ತುತ ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಈ ‘ಪುಣ್ಯಕೋಟಿ’ ನಾಟಕವನ್ನು ರೂಪಿಸಲಾಗುತ್ತಿದೆ.
‘ಪುಣ್ಯಕೋಟಿ’ಯ ಕಥನ ಸತ್ಯದ ಮಹಿಮೆಯನ್ನಷ್ಟೆ ಒಳಗೊಂಡಿದೆ.ಆದರೆ ಈ ರಂಗಪ್ರಯೋಗದಲ್ಲಿ ಎಲ್ಲೂ ಕಥನದ ಆಶಯಕ್ಕೆ ಭಂಗವಾಗದಂತೆ ಹೊಸತಲೆಮಾರಿನ ಮುಂದೆ ಇಟ್ಟಿದೆ.
ಹುಲಿ ಹುಲ್ಲು ತಿನ್ನುವುದಿಲ್ಲ.ಮಾಂಸವೇ ಅದರ ಆಹಾರ. ಇದೆ ನಿಸರ್ಗದ ಸತ್ಯ,ಮಾಂಸವನ್ನು ತಿನ್ನುವುದಿಲ್ಲ ಎಂದರೆ? ಹುಲಿ ಏನನ್ನು ತಿನ್ನಬೇಕು.

ನೀನು  ನನ್ನನ್ನು ತಿನ್ನದಿದ್ದರೆ ನಿನ್ನವರೆ ನಿನ್ನನ್ನು ಬದುಕಲು ಬಿಡುವುದಿಲ್ಲ. ಹುಲಿರಾಯನೆ ನನ್ನನ್ನು ತಿಂದು ನಿಸರ್ಗದ ಸತ್ಯವನ್ನು ಪಾಲಿಸು ಎಂದು ಹಸು ಪುಣ್ಯಕೋಟಿ ಹೇಳುವುದರ ಮೂಲಕ ಪುಣ್ಯಕೋಟಿಯ ಮುಕ್ತಾಯವಾಗುತ್ತದೆ.

ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿ ಮಕ್ಕಳು ಮತ್ತು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ. ಕ್ರೌರ್ಯ ಮತ್ತು ಪ್ರೀತಿ ನಡುವಿನ ಸಂಘರ್ಷದಲ್ಲಿ ಯಾವತ್ತೂ ಕ್ರೌರ್ಯಕ್ಕೆ ಜಯವಿಲ್ಲ ಎನ್ನುವುದು ಪುಣ್ಯಕೋಟಿಯ ಸಂದೇಶ.

ದೀಪಕ್ ಮೈಸೂರು : ನಿರ್ದೇಶಕರು 
ದೀಪಕ್ ಮೈಸೂರು ಇವರು ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ನಾಟಕ ಡಿಪ್ಲೊಮಾ ಪಡೆದವರು.ಕೇಂದ್ರ ಸರ್ಕಾರದ ಸಂಸ್ಕøತಿ ಇಲಾಖೆಯಿಂದ ನೀಡುವ  "ಙouಟಿg ಚಿಡಿಣisಣ's sಛಿhoಟಚಿಡಿshiಠಿ "  ಪಡೆದವರು. ಸಾಕ್ಷರತಾÀ ಆಂದೋಲನದಲ್ಲಿ ಜಿಲ್ಲಾ ಸಂಯೋಜಕರಾಗಿ ಕಲಿಯುವ ವಾತವರಣ ನಿರ್ಮಾಣಕ್ಕೆ ಸಂಬಂದಿಸಿದಂತೆ ನೂರಾರು ಕಲಾವಿದರಿಗೆ ರಂಗತರಬೇತಿ ಶಿಬಿರಗಳ ಆಯೋಜನೆ ಮತ್ತು ನಾಟಕಗಳ ನಿರ್ದೇಶನ. ರಾಷ್ಟ್ರೀಯ ನಾಟಕ ಶಾಲೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರದಲ್ಲಿ  ಸಂಯೋಜಕರಾಗಿ ಹಾಗೂ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ರಂಗಾಯಣ ಆಯೋಜಿಸುವ  ಚಿಣ್ಣರ ಮೇಳದಲ್ಲಿ  ಮಕ್ಕಳ ನಾಟಕ ನಿರ್ದೇಶನ ಹಾಗೂ ಯುವರಂಗೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕಾರಾಗೃಹವಾಸಿಗಳ ಮನಪರಿವರ್ತನ ರಂಗತರಬೇತಿ ಶಿಬಿರದ ನಿರ್ವಾಹಕರು ಹಾಗೂ ನಾಟಕದ ಸಹ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಾಧಿಕಾರ ಜನಾಂದೋಲನದ ಕಲಾಜಾಥದ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಮಳೆನೀರು ಸಂಗ್ರಹಣೆ ಕುರಿತಾದ ಜಲಜಾಥದ ಸಂಪನ್ಮೂಲ ವ್ಯಕ್ತಿ. ಮಕ್ಕಳ ರಂಗತರಬೇತಿ ಶಿಬಿರ,ಕಾಲೇಜು ರಂಗತರಬೇತಿ ಶಿಬಿರ, ಮಹಿಳಾ ರಂಗತರಬೇತಿ ಶಿಬಿರಗಳ ನಿರ್ದೇಶಕರು, ಮಹಾತ್ಮರ ಪ್ರತಿಮೆ, ಈಡಿಪಸ್.  ಕತ್ತಲೆ ದಾರಿ ದೂರ, ಊರುಭಂಗ, ಹೆಣ್ಣೇಂಬ ಜೀವ, ಗಾರ್ಮೆಂಟ್ಸ್‍ನಲ್ಲಿ ಒಂದು ದಿನ, ಅಂತಿಗೊನೆ, ನೀರು ಕಳೆದಿದೆ, ಋತುಯಾತ್ರೆ, ಇನ್ನೂ ಮುಂತಾದ ನಾಟಕಗಳ ನಿರ್ದೇಶನ. ಧಾಂಧೂಂ ಸುಂಟರಗಾಳಿ, ನನ್ನ ಗೋಪಾಲ, ಕೆಂಪು ಸೂರ್ಯ, ಗೋವಿನ ಹಾಡು, ಸೂರ್ಯ ಬಂದ, ಕಿಂದರಿಜೋಗಿ, ಆಳಿಲು ರಾಮಾಯಣ, ಝುಂ ಝುಂ ಆನೆ, ಕಂಸಾಯಣ, ಅಜ್ಜಿ ಕಥೆ, ಚಂದ್ರಹಾಸ, ಅಲಿಬಾಬ ಮತ್ತು ನಲವತ್ತು ಕಳ್ಳರು, ಎಚ್ಚಮನಾಯಕ,ಪುಷ್ಪರಾಣಿ, ಒಗಟಿನ ರಾಣಿ ಇನ್ನೂ ಮುಂತಾದ ಮಕ್ಕಳನಾಟಕಗಳ ನಿರ್ದೇಶನಮಾಡಿದ್ದಾರೆ. ಪ್ರಸ್ತುತ  "ಪುಣ್ಯಕೋಟಿ" ನಾಟಕದ ನಿರ್ದೇಶಕರು.

ಜೀವನ್ ಹೆಗ್ಗೋಡು –ವಿನ್ಯಾಸ ಮತ್ತು ಪರಿಕಲ್ಪನೆ
ಇವರು ನೀನಾಸಮ್ ರಂಗ ಶಿಕ್ಷಣ ಕೇಂದ್ರದ ನಾಟಕ ಡಿಪ್ಲೊಮೊ ಹಾಗೂ ಅಲ್ಲಮ ಪ್ರಭು ಲಲಿತಕಲಾ ಅಕಾಡೆಮಿಯಲ್ಲಿ ಬಿ ಡ್ರಾಮ ಪಡೆದಿರುತ್ತಾರೆ. ಹಲವಾರು ನಾಟಕಗಳಿಗೆ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಹಲವಾರು ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಪ್ರಸ್ತುತ ಕರ್ನಾಟಕದ ಮುಂಚೂಣಿಯ ರಂಗಕರ್ಮಿಗಳಲ್ಲೂಬ್ಬರು.ರಂಗಾಯಣದ ರಂಗಕಿಶೋರ ಮಕ್ಕಳ ನಾಟಕ ರೆಪರ್ಟರಿಯಲ್ಲಿ ನಟ ಮತ್ತು ತಂತ್ರಜ್ಞರಾಗಿ ಕಾರ್ಯನಿರ್ವಹಿಸಿರುತ್ತಾರೆ. ಪೋಲಿಕಿಟ್ಟಿ ಅಂಚೆಮನೆ, ಆಮನಿ, ಅವಸ್ಥೆ,ಮೊದಲಗಿತ್ತಿ ಭಗವದ್‍ಜ್ಜುಕೀಯಂಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ರೆಕ್ಕೆ ಕಟ್ಟುವಿರ, ಪೋಲಿಕಿಟ್ಟಿ, ಜಿ.ಕೆ.ಮಾಸ್ತರ ಪ್ರಣಯಪ್ರಣಯ ಪ್ರಸಂಗ,ಜನಪದಜೋಗಿ, ಜಯಂತನ ಸ್ವಗತ, ಆ ಮನಿ, ಭಗವದ್‍ಜ್ಜುಕೀಯಂ ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ  ‘ಪುಣ್ಯಕೋಟಿ’ ನಾಟಕದ ವಿನ್ಯಾಸ ಇವರದು.

ಶೀಲಾ.ಎಸ್:  ವಸ್ತ್ರವಿನ್ಯಾಸಕಾರರು.
ಎಸ್.ಶೀಲಾರವರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮೊ ಮಾಡಿದ್ದು, ರಾಜ್ಯದ ಪ್ರತಿಷ್ಠಿತ ರೆಪರ್ಟರಿಯಾದ ರಂಗಾಯಣದಲ್ಲಿ ನಟಿಯಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಾಜ್ಯದ ಹಲವಾರು ರಂಗತಂಡಗಳಲ್ಲಿ ನಟಿಯಾಗಿ, ವಸ್ತ್ರವಿನ್ಯಾಸಕಿಯಾಗಿ ಹಾಗೂ ಹಲವಾರು ರಂಗನಿರ್ದೇಶಕರೊಟ್ಟಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕಲ್ಲರಳಿ ಹೂವಾಗಿ, ಶಿವರಾತ್ರಿ,ಗಾರ್ಮೆಂಟ್ಸ್‍ನಲ್ಲಿ ಒಂದು ದಿನ, ಟೀ ಹೌಸ್, ಜುಂಜಪ್ಪ, ಕೂಡಲಸಂಗಮ, ತಲೆದಂಡ, ಕಸ್ತೂರಬಾ, ಹೆಣ್ಣೆಂಬ ಜೀವ, ಒಂದು ಸೈನಿಕನ ವೃತ್ತಾಂತ, ಈ ಕೆಳಗಿನವರು, ಭಾಸ ಘಟೊತ್ಕಚ, ಬಿರುದೆಂತೆಂಬರ ಗಂಡ, ಘೋರಿಗೊಂದು ಹದ್ದು, ಧನ್ವಂತರಿ ಚಿಕಿತ್ಸೆ, ಉರಿಯ ಉಯ್ಯಾಲೆ, ಬೀ.ಚಿ. ಬುಲೆಟ್ಸ್, ಹರಕೆಯ ಕುರಿ, ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಚಿದಂಬರರಾವ್ ಜಂಬೆ, ಡಾ. ಬಿ. ಜಯಶ್ರೀ, ಜಯರಾಂ ತಾತಾಚಾರ, ಹೆಚ್. ಜನಾರ್ಧನ್, ಕೆ.ಆರ್.ಸುಮತಿ, ಎಂ.ಎಸ್. ಸತ್ಯು, ಅನೂಪ್ ಜೋಶಿ, ಪಿ. ಗಂಗಾಧರ ಸ್ವಾಮಿ, ಹುಲುಗಪ್ಪ ಕಟ್ಟೀಮನಿ, ಪ್ರಸಾದ್ ಕುಂದೂರ್, ಎಂ.ಎಂ. ಸುಗುಣ ಮುಂತಾದ ನಿರ್ದೇಶಕರ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಂಗಾಯಣ ಆಯೋಜಿಸುವ ಚಿಣ್ಣರ ಮೇಳ ಮಕ್ಕಳ ನಾಟಕಗಳ ಸಹನಿರ್ದೇಶಕರಾಗಿ ಹಾಗೂ ಹಲವಾರು ನಾಟಕಗಳಿಗೆ ವಸ್ತ್ರವಿನ್ಯಾಸಕಾರರಾಗಿದ್ದಾರೆ. ಪ್ರಸ್ತುತ  ‘ಪುಣ್ಯಕೋಟಿ’  ನಾಟಕಕ್ಕೆ ವಸ್ತ್ರವಿನ್ಯಾಸ ಇವರದು.

ಮಂಜುನಾಥ ( ಕಾಚಕ್ಕಿ) – ರಂಗಪರಿಕರ ಮತ್ತು ಪ್ರಸಾಧನ
ಚಾಮರಾಜನಗರ ಜಿಲ್ಲೆಯ  ರಾಮಸಮುದ್ರ ಇವರ ಹುಟ್ಟೂರು. ಇವರು ನೀನಾಸಮ್ ರಂಗ ಶಿಕ್ಷಣ ಕೇಂದ್ರದ ನಾಟಕ ಡಿಪ್ಲೊಮೊ ಹಾಗೂ ಅಲ್ಲಮ ಪ್ರಭು ಲಲಿತಕಲಾ ಅಕಾಡೆಮಿಯಲ್ಲಿ ಬಿ ಡ್ರಾಮ ಪಡೆದಿರುತ್ತಾರೆ. ಕರ್ನಾಟಕದ ಹಲವಾರು ರಂಗ ತಂಡಗಳಲ್ಲಿ ರಂಗಪರಿಕರ, ರಂಗವಿನ್ಯಾಸಕರಾಗಿ,ನಟರಾಗಿ ರಂಗ ನೇಪಥ್ಯದ ಕೆಲಸಗಳಲ್ಲಿ  ಕಾರ್ಯ ನಿರ್ವಹಿಸಿದ್ದಾರೆ.ಹಲವಾರು ಮಕ್ಕಳ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ  ‘ಪುಣ್ಯಕೋಟಿ’ ನಾಟಕದ ರಂಗಪರಿಕರ ಮತ್ತು ಪ್ರಸಾಧನ ಇವರದು.

ರಂಗದ ಮೇಲೆ 
ಪ್ರತಿಮಾ.ವಿ, ದರ್ಶನ್.ಎನ್, ಅಜೇಯ.ಕೆ, ಕಿರಣ್ ಕುಮಾರ್.ಕೆ, ರವಿಕುಮಾರ್,ಎಲ್, ಉಮಾ.ಕೆ,ನಿವೇದಿತ,ಜೆ, ಮಮತ.ಪಿ,ಮಹಾಲಕ್ಷ್ಮಿ.ಎನ್,ದಿವ್ಯಾ.ಆರ್, ಪ್ರೀತಿ.ಜಿ,ಸ್ವಾತಿ.ಬಿ, ಲಕ್ಷ್ಮಿವಿ, ಅಭಿಷೇಕ್.ಡಿ, ಅಪ್ಪು .ಎನ್, ಮಹೇಂದ್ರ ಪ್ರಸಾದ್.ಎಂ, ಜಯಸೂರ್ಯ.ಡಿ, ಮಹೇಶ್.ಎಂ.ಸಿದ್ಧಾರ್ಥ, ಅಶೋಕ.ಎಂ

ರಂಗದ ಹಿಂದೆ
ರಂಗ ನಿರ್ವಹಣೆ : ಯೋಗೇಶ್. ವಿ
ನಿರ್ದೇಶನ ಸಹಾಯ : ರೂಪ ಶ್ರೀಕಾಂತ, ಚಂದನ್
ವಸ್ತ್ರವಿನ್ಯಾಸ : ಶೀಲಾ ಎಸ್.
ರಂಗಪರಿಕರ/ಪ್ರಸಾಧನ : ಮಂಜು ಕಾಚಕ್ಕಿ
ವಿನ್ಯಾಸ/ಪರಿಕಲ್ಪನೆ : ಜೀವನ್ ಹೆಗ್ಗೋಡು
ನಿರ್ದೇಶನ : ದೀಪಕ್ ಮೈಸೂರು


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
chaithra
chaithra
7 years ago

very nice 🙂 good article

 

1
0
Would love your thoughts, please comment.x
()
x