ಪುಟ್ಟ ಮತ್ತು ನಾಯಿ ಮರಿ: ವೆಂಕಟೇಶ್ ಮಡಿವಾಳ ಬೆಂಗಳೂರು.

ನಾಯಿ -ಮರಿಯನೊಂದ ಹಾಕಿತು

ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು

ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು

ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು

 

ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು

ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು

ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು

ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು

ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು

 

ನಮ್ಮ ಪುಟ್ಟ ಆ ದೃಶ್ಯ ನೋಡಿದ

ಮರಿಯ ತಂದು -ಹಾಲು ಹಾಕಿ

ಅದನ ಸಾಕಿ ಸಲಹಿದ

ರಾಮ ಎಂದು ಹೆಸರನಿಕ್ಕಿ

ಅದರ ಜೊತೆ ಆಡಿದ

 

ಬೀದಿ ನಾಯಿ ಎಂದು ದೂರಲೇಕೆ ?

ಹಾರಿ ಮಾರು ದೂರ ಓಡಲೇಕೆ?

ಸುಮ್ ಸುಮ್ನೇ ಅದ್ಯಾರನ್ನೂ ಕಚ್ಚದೆ

ಬೀದಿ ನಾಯೇ ಆದರೂ

ಅದಕೆ ಬದುಕೋ ಹಕ್ಕಿದೆ


ರೇಖಾಚಿತ್ರ: ಉಪೇಂದ್ರ ಪ್ರಭು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಬದುಕೋ ಹಕ್ಕಿದೆ….ಸಾಲು ಮನಕ್ಕೆ ಹಿಡಿಸಿತು….ಸುಂದರ ಕವನ !

ಹಿಪ್ಪರಗಿ ಸಿದ್ದರಾಮ್
ಹಿಪ್ಪರಗಿ ಸಿದ್ದರಾಮ್
10 years ago

ಬದುಕೋ ಹಕ್ಕಿದೆ….ಸಾಲು ಮನಕ್ಕೆ ಹಿಡಿಸಿತು….ಸುಂದರ ಕವನ !

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
10 years ago

 
ಸಿದ್ದರಾಮ ಹಿಪ್ಪರಗಿ ಅವರೇ 
ಈ ಪದ್ಯ ಬರೆವ ಕೆಲ ಕ್ಷಣಗಳ ಮುಂಚೆ  ಆಫೀಸಲ್ಲಿ ಏನೂ ಕೆಲಸ ಇಲ್ಲದೆ ಸುಮ್ಮನೆ ಕೂತು ಕಿಟಕಿಯಲ್ಲಿ ಹೊರ ಜಗತ್ತು ಧಿಟ್ಟಿಸುತ್ತಿದ್ದೆ – ಥಟ್ಟನೆ  ನನಗೆ ಯಾಕೋ ನಮ್ ಪ್ರೀತಿಯ ಶ್ವಾನ (ನಮ್ಮ ಹಳ್ಳಿಯಲ್ಲಿ -ನಮ್ಮ ಓಣಿಯಲ್ಲಿ  ನಮ್ಮನ್ನು ಬಿಟ್ಟು ಬೇರಾರನ್ನು  ಒಳಗೆ ಬರಲು ಬಿಡದೆ ಗುರಾಯಿಸಿ ರಕ್ಷಣೆ ಕೊಡುತ್ತಿದ್ದ)ರಾಮ ಹೆಸರಿನ  ಶ್ವಾನದ ಬಗ್ಗೆ ಬರೆಯುವ ಎಂದುಕೊಂಡು ಆ ಬಗ್ಗೆ ಬರೆದರೆ ದೀರ್ಘ ಗದ್ಯ ಆಗುತ್ತೆ ಅಂತ ಪುಟ್ಟದಾಗಿ ಒಂದು ಪ್ರಾಸ ಬರಹ ಬರೆದೆ. ಅದನ್ನು ಗೂಗಲ್ ಟ್ರಾನ್ಸಿಲ್ಟ್ ರೇಟರ್ -ಕನ್ನಡದಲ್ಲಿ    ಬರೆದು  ನೋಟ್ಪ್ಯಾಡ್ಗೆ ಪೇಸ್ಟ್ ಮಾಡಿ ಅಲ್ಲಿಂದ 
ಪಂಜು ಸಂಪಾದಕ  ಮಿತ್ರ  ನಟರಾಜು ಅವರಿಗೆ ಫೆಸ್ಬುಕ್ನಲ್ಲಿ ಮೆಸೇಜ್ ಮಾಡಿದೆ .. 
ನಮ್ಮ ಆ ಶ್ವಾನದ ಬಗ್ಗೆ  ಕೆಲಸ ಸಾರಿ ಇಲ್ಲಿಯೇ ಪ್ರತಿಕ್ರಿಯಿಸಿರುವೆ- ಹಾಗೆಯೇ  ಅದೊಮ್ಮೆ  ಹಿರಿಯರಾದ ಶ್ರೀಯುತ  ಕವಿ ನಾಗರಾಜ ಅವರ ಶ್ವಾನದ ಬಗೆಗಿನ ಬರಹದಲ್ಲಿ (www.sampada.net nalli ) ಈ ಬಗ್ಗೆ ಹೇಳಿರುವೆ. 
ಇಲ್ಲಿದೆ ನೋಡಿ ಲಿಂಕ್ : http://bit.ly/GAFyMr  
 
 
 
 
>>>ಕೆಲ ತಿಂಗಳುಗಳ ಹಿಂದೆ  ಶುರು ಆದ ಹೊಸ ಕನ್ನಡ ಜಾಲ  ತಾಣ  ಪಂಜು ಗೆ(https://www.panjumagazine.com/) ಈ ಮುಂಚೆ ಒಂದು ಬರಹ ಕಳಿಸಿದ್ದೆ ಆದರೆ ಅದು  ಚಿತ್ರ ವಿಚಿತ್ರ ಅಕ್ಷರಗಳಲಿ  ಹೋಗಿ ಪ್ರಕಟ ಆಗಲಿಲ್ಲ – ಮತ್ತೊಮ್ಮೆ ಬಹಳ ದಿನಗಳ ನಂತರ ಈ ಪದ್ಯವನ್ನು ಪಂಜು ಸಂಪಾದಕ  ಮಿತ್ರ  ನಟರಾಜು ಅವರಿಗೆ ಫೆಸ್ಬುಕ್ನಲ್ಲಿ ಮೆಸೇಜ್ ಮಾಡಿದೆ -ಅದನ್ನು ಅವರು ಕೊಂಚ ಟ್ರಿಮ್ ಮಾಡಿ ಪ್ರಕಟಿಸಿಯೇ ಬಿಟ್ಟರು ..!!
ಅವರಿಗೂ ನನ್ನ ನನ್ನಿ … 
 
ಪುಟ್ಟ ಶ್ವಾನದ ಅತ್ಯುತ್ತಮ ಚಿತ್ರ ಚಿತ್ರಿಸಿದ ಉಪೇಂದ್ರ ಪ್ರಭು ಅವರಿಗೆ ನನ್ನಿ .. 
 
ಈ ಚಿತ್ರ ಈ ಬರಹದ ಕಳೆ  ಹೆಚ್ಚಿಸಿದೆ … 
 
 ನಾಯಿ ನಿಯತ್ತಿನ -ನಂಬಿಗಸ್ತ ಪ್ರಾಣಿ -ಮಕ್ಕಳಿಗೂ ಹಿರಿಯರಿಗೂ ಪುಟ್ಟ ನಾಯಿ ಮರಿ ಮುದ್ದು , ಈಗೀಗ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿ ಈ ಬರಹ ಬರೆದು ಸೇರಿಸಿದ ೨ ದಿನಗಳಲ್ಲಿ ಯಾವುದೋ ನಾಯಿ ಕಚ್ಚಿ ಒಬ್ಬ ಹುಡುಗ ಮೃತ  ಪಟ್ಟ ಸುದ್ಧಿ ಇಂದಿನ ದಿನ ಪತ್ರಿಕೆಯಲ್ಲಿ http://www.vijaykarnatakaepaper.com/Details.aspx?id=6144&boxid=32336421  ಓದಿ ವ್ಯಥೆ ಆಯ್ತು …:(೯ 
ನಾ ದಿನ ನಿತ್ಯ ರಾತ್ರಿ ಮನೆಗೆ ಹೋಗುವಾಗ  ಬೀದಿಗುಂಟ  ಹತ್ತಿಪ್ಪತ್ತು ನಾಯಿಗಳು ಇರುವವು – ಗುರಾಯಿಸುವವು -ಗುರ್ರೆನ್ನುವವು -ಆದರೆ ಅಪ್ಪಿ ತಪ್ಪಿ ಕಚ್ಚಿಲ್ಲ -ಈಗಲ್ಲೂ ಜೀವ ಕೈನಲ್ಲಿ ಹಿಡಿದು ನಾ ಮನೆ ಸೇರುವೆ …!!
ಆದರೂ ನಾಯಿಗಳ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿ ಇದೆ .. ಇರಬೇಕು ಅಲ್ಲವೇ?
ಬಹಳ ದಿನಗಳ ನಂತರ ಒಂದು ಬರಹ ಬರೆದ ತೃಪ್ತಿ …! 
ಮುಂದಿನ ಬರಹ ಮತ್ಯಾವಾಗ ಬರುತ್ತ್ತೋ ….!!
ಪ್ರತಿಕ್ರಿಯಿಸಿದ ಸರ್ವರಿಗೂ ನನ್ನಿ … 
 
\।/
 
ವೆಂಕಟೇಶ ಮಡಿವಾಳ ಬೆಂಗಳೂರು 

parthasarathyn
10 years ago

ಹೋಗಲಿ ಬಿಡಿ ಅಲ್ಲಿದ್ದ (?) ನಾಯಿಮರಿಯನ್ನು ಇಲ್ಲಿಯು ನೋಡಿದ ಹಾಗಾಯ್ತು !! 

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
10 years ago

;())) 
 
ಗುರುಗಳೇ 
ಮೊದಲಿಗೆ ಅದನ್ನು ಫೆಸ್ಬುಕ್ಕಲಿ ನಟರಾಜು ಅವರಿಗೆ ಮೆಸೇಜ್ ಮಾಡಿದ್ದೆ . ಇಲ್ಲಿ ಪ್ರಕಟ ಆಯ್ತು , ಆಮೇಲೆ ಸಂಪದಕ್ಕೂ ಸೇರಿತು ಹಾಗೆಯೇ ಫೆಸ್ಬುಕ್ಕಿನಲ್ಲಿರುವ ಹಲವು ಕನ್ನಡ ಪೇಜುಗಳಿಗೂ  ಹೋಯ್ತು .. (ಕನ್ನಡವೇ ಸತ್ಯ  ಇತ್ಯಾದಿ ).. 
ಹಾಗೆಯೇ ನಿಮ್ಮ ಬರಹವೂ ಅಲಿಯೂ ಇಲ್ಲಿಯೂ ಇದೆ ..>
ಎಲ್ಲೆಡ್ಯೂ  ಸಲ್ಲುವವರು…. 
 
ಶುಭವಾಗಲಿ 
 
\।/

parthasarathyn
10 years ago

ಹೌದು ಇನ್ನು ಮುಂದೆ ಒಮ್ಮೆ ಪಂಜುವಿಗೆ ಬರಹ ಕೊಟ್ಟಲ್ಲಿ ಇಲ್ಲಿ ಪೂರ್ಣ ಬಾಗ ಪ್ರಕಟವಾಗುವವರೆಗು ಬೇರಡೆ ಪ್ರಕಟಿಸಬಾರದು ಅನ್ನಿಸುತ್ತಿದೆ, ಏಕೆಂದರೆ ಕೆಲವು ಕಡೆ ಮುಂದಿನ ಬಾಗ ಹಾಕಿ ಅನ್ನುವಾಗ ನಿಯಮಬಂಗವಾಗುತ್ತೆ. ಪಂಜುವಿಗೆ ಕಳಿಸುವ ಲೇಖನದ ನಿಯಮದ ಪ್ರಕಾರ ಮೊದಲೆ ಎಲ್ಲಿಯು ಪ್ರಕಟಿಸುವ ಹಾಗಿಲ್ಲ. ಬೇರಡೆ ಪ್ರಕಟವಾಗಿರುವದನ್ನು ಇಲ್ಲಿ ಹಾಕುವಂತಿಲ್ಲ,. ನಾನಂತು ಎಲ್ಲಿದ್ದರು ನಿಯಮ ಪಾಲಿಸುವನೆ.
ಹಾಗಾಗಿ ಇಲ್ಲಿ ಪ್ರಕಟವಾದ ನಂತರ ಬೇರಡೆ ಅದರ ಲಿಂಕ್ ಹಾಕುತ್ತಿದ್ದೆ. ಇನ್ನು ಮುಂದೆ ಪೂರ್ಣ ಬಾಗ ಬರುವವರೆಗು ಸುಮ್ಮನಿದ್ದು ನಂತರ ಹಾಕಬೇಕು. ಒಂದೆ ಬಾಗವಿದ್ದಲ್ಲಿ ಇಲ್ಲಿ ಪ್ರಕಟವಾದ ಮರುದಿನ ಹಾಕುವೆ ಆಗ ಸರಿ ಹೋಗುತ್ತೆ ಅನ್ನಿಸುತ್ತೆ.  ನಿಯಮ ಎಂದರೆ ನಿಯಮವೆ ನಾವೆ ಒಪ್ಪಿಕೊಂಡಾದ ಮೇಲೆ ಅದರಂತೆ ನಡೆಯಬೇಕು. 

6
0
Would love your thoughts, please comment.x
()
x