ಹಾಳೂರಿನ ಫುಲ್‍ಟೈಟು ಪಾರ್ಟಿಗಳಾದ ನೈಂಟಿ, ಫೋರ್‍ಟ್ವೆಂಟಿ ಮತ್ತು ಪಂಟಿ ಕರುಳ ತಳಮಳ ತಾಳಲಾರದೇ ‘ಕಿಕ್ಕೇಶ್ವರ’ ಲಿಕ್ಕರ್ ಶಾಪಿನೆಡೆಗೆ ದಾಪುಗಾಲಿಟ್ಟರು.
ನೈಂಟಿ: ಸಿದ್ರಾಮಣ್ಣ ನಮ್ ಕಷ್ಟ ಅರ್ಥ ಮಾಡ್ಕಂದು ಚೀಪ್ ಅಂಡ್ ಬೆಸ್ಟು ಹೆಂಡನಾ ನಮ್ಗೆಲ್ಲ ಕುಡ್ಸೋಕೆ ಹೊಂಟಿತ್ತಪ್ಪ. ಯಾರ್ಯಾರೋ ಸೇರ್ಕಂದು ಅದ್ಕೆ ಕಲ್ಲಾಕ್ಬುಟ್ರು.
ಫೋರ್‍ಟ್ವೆಂಟಿ: ಈಗಿರೋ ಸಿಸ್ಟಮ್ಮೇ ಸರ್ಯಾಗೈತೆ ಸುಮ್ಕಿರಪ್ಪ. ಈಗೆಂಗೋ ದಿನಾ ದುಡ್ಕಂದು ಸಂಜೆ ಹೊತ್ ಮಾತ್ರ ಕುಡ್ಕಂದು ನ್ಯಾಯ್ವಾಗಿ ಬದುಕ್ತಿದ್ದೀವಿ. ಚೀಪಾಗಿರೋ ಹೆಂಡನಾ ಮಾರ್ಕೆಟ್ಟಿಗೆ ಬಿಟ್ರೆ ವಾರ್ದಲ್ಲಿ ಮೂರ್ದಿನ ದುಡ್ದು ಏಳ್ದಿನಾನೂ ಕುಡ್ದು ಕಳ್ಳು ಬೋಟಿ ಎಲ್ಲಾ ಹೊಗೆ ಹಾಕುಸ್ಕಳೋವಂಗೆ ಮಾಡ್ಕೊಬುಟ್ತೀವಿ.
ಪಂಟಿ: ಚೀಪಾದ್ರೂ ಹೈಕ್ಲಾಸ್ ಕ್ವಾಲಿಟಿನೂ ಕೊಡ್ತೀವಿ ಅಂದಿದ್ರಪ್ಪ. ಈ ಓಸಿ ಕುಡ್ದು ಪುಟ್ಗೋಸಿ ಆಗೋದ್ರು ಬದ್ಲು, ಓಲ್ಡ್ ಮಾಂಕ್ ಹಿಗ್ಗಿ ಮಂಕಾಗೋ ಬದ್ಲು ಸರ್ಕಾರುದ್ ಹೆಂಡ ಕುಡ್ದು ಸಾವ್ಕಾರ್ರು ಥರ ಮೆರಿಬೌದಿತ್ತು.
ನೈಂಟಿ: ಈಗ ಯೋಚ್ನೆ ಮಾಡಿ ಏನ್ಲಾ ಪ್ರಯೋಜ್ನ? ಸಿದ್ರಾಮಣ್ಣ, ಚೀಪಾಗಿ ಹೆಂಡ ತಯಾರ್ಸೋ ಪ್ಲ್ಯಾನುನ್ನ ಫ್ಯಾನಿಗೆ ನೇತಾಕಿದೀವಿ ಅಂತ ಘೋಷ್ಣೆನೇ ಮಾಡೈತೆ.
ಪಂಟಿ: ಕುಡುಕ್ರೆಲ್ಲ ಸೇರ್ಕಂದು ಒಂದು ಸಂಘಟ್ನೆ ಅಂತ ಮಾಡ್ಕಂದಿದ್ರೆ ಈ ರಾಜ್ಕಾರ್ಣಿಗಳ್ನ ನಮ್ ಕೈ ಬೆಳ್ನಾಗೆ ಕುಣುಸ್ಬಹುದಿತ್ತು.
ಫೋರ್‍ಟ್ವೆಂಟಿ: ದೇವುಸ್ಥಾನ ಬಂತು ಇವತ್ತಿನ್ ಪ್ರಸಾದ ಯಾರ್ದಪ್ಪಾ?
ನೈಂಟಿ: ನಿಂದೇ ಕನ್ಲಾ.
ಫೋರ್‍ಟ್ವೆಂಟಿ: ನನ್ತಾವ ಕಾಸಿಲ್ಲ.
ನೈಂಟಿ: ಈ ನವ್‍ರಂಗಿ ಆಟ್ವೆಲ್ಲ ನಮ್ತಾವ ಬೇಡ. ಅಮಿಕಂದು ಚೆಡ್ಡಿ ಜೇಬ್ನಾಗಿರೋದ್ನ ಹೊರಿಕ್ ತೆಗಿ.
ಫೋರ್‍ಟ್ವೆಂಟಿ: ನನ್ತಾವ ಇರೋದೆ ಐವತ್ ರೂಪಾಯಿ ತಗಳಪ್ಪಾ.
ಪಂಟಿ: ಈ ನನ್ಮಗುನ್ದು ಇದೇ ಕಥೆ. ತಗಳಪ್ಪಾ ನನ್ ಶೇರು.
ನೈಂಟಿ: ಯಾವ್ದು ತಗಳಾಣ ಓಸಿನಾ ಓಲ್ಡ್ ಮಾಂಕಾ?
ಫೋರ್‍ಟ್ವೆಂಟಿ: ಯಾವ್ದಾದ್ರೂ ಒಂದೇಯ. ಗಬ್ವಾಸ್ನೆ! ನಾವೆಲ್ಲ ಆರ್ಸಿನೋ ಆರೆಸ್ಸೋ ಕುಡ್ಯೋದು ಯಾವಾಗ?
ಪಂಟಿ: ನಿನ್ತಾವ ಇರೋ ಕಳ್ಗಂಟುನ್ನ ಕರ್ಗುಸುದ್ರೆ ಈಗ್ಲೇ ಕುಡಿಬೌದಪ್ಪಾ.
ಫೋರ್‍ಟ್ವೆಂಟಿ: ನಾನು ಅದ್ಯಾರ್ ಮನೆ ಕೊಳ್ಳೆ ಹೊಡ್ದಿದ್ದೀನಪ್ಪಾ?
ಪಂಟಿ: ಎಲೆಕ್ಷನ್ ಟೈಮ್ನಾಗೆ ಊರ್ನವ್ರಿಗೆ ಹಂಚ್ತೀನಿ ಅಂತ ಲೀಡ್ರುಗಳ್‍ತಾವ ಕಾಸು ಇಸ್ಕಂದು ಜೇಬಿಗೆ ಇಳೆ ಬುಟ್ಕಂದಿದ್ನ ಬಿಚ್ಚಪ್ಪ ಸಾಕು.
ಫೋರ್‍ಟ್ವೆಂಟಿ: ಎಲ್ಲನೂ ಹಂಚಾಯ್ತು. ನಡೀರಿ ನಿಂತು ನಿಂತೂ ಕಾಲು ಬಿದ್ದೋಯ್ತಾವೆ. ಕಟ್ಟೆ ಮೇಲೆ ಕುಂತ್ಕಂದು ಕುಡ್ಯೋಣಂತೆ.
ನೈಂಟಿ: ಏನೇ ಆಗ್ಲಿ ನಮ್ ಸಿದ್ರಾಮಣ್ಣುನ್ನ ಸುಮ್ನಿರೋಕೆ ಬಿಡ್ಬಾರ್ದು.
ಪಂಟಿ: ಯಾಕ್ಲಾ? ಏನ್ಲಾ ಮಾಡ್ಬೇಕು?
ನೈಂಟಿ: ನಮ್ಗೆಲ್ಲ ಚೀಪ್ ಅಂಡ್ ಬೆಸ್ಟು ಹೆಂಡ ಕೊಡ್ಸು ಅಂತ ಕೈ ಕಾಲು ಹಿಡ್ಕಬೇಕು.
ಪಂಟಿ: ಸಿದ್ರಾಮಣ್ಣುಂಗೆ ನಮ್ಮಂಥ ಕಾಸಿಲ್ದಿರೋ ಕುಡುಕ್ರು ಕಷ್ಟ ಏನೂಂತ ಗೊತ್ತೈತೆ. ಆದ್ರೆ ಜನುದ್ ಕಾಟ ತಡ್ಯೋಕಾಗ್ದಲೇ ಹಿಂದೆ ಸರ್‍ದೈತೆ.
ನೈಂಟಿ: ಏನೇ ಹೇಳು ಪಾಕೀಟಿನ್ಮುಂದೆ ಓಸಿ ಪಾಸಿಯೆಲ್ಲ ಪುಟ್ಗೋಸಿ ಇದ್ದಂಗೆ. ಕಿಕ್ಕೂ ಇಲ್ಲ, ಜಾಸ್ತಿ ಕುಡ್ಯೋಣ ಅಂದ್ರೆ ಕಕ್ಕಳೋವಷ್ಟು ವಾಸ್ನೆ ಹೊಡ್ಯುತ್ತೆ.
ಫೋರ್‍ಟ್ವೆಂಟಿ: ನಾವ್ತಾನೆ ಮೂಗ್‍ಮುಚ್ಕಂದು ಈ ಪಾಟಿ ಕಷ್ಟ ಪಟ್ಕಂದು ಯಾಕಾದ್ರೂ ಹೆಂಡ ಕುಡಿಬೇಕು ಅಂತ?
ನೈಂಟಿ: ನೀನೂ ಸರ್ಯಾದ್ ನನ್ಮಗನೇ ಕನ್ಲಾ. ಕುಡ್ಯೋದೂ ಅಲ್ದೇ ಕುಡುದ್ಮೇಲೆ ಯಾಕಾದ್ರೂ ಕುಡಿಬೇಕು ಅಂತ ಬೇರೆ ಪಿಟೀಲ್ ಕುಯ್ತೀಯ.
ಪಂಟಿ: ಫೋರ್‍ಟ್ವೆಂಟಿ ಹೇಳ್ತಿರೋದ್ರಾಗೂ ಅರ್ಥ ಐತೆ. ಆದ್ರೆ ಕರ್ಳು ಚುರ್ ಅಂದ್ರೆ ಹೆಂಗ್ ತಡ್ಕಳಾದು?
ಫೋರ್‍ಟ್ವೆಂಟಿ: ನಮ್ಗೂ ಹೆಂಡ್ರು ಮಕ್ಳು ಅಂತ ಆದ್ರೆ ಕುಡ್ತಾನ ಕಂಟ್ರೋಲ್ ಮಾಡ್ಕಬಹ್ದು.
ನೈಂಟಿ: ನಮ್ ಹೊಟ್ಟೆ ಸಾಕಳಾದೆ ಕಷ್ಟ ಆಗಿರೋವಾಗ ಚಿಳ್ಳೆ ಪಳ್ಳೆಗಳ್ನೆಲ್ಲ ಹುಟ್ಟುಸ್ಕಳ್ತಾ ಹೋದ್ರೆ ನಮ್ ಪಾಡು ನಾಯಿ ಪಾಡಾಗೋಗುತ್ತೆ.
ಪಂಟಿ: ವರ್‍ದಕ್ಷಿಣೆ ಅಂತ ಒಂದಷ್ಟು ಕಾಸು ಸಿಕ್ರೆ ಏನಾರ ಮಾಡ್ಬಹ್ದು.
ನೈಂಟಿ: ನಮ್ ಮುಖುಕ್ಕೆ ಹುಡ್ಗಿ ಸಿಗೋದೆ ಕಷ್ಟ. ಅಂಥದ್ರಾಗೆ ವರ್‍ದಕ್ಷಿಣೆ ಅಂತ ಬೇರೆ ಕೊಡ್ತಾರೇನ್ಲಾ?
ಪಂಟಿ: ಯಾಕ್ ಒಂದ್ಕಿತ ಮದ್ವೆ ಆಗೋಕೆ ಟ್ರೈ ಮಾಡ್ಬಾರ್ದು?
ನೈಂಟಿ: ನೀನ್ ಮೊದ್ಲು ಹಳ್ಳುಕ್ ಬಿದ್ದು ಆಳ ಎಷ್ಟೈತೆ ಅಂತ ಹೇಳಪ್ಪ. ಆಮ್ಯಾಕೆ ನಾನು ಅದ್ರೊಳಿಕೆ ಕಾಲು ಮಡುಗ್ತೀನಿ.
ಫೋರ್‍ಟ್ವೆಂಟಿ: ಯಾರ್ತಾವನಾದ್ರೂ ಕಾಸಿದ್ರೆ ಮಡ್ಗಿ ಇನ್ನೊಂದ್ ಕ್ವಾಟ್ರು ತರ್ತೀನಿ.
ನೈಂಟಿ: ಇವತ್ತಿನ್ ಕೋಟಾ ಮುಗೀತು. ಮುಚ್ಕಂದು ಮನೆ ಕಡಿಕೆ ನಡ್ಯೋಣ ಬಾರಪ್ಪ.
ಕುಡುಕರ ಲೋಕದೊಳಗೆ ಒಂದು ರೌಂಡು ಹೊಡೆದು ಬಂದಹಾಗಾಯಿತು!
nice article.
ಕುಡುಕರ ಸಾಮ್ರಾಜ್ಯ… ಚೆನ್ನಾಗೈತೆ ಬುದ್ದಿ.
bhala chendaagi bardidi kananna… 🙂
bo ishta ayithu..
ಚನ್ನಾಗಿದೆ ಕುಡುಕರ ಒಡ್ಡೋಲಗ …:)