ಪದ್ಯಗಳೂ ಹೂನಗೆ ಬೀರಲಿ: ಹೆಚ್. ಷೌಕತ್ ಆಲಿ

ಬೆಣ್ಣೆನಗರಿಯ ಸರಿತ ಕೆ.ಗುಬ್ಬಿ ಹೊಸಪೇಟೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಂತೆ ಸಾಹಿತ್ಯಸಕ್ತಿ ಬೆಳೆಸಿಕೊಂಡ ಕವಯತ್ರಿಯು ಹೌದು ಅನೇಕ ವಿಷಯಗಳು ವಿಚಾರಗಳು, ಘಟನೆಗಳು ಕಣ್ಣಿನ ಮುಂದೆ ಘಟಿಸಿದಾಗ ಆ ಚಿತ್ರಗಳನ್ನು ಮನದಾಳದಲ್ಲಿ ರೂಪನೀಡಿ ಸುಂದರ ಕವಿತೆಗಳಿಗೆ ತಮ್ಮ ಲೇಖನಿಯ ಮುಖಾಂತರ ಬರೆಯುವ ಹವ್ಯಾಸಿ ಕನ್ನಡತಿ.

ಬದುಕು ಸುಲಭದ ವಿಚಾರವಲ್ಲ ಇಲ್ಲಿ ಅನೇಕ ಹಂತಗಳಿವೆ, ಮಜಲುಗಳಿವೆ. ಸಂತಸ ಸಂಭ್ರಮ ನೋವು ಹಿಂಸೆ ಎಲ್ಲವನ್ನು ಮೆಟ್ಟಿನಿಲ್ಲಲ್ಲಿ ಸಮಾಜದ ವಕ್ರತೆಯಲ್ಲಿಯು ಗಮನಿಸಬೇಕಾದ ಜವಾಬ್ದಾರಿಯು ತಮ್ಮ ಕವನಗಳ ಮೂಲಕ ಓದುಗರ ಮುಂದೆ ಪ್ರಸ್ತುತ ಪಡೆಸುವಲ್ಲಿ ಸಫಲತೆಯನ್ನು ಪಡೆದು ಧನ್ಯತಾಭಾವಕ್ಕೆ ಪಾತ್ರವಾಗಿ ಮೆಚ್ಚುಗೆಗಳಿಸಿರುವ ಸರಿತಾ.ಕೆ.ಗುಬ್ಬಿ ದಿಟ್ಟೆ ಧೀರೆ ಎಂದು ನನ್ನ ಅನಿಸಿಕೆ.

ಪ್ರಸ್ರುತ ಕವಯತ್ರಿ ಸರಿತಾ.ಕೆ.ಗುಬ್ಬಿಯವರು ‘ಹುಣ್ಣಿಮೆಯ ಹೂ ನಗೆ’ ಎಂಬ ಕವನ ಸಂಕಲನವನ್ನು ಕನ್ನಡ ಓದುಗರು ಇಂತಹ ಕವಯತ್ರಿಗೆ ಬೆಳೆಸಬೇಕು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಯುವ ಪ್ರತಿಭೆಗಳ ಅವಶ್ಯಕತೆ ಇದೆ. ನಾನೊಬ್ಬ ವಿಮರ್ಶಕನಾಗಿ ನಿಮಗೆ ಶುಭಹಾರೈಸುತ್ತೇನೆ.

“ಪ್ರೀತಿಯ ಹಣತೆಗಳ ಬೆಳಗಿಸಿ
ಅನ್ನದಾತರ ಎಲುಬಿನ ಹಂದರಕ್ಕೆ
ಬೆಳಕು ನೀಡಿ ಬದುಕಿಗೆ ದಾರಿತೋರಿ
ಕೈಯ ಮುಗಿದಾದರೂ
ಬೇಡಿಕೊಳ್ಳಬೇಕಿದೆ ಮಹಾತ್ಮ
ಬದಲಾಗ ಬೇಕಿದೆ ನೀನಂದು ಕೊಂಡಂತೆ

ಭಾರತ ದೇಶಕ್ಕೇ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ, ಸ್ವಾತಂತ್ರ್ಯದ ಮಹತ್ವ ಗೌರವ ಅರಿಯದ ರಕ್ಕಸರೂಪಿಗಳು ಇಂದಿಗೂ ಸಹ ತಮ್ಮ ಕಾಮ ದೃಷ್ಠಿಯ ಬಲೆ ಬೀಸಿ ಅಸಹಾಯಕ ಅಮಾಯಕರ ಜೀವಗಳನ್ನು ತಮ್ಮ ಹಿಂಸಾ ಪ್ರವೃತಿಯಿಂದ ರಕ್ಕಸರಾಗಿಯೇ ಉಳಿದಿದ್ದಾರೆ. ರಾಮ ರಾಜ್ಯದ ಕಲ್ಪನೆ ಇನ್ನೂ ಆಗಬೇಕಾಗಿದೆ, ಮಾನವಿಯತೆಯ ವಿಶಾಲ ಹೃದಯಗಳು ಅರಿತು ಶಾಂತಿ ನೆಮ್ಮದಿಯ ಹಣತೆ ಬೆಳಗಿಸಿ ಸ್ವಾತಂತ್ರ್ಯದ ಮಹತ್ವ ಸಾರಬೇಕಿದೆ. ಹೆಣ್ಣಿಗೂ ಇನ್ನೂ ಸ್ವಾತಂತ್ರ್ಯದ ಸ್ಧಾನಮಾನಗಳಿಂದ ಗೌರವಿಸಬೇಕಾಗಿದೆ. ಎಂದು ಕವಯತ್ರಿ ತಮ್ಮ ಮನದ ಭಾವನೆಗಳನ್ನು ‘ನೀನಂದು ಕೊಂಡಂತೆ’ ಕವನದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

‘ಸುಡುಬಿಸಿಲು, ಬಿರುಗಾಳಿ,ಚಳಿ ಮಳೆಗೂ
ಅಂಜದ ಕೆಚ್ಚೆದೆ ಗುಂಡಿಗೆಯ
ವೀರ ಯೋಧರು ನಮ್ಮವರು
ಭಾರತೀಯರ ಸೈನಿಕರು’

ಭಾರತೀಯ ಯೋಧರ ಶ್ರಮದಾಯಕ ಸೇವೆ ಸ್ಮರಿಸಿ ಅವರಿಗೆ ಪ್ರತಿ ನಿತ್ಯ ನಮನ ಸಲ್ಲಿಸುವಂತೆ ಮತ್ತು ಸೈನಿಕರ ವೀರಾವೇಶ ಹೋರಾಟಗಳಿಗೆ ಮಾತೃ ಭೂಮಿಯ ರಕ್ಷಣೆಗಾಗಿ ಸಾವುನೋವು ಲೆಕ್ಕಿಸಿದೆ. ಗಡಿಭಾಗದಲ್ಲಿ ಪ್ರಾಣ ಪಣಕ್ಕಿಟ್ಟು ನಮ್ಮ ನೆಮ್ಮದಿಗಾಗಿ ಅವರ ಶ್ರಮ ಶ್ಲಾಘನೀಯ ಎಂದು ಕವಯತ್ರಿ ಈ ಸುಂದರ ಕವನದ ಮೂಲಕ ವೀರಧೀರ ಶೂರ ಸೈನಿಕರಿಗೆ ‘ನಮನ’ ಕವನದ ಮೂಲಕ ನಮನ ಸಲ್ಲಿಸಿದ್ದಾರೆ.

‘ಹೋಗೋಣವೆ ನಲ್ಲ
ನವದುರ್ಗೆಯರ ನವಶಕ್ತಿಯ
ವೈಭವದಲ್ಲಿ ಸೊರೆಗೊಂಡ
ಮನಮೊಹಕ ಮೈಸೂರ ಸೊಬಗ’

ವಿಜಯ ದಶಮಿ ಹಬ್ಬ ಎಂದು ನಾಡಿನ ಜನತೆ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ನವ ದುರ್ಗೆಯರ ಪೂಜೆ, ಗೊಂಬೆಗಳ ಅಲಂಕಾರ, ದೀಪಗಳ ಅಲಂಕಾರಗಳಿಂದ ಮೈಸೂರು ನಗರ ಮೈಸೂರಿನ ಅರಮನೆಯಂತೆ ಕಂಗೊಳಿಸಿ ಜನ ಸಂದಣಿಯ ಮೆರವಣೆಗೆ ಅಂಬಾರಿ ನೋಡಲು ಎಲ್ಲರೂ ಆಸೆ ಪಡುವುದು ಸಹಜ ಅದೇ ರೀತಿ ಕವಯತ್ರಿ ತಮ್ಮ ನಲ್ಲನೊಂದಿಗೆ ಈ ಸಿರಿ ಸೌಭಾಗ್ಯಗಳನ್ನು ಕಣ್ಣಾರೆ ಕಾಣುವ ಹಂಬಲ ವ್ಯಕ್ತ ಪಡೆಸಿದ್ದಾರೆ. ಈ ಸಂದರ್ಭದಲ್ಲಿ ಎಸ್.ಆರ್.ಪುಟ್ಟಣ್ಣ ಕಣಗಲ್ರವರ ಕರುಲಿನಕರೆ ಚಿತ್ರದ ರಾಜ್ ಮನೋಜ್ಞ ಅಭಿನಯದ ಹಾಡಿನ ಸಾಲು ನೆನಪಾಗುತ್ತಿದೆ. ‘ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯ ಪನ್ನೀರು ಇದಕ್ಕೆ ಹೇಳುವುದು ಗತಕಾಲದ ವೈಭವ ದಸರಾ ನಮ್ಮ ಸಂಸ್ಕøತಿಯು ಹೌದು.

‘ಕವಿ ಋಷಿ ಸಂತರು ಜನಿಸಿದ ನಾಡಲ್ಲಿ
ಕೋಗಿಲೆ ಗಾನದ ಹಸಿರಿನ ಸೊಬಗಲಿ
ರಮಣಿಯ ಚೆಲುವ ಗಂಧದ ಬೀಡಲಿ
ಕಾವೇರಿ ತಂಪಿನ ಕಂಪಿನ ಮಡಿಲಲಿ’

ನಾವು ಕನ್ನಡಿಗರು ಶ್ರೀಗಂಧದ ಬೀಡಿನವರು ಪವಿತ್ರ ನದಿ ಕಾವೇರಿಯ ಅಮೃತ ಪಾನಿಗರು. ಈ ಕನ್ನಡ ನಾಡ ನಿರ್ಮಾಣದಲ್ಲಿ ಅನೇಕ ಋಷಿಗಳ ತಪಸ್ಸು, ಕವಿ ಪರಂಪರೆಯ ಸಾಧನೆಗಳು ಸಾಧು ಸಂತರ ಶುಭ ಹಾರೈಕೆಗಳು ಮತ್ತು ಸುಂದರ ಪ್ರಕೃತಿಯ ಸೊಬಗು. ರಾಜರಾಜೇಶ್ವರಿಯ ಆರಾಧಿಸುವ ನಾವು ಸ್ವರ್ಗದ ನಾಡಲ್ಲೇ ಇದ್ದೆವೇ ಎಂಬ ಭಾವ ನಮ್ಮದು.

‘ನೆನಪಿನ ದೋಣಿಯ ಆತ್ಮಕಥನದಿ ಸಾಗಿ
ಪ್ರೇಮಕಾಶ್ಮಿರ ಅಗ್ನಿ ಹಂಸಕ್ಕೆ ಮನಸೊತು
ಕಾನೂನುಹೆಗ್ಗಡತಿಯ ಕುಸುಮವ ಮುಡಿಸಿ
ಶ್ರೀರಾಮಾಯಣ ದರ್ಶನಂ ಮಾಡಿಸಿ..’

ಕನ್ನಡ ಸಾಹಿತ್ಯ ಲೋಕಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕರುನಾಡ ಕನ್ನಡಿಗರ ವಿಶ್ವ ಸಾಧನೆಯ ಮಹಾನ್ ಕೃತಿರತ್ನವೇ ಸರಿ. ಸಹ್ಯಾದ್ರಿ ಗಿರಿ ಶಿಖರಗಳಂತೆ ಮಲೆಗಳಲ್ಲಿ ಮದುಮಗಳು, ಕಾನೂರುಸುಬ್ಬಮ್ಮ ಹೆಗ್ಗಡ್ತಿ, ನೆನಪಿನ ದೋಣಿಯಂತಹ ಮೇರುಕೃತಿಗಳ ರಚನಾಕಾರ ರಸಋಷಿ ಕುವೆಂಪುರವರೊಂದಿಗೆ ಬೆಳೆದ ಸಾವಿರ ಸಾವಿರ ಸಾಹಿತಿಗಳಿಗೆಲ್ಲ ಜಯಕಾರ ಎಂಬ ಭಕ್ತಿ ಅರ್ಪಣೆ ‘ಕವಿಶೈಲ ಮಹಾತ್ಮೆ’ ಕವನದ ಆಶಯ.

ಐಕ್ಯತೆ ಬೀಜವು ಬಿತ್ತುತ್ತಲಿರುವೆವು
ಭೇಧವ ಎಣಿಸದೇ ಜೊತೆಯಾಗಿರುವೆವು
ಭಾರತೀಯರು ನಾವು ಭಾರತೀಯರು

ಭಾರತ ದೇಶವು ಅನೇಕ ಸಂಸ್ಕೃತಿಗಳ ಅನೇಕ ಜಾತಿಗಳ ಅನೇಕ ಭಾಷೆಗಳ ವಿಶ್ವವಿಖ್ಯಾತಿ ದೇಶ ನಮ್ಮದು ಆವು ಇಲ್ಲಿ ಸೋದರಂತೆ ಸಮಾನತೆ, ಭಾವೈಕತೆ, ಐಕ್ಯತೆಗಾಗಿ ಒಂದುಗೂಡುವ ಭಾರತೀಯ ಮಕ್ಕಳು ನಮ್ಮ ಜನ್ಮ ಸಾರ್ಥಕವು ಧನ್ಯವು ಕಂಡಿದೆ. ನಾವೆಲ್ಲರೂ ಒಂದು ಎಂಬ ಧ್ಯೇಯ ವಾಕ್ಯ ನಮ್ಮದು ಎಂದು ನಾವು ಭಾರತಿಯರು’ ಪದ್ಯದಲ್ಲಿ ವ್ಯಕ್ತಪಡಿಸಿದ್ದಾರೆ.

ನನ್ನನು ನೀನು ಮರೆತೆಯ
‘ಮಾನವ ನವ ಮಾನವ
ನೀಸ್ವಾರ್ಥಿಯಾದೆಯ ಧಾನವ
ರೀತಿ ನೀತಿಯೆಲ್ಲು ಮರೆತು’

ವಿಜ್ಞಾನದ ಆವಿಷ್ಕಾರಗಳು ಯಾಂತ್ರಿಕ ಬದುಕು ಮನುಷ್ಯನು ಒಂದುಯಂತ್ರವಾಗಿ ಹೋಗಿದ್ದಾನೆ ಮಾನವೀಯತೆ ಮೂಲೆ ಗುಂಪು ಸೇರಿದೆ ಹಿರಿಯರಿಗೆ ಗೌರವ ಇಲ್ಲದಂತಾಗಿದೆ. ಅಹಂಕಾರದಿ ಮೆರೆಯುತ್ತಿರುವ ಮಾನವ ತಾನು ಭ್ರಷ್ಠಾಚಾರಿಯಾಗಿದ್ದರೂ ಸಭ್ಯತೆಯ ಮುಖವಾಡಧರಿಸಿ ಸಾಗುತ್ತಿದ್ದಾನೆ ನೀನು ಇನ್ನೂ ನಿನ್ನನೆ ಅರಿಯಬೇಕಾಗಿದೆ ಇನ್ನಾದರೂ ಮಾನವನಾಗಲು ಪ್ರಯತ್ನಿಸು.

ಹಸಿರು ಸಿರಿ
ವಿಹರಿಸುವ ಗಾಳಿ ತಂಪಲ್ಲಿ
ಹಕ್ಕಿಗಳ ತುಂಟಾಟದ
ಕಲರವದ ನರ್ತನ

ಕವಯತ್ರಿಯ ಕಲ್ಪನೆ,ಹೀಗೆ ಇರಬೇಕಾಗಿತ್ತು ಈ ಸುಂದರ ಜಗತ್ತು ವಿಹರಿಸುವ ಹಾಗೆ ಬದುಕುವ ಹಾಗೆ ಬದುಕು ಪ್ರೀತಿಸುವ ಹಾಗೆ, ಆದರೆ ಎಲ್ಲವೂ ಕಲುಶಿತವಾಗಿವೆ. ಶುದ್ದತೆ, ಶುಭ್ರತೆ ಪಾವನೆ ಪವಿತ್ರತೆ ಇಲ್ಲದ ಜಗವು, ಆದರೆ ಕವಯತ್ರಿಯ ಆಸೆ ಈಡರಲಿ.

ಕವಯತ್ರಿ ಸರಿತಾ ಕೆ. ಗುಬ್ಬಿಯವರ ಮೊದಲು ಕೃತಿ ಹುಣ್ಣಿಮೆ ಹೂ ನಗೆ ಕವನ ಸಂಕಲನ ಓದುಗರ ಕೈ ಸೇರಿದೆ. ಈ ಕೃತಿಯಲ್ಲಿ ದೇಶಭಕ್ತಿ ಸೈನಿಕರಿಗೆ ನಮನ, ನಾಡಹಬ್ಬ ದಸರಾ, ಹಸಿರು ಪ್ರೀತಿ, ಕನ್ನಡಿಗರು, ಮಹಾತ್ಮದ ನೆನಕೆಗಳ ಸುಂದರ ವಿಷಯಗಳ ಆಯ್ಕೆಗಳ ಜತೆಯಲ್ಲೆ ಪ್ರೇಮ,ಕಾಮ ವಿರಹ ವಾಸ್ತವಕ್ಕೆ ಹಿಡಿದ ಕನ್ನಡಿ.

ಹಿರಿಯ ಸಾಹಿತ್ಯ ಚೇತನ ಶ್ರೀ ವಿದ್ಯಾಧತ ಮುತಾಲಿಕ ದೇಸಾಯಿರವರ ಆಶೀರ್ವಚನ ಮುನ್ನಡಿ ಬರೆದು ಕೃತಿಯ ಮೆರೆಗನ್ನು ಹೆಚ್ಚಿಸಿರು ಆತ್ಮೀಯ ಶ್ರೀ ಸುರೇಶ ಎಲ್.ರಾಜಮಾನೆ ಕೃತಿಯ ಅರ್ಪಣೆ ತಂದೆ ತಾಯಿಯವರ ಆಶೀರ್ವಾದಗಳು ಮತ್ತು ಸ್ನೇಹ ಬಳಗದ ಕಾವ್ಯಾಸಕ್ತರುಗಳು,ಇವರೆಲ್ಲರ ಒಡನಾಟದಲ್ಲಿ ಕವಯತ್ರಿ ಸರಿತಾ.ಕೆ. ಗುಬ್ಬಿಯವರಿಂದ ಇನ್ನು ಅನೇಕ ಕೃತಿಗಳನ್ನು ಈ ನಾಡು ನಿರೀಕ್ಷಿಸುತ್ತದೆ. ಓದು ನಿರಂತರವಾಗಿರಲಿ, ಬರವಣಿಗೆ ತಾನಾಗಿಯೆ ಬರುತ್ತೆ ನಾಡಿನ ಶ್ರೇಷ್ಠ ಕವಿವರ್ಯರ ಸಾಹಿತ್ಯ ಓದಿ ಜ್ಞಾನ ಭಂಡಾರ ವೃದ್ಧಿಸಿಕೊಳ್ಳಿ. ಉತ್ತಮ ಕೃತಿಗಳನ್ನು ಓದುಗರಿಗೆ ನೀಡಿ ಶುಭವಾಗಲಿ.

ಹೆಚ್. ಷೌಕತ್ ಆಲಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x