ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ.
ನಿಯಮಗಳು:
- ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕು
- ಕನಿಷ್ಟ 500 ಪದಗಳ ಬರಹವಾಗಿರಬೇಕು
- ಫೇಸ್ ಬುಕ್ ಮತ್ತು ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು.
ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com
ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.
ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..
ಬರಹಗಳು ತಲುಪಬೇಕಾದ ಕೊನೆಯ ದಿನಾಂಕ: 10.02.2021
ಬಹುಮಾನಗಳು:
ಮೊದಲ ಬಹುಮಾನ: 3000 ರೂಪಾಯಿ
ಎರಡನೇ ಬಹುಮಾನ: 2000 ರೂಪಾಯಿ
ಮೂರನೇ ಬಹುಮಾನ: 1000 ರೂಪಾಯಿ
ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಈ ಪತ್ರಗಳನ್ನು ಪಂಜುವಿನಲ್ಲಿ ಪ್ರಕಟಣೆಗೆ ಬಳಸಿಕೊಳ್ಳುವ ಹಕ್ಕು ‘ಪಂಜು’ಗೆ ಇರುತ್ತದೆ.
ಸಮಯ ಕಡಿಮೆ ಇದೆ. ತಡ ಮಾಡಬೇಡಿ ಬೇಗ ಬೇಗ ಪ್ರೇಮ ಪತ್ರ ಬರೆದು ನಮಗೆ ಕಳುಹಿಸಿಕೊಡಿ..
ನಿಮ್ಮ ಪ್ರೇಮ ಪತ್ರಗಳ ನಿರೀಕ್ಷೆಯಲ್ಲಿ ನಾವಿರುತ್ತೇವೆ..
ಇತಿ
ಪಂಜು ಬಳಗ 🙂
https://panjumagazine.com/
ಹೃದಯದ ಕಡಲಿಗೆ ಕಲ್ಲೆಸೆದ ಮಲ್ನಾಡ್ ಹುಡುಗ ನೀನು, ನಿನ್ನ ಮುದ್ದು ಮುದ್ ಪ್ರೀತಿಯಲ್ಲಿ ಮುಳಿಗಿದ ಬಯಲು ಸೀಮೆ ಹುಡುಗಿ ನಾನು… ನಮ್ಮ ಪ್ರೀತಿ ಆಕರ್ಷಣೆಯಲ್ಲಿ ಮೂಡಿ ಮೋಹದ ಅತಿರೇಕಕ್ಕೆ ಜಾರಿದ್ದಲ್ಲ, ಭಾವಗಳ ಏರಿಳಿತವನ್ನ ಮನಸಾರೆ ಸ್ವೀಕರಿಸಿ, ಬದುಕಿನ ಕೊನೆಯ ಘಟ್ಟಕ್ಕೂ ಒಬ್ಬರಿಗೊಬ್ಬರು ಆಸರೇಯ ಊರುಗೋಲು ಆಗುವ ಕನಸು ಕಂಡವರು.
ಹೇ, ನೆನಪಿತ್ತ ನಿಂಗೆ, ಈ ಪ್ರೀತಿ ಮೂಡಿದ ಬಗೆ..! 🤔
ಅಯ್ಯೋ ಇಂಥದೊಂದು ಪತ್ರ ಬರೆದು ಪ್ರೀತಿಯ ಅನುಭವದ ಮಧುರ ಕ್ಷಣಗಳ ಮೆಲುಕು ಹಾಕೋದು ಚಂದಿತ್ತು ನೋಡು, ಹು ಕಣೋ ನೆನಪಿತ್ತ ನಿನಗೆ,
ಅಂದು ಇಳಿಸಂಜೆ, ಸೂರ್ಯ ತನ್ನ ಕೆಲಸ ಮುಗಿಸಿ ಹಗಲಿಗೆ ವಿಧಾಯ ಹೇಳಿ ಹೋಗುವ ಸಮಯ, ಮುಗಿಲಲ್ಲಿ ಕೆಂಪಾದ ರಂಗು, ಹಕ್ಕಿಗಳು ಚಿವ್ ಚಿವ್ ಅಂತ ಗೂಡ್ ಸೇರುವ ಹೊತ್ತು, ಕೆಲವರು ಆಂಟಿ ಅಂಕಲ್ಗಳು ವಾಕಿಂಗ್ ಮಾಡುತ್ತಾ, ಅಜ್ಜ ಅಜ್ಜಿಯ ಲಾಫಿಂಗ್ ಮಾಡುವ ಸಮಯ, ನಾ ಪ್ರತಿದಿನ ಈ ಟೈಮಲ್ಲಿ ನಮ್ಮ ಏರಿಯಾದ ಕೊನೆಯ ಸಾಲಲ್ಲಿರುವ ಪಾರ್ಕನಲ್ಲಿ ಒಂದ್ ಬೆಂಚಲ್ಲಿ ಕೂತು ನನ್ನಿಷ್ಟದ ಪುಸ್ತಕ ಓದುವ ಅಭ್ಯಾಸ,.. ಅವತ್ತು ಸಹ ಹಾಗೇ ಇತ್ತು ಆ ಪಾರ್ಕನಲ್ಲಿ , ಆದರೆ ನಾ ಪ್ರತಿ ದಿನ ಕೂರುತಿದ್ದ ಆ ಬೆಂಚಲ್ಲಿ ಯಾರೋ ಒಬ್ಬರು ಕೂತಿದ್ರು, ಛೇ ಇದ್ಯಾರಪ್ಪ ಅಂತ ಮನಸಲ್ಲೇ ಶಾಪ ಹಾಕಿ ಪಕ್ಕದ ಬೆಂಚಲ್ಲಿ ಒಬ್ಬ ಅಜ್ಜಿ ಮೊಮ್ಮಗಳು ಕುತಿದ್ರು, ಅವರ ಪಕ್ಕ ಕೂತು ಪುಸ್ತಕ ಓದುತ್ತ ಮೈ ಮರತೆ..!
ಗಾಳಿಯಲ್ಲಿ ಒಂದು ಕಾಗದ ತೂರಿ ಬಂತು, ಉಯ್ಯಾಲೆಯ ಜೊತೆಯಲ್ಲಿ
ಉಸಿರಾಡೊ ಕನವರಿಕೆ..
ಜುಮಕಿಗಳ ಜೊತೆಯಲ್ಲಿ
ಜೀವನದ ತುಸು ಬಯಕೆ……
ಅದರ ಕೆಳಗೆ ನಾ ಗೀಚಿದ ಸಾಲು..
ನೀ ನೋಡಿದೊಡನೆ ಮನಸ್ಸು ನಿನ್ನೊಲವಿನಾಸರೆಯ ಬಯಸಿ, ಕಿವಿಯ ಜುಮುಕಿಗೆ ನಿನ್ನ ಆಹ್ವಾನದ ಸುಳಿವ ನೀಡ ತಿಳಿಸಿತು..!
ಮತ್ತೆ ಅದೇ ಕವಿತೆಯ ಹಾಳೆ..
ಕಬ್ಬು ಡೊಂಕಾದರೂ ರುಚಿಯಲ್ಲಿ ಕಹಿಯಾದೀತೇ
ಮಾತಲ್ಲಿ ಸಿಡಿಮಿಡಿದರೂ ಮನದ ಪ್ರೀತಿ
ಕರಗೀತೆ..?
ಒಲವ ನುಡಿಯೇಕೆ ನಲ್ಮೆಯಿಂದಲೇ ಬರಬೇಕು.?
ಮಾತಲ್ಲಿ ಮುನಿಸಿದ್ದರೂ ಮನದಲ್ಲಿ ಅಕ್ಕರೆಯಿದ್ದರೆ ಸಾಕು…
ನಾನು ಸಾಲುಗಳ ಬೆಸೆತೆ
ಅಕ್ಕರೆ ಪ್ರೀತಿಯಿಂದ ಸಕ್ಕರೆಯ ಸವಿಜೇನ ಹೀರಲು
ಮುನಿಸನ್ನು ರಮೀಸುತ ತುಂಟ ಚೋರ ನೀನಿರಲು
ಮನದ ಆ ಹುಸಿಗೋಪ ಇನ್ನೇಲ್ಲಿ
ಇರುವೆನು ಸದಾ ಜೊತೆಯಲ್ಲಿ
ಮರವ ತಬ್ಬಿದ ಬಳ್ಳಿಯಂತೆ ನಿನ್ನ ಬಾಳಲ್ಲಿ..
ಈ ಕಾಗದಗಳು ಗಾಳಿಯಲ್ಲಿ ಹಾರಾಡ್ತಿದಿದ್ದು, ಕವಿತೆಗಳಿಗೆ ಉಸಿರು ನಿಡ್ತ ಇದ್ದ ಹಾಗೆ…
ನಾ ಅಲ್ಲಿಂದ ಹೊರಟು ಮನೆ ದಾರಿ ಹಿಡಿದೆ..!
ಹೀಗೆ ದಿನವೂ ಇದೇ ದಿನಚರಿ ಆಯ್ತೂ, ಈ ಕವಿತೆ ಬರೆದು ಗಾಳಿಯಲ್ಲಿ ರವಾನೆ ಮಾಡ್ತಿದ್ದು ಅದೇ ನಾ ಕೂರುತಿದ್ದ ಬೆಂಚಲ್ಲಿ ಕೂರುವ ಹುಡುಗ ಎಂದು ತಿಳಿದು ಮನಸಿಗೆ ಸ್ವಲ್ಪ ಸಮಾಧಾನ ಆಯ್ತು, ಆದ್ರೆ ಈ ಕವಿತೆಗಳ ಕುದ್ದಾಟ ಜೋರಾಗೆ ಇತ್ತು.
ಹೀಗೆ ಒಂದಿನ ಕವಿತೆ ಬರೆಯುವ ಕಾಗದದಲ್ಲಿ, ಹೇ ಹುಡುಗಿ, ನಿನ್ನ ನೀಳ ಕೇಶರಾಶಿ, ಈ ನೀಲಿ ಕಂಗಳ ಹೊಳಪು ನನ್ನ ಮನಸೂರೆ ಗೊಳಿಸಿದೆ, ನಿನ್ನ ಅಂದವ ಹೊಗಳಲು ನಾನೇನು ಕವಿರತ್ನ ಅಲ್ಲ, ನಿನ್ನಂದವ ಕೆತ್ತಲು ಜಕ್ಕಣ್ಣನಲ್ಲ, ಚಿತ್ರದಿ ನಿನ್ನ ಸಿಂಗರಿಸಲು ರವಿವರ್ಮನೂ ಅಲ್ಲ, ಆದರೆ ನಿನ್ನ ಬಗ್ಗೆ ಅಪಾರವಾದ ಪ್ರೀತಿ, ಗೌರವ ಹೊಂದಿದ ಒಬ್ಬ ಸಾಮಾನ್ಯ ಅಭಿಮಾನಿ ನಾನು..
ಹೇ ಹುಡುಗ, ನೀನಾರೆಂದು ನನಗೆ ತಿಳಿದಿಲ್ಲ, ನಿನ್ನ ಪ್ರತಿ ಭಾವದ ಕವಿತೆಗೂ ನಾ ನನ್ನ ಭಾವ ಸೇರಿಸಿದೆ ಅಷ್ಟೇ, ನಾನೇನೂ ರೂಪವತಿಯಲ್ಲ, ನೀ ಇಷ್ಟು ಹೊಗಳಲು, ನಾನು ಮೌನದೂರಿನ ಒಡತಿ…ನಿಮ್ಮ ಅಭಿಮಾನಕ್ಕೆ ನಾ ಅರ್ಹಳಲ್ಲ.. ಎಂದು ಗೀಚಿ ಕಾಗದ ಬೆಂಚಿನ ಮೇಲಿಟ್ಟು ಅಲ್ಲಿಂದ ಹೊರಟೆ…
ಮತ್ತದೇ ಮರುದಿನ ಅದೇ ದಿನಚರಿ,
ಒಂದೇ ಬೆಂಚಲ್ಲಿ ಇಬ್ಬರೂ ಕೂತಿದ್ದು ವಿಪರ್ಯಾಸ, ಯಾಕಂದ್ರೆ ಅವತ್ತು ಉಳಿದ ಯಾವ ಬೆಂಚ್ಗಳು ಖಾಲಿ ಇರಲಿಲ್ಲ,.. ನಾ ಬೆಂಚನ ಒಂದು ತುದಿಯಲ್ಲಿ ಕೂತು ಪುಸ್ತಕ ಓದಲು ಶುರುವಿಟ್ಟೆ, ಮೆಲ್ಲಗೆ ಒಂದು ಕಾಗದ ಸರಿದು ಬಂತು,
ಚಲುವೇ ನಿನ್ನ ಮುಂಗುರುಳ ಸರಿಸಲು ಮನವು ಹಾತೊರೆದಿದೆ ..
ಕಡುಗಪ್ಪು ಹುಬ್ಬನ್ನು ಒಮ್ಮೆಯಾದರೂ ತಿದ್ದಿ ತೀಡಬೇಕಿದೆ..
ಕಾಡಿಗೆ ಕಣ್ಣಿನ ನೋಟವ ನನ್ನ ಹೃದಯದಲ್ಲಿ ಕಾಪಿಡಬೇಕಿದೆ…
ಕ್ಷಣ ಮಾತ್ರವಾದರೂ ಸರಿಯೇ ನಿನ್ನ ನನ್ನ ತೋಳಲ್ಲಿ ಬಂಧಿಸಬೇಕಿದೆ…
ನಾ ಬರದೆ,
ನಿನ್ನ ತೋಳ ತೆಕ್ಕೆಯಲ್ಲಿ
ಗುಬ್ಬಿಮರಿಯಂತೆ ಬಿಚ್ಚಗಿರುವ ಆಸೆ
ನೀ ಮುಂಗುರುಳ ಸೋಕಿಸುವಾಗ
ಹೃದಯದಲ್ಲಿ ನವ ಕಂಪನದ ಅಲೆ ಹೊಮ್ಮಿ
ಹೊಸ ರೊಮಂಚನದ ಸೆಳೆಯು
ಪ್ರೀತಿಯ ಕಡಲಲ್ಲಿ ಸೇರಿದ ಹಾಗೆ
ಪ್ರೇಮದ ಪ್ರತಿ ಪಾಠವು ನಿನ್ನಿಂದಲೇ ಕಲಿತ ಹೀಗೆ…
ಬರೆದ ಹಾಳೆಯ ಅವನ ಪಕ್ಕ ತಳ್ಳಿದೆ, ಹೌದು ನಾವಿಬ್ರು ಅಕ್ಕ ಪಕ್ಕ ಕೂತ್ರು ಮಾತಾಡಿಲ್ಲ ಬರಿ ಕವಿತೆಗಳ ಭಾವ ಇಲ್ಲಿ ಮಾತಾಡ್ತಿತ್ತು..
ಹೇ, ಸಾಕು ಮಾಡು ಹುಡುಗಿ, ನನಗೆ ನೀ ಇಷ್ಟ, ನೀನೇ ನಮ್ಮ ಮನೆಯ ಸೊಸೆ, ನನ್ನ ಬಾಳಿನ ಜ್ಯೋತಿ, ನನ್ನ ಮದುವೆ ಆಗ್ತಿಯಾ ಅಂತ ಜಭರ್ದಸ್ ಆಗಿ ಕೇಳಿಯೇ ಬಿಟ್ಟ, ನನಗೆ ಎಲ್ಲಿಲ್ಲದ ಭಯ ಶುರುವಾಯ್ತು ಅಲ್ಲಿಂದ ಏನು ಮಾತಾಡ್ದೆ ಮನೆಯ ಹಾದಿ ಹಿಡಿದೆ..
ಮತ್ತೆಂದೂ ನಾ ಪಾರ್ಕನತ್ತ ಸುಳಿಯಲಿಲ್ಲ, ಅವನ ನೆನಪು ಕಾಡಿದ್ದು ಸುಳಲ್ಲ ಅವನು ನನ್ನ ಗಮನ ಸೇಳೆದಿದ್ದ…
ಮೂರು ತಿಂಗಳ ನಂತರ ನಾ ಮತ್ತೆ ಆ ಪಾರ್ಕ ಆ ಬೆಂಚ್ ಅಂತ ಹೋದಾಗ, ಮತ್ತದೇ ಹುಡುಗ, ನಾ ನನ್ನ ಪಾಡಿಗೆ ಸುಮ್ಮನೇ ಕುಳಿತೆ, ಒಮ್ಮೇಲೇ ಬಂದವನು, ನಿನಗಾಗಿ ನಾ ಪ್ರತಿ ದಿನವೂ ಇಲ್ಲಿ ಕಾಯುತ್ತಿದ್ದೇನೆ, ನನಗೆ ಕಂಪನಿ ಒಂದರಲ್ಲಿ ಕೆಲಸ ಸಿಕ್ಕಿದೆ, ನಿಮ್ಮ ಮನೆಯವರ ನಾ ಆಗಲೇ ಒಪ್ಪಿಸಿರುವೆ, ಹೇಳು ನಿಜವಾಗಿಯೂ ನನ್ನ ಮೇಲೆ ನಿನಗೆ ಮನಸಿಲ್ಲವೇ..!?
ಕಂಗಳಲ್ಲಿ ತುಂಬಿದ್ದ ನೀರು ಅವನ ಪಾದ ತೊಳೆಯುತ್ತಿತ್ತು, ಹೇ ಗೊತ್ತು ಕಣೇ ನಿನ್ನ ಪ್ರತಿ ಭಾವಕ್ಕೂ ನಾ ಮಾತಾಗುವೆ, ನಿನ್ನ ದನಿ ನಾನಾಗಿರುವೆ, ನಿನ್ನ ಮೌನವ ನಾನು ಅರ್ಥೈಸಿರುವೆ ಎಂದು ಕೈ ಹಿಡಿದ, ಮನಸ್ಸು ಅವನೆಡೆಗೆ ಜಾರಿ ಅವನೆದೆಗೆ ಒರಗಿದೆ…
ಕಾರಣ ನಾನು ಮಾತು ಬಾರದ ಮೂಕಿ…
ಅಬ್ಬಾ ಇಷ್ಟೇಲ್ಲಾ ಆತ ನಮ್ಮ ಪ್ರೀತಿ ಅಂತ ಅದೇ ಬೆಂಚಿನ ಮೇಲೆ ಕೂತು ಬರೆದ ಮೌನದಲ್ಲಿ ಪ್ರೀತಿಯಾದ ಪತ್ರ ಕಣೋ ಇದೂ…
ಹೇ ಮುಗಿಲೂರ ದೊರೆಯೇ, ನನ್ನ ಬಾಳಿಗೆ ಹಾಡಾದವನು ನೀನು ಕಣೋ…
ಲವ್ ಯು ಫಾರೇವರ್….😘
ಆ ನಾನು ಮೌನ…!