ಪಂಜು ಪ್ರೇಮ ಪತ್ರ ಸ್ಪರ್ಧೆ 2021 ರ ಫಲಿತಾಂಶ

2021 ರ ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ.

1 ಪ್ರಥಮ ಬಹುಮಾನ: ಕೃತಿಕಾರಾಣಿ, ಯಲ್ಲಾಪುರ

2 ದ್ವಿತೀಯ ಬಹುಮಾನ: ಸುಕೃತಿ ಕೆ ಪೂಜಾರಿ

3 ತೃತೀಯ ಬಹುಮಾನ: ಶರಣಬಸವ ಕೆ.ಗುಡದಿನ್ನಿ

ಐದು ಸಮಾಧಾನಕರ ಬಹುಮಾನಗಳು:

1. ದಿನೇಶ್‌ ಉಡಪಿ

2. ನರೇಂದ್ರ ಎಸ್‌. ಗಂಗೊಳ್ಳಿ

3. ಕಪಿಲ ಪಿ ಹುಮನಾಬಾದೆ

4. ಪರಮೇಶ್ವರಿ ಭಟ್

5. ಸುಜಾತಾ ಲಕ್ಮನೆ, ಬೆಂಗಳೂರು

ತೀರ್ಪುಗಾರರು:

ಕನ್ನಡದ ಖ್ಯಾತ ಬರಹಗಾರರಾದ ಎ ಆರ್‌ ಮಣಿಕಾಂತ್‌ ರವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಇವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ʼಈ ಗುಲಾಬಿಯು ನಿನಗಾಗಿʼ ಎಂಬ ಪ್ರೇಮ ಪತ್ರಗಳು ತುಂಬಾ ಜನಪ್ರಿಯವಾಗಿದ್ದವು, ಜೊತೆಗೆ ಕನ್ನಡದಲ್ಲಿ ಪ್ರೇಮ ಪತ್ರಗಳ ಬರಹಗಳಿಗೆ ಇವರ ಪತ್ರಗಳು ಹೊಸ ತಿರುವು ತಂದವು ಎಂದರೆ ತಪ್ಪಾಗಲಾರದು. ನಮ್ಮ ಪಂಜುವಿನ ಪ್ರೇಮ ಪತ್ರ ಸ್ಪರ್ಧೆಗೆ ತೀರ್ಪುಗಾರರಾಗಲು ಸಂತೋಷದಿಂದ ಒಪ್ಪಿ, ತಮ್ಮ ಕೆಲಸದ ಒತ್ತಡದ ನಡುವೆಯೂ ಪಂಜುವಿಗಾಗಿ ನಾವು ಕಳುಹಿಸಿದ್ದ ಅಷ್ಟೂ ಪತ್ರಗಳನ್ನು ಶ್ರದ್ಧೆಯಿಂದ ಓದಿ ತೀರ್ಪು ನೀಡಿರುವ ಎ ಆರ್‌ ಮಣಿಕಾಂತ್‌ ಸರ್‌ ರವರಿಗೆ ಪಂಜುವಿನ ಎಲ್ಲಾ ಓದುಗರು ಮತ್ತು ಬರಹಗಾರರ ಕಡೆಯಿಂದ ಅನಂತ ಧನ್ಯವಾದಗಳು. ಮಣಿಕಾಂತ್‌ ಸರ್‌ ರವರ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ ಅನಂತ ವಂದನೆಗಳು.

ಧನ್ಯವಾದಗಳೊಂದಿಗೆ

ಪಂಜು ಬಳಗ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
M javaraj
M javaraj
3 years ago

ಪ್ರೇಮ ಪತ್ರ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎಲ್ಲ ಸ್ಪರ್ಧಿಗಳಿಗೂ ಹಾಗು ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಪ್ರಥಮ ದ್ವಿತೀಯ, ತೃತೀಯ ಬಹುಮಾನ ಪಡೆದವರಿಗೂ ಹಾಗು ಐದು ಸಮಾಧಾನಕರ ಬಹುಮಾನಿತರಿಗೂ ಶುಭಾಶಯಗಳು. ಇಂಥದೊಂದು ಸ್ಪರ್ಧೆ ಏರ್ಪಡಿಸಿ ಪ್ರೋತ್ಸಾಹಿಸಿದ ಪಂಜು ಬಳಗಕ್ಕು ಹಾಗು ತೀರ್ಪುಗಾರರಿಗೆ ಧನ್ಯವಾದಗಳು

*
ಎಂ.ಜವರಾಜ್

Varadendra K
Varadendra K
3 years ago

ವಿಜೇತ ಸಹೃದಯ ಮನಸುಗಳಿಗೆ ಅಭಿನಂದನೆಗಳು. ಇಂತಹ ಒಂದು ವಿಶಿಷ್ಟ ಮತ್ತು ವಿನೂತನ ಸ್ಪರ್ಧೆ ಏರ್ಪಡಿಸಿದ ಪಂಜು ಬಳಗಕ್ಕೆ ಧನ್ಯವಾದಗಳು. ಮತ್ತು ಹಲವಾರು ಬರಹಗಳನ್ನು ಓದಿ ತಿರ್ಪು ನೀಡಿದ ನಿರ್ಣಾಯಕರಿಗೂ ಧನ್ಯವಾದಗಳು..
ನಮ್ಮ ಪಂಜು ನಮ್ಮ ಹೆಮ್ಮೆ

Parameshwari Bhat
Parameshwari Bhat
3 years ago

ಪಂಜು ಪತ್ರಿಕೆಯ ಬಗ್ಗೆ ತಿಳಿದಿರಲಿಲ್ಲ.ಅದು ಹೇಗೋ ಸ್ಪರ್ಧೆಯ ಬಗ್ಗೆ ಮುಖಪುಟದಲ್ಲಿ ನೋಡಿ ಕೊನೇ ದಿನ ಬರೆದು ಕಳುಹಿಸಿದೆ.ಸಮಾಧಾನಕರ ಸ್ಥಾನ ಸಿಕ್ಕಿದ್ದು ಸಂತಸವಾಯಿತು.ಅದರಲ್ಲೂ ಮಹಾನ್ ಅಂಕಣಕಾರ , ತಮ್ಮ ಬರವಣಿಗೆಯಿಂದ ಮೋಡಿ ಮಾಡುವ ಶ್ರೀಯುತ ಎ ಆರ್ ಮಣಿಕಾಂತ್ ಅವರು ತೀರ್ಪು ಗಾರರು ಎಂದು ತಿಳಿದು ನಿಜಕ್ಕೂ ಹೆಮ್ಮೆ ಎನಿಸಿದೆ. ಪಂಜು ಪತ್ರಿಕೆಯ ನಿರ್ವಾಹಕರಿಗೂ ಮಣಿಕಾಂತ್ ಸರ್ ಗೂ ಮನದಾಳದ ಕೃತಜ್ಞತೆಗಳು.ವಂದನೆಗಳು. _ ಪರಮೇಶ್ವರಿ ಭಟ್

3
0
Would love your thoughts, please comment.x
()
x