ಪಂಜು ಅಂತರ್ಜಾಲ ವಾರಪತ್ರಿಕೆ ಮತ್ತು ಪಂಜು ಪ್ರಕಾಶನದ ವತಿಯಿಂದ ಚುಟುಕ ಸ್ಪರ್ಧೆಗೆ ನಿಮ್ಮ ಚುಟುಕಗಳನ್ನು ಆಹ್ವಾನಿಸಲಾಗಿದೆ.
ಒಬ್ಬರು ಕನಿಷ್ಠ 25 ಚುಟುಕಗಳನ್ನು ಕಳುಹಿಸಬೇಕು (ಗರಿಷ್ಠ ಮಿತಿ 30).
ಚುಟುಕಗಳು ಸ್ವಂತ ರಚನೆಗಳಾಗಿರಬೇಕು.
ಚುಟುಕಗಳನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com
ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಚುಟುಕ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ.
ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮಿಂಚಂಚೆ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ ಹಾಗು ಫೇಸ್ ಬುಕ್ ಲಿಂಕ್ ಕಳುಹಿಸಿ..
ಚುಟುಕಗಳು ತಲುಪಬೇಕಾದ ಕೊನೆಯ ದಿನಾಂಕ: 15.03.2013
ಮೊದಲ ಬಹುಮಾನ: 3000 ರೂಪಾಯಿ
ಎರಡನೇ ಬಹುಮಾನ: 2000 ರೂಪಾಯಿ
ಮೂರನೇ ಬಹುಮಾನ: 1000 ರೂಪಾಯಿ
ಹಾಗು ತೀರ್ಪುಗಾರರ ಮೆಚ್ಚುಗೆ ಪಡೆದ ಐವರಿಗೆ ಸಮಾಧಾನಕರ ಬಹುಮಾನವಾಗಿ ಪಂಜು ಪ್ರಕಾಶನದ “ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿ ನಗರಿಯ ಆತನ ನಲ್ಮೆಯ ಗೆಳತಿಯೂ” ಎಂಬ ಕೃತಿಯನ್ನು ನೀಡಲಾಗುವುದು.
ಸ್ಪರ್ಧೆಗೆ ಬಂದ ಚುಟುಕಗಳಲ್ಲಿ ಆಯ್ದ ಚುಟುಕಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಆಶಯವನ್ನು ಪಂಜು ಪ್ರಕಾಶನ ಹೊಂದಿರುವ ಕಾರಣ ಈಗಾಗಲೇ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಚುಟುಕಗಳ ಕಳುಹಿಸಬೇಡಿ. ಹಾಗೆಯೇ ಬಹುಮಾನ ಪಡೆದ ಚುಟುಕಗಳನ್ನು ಪುಸ್ತಕ ರೂಪದಲ್ಲಿ ಅಥವಾ ಪಂಜು ಅಂತರ್ಜಾಲ ವಾರ ಪತ್ರಿಕೆಯಲ್ಲಿ ಪ್ರಕಟಿಸುವ ಹಕ್ಕು ಪಂಜು ಪ್ರಕಾಶನಕ್ಕೆ ಸೇರುತ್ತದೆ.
ನಿಮ್ಮ ಚುಟುಕಗಳ ನಿರೀಕ್ಷೆಯಲ್ಲಿ ನಾವಿರುತ್ತೇವೆ..
ಇತಿ
ಪಂಜು ಬಳಗ :)))
ಶುಭವಾಗಲಿ ಪಂಜು……………………
ನಿಮ್ಮ ಆರಿಸುವ ರೀತಿ ಪಾರಾದರ್ಶಕವಾಗಿರಲಿ ಎಂದು ನನ್ನ ವಿನಂತಿ
Good attempt. All the best Panju….
Good. All the best to all the participants!!