1.ನಿರ್ಲಿಪ್ತತೆ
ನಿನ್ನ ನೆನಪಿಲ್ಲ
ಗಾಳಿ ಗಂಧವಿಲ್ಲ
ನಿದ್ದೆಯಲಿ ಕರಗಿಸುವ
ಮೋಹವಿಲ್ಲ
ನಿರ್ಲಿಪ್ತತೆ!!
ಯಾರೋ ಕೂಗಿದರು
ಕಲ್ಲು ಹೃದಯ
===========================
2. ವ್ರತ
ಗೆದ್ದ ಸ್ವಯಂವರದಲ್ಲಿ
ಹಂಚಿದ ಅಣ್ಣತಮ್ಮಂಗೆ
ಸಮಕಾಣವ್ವ
ಐದು ಬೆರಳು ನಿನ್ನವೇ
ಕುಂತಿಯ ಉಸಿರು
ಇದೇ ಗರತಿಯ ವ್ರತವೇ?
===========================
3. ಉಪವಾಸ
ಏಕಾದಶಿ ಉಪವಾಸ
ದ್ವಾದಶಿ ಉಪವಾಸ
ಸಿಕ್ಕಿತೋ ಪುಣ್ಯಫಲ?
ಹರಕು ಬಟ್ಟೆ
ಮುರುಕು ತಟ್ಟೆ
ಪ್ರತ್ಯಹಂ ಉಪವಾಸ
ಯಾರಾದರು ಇವನಿಗೆ ಕೊಡಿಸಿ
ಆ ನಿಮ್ಮ ಪುಣ್ಯ ಫಲ!
===========================
4. ಉಳುಮೆಯಿಲ್ಲ
ಒಲವಿನ ಕಿರಣ ಬೀರಿ
ಎದೆ ನೆಲದ ಕೃಷಿಯಾಗಿ
ಮೊಳೆಯುವುದೆಂತೋ
ಪ್ರೀತಿ ಮೊಳಕೆ
ಭರವಸೆ ಮಣ್ಣಿನ ಕಂಪಿಲ್ಲದೆ
===========================
5. ನಶೆ
ಕಹಿ ನೆನಪು ಹಗಲಿರುಳು ಕಾಡಿ
ಎದೆ ಆಸೆ ಏನೆಂದು ಕೆದಕಿ
ಯಾವುದೊಂದೋ ಹುಚ್ಚು ನಶೆ
ಒಳ ಪ್ರೀತಿ ಬಣ್ಣ ತೆರೆಸಿ
ಎದೆಯಲ್ಲಿ ರಮಿಸುತಿದೆ
===========================
6. ಮರಳಲಿ ರೆಕ್ಕೆ
ಕಸಸಿನ ಕಲ್ಪನೆಗಳೆಲ್ಲ
ಕಣ್ಣಲ್ಲಿ ಸೆರೆನಿಂತು ಮಬ್ಬಾಗಿಸಿ
ಧುಮಿಕಿದಾಗ
ಕೆನ್ನೆ ತೊಯ್ದು
ಕನಸಿನ ಸೆರೆ ಬಿಚ್ಚಿತು
ರೆಕ್ಕೆಯಿಲ್ಲದ ಕನವು
ಆದವು ನೂರುಚೂರು
===========================
7 ಯಾರು!
ನನ್ನವರು ಎಂದುಕೊಂಡವರಾರು
ನನ್ನವರಲ್ಲ
ಸಂಬಂಧವಿಲ್ಲದವರು
ನೆರವಿಗೆ ಬಂದಾರು
ಹೃದಯ ತೆರದಿಡಿ
===========================
8. ಸ್ಥಿತಿ
ವಿಚಿತ್ರ ಸ್ಥಿತಿ ಕಾಡಿಸುತಿದೆ
ಒಲಿದು ಒಂದಾಗುವಾಗಲ್ಲ
ಒಡೆದು ಹೋಳಾಗುವಾಗ
ವಿಮುಖತೆಯನ್ನು ಗೆಲ್ಲಬೇಕೇ?
===========================
9. ಸಂವೃದ್ಧಿ
ಮಾರೆಯಾಗಿರುವ ಮಣ್ಣಿನ ಕಣ್ಣು ತೆರೆ
ಹೂಬಿಟ್ಟು ಎದೆ ಬಿರಿದು
ರಸ ತುಂಬಿ ಹಣ್ಣಾಗಿ
ಬೀಜ ನೀಡ್ಯಾಳು
===========================
10. ಪರಾಗ
ನೆನಪುಗಳು ನೂರಿದೆ
ಅರಳಲಿಲ್ಲ ನಾನು
ಬರುವತನಕ ನೀನು
===========================
11. ಹನಿ
ಭಾವಗಟ್ಟಿದ ಮೋಡ
ಹನಿಯಾಗಿ ಗುಡುಗಿರಲು
ಮಿಡಿತದ ಮುನ್ನುಡಿ
ಬರೆಯಲ್ಲಿ ಹೇಗೆ ನಾ
ಹಾಳೆ ನೀರಾಗಿದೆ
ಕಣ್ಣು ಮಂಕಾಗಿದೆ
===========================
12. ಶಾಶ್ವತ
ಪ್ರೀತಿಸುವ ಹೃದಯ ಕಲ್ಲಾದರೆ
ನಿನ್ನ ಹೆಸರು ಕಲ್ಲ ಮೇಲೆ ಶಾಶ್ವತ
ತಿರಸ್ಕಾರ ಬಡಿದರೆ ಬಿರುಕು
ನನ್ನ ಹೃದಯದಲ್ಲಿ ನಿನ್ನ ಹೆಸರು?
===========================
13. ಹಾರೈಕೆ
ಕನಸುಗಳ ಗಾಯಗಳು
ಮನದಿ ಕಲೆಯಾಗಿದೆ
ನಗುತಲಿರು ಕೊನೆವರೆಗೆ
ನನ್ನ ಅಳು ನೋಡದೆ
=====================
13. ಮೊದಲು ಹೆಸರಿಡು
ಯಾವುದೇ ಕಥೆ ಗೀಜಿ ನಡದೆರೆ ಹೇಗೆ?
ಮನದ ನಿವೇದನೆ ಕೇಳುತಲೇ
ಬರೆದು ಬಿಡು, ಎಲ್ಲವ
ಇತಿಹಾಸವಾಗಲಿ
ಕೊನೆ ಕಾಣದ ಅರ್ಥವಾಗದ
ಅತಂತ್ರ ಈ ಸ್ಥಿತಿ
ಮೊದಲು ಹೆಸರಿಡು
=====================
14. ಕಣ್ಮರೆಯಾಗಿದ್ದಾರೆ
ಯಾವುದೇ ಮನುಷ್ಯನ ನಂಬಿ
ಬದುಕನ್ನ ಯಾರದೋ ಕೈಗಿಟ್ಟು
ಓಡಿ ಹೋದ ಹುಡುಕಿ.. ಹುಡುಕಿ..
"ಹಿಡಿಯಿರಿ"
ಈ ಸಂತೆಯಲ್ಲಿ ಕೇಳದವ್ವಾ
ಹೊಟ್ಟೆ ತುಂಬಿದ ಮಂದಿಗೆ
ನಿನ್ನ ಕೂಗು
=====================
15. ಬಾರೋ ರಾಮ..
ಯಾವ ಹತ್ತು ತಲೆಗೆ
ಬಾಗ ಬೇಕು ಈ ಜಾನಕಿ
ಆಶೋಕ ವನದ ಗಂಧವೇ
ನೀಗುಸುತಿಹುದು ವಿರಹವ
ನಾನು ಬೆಂಕಿ, ಸ್ಫಟಿಕ, ಪತಿವ್ರತೆಯಂತೆ
ಲೋಕದ ಮಾತು ಉಳಿಸಿಕೊಳಲೇ ಬೇಕು
ಆದರೂ.. ಬರಲಿಲ್ಲವಲ್ಲೋ ರಾಮ!
=======================
16. ಸಾರ್ಥಕತೆ
ಕಾವಲಾಕಿ, ಮುಳ್ಳಾಕಿ, ಬುಡ ಕಟ್ಟಿ,
ಸುತ್ತ ಹೆಣಿದರೇನು ಬೇಲಿಯಾ
ಯಾವ ಪಶುವಿಲ್ಲ, ಗಿಳಿವಿಂಡಿಲ್ಲ
ಹುಟ್ಟುವ ಹಣ್ಣು ಮಣ್ಣಲ್ಲೇ ಗೊಬ್ಬರ
ಬೇಲಿಯಿಲ್ಲದ ಬೇಳೆಯ ಮೇಯೈದಾವೊ ದನ
ಹಣ್ಣು ನೀಡಿದ ಮರಕ್ಕೆ ಸಾರ್ಥಕ
ಹಾಲು ನೀಡಿದ ತಾಯಿಗೆ ತೃಪ್ತಿ
==========================
17. ಪರಿಸ್ಥಿತಿ
ಓದದ ವ್ಯವಸ್ಥೆಯಾಗಿದೆ ಮನ
ಪುಟ್ಟ ಹರಿದು ಹಿಂದು-ಮುಂದು
ಅಕ್ಷರವೆಲ್ಲಾ ಛಿದ್ರ
ಮುನ್ನುಡಿಯಲ್ಲೇನೊ ಕಂಡಿತು
ಅರ್ಪಣೆಯಲ್ಲೇನೊ ಕಂಡಿತು
ವಿಚಿತ್ರ ಕುತುಹಲ
ತಳೆಯಿಟ್ಟು, ಜೋಡಿಸಿ ಸಾಲಗಿಸಿದರೆ
ಗೊಂದಲ, ಗೊಜು, ಗಲೀಜು!!
===========================
18. ನೀನು ನೀನಲ್ಲ
ನೆಲದ ಅನುಭವಿಲ್ಲ, ಮನದ ಅರಿವಿಲ್ಲ
ಉತ್ತಲಿಲ್ಲ, ಬಿತ್ತಲಿಲ್ಲ
ಫಲವಿಲ್ಲ ಎಂಬ ತಿರಸ್ಕಾರವೇಕೆ
ಪ್ರಕೃತಿ ರಹಸ್ಯ ತಿಳಿ
ಮಾತಿಲ್ಲ ಎಂದರೆ ಮೌನವಲ್ಲ!!!
===========================
19. ಅಂಕು-ಡೊಂಕು
ಇದು ವಿಮುಖ,
ಇದಕೋ ಲವಲವಿಕೆಯಿಲ್ಲ
ಇದಕ್ಕೆ ಸ್ಥಿತಿಯಿಲ್ಲ
ಹಾ.ಹಾ.ಹಾ ಇದ್ದಕ್ಕೆ ಬದುಕೆಯಿಲ್ಲ
ನಿನ್ನದು ಮಂಕು ಮಿದುಳು
ಕಲೆ ಅರ್ಥವಾದರೆ
ಕಲಾಕೃತಿ ಮಹತ್ವ ತಿಳಿದೀತು
ಎಲ್ಲರು-ಎಲ್ಲವೂ ನೇರವಲ್ಲ ನಿನ್ನ ಮೂಗಿಗೆ
===========================
20. ತಟಸ್ಥ
ಬಸಿರಲ್ಲಿ ಬ್ರಹ್ಮಾಂಡ
ಉಸಿರಲ್ಲಿ ಜೀವಾಳ
ಕೊಟ್ಟನಲ್ಲೊ ಹೃದಯ
ಉಸಿರುನಿಲ್ಲಿಸಿ, ಬಸಿರು ತಿರುಗಿಸಿ
ಆತ್ಮಹಾರಿ, ಅಲೆಯುವಾಗ
ಯಾರೋ ನಿಲ್ಲಿಸಿದರಂತೆ
ಕೊನೆಯಲ್ಲಿ `ತಟಸ್ಥ'
=============================
21. ಖಾಲಿ
ಸ್ನೇಹ ಸಲುಗೆ ನನಗೆ
ನನ್ನ ಕೆಣಕುವ ವಿರಹ ನಿನಗೆ
ನೀ ನನ್ನ ಮನದಲ್ಲಿರುವೆಯಾ?
ಏನೋ ಆತಂಕ
ಭಾರದ ಹೃದಯ ಖಾಲಿ ಎನಿಸಿದರೆ..
=============================
22. ನೀವೇದನೆ
ಒಂದು ಬಾರಿ ಅತ್ತು ಬಿಡಲೇನು
ನಿನ್ನ ಬಿಂಬ ಕಣ್ಣಾದಾಗ
ಹೇಳದೇನೆ ಹೃದಯ ಸೇರಲೇನು
ಕಣ್ಣ ಹನಿಯೊಂದು
ದಾರಿ ಮರೆಸುವ ಮುನ್ನ
=============================
23. ಕರೆ
ಮನಸ್ಸಿನ ಮಾತುಗಳು ಪಿಸುಗುಟ್ಟಿ
ಕನಸೊಂದು ಮರೆಯದ ಹಾಡಾಗಿ
ಸಂಭ್ರಮದ ಪ್ರೀತಿ ಕರೆಯುತಿದೆ
=============================
23. ಬೇಕು ಕಾರಣ
ಬರುವಾಗ ಕಾರಣ ಹೇಳಲಿಲ್ಲ
ಹೋಗುವಾಗ ಕಾರಣ ಕೇಳಲಿಲ್ಲ
ತುಂಬಾ ಕಾಡುತಿಹುದು ಕಾರಣಗಳು
ಉತ್ತರವಿಲ್ಲದೆ
ಸಂಬಂಧಗಳೆ ಹೀಗೆನೋ..
=============================
24. ನಾಚಿಕೆ
ಸಂಜೆ ಬಿಸಿಲ ತಾಪ
ಮೈ ಏರಿದೆ
ಎರಡು ಕೈ ಸಾಲದು
ಮುಖ ಮರೆ ಮಾಚಲು
ನಿನ್ನೆದೆಗೊರಗಿ ಮುಚ್ಚಿಡಲೇ..
=============================
25. ಸಂಬಂಧ
ನಿನ್ನೊಂದಿಗಿದ್ದರೆ `ಸಂಬಂಧ'
ಅಕ್ರಮವೊ-ಸಕ್ರಮವೊ
ಜೀವ ಸಂಬಂಧಕ್ಕೆ ಹೆಸರಿದೆಯೇ
ಪ್ರಾಣ ಸಂಬಂಧಕ್ಕೆ ಹೆಸರಿದೆಯೇ
ದೇಹ ಸಂಬಂಧಕ್ಕೆ ಯಾಕೆ ಹೆಸರು!
=============================
ಹನಿ ಹನಿ ಚುಟುಕುಗಳು…..ಚೆನ್ನಾಗಿವೆ….
Sambhanda..tumba ista aytu…
ತುಂಬಾ ಚೆನ್ನಾಗಿದೆ. ಹೊಸ ಪದಗಳು, ಹೊಸ ಹೊಳಹುಗಳು, ಹೊಸ ಹೊಯ್ದಾಟಗಳು………ತುಂಬಾ ಚೆನ್ನಾಗಿ ಮೂಡಿಬಂದಿವೆ.
Nice chutukagalu
ಎಲ್ಲ ಕವನಗಳು ಇಷ್ಟ ಆದವು . ಎಲ್ಲವೂ ವಿಭಿನ್ನ -ವಿಶಿಸ್ತ ವಸ್ತುಗಳ-ವಿಷಯಗಳ ಪ್ರಯೋಗಗಳು
ಅಸ್ಟೆಲ್ಲ ಬರಹಗಳನ್ನು ಒಟ್ಟಿಗೆ ಹಾಕದೆ ೫-೬ ಹಾಕಿದರೆ ಚೆನ್ನಿತ್ತು ಅನಿಸಿತು .
ಶುಭವಾಗಲಿ
\।/
ಚೆನ್ನಾಗಿವೆ…ಉಪವಾಸ ನೆನಪಲ್ಲುಳಿಯುತ್ತದೆ
ಪ್ರತೀ ಹನಿಯೊಳಗಿನ ಗಾಢ ಮೌನ ಇಷ್ಟವಾಗುತ್ತದೆ
nice
ತುಂಬಾ ಚೆನ್ನಾಗಿವೆ…