ಚುಟುಕ

ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು

1) ರಾಮ-ಶಾಮ

ಕೃಷ್ಣನನ್ನೇ ಪೂಜಿಸೋ 

ಎನ್ನ ಮಡದಿಗೆ 

ನಾನೆಂದೂ

"ರಾಮ"

ಕೈತಪ್ಪಿ ಹೋದ 

ನನ್ನ ನನ್ನೊಲವ ರಾಧೆ 

ಹೇಳುತಿದ್ದಳು 

ನಿನ್ನೊಳಗಿಹನೊಬ್ಬ 

"ತುಂಟ ಶಾಮ"

……………………

2) ಹಾಫ್ ಶರ್ಟ್

 

ಹಾಫ್ ಶರ್ಟ್

ಮೇಲೆ ರಾರಜಿಸುತಿದ್ದ

ಹಾರ್ಟ್ ಕಂಡು

ಮೌನವಾಗಿ

ಕೇಳಿದಳು 

ಅರ್ಧಾಂಗಿ 

ಯಾರು ಕೊಟ್ಟ 

ಗಿಪ್ಟು ಈ ಅಂಗಿ?

…………………

3) ಬಯಕೆ

 

ಸಿಕ್ಕರೆ

ರಾಮನಂಥ ಗಂಡ

ಸಿಗಬೇಕೆಂದು

ದೇವರಲ್ಲಿ 

ಕೋರುವ ಬಯಕೆ..!

 

ಮೆಲ್ಲೆಗೆ 

ಪಿಸುಗುಟ್ಟಿತು

ಮನ

ಮಾಡ್ಯನು ಶಂಕೆ

ಕಾಡಿಗೆ ಅಟ್ಯಾನು 

ಜೋಕೆ…!!!

………………….

 

4) ಒಲುಮೆ….

 

ನಿನ್ನ ಮರೆತೆನೆಂಬ

ಭಾವ ಮರೆಯಾಗುವ 

ಮುನ್ನವೇ-

ಮರುಕಳಿಸಿ

ಮೂಡಿದ ನೆನಪುಗಳೇ

ನನ್ನೆಲ್ಲಾ ಕವಿತೆಯ 

ಸೆಳೆತದ ಸಾಲುಗಳ 

ಸ್ಫೂರ್ತಿ ಚಿಲುಮೆ 

ಕೈಜಾರಿದ ನಿನ್ನೊಲುಮೆ…!

…………………….

 

5) ಓಲೆಗರಿ…….


ಓದಿ ಬರೆದದ್ದಲ್ಲ 

ಸುಮ್ಮನೆ ನುಡಿದದ್ದಲ್ಲ

ಮನದಾಳದಲ್ಲಿ ಹುದುಗಿದ್ದ 

ಭಾವಗಳ ಭರಸೆಳೆದು

ಪದಪುಂಜ ಪೋಣಿಸಿ

ಅಲಂಕರಿಸಿದ ಓಲೆಗರಿ 

ಯಾವ ವಿಳಾಸಕ್ಕೆ ಕಳುಹಿಸಲಿ ?

ನೀನೊಬ್ಬ ಅಲೆಮಾರಿ

…………………

 

6) ಬದಲಾವಣೆ….

 

ಭಾವನೆಗಳು

ಆದಾಗ ಭಾರ 

ಮನಸ್ಸು ಅದರ

ಬೆಲೆ ಅರಿವುದು

ಹೀಗಾದಾಗಲಾದರೂ

ಬದಲಾದೀತೆ 

ಭಾವ..?

ಹಗುರಾದೀತೆ..?

ಮನಸ್ಸು…???

……………………

 7) ಕಾಣೆ…

 

ಮಿಡಿವ ಹೃದಯದ 

ತುಡಿತ ಯಾರೋ ಕಾಣೆ

ಬಿಸಿ ಉಸಿರಿನಲ್ಲಿ 

ಬೆರೆತ ಹೆಸರು ಮಾತ್ರ

ತುಂಬಿ ಹರಿಸುತಿಹುದು

ನರನಾಡಿಗಳಿಗೂ ನೆತ್ತರು..!

…………………..

8) ಮೌನ…

 

ಪದಗಳ ಹಿಂದೆ 

ಮನದ ನೋವಿದೆ 

ಪುಟಗಳ ಮೇಲೆ 

ಮೌನದಿ ಹಾಸಿದೆ..!

………………….

9) ?…

 

ಒಮ್ಮೆ 

ತೋಳ ತಾಕಿದ 

ನಿನ್ನ ತುಟಿಗಳ 

ಆದರದ ಜೇನ

ಬಾಗಿ ಸವಿಯುವ 

ಮುನ್ನ ಬರಲಾರದಷ್ಟು

ದೂರ ಸರಿದೆಏಕೆ ನೀ..?

………………….

 

10) ಕಲ್ಲು ಬಸವ…


ಬಸವ

ಹೆಂಗಳೆಯರ 

ಪ್ರಿಯಕರನು ಅಲ್ಲ 

ಹೆಂಡತಿಯ 

ಕಾಡಿಗಟ್ಟುವವನು ಅಲ್ಲ 

ಎಲ್ಲವನ್ನು ಕೇಳಿದಂತೆ 

ನಟಿಸುವ ನನ್ನವ ಕಲ್ಲು ಬಸವ …!

…………………………….

 

11) some ಭಾವನೆ 

 

some ಭಾವನೆ ಕೊಟ್ಟು 

some ಭಾ(ಬಾ)ಳಿಸಬೇಕೆನಿಸಿದೆ 

ನೀನಾಗುವ ಮುನ್ನ ನನ್ನೆದೆಯ 

ಖಾಲಿಪುಟದ ಕವನ…!

………………….

 

12) ಪಿಸುಮಾತ ಪಯಣಿಗ:-)

 

ನೆನ್ನೆ ಕನಸಲ್ಲಿ 

ನೀ ಇತ್ತ ಮುತ್ತು 

ನಾಳೆಗಳ ನನಸ 

ಚಿಗುರಿಗೆ ಹನಿ 

ಹಾಯಿಸುತಿತ್ತು

ಎಚ್ಚರವಾಗಿಬಿಟ್ಟೆ..!

………………………..

 

13) ಬಂಗಾರ-ಭಾರ

 

ಪ್ರಿಯ,

ಎಂದು ತೊಡಿಸುವೆ 

ಒಲವಿನ ಕಾಣಿಕೆಯ ಸ್ವರ್ಣದ ಉಂಗುರ ?

ಪ್ರಿಯೆ,

ನಿನ್ನ ಮುದ್ದಾದ ಬೆರಳಿಗೆ ಉಂಗುರ 

ತೊಡಿಸಲು ನನಗಿದೆ ಆತುರ 

ಆದರೆ…

ಏನು ಮಾಡಲಿ..?

ಬಂಗಾರವಾಗಿದೆ ಬಲುಭಾರ.

……………………….

 

14) ಸರಿ-ಬರಿ


ರಹಸ್ಯಗಳು ಇದ್ದಷ್ಟು

ದಿನ ಬದುಕು

ಸ್ವಾರಸ್ಯ್ವವೇ ಸರಿ..!

 

ಅವು ರಟ್ಟಾದ

ಮೇಲೆ ಬದುಕಲ್ಲಿ

ಅಪಹಾಸ್ಯವೇ ಬರಿ..!

……………………

 

15)ಸ್ವಗತ…

 

ಗೆಳೆಯ 

ಬಚ್ಚಿಟ್ಟ ನವಿಲು ಗರಿ

ಎರಡು ದಶಕ ಕಳೆದರು

ಹಾಕಲೇ ಇಲ್ಲ ಮರಿ..!

 

ಬಾ ನೋಡು ಗೆಳತಿ –

ಬೇಯುತಿದೆ ವಿರಹದ

ಬೇಗೆಯಲಿ ಕಾದು ಕುಳಿತ

ನನ್ನೊಲವ ಮರಿ..!

…………………….

 

16)ಹಾಸಿಗೆ

 

ನಾ ಮುಸ್ಸಂಜೆ

ಮರಣಗೊಂಡರೆ

ಕಾದು ಕುಳಿತುಕೊಳ್ಳದಿರು

ನನ್ನ ಶವದೆದುರು ರಾತ್ರಿ 

ನೀ- 

ತೂಕಡಿಸಿ ಬಿಟ್ಟರೆ ……..?

ನಾ 

ದಿಗ್ಗನೆ ಎದ್ದು ಬಿಟ್ಟೇನು 

ನಿನಗೆ ಹಾಸಿಗೆ ಬಿಡಲು…!

…………………..

 

17) ಜಡೆ…

 

ಮಾರುದ್ದ ಜಡೆ ಇದ್ದರೆ 

ಅದು ಸಂಪ್ರದಾಯ ..!

 

ಮೂಟುದ್ದ ಜಡೆ ಇದ್ದರೆ

ಅದು ಮೊಡ್ರೆನ್ಮಯ..!

………………

 

18) ಟಿಪ್ಸ್…

 

ಬೆಳ್ಳಗೆ ಕಾಣಲು

ಮಾಡಬೇಕಾದ

ಸರಳ ವಿದಾನ

ಆಫ್ರಿಕಾನ್ಸ್ ಪಕ್ಕದಲ್ಲಿ

ನಿಂತರೆ ಸಾಕು..!

………………….

 

19) ಬೇಕು-ಗಳು..!

 

ಮಳೆಗೆ ಬೇಕು ಗಿಡಮರ

ಇಳೆಗೆ ಬೇಕು ಪರಿಸರ

ಹಗಲಿಗೆ ಬೇಕು ನೇಸರ

ಇರುಳಿಗೆ ಬೇಕು ಚಂದಿರ

ಬದುಕಲು ಬೇಕು ಪ್ರೀತಿ ..!

…………………..

 

20) ಸೋಮಾರಿ…


ಪರೀಕ್ಷೆಯಲ್ಲಿ

ಬರೋ ಪ್ರಶ್ನೆಗಳಿಗೆ

ಉತ್ತರ ಹೊಳೆಯದಿದ್ದಾಗ

ಪ್ರಶ್ನೆಗಳೇ ನನ್ನ ಉತ್ತರ..!

…………………

21)ತಿಳಿದಿಕೋ..

 

ನೀ ಅಳಿಸಿದ್ದು

ನನ್ನಲಿ ಬೆರೆತಿದ್ದ

ನಿನ್ನ ಹೆಸರನಲ್ಲ

ನನ್ನಲಿ ಅಡಗಿದ್ದ 

ನನ್ನೊಲವ ಮರದ 

ಹಸಿರು-ಉಸಿರು..!

…………………..

 

22) ಗೆಳೆಯ…


ಈ ಮಾಗಿಯ ಚಳಿಯಲ್ಲಿ

ನಿನ್ನ ತಂಪಾದ ನೆನಪಿನ ಜ್ವಾಲಾಮುಖಿ 

ಸಡುತಿದೆ ನನ್ನೆದೆಯ

ಗೆಳತಿ…

ಅದು ಜ್ವಾಲಾಮುಖಿ ಅಲ್ಲ

ನನ್ನೆದೆಯ ಹಣತೆ

ನನ್ನಿಂದ ದೂರ ಸರಿಯದಿರು..!

ನೀ ಬೆವೆತು..!

………………………..

 

23)ಮೌನಿ…! 

 

ಮತ್ತೆ ಹಿಡಿದ ಲೇಖನಿ 

ವರೆಸುವುದೇ 

ಮೌನಿ ಹೃದಯದ 

ಕಂಬನಿ ..?

 

ಬರಿದಾದ ಮನದ 

ಹಾಳೆಯಲ್ಲಿ ಹಾಸುವುದೇ 

ತಂಪಾದ ಭಾವನೆಗಳ ಇಬ್ಬನಿ..?

…………………..

 

24) ಪ್ರೀತಿ..


ಭಕ್ತಿಯಿಂದ ಪೂಜಿಸಿದರೆ

ಕಲ್ಲು ದೇವರುಕೂಡ

ಕರುಣಿಸುವನಲ್ಲ

ನಿಷ್ಠೆ ಇಂದ ಪ್ರೀತಿಸಿದರೂ

ಕರುಳಿರುವ ನೀನು 

ಏಕೆ ತೊರೆದುಹೊದೆ ನಲ್ಲ..?

…………………….

 

25) ಸ್ವಾಗತ-ಗೊಂದಲ…

 

ವೇದಿಕೆಮೇಲೆ ನಿಂತು 

ಅತಿಥಿಗಳನ್ನು ಸ್ವಾಗತ

ಮಾಡಲು ಮುಂದಾದೆ…

ಸಂಭೋದನೆ ಮಾಡಲು 

ಗೊಂದಲ ಏಕೆಂದರೆ ..?

ಅಲ್ಲಿದ್ದ ಶ್ರೀಮತಿ ಕುಮಾರಿ 

ಕುಮಾರಿ ಶ್ರೀಮತಿ ಆಗಿದ್ದರು…!

………..

 

26) ಸರಕಾರ…

 

ಚುನಾವಣೆಯಲ್ಲಿ

ಬಹುಮತ ಗಳಿಸಿದರೆ

ಸ್ವತಂತ್ರ ಸರ್ಕಾರ..!

 

ಇಲ್ಲದಿದ್ದರೆ ನಮ್ಮದು

ಸಮ್ಮಿಶ್ರ ಸರಕಾರ..!

 

……………

 

27)ದೂರ-ತೀರ…..

 

ಅಲೆಗಳು 

ಉರುಳಿದಷ್ಟು

ದೂರ-

ಕಡಲಿನದೆ ತೀರ

 

ನೀ ಹೋದಷ್ಟು

ದೂರ

ನೆನಪುಗಳೇ ನನ್ನ

ಮರೆಯಬೇಕು..!

…..

 

28) ಗೆಳೆಯ….!

 

ನಿನ್ನೆಲ್ಲಾ

ಮಾತುಗಳನ್ನು

ಮರೆತು

ಮರವಾಗಬೇಕು

ನಾನು

ಮತ್ತೆ

ಚಿಗುರೊಡೆಯದ

ಹಾಗೆ….!

………………….

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು

  1. ಹನಿ—ಹನಿಯಾಗಿ ಜಿನುಗುವ…ಕವಿತೆಗಳು

  2. 20) ಸೋಮಾರಿ…


    ಪರೀಕ್ಷೆಯಲ್ಲಿ
    ಬರೋ ಪ್ರಶ್ನೆಗಳಿಗೆ
    ಉತ್ತರ ಹೊಳೆಯದಿದ್ದಾಗ
    ಪ್ರಶ್ನೆಗಳೇ ನನ್ನ ಉತ್ತರ..!
    my most of students technique..
    nice honi-kavanas

  3. ಅನುಪಮಾ ಅವರೆ ನೀವು ಬರೆದ ಚುಟುಕುಗಳು ಬಹಳ ಚೆನ್ನಾಗಿವೆ.ಅದರಲ್ಲೂ ಒಲುಮೆ , ರಾಮ-ಶಾಮ , ಬಯಕೆ , ಬದಲಾವಣೆ ಹಾಗೂ ಮೌನಿ ತುಂಬಾ ಹಿಡಿಸಿತು. ನಿಮ್ಮ ಬರವಣಿಗೆ ಚೆನ್ನಾಗಿದೆ. ಹೀಗೇ ಮುಂದುವರಿಯಲಿ .

Leave a Reply

Your email address will not be published. Required fields are marked *