ಪಂಜು ಕಾವ್ಯಧಾರೆ

ದಯಾಮಯಿ ಎಂದು ಬರೆಯಲೆ, 
ಸುಂದರಿ ಎಂದು ಬರೆಯಲೆ,
ಪ್ರಿಯತಮೆ ಎಂದು ಬರೆಯಲೆ,
ನಾನು ಕಂಗೆಟ್ಟಿ ಬಿಟ್ಟಿದ್ದೇನೆ 
ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು
ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು;
ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ;

ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ , 
ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ;
ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ, 
ಆದರೆ ಇದರಲ್ಲಿ ಕಪ್ಪು ಛಾಯೆ ಇದೆ;
ಸಾಕು ನಾನು ನಿನ್ನನ್ನು ಇಷ್ಟೊಂದು ಪ್ರೀತಿಸುತ್ತಿದ್ದೇನೆ,
ಇಷ್ಟೊಂದು ಹಚ್ಚಿಕೊಂಡಿದ್ದೇನೆಂದು ಹೇಳುತ್ತೇನ್ನೆ.
ನಾನು ನಿನ್ನನ್ನು ಗಂಗೆ ಎಂದು ತಿಳಿದಿದ್ದೇನೆ, 
ನಾನು  ನಿನ್ನನ್ನು  ಜಮುನಾ ಎಂದು ತಿಳಿದಿದ್ದೇನೆ;
ನೀನು ನನ್ನ ಹೃದಯಕ್ಕೆ ಎಷ್ಟು ಹತ್ತಿರ ವಾಗಿದ್ದಿಯಾ ಎಂದು 
ನಿನ್ನನ್ನು ನನ್ನವಳು ಎಂದು ತಿಳಿಯುತ್ತೇನೆ;
ನಾನು ಮರಣಹೊಂದಿದರು ನನ್ನ ಆತ್ಮವು ನಿನಗೋಸ್ಕರ ಕಾಯುತ್ತಿರುತ್ತದೆ;
ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು;
ನೀನೆ ನನ್ನ ಜೀವನ, ನೀನೆ ನನ್ನ ಉಸಿರು,ನೀನೆ ನನ್ನ ಆರಾಧನೆ;
-ನ್ಯಾಮತ್

ಹಿಂದಿ ಚಿತ್ರಗೀತೆಯೊಂದರ ಅನುವಾದ


ಸೋತಿರುವೆ 

ಬತ್ತಿದೊಡಲ ಭಾವದೊಳಗೆ 
ಪ್ರೀತಿಯೊಂದು ಚಿಗುರಿದೆ 
ಬಿತ್ತಿಬೆಳೆದ ಬದುಕಿನೊಳಗೆ 
ನಿನ್ನ ಹೆಸರು ಸ್ಮರಿಸಿದೆ !!ಪ!!

ಕಾಡಿ-ಬೇಡಿ ಪ್ರೀತಿ ಮಾಡಿ 
ದೂರ ಏಕೆ ತಳ್ಳುವೆ ?
ಮಮತೆಯೊಳಗೆ ಕೈಯ ಹಿಡಿಯೆ
ಕರುಣೆ ತೋರಬಾರದೆ ?!!೧!!

ಭಾವದೊಳಗಿನ ಜೀವ ತೆಗೆದು 
ದೇಹ ಒಂದೇ ಉಳಿದಿದೆ 
ತಿರುಗಿ ನೋಡೆ ಕರುಣೆ ತೋರಿ
ಮರಳಿ ಸೇರಬಾರದೆ!!೨!!

ದೇಹವೆರಡು ಪ್ರಾಣ ಒಂದೇ 
ಎಂದು ನುಡಿಯ ಬಾರದೆ 
ಪ್ರಾಣ ಪಕ್ಷಿ ಹಾರೊ ಮುನ್ನ 
ಎರಡಕ್ಷರ ನುಡಿಯಬಾರದೆ !!೩!!

ನೀ ನನ್ನ ವ ನೀ ನನ್ನ ವ
ಎಂದು ಕೂಗ ಬಾರದೆ !!ಚ!!
-ಮಹಿಬೂಬ ಜಮಾದಾರ 

mehboob-jamadar

 

 

 

 

 



ವಿಶ್ವ ವಿಸ್ಮಯದ ವಿನ್ಯಾಸಗಾರ
    
ಓ ವಿನ್ಯಾಸಗಾರನೇ
ಚಿಟ್ಟೆ ರೆಕ್ಕೆಗೆ
ಬಣ್ಣದ ಬೊಟ್ಟನಿಟ್ಟು
ಹೂತೋಟದಿ
ಎಲ್ಲಿ ಅವಿತಿರುವೆ?

ವಿಸ್ಮಯದ ಹಕ್ಕಿಗಳಿಗೆ
ಕಮನೀಯತೆ  ತುಂಬಿ
ಸುಶ್ರಾವ್ಯ ಕಂಠವಕೊಟ್ಟು
ನೀರಧಾರೆಗೆ ನಲಿವ
ನಿನಾದತೆಯ ನಿಟ್ಟು
ನೀಲಿ ಸಮುದ್ರದಲ್ಲಿ
ಎಲ್ಲಿ ಮಾಯವಾದೆ?

ಓ ವಿಸ್ಮಯದ ವಿನ್ಯಾಸಗಾರನೇ

ಶರಧಿಯಾಳದಿ ಅಮರತ್ವ ತೊಟ್ಟು
ಕತ್ತಲ ನೆರಳ ತಳೆದು
ಜೀವ ಮಳೆಕಾಡಿನೊಳಗೆ
ಹಸಿರು ಬೆಳಕ ಸೂಸಿ
ತಂಗಾಳಿಯಾಗಿ ಬೀಸಿ
ನೀಲಿ ಮುಸುಕಿನೊಳಗೆ
ಎಲ್ಲಿ ಮರೆಯಾದೆ?

ಮುಸ್ಸಂಜೆಯ ರಂಗ ಬಳಿದು
ಬೆಳ್ಳಿಸೆರಗ ಸೋನೆ ತೊಡಿಸಿ
ಜೋನ್ನೆದಿಂಗಳಿಗೆ ತಂಪನೆರೆದು
ಮಹಾಮಿನಪಿನಲಿ
ಮಿರಿಯುವ ನೀ ಎಲ್ಲಿ ಅಡಗಿರುವೆ?

ವಿಶ್ವ ಶಕ್ತಿ ಉತ್ಪನ್ನದೊಳಗೆ
ಚದುರಿ ಹೋದೆಯಾ?

ನೀಹಾರಿಕೆಯ ಒಡಲಲ್ಲೂ
ನನಗೆ ತಿಳಿಯಿತು
ವಿಶ್ವ ವಿಜ್ಞಾನದಿ
ಗೌಪ್ಯ ಮರುಜೇವಣಿ
ನೀ ಕ್ಷಣಿಕ
ಆದರೂ ಎಲ್ಲದರಲ್ಲೂ ಅಮರ
ನಂದಿನಿ ಚುಕ್ಕೆಮನೆ

nandini-chukkemane

 

 

 

 


 

ನಾನು ನೀನು ಒಂದುಗೂಡಿ ಬರೆದ ಕವಿತೆಯ ಸಾಲ್ಗಳ, 
ತಿರುಗಿ ತಿರುಗಿ ಓದುತಿರುವೆ ನೆನೆದು ಒಂಟಿಯ ಕ್ಷಣಗಳ. 

ಯಾರು ಏತಕೆ ಬಂದುಬಿಡುವರೊ ಬಾಳ ಪಯಣದ ಜೊತೆಯಲಿ, 
ಕಾರ್ಯಕಾರಣ ಕೊಡುವರಿಲ್ಲ ಅಗಲುವಿಕೆಯಾ ಕ್ಷಣದಲಿ. 

ನಾನು ಕರೆದೆನೊ ನೀನೆ ಬಂದೆಯೊ ತಿಳಿದು ಏನಾಗಬೇಕಿದೆ, 
ಬಿಟ್ಟುಹೋಗುವ ಮುನ್ನ ನುಡಿದಾ ತತೀಕ್ಷ್ಣಮಾತಿನ ನೆನಪಿದೆ. 

ನಿನ್ನ ಹೆಸರೇ ಕಾವ್ಯನಾಮವು ನನ್ನ ಬಾಳಿನ ಕವನಕೆ, 
ಕಳೆದುಹೋದ ಪದವು ನೀನೆ ಮೊದಲಸಾಲಿನ ಶುರುವಿಗೆ. 

ಅಭಿಮಾನಬಿಟ್ಟು ಆಡಲಾರೆನು ಅತ್ತುಹೊರಳುವ ನಾಟಕ, 
ನಗುವ ಮನಕೆ ಕಕವಿದುಕೊಂಡಿದೆ ನಿನ್ನ ಅಗಲುವಿಕೆಯಾ ಸೂತಕ. 

ಮರೆವೆನೆಂದರು ಮರೆಯಲಾರೆನು ನೀನೆ ನಾನು ನನ್ನಲಿ, 
ಏನೆ ಆಗಲಿ ಏನೆ ಹೋಗಲಿ ಸ್ಪೂರ್ತಿ ನೀನೆ ಕೊನೆಯಲಿ…………….
-ಪವನ್ ಚೌಥಾಯ್


 

 " ಯಾವುದೀ ಹೂವು "

ಬಿದ್ದಿದ್ದೇ , ಛೇ…!
ಅಲ್ಲೇ ಬಿದ್ದಿದ್ದೇ ,
ಹೇಳುವವರಾರು.?
ಕೇಳುವವರಾರು ?

ಇಂದು ನಾಳೆ ,
ನಾಡಿದು ಕೂಡಾ,
ಹಾಗೇ ,
ಬಿದ್ದಿರಬಹುದು !
ಹೆಣದ ಹೂವು!

ಸೋತ ಸೇತುವೆಗಳ,
ಮೂಳೆ ನರಮಾಂಸದ,
ತೊಗಲು ತೊಗಲು 
ನೇತು ,
ಹಾಕ್ಬಿಟ್ಟಿದಾರೆ,
" ಅಯ್ಯೋಯ್ಯೋ ….!
ಸತ್ತ ದೇಹಗಳವು.

ಸುತ್ತುವರಿದ ಕಡಲು
ದೀಪ್ತಿ , ಬಿಚ್ಚಿ ನಿಂತಿದೆ ,
ಬಡವ ದಲಿತನ ಸಾವು ,
ಕೊಂದವವರಾರು ?
ಇಲ್ಲಿಗೆ,
ತಂದವವರಾರು ?

ಪಾಪಿಯೇ ಇವನು ?
ಶೂದ್ರರೆಂದರೆ ರುದ್ರ-
ರಾಗುವ ಪಂಡಿತರೇ ,
ಇವವರಾರು ….?
ಇಲ್ಲಿಗೆ ಯಾಕೆ 
ಬಂದರು ಗುರುವೇ ..?

-ಬೆನಾಕೀ ತುಮಕೂರು 
keerthy-p

 

 

 

 

 


ಗಜಲ್ 

ನಿದಿರೆಯಲಿ ಧುಮುಕುವ ಹೊಂಗನಸ ಧಾರೆ ನೀನೆಂದರೆ
ಅನುದಿನವು ಜೊತೆಯಿರುವ ಚಂದ್ರಮ ತಾರೆ ನೀನೆಂದರೆ 

ನನ್ನಲಿ ರಚಿತವಾಗುವ ಸುಮಧುರ ಸಾಹಿತ್ಯ ನೀನೆಂದರೆ
ಪ್ರತಿಚಣ ಉದಯಿಸುವ ಅನಾಸ್ತಮ ಆದಿತ್ಯ ನೀನೆಂದರೆ

ನಾ ತಲುಪಲು ಹವಣಿಸುವ ಜಂಗಮ ಹಾದಿ ನೀನೆಂದರೆ
ಅನುದಿನ ಪೂಜಿಸುವ ಬುದ್ಧನ ಮಹಾಭೋದಿ ನೀನೆಂದರೆ

ನಿನ್ಹೆಸರ ಜಪಿಸುವ ನನ್ನುಸಿರ ಅಗಣಿತ ಮೊತ್ತ ನೀನೆಂದರೆ 
ನಿನ್ನ ನೆನಪುಗಳೆ ನನ್ನಲಿ ನಿರ್ಮಿಸುವ ಒಲವಹುತ್ತ ನೀನೆಂದರೆ 

ರವಿವರ್ಮ ಕಾಣದ ರೂಪಕ ನಾಚುವ ಕುಂಚ ನೀನೆಂದರೆ
ಆನಂದದಿ ಹೊತ್ತು ಜಗವ ಸುತ್ತುವ ತೂಗುಮಂಚ ನೀನೆಂದರೆ

ಬಿ.ಎಲ್.ಆನಂದ 

anand-arya

 

 

 

 

 


…….. ಹುಡುಕಾಟ …….. 
ಅಲೆದಲೆದು ಸೋತಿಹೆ ನಾ,
ನಿನ್ನ ಹುಡುಕದ ಗಲ್ಲಿಗಳಿಲ್ಲ ಜಗದಲಿ…. 
ಮರೀಚಿಕೆಯಂತೆ ಕಂಡೆ ಅಂದೊಮ್ಮೆ ನೀ  
ಕಂಡರೂ ಕಾಣದಂತಾದೆ ನಾ, ವಾಸ್ತವವಲ್ಲದ ಹಾದಿಯಲಿ… 
ತಂದೆ ತನ್ನ ಅಂಶವನ್ನೇ ಹಾಯುತ್ತಿರಲು, 
ಆಳುವ ಮಂದಿಯೇ ನಿಂತ ನೆಲಕ್ಕೆ ಕನ್ನ ಹಾಕಲು , 
ಹೊಟ್ಟೆ ತುಂಬಿಸುವ ಅನ್ನದಾತನ ನೇಣಿಗೇರಿಸಲು ,
ಅಮಾಯಕರ ಮನೆಗಳ ಹೊತ್ತಿಸಿ ಚೀರಾಟವ ಆಸ್ವಾದಿಸುತ್ತಿರಲು  ,
ಭೂಮಿತಾಯಿಯ ಎದೆ ಕೊರೆದು ನಂಜನ್ನು ತುಂಬುತ್ತಿರಲು ,
ಉಸಿರಾಡುವ ಗಾಳಿಯಲ್ಲೂ ವಿಷ ತುಂಬುತ್ತಿರಲು ,
ಸಿಗಲೇ ಬಾರದೆಂದು ಅಡಗಿ ಕುಳಿತಿದ್ದರೂ,
ನೀ ಸುರಿಸಿದ  ರಕ್ತ ಕಣ್ಣೀರು ಹರಿಸಿದ ಸಾಗರದಂತೆ …… 
ನಿನ್ನ ಆ ನೆತ್ತರಲ್ಲಿ ಮುಳುಗಿದ್ದರೂ ಮಂದಿ 
ಹೊಸ ದಂಧೆಯ ಸೃಷ್ಟಿಸುವರು ನಿನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತೆ…..

– ಶೀತಲ್ 

sheethal vansaraj

 

 

 


                                                                                  
(ಈ ಕವಿತೆಯಲ್ಲಿ ಮಾನವೀಯತೆಯ ಹುಡುಕಾಟ ನಡೆದಿದೆ… ಬಲಾತ್ಕಾರ, ರಾಜಕಾರಣ,ಭಯೋತ್ಪಾದನೆ,ಮಾಲಿನ್ಯ,ವ್ಯಭಿಚಾರ ನಡುವೆ ಎಲ್ಲೋ ಕಳೆದುಹೋದ ಮನುಷ್ಯತ್ವದ ಅಸ್ತಿತ್ವವನ್ನು ಹುಡುಕುವ ಆಶೆಯ)



ಪತಿ ಹೋದ ಮೇಲೆ

ಕೊರಳಲಿ ಎಷ್ಟಿದ್ದರೇನು…?
ತಾಳೆಯಾಗಲಾರವು ತಾಳಿಗೆ
ಚಿನ್ನದ ಸರಗಳು
ಬೇಸತ್ತಿದೆ ಜೀವ
ಬದುಕುಳಿಯಲು

ಮೊಳ ಮಲ್ಲಿಗೆ ಮುಡಿಯುವಂತಿಲ್ಲ
ಮಾರುದ್ದ ಮುಡಿ ಇದ್ದರು
ಸಿಂಧೂರ ಇಲ್ಲದ
ಹಣೆಯಲಿ ಬರಹವಿದೆ
ಬದುಕುಳಿಯಲು

ಫಲವೇನು ಪತಿ ಹೋದಮೇಲೆ
ಉಳಿದಿದ್ದೇಕೆ ನಾನಾದರು
ಕರುಳ ಕುಡಿಗಳಿಲ್ಲದೆ
ಈ ಬಾಳಿಗೆ ಅರ್ಥವೇನು..?
ಬದುಕುಳಿಯಲು
– ನಾಗಭೂಷಣ ಬಿ ಕೆ, ಚಂದ್ರಶೇಖರಪುರ

nagabhushana-b-k

                   
             

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x