ಲೇಖನ

ನೆನಪು: ವೇಣುಗೋಪಾಲ್ ಹೆಚ್.

ಹೊಸ ಬದುಕು, ಹೊಸ ಊರು, ಹೊಸ ಗೆಳೆಯರು, ಎಲ್ಲವೂ ಹೊಸದೇ ಆದರೆ ನೆನಪುಗಳು………????                  

ಹೀಗೆ ಮೊನ್ನೆ ಹುಟ್ಟಿದ ಊರಿಗೆ ಹೋಗಿದ್ದೆ ಆ ಜಾಗ, ಶಾಲೆ, ಮನೆ, ಗಿಡ-ಮರಗಳ ನೆನಪು ಹಾಗೆ ಕಣ್ಣಮುಂದೆ ಹಾಗೆ ಬಂದುಹೋದಂತಾಯಿತು….ಆ ಸೊಗಡಿನಲ್ಲಿ ಬೆಳೆದ ಎಲ್ಲರಿಗೂ ಆದ ಅನುಬವವೇ ಈ ನೆನಪು..

ಮೊದಲನೆಯದಾಗಿ ಆ ಮಲಗುವ ಅಟ್ಟ ಒಮ್ಮೆ ಕಣ್ಣು ಮುಚ್ಚಿದರೆ ಏಳುತಿದ್ದದ್ದು ಬೆಳೆಗ್ಗೆಯೆ ನಮ್ಮದು ಬೇರೆ ದೇಶದವರತರವಲ್ಲ ಅಪ್ಪ ಅಮ್ಮನ ಮಡಿಲಲ್ಲೇ ಮಲಗಿದವರು ಅಪ್ಪನ ಕೈಗಳೇ ದಿಂಬು ಅಮ್ಮನ ಅಪ್ಪುಗೆಯೇ ಟೆಡ್ಡಿ ಬಿಯರ್ ..ಅಮ್ಮ ಯಾವಗಲೂ ಏಳುವುದು ಬೇಗ ಹಾಗಾಗಿ ಅಪ್ಪ ಎದ್ದ ಕೂಡಲೇ ಜೊತೆಗೆ ಏಳುವುದು…ಎದ್ದು ಆಮೆಲೆ ಕುಡಿಯುವ ಕಾಫಿ ಆಹಾ….ಎಲ್ಲರ ಬಗ್ಗೆ ಗೊತ್ತಿಲ್ಲ ನಾನಂತು ಓದುತ್ತಿದ್ದದ್ದು ಬೆಂಕಿಯ ಒಲೆ ಮುಂದೆಯೆ.. 

ಎರಡನೆಯದಾಗಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಹೇಳುತ್ತಿದ್ದ ಕತೆಗಳು ಆಹಾ ರಾತ್ರಿ ಮಲಗುವಾಗ ಮತ್ತು ಸಂಜೆ ಹೊತ್ತಲ್ಲಿ ಒಲೆಯ ಮುಂದೆ ಹಪ್ಪಳ ಸುಟ್ಟಿಕೊಂಡು ಅಜ್ಜ-ಅಜ್ಜಿಯ ಜೊತೆಯಲ್ಲಿ ಕೂತು ಕತೆ ಕೇಳುತ್ತಾ ತಿನ್ನುವ ಮಜವೇ ಬೇರೆ….

ಆಗ ತುಂಬಾ ಮನೆಗಳಲ್ಲಿ ಟಿ.ವಿ ಇರುತ್ತಿರಲಿಲ್ಲಾ ಇದ್ದರೂ ಬರುತಿದ್ದದ್ದು ಡಿ.ಡಿ 1 ಇಲ್ಲ ಚಂದನ ಅದರಲ್ಲೂ ಆ ಶುಕ್ರವಾರ ಬರುತಿದ್ದ  ಹಿಂದಿ ಹಾಗು ಭಾನುವಾರ ಬರುತಿದ್ದ ಕನ್ನಡ ಚಲನಚಿತ್ರಗಳು  ಆಗಾಗ ಮಾತ್ರ ತರುತಿದ್ದ ವಿ.ಸಿ.ಡಿ ಗಳು ಮನೆತುಂಬಾ ಜನ…ಆಮೆಲೆ ಕೆಲವೊಂದು ಮನೆಯಲ್ಲಿ ಮಾತ್ರ ದೊಡ್ದ ಕೊಡೆ ಅದನ್ನು ತಿರುಗಿಸಿ ಹಾಕುತಿದ್ದ ಪಾಪ ಪಾಂಡು, ಸಿಲ್ಲಿ-ಲಲ್ಲಿ, ದಂಡಪಿಂಡಗಳು ದಾರವಾಹಿಗಳನ್ನು ಎಲ್ಲರೂ ಒಟ್ಟಿಗೆ ಕೂತು ನೋಡುತಿದ್ದ ಆ ಜಾಗ ಕಣ್ಣಮುಂದೆ ಹಾಗೆ ಇದೆ…. 

ಇನ್ನು ಶಾಲೆಯ ವಿಷಯಕ್ಕೆ ಬಂದರೆ ಯಾವುದೂ ಕೂಡ ಮರೆಯುವಂತದಲ್ಲ ಆ ಬೆಂಚುಗಳು, ಕೊನೆ ಬೆಂಚಿನಲ್ಲಿ ಇಡುತ್ತಿದ್ದ ಟಿ¥sóÀನ್ ಬಾಕ್ಸ್ ಗಳು, ಆ ಬೆಲ್ ಶಬ್ದಗಳು, ಆಟ-ಕಿತ್ತಾಟ, ಶನಿವಾರದ ಬಿಳಿ ಸಮವಸ್ತ್ರಗಳು, ಕಸ ಹೆಕ್ಕುವುದು, ಹುಟ್ಟಿದ ಹಬ್ಬಕ್ಕೆ ಕೊಡುತ್ತಿದ್ದ ಚಾಕ್ಲೇಟ್ ಗಳು, ಗುಡ್ ಮಾರ್ನಿಂಗ್ ಸರ್, ಮಿಸ್ ಎಂದು ಎಳೆಯುತ್ತಿದ್ದ ರಾಗಗಳು ಹೇಳುತ್ತ ಹೋದರೆ ದಿನವಿಡಿ ಹೇಳ ಬಹುದು ಬದುಕೇ ಹಾಗೆ ಎಲ್ಲಾ ನೆನಪುಗಳನ್ನು ಭೂಮಿಯಲ್ಲಿ ಬಿತ್ತಿ ನಾವು ಬೇಕೆಂದಾಗ ಮನಸಿನ ಮರೆಯಲ್ಲಿ ಮಳೆ ಸುರಿಸಿ ಬೆಳೆ ಕೊಡುತ್ತವೆ. 

ಈ ಜಗತ್ತಿನಲ್ಲಿ ಬದಲಾಗುವ ಪ್ರತಿಯೊಂದು ದಿನಗಳಿಗು ಅದರದೇ ಆದ ನೆನಪುಗಳು ಇದ್ದೆ ಇರುತ್ತದೆ ರುಚಿ ಸವಿದು ಬಿಸಾಕುವ ಮಾವಿನ ಹಣ್ಣಿನ ಗೊರಟು ಎಲ್ಲೊ ಬರುವ ಮಳೆಗೆ ಮತ್ತೆ ಚಿಗುರಿ ಫಲ ಕೊಡುವ ತರ ಹಳೆ ದಿನಗಳ ನೆನಪುಗಳು ಸಂದಭ ಗಳಿಗೆ ತಕ್ಕಂತೆ ನೆನಪಾಗುತ್ತವೆ.

ಆಗ ಆಡುತ್ತಿದ್ದ ಲಗೋರಿ, ಕುಂಟೊಬಿಲ್ಲೆ, ಕಣ್ಣಾಮುಚ್ಚಾಲೆ ಆಟಗಳು ಈಗ ಕಣ್ಣುಬಿಟ್ಟು ಹುಡುಕಿದರು ಕಾಣಸಿಗುತ್ತಿಲ್ಲ. ಆ ಹಂಡೆ ನೀರಿನ ಸ್ನಾನ, ಅಡುಗೆ ಆಟ, ಬ್ಯಾಂಕ್ ಆಟ, ಓದುತ್ತಿದ್ದ ಬಾಲಮಂಗಳ, ತುಂತುರು ಇವೆಲ್ಲಾ ನೆನಪಾದಗ ಮನದ ಒಳಗಡೆಯೆ ಒಂದು ತರಹದ ಆನಂದ ಸಿಗುತ್ತದೆ.

ಹೇಳುತ್ತ ಹೋದರೆ ನೆನಪುಗಳು ಮುಗಿಯುವುದೇ ಇಲ್ಲಾ, ಗಡಿಯಾರದ ಮುಳ್ಳು ಮತ್ತೆ-ಮತ್ತೆ ತಿರುಗಿ ಬರುವುದೇ ಹಳೆಯದನ್ನು ನೆನಪಿಸೋಕೆ ಎಲ್ಲರ ಜೀವನದಲ್ಲೂ ಸಿಹಿ ಹಾಗು ಕಹಿ ನೆನಪುಗಳು ಇದ್ದೇ ಇರುತ್ತದೆ ಆ ಕಹಿಯನ್ನು ಸಿಹಿಯಾಗಿಸಿಕೊಂಡು ನಮ್ಮ ಮೆದುಳು ಎಂಬ ಮನೆಯಲ್ಲಿ ಭದ್ರವಾಗಿಸಿಕೊಂಡು ಆಗಾಗ ಆ ಮನೆಗೆ ಹೋಗಿ ಹೋಳಿಗೆ ಊಟ ಸವಿಯುವ ಮಜವೇ ಬೇರೆ….

ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುವವೆ ಬದಲಾವಣೆಯೇ ಜಗದ ನಿಯಮ ನಾವು ತಿನ್ನುವ ವಸ್ತು, ಆಡುವ ಮಾತು, ಬೆಳೆಯುವ ಜಾಗ ಕೊನೆಗೆ ಉಸಿರಾಡುವ ಗಾಳಿ ಸಹ ಬದಲಾಗುತ್ತದೆ ಆದರೆ ಬದಲಾಗದೇ ಇರುವ ಕೆಲವೇ ಕೆಲವು ಅಂಶಗಳಲ್ಲಿ ನೆನಪು ಒಂದು………….

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

9 thoughts on “ನೆನಪು: ವೇಣುಗೋಪಾಲ್ ಹೆಚ್.

 1. Badalisalagada kshana adu nenapugalashte..
  Pratiyobbarigoo avara jeevanada inta sumadhura kshanagalu nenapugalagi uliyaballavadaroo..indina dinagalalli..intaha nenapugalannu srishtisikolluva vatavarana virala..
  E payanave haage…..namma jeevanada mareyalagada sihi nenapu aduve “balya”…

 2. Badalisalagada kshana adu nenapugalashte..
  Pratiyobbarigoo avara jeevanada inta sumadhura kshanagalu nenapugalagi uliyaballavadaroo..indina dinagalalli..intaha nenapugalannu srishtisikolluva vatavarana virala..
  E payanave haage…..namma jeevanada mareyarada sihi nenapu aduve “balya”…

 3. Badalisalagada kshana adu nenapugalashte..
  Pratiyobbarigoo avara jeevanada inta sumadhura kshanagalu nenapugalagi uliyaballavadaroo..indina dinagalalli..intaha nenapugalannu srishtisikolluva vatavarana virala..
  E payanave haage…..namma jeevanada mareyalagada sihi nenapu aduve “balya”…

Leave a Reply

Your email address will not be published. Required fields are marked *