“ಆದದ್ದು ಆಗೇತಿ ಹ್ವಾದುದ್ದು ಹೋಗೈತಿ, ಇನ್ನ ಏನಮಾಡಿದ್ರ ಹೊಡಮರಳಿ ಬರಾಕ, ಹೆಂಗ ಸಾದ್ಯ ಆದಿತವ್ವಾ..? ನಿನ್ನ ಹಣಿಬರ್ದಾಗ ಏನ್ ಬರದಿದ್ದೋ ಆ ಹಾಟ್ಯಾನ ದೇವ್ರಾ, ಅದನೇನಾರ ತಪ್ಪಸಾಕ ಬರತೈತೇನವ್ವಾ.. ಸಮಾಧಾನ ತಗೋ ತಂಗಿ, ನಿಂದರ ಏನ್ ದೊಡ್ಡ ವಯಸ್ಸಲ್ಲಾ ಈಗ ಬಲೆಬಾರ ಆದ್ರ ಇಪ್ಪತೈದ ಇರ್ಬೇಕ, ಇಷ್ಟ ಸಣ್ಣ ವಯ್ಯಸ್ದಾಗ ಗಂಡನ ಕಳಕೊಂಡ, ಮನಿಮೂಳಿಯಾಗಿ ಕುಂದ್ರೂದಂದ್ರ ನಿನ್ನ ಹಣಿಬರಾ ಎಷ್ಟಾರ ಸುಮಾರ ಇರ್ಬಾರ್ದ, ಸತ್ತಾರ ಜೋಡಿ ನಾಂವೂ ಸಾಯಾಕ ಹೆಂಗ ಸಾದ್ಯ ಆದೀತವ್ವಾ..? ನಾಂವ ನಮಗೋಸ್ಕರಾ ಇರ್ಬೇಕ, ಬದಕ್ಬೇಕ, ಈ ಬದ್ಮಾಸ್ ಬದುಕಿನ ಜೋಡಿ ಇರುಮಟಾ ಹಣಗಲಾ ಸೋಸ್ಬೇಕ, ಒಟ್ಟ ನಿನಗ ಒಂದ ‘ಲಾಸ್ಟ್’ ಮಾತ ಹೇಳುದಂದ್ರ.. ನಾಂವ ನಮಗಾಗಿನ ಬದುಕ್ಬೇಕ ಅಷ್ಟ” ಎಂದು ಜಂಬವ್ವ ತನಗ ತಿಳದಷ್ಟ ಮಾತಿನ ಇಚಾರ ಗಂಡನ ಕಳ್ಕೊಂಡ ವಿಧವಿಯಾಗಿ ಅಳಕೋತ ಕುಂತ ನೀಲವ್ವಗ ಹೇಳತಿದ್ಳು.
ಸಣ್ಣಾಕಿ ಇರುವಾಗಲೇ ಅವ್ವ ಅಪ್ಪನ ದೂರ ಮಾಡಿದ ಆ ದೇವ್ರ. ಈಗ ಗಂಡನ್ನೂ ದೂರ ಮಾಡಿದ, ದೇವ್ರಿಗ್ಯಾಕ ನನ್ನ ಮ್ಯಾಲ ಇಷ್ಟಕೊಂದ ಕೋಪ..? ನಾನೇನಂತಾ ತ್ಯಪ್ಪ ಮಾಡೀನಿ..? ನನ್ನ ಮುಂದಿನ ಜೀವನದ ಗತಿ ಮುಂದ ಹೆಂಗಪೋ.. ಮಾದೇವಾ..? ನನ್ನಂಗ ಈ ಭೂಮಿಮ್ಯಾಲ ಹಿಂಗತಿ ಎಷ್ಟಕೊಂದ ಹೆಂಗಸರ ಅದಾರೋ.. ಹೆಂಗ ಬದುಕ ಕಟಗೊಂದಾರೋ..? ನೀಲಿಯ ಎದೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ಅನಾಥಪ್ರಜ್ಞೆ ಅವಳ ಮನಸಿನ ಕೊಳದಲ್ಲಿ ಮದ್ದುಗುಂಡಿನಂತೆ ಸಿಡಿದು ವಿಛಿದ್ರಗೊಳಿಸಿದಂತಾಗಿತ್ತು.
ಆಸರೆ…
ನೀಲಿಯ ಗಂಡನ ಅಣ್ಣಂದಿರು ಇಬ್ಬರಿದ್ದರು. ಅವರಿಗೆ ಮದುವೆಯಾಗಿ, ಮಕ್ಕಳೂ ಇದ್ದರು. ತಮ್ಮ ಸತ್ತ ಮೇಲೆ ತಮ್ಮನ ಹೆಂಡತಿಯನ್ನು ಮನೆ ಮಗಳಂತೆ ನೋಡಿಕೊಂಡು ಹೋಗಲು ಒಂದು ಕಾರಣವೂ ಇತ್ತು. ತಮ್ಮನಿಗೆ ಸೇರಬೇಕಾದ ಆರು ಎಕರೆ ಭೂಮಿ, ಇನ್ನ ಮುಂದೆ ನೀಲಿಯ ಸೊತ್ತಾಗುತ್ತದೆ. ಅವಳನ್ನು ಪ್ರೀತಿಯಿಂದ ನೋಡಿಕೊಂಡರೆ, ಆ ಆಸ್ತಿಯನ್ನು ನಾವೇ ಉನ್ನಬಹುದು. ನೀಲಿ ಸತ್ತ ಮೇಲೆ ಆ ಆಸ್ತಿ, ನಮಗೇ ಆಗುತ್ತದೆ ಅನ್ನುವ ಕಾರಣದಿಂದ ನೀಲಿಗೆ ಅವರ ಭಾವಂದಿರರು ಅವಳಿಗೆ ಆಸರೆ ನೀಡಿ ಸಾಕುತ್ತಿದ್ದರು. ಯಾರೂ ಅವಳಿಗೆ ಕಿರಿಕಿರಿ ಮಾಡುತ್ತಿರಲಿಲ್ಲ. ನೀಲಿ ಆ ಮನೆಯಲ್ಲಿ ಮಕ್ಕಳಂತೆ ಉಂಡುತಿಂದು ಇರತೊಡಗಿದಳು.
ನೆನಪು…
ಮದುವೆಯಾದ ಹೊಸತರಲ್ಲಿ ಗಂಡ ತನ್ನ ತುಟಿಗಳಲ್ಲಿ ಅವನ ತುಟಿ ಊರಿ,ಜೇನು ಸವಿದಂತೆ ಸವೆಯುವ ನೆನಪು, ತುಂಬಿದ ಎದೆಯಲ್ಲಿ ದುಂಡು ದುಂಡಾಗಿ ಅರಳಿಕೊಂಡ ಮೊಲೆಗಳೊಂದಿಗೆ ಮುದ್ದಾಡುವ ಅವನ ತುಂಟ ತನದ ನೆನಪು, ಸಾಕು ಬೇಕು ಅನ್ನುವಷ್ಟು ದೇಹಸಾಗರದಲ್ಲಿ ಇಳಿದು ಈಜಾಡಿದ ನೆನಪು, ಹಾಸಿಗೆ ತುಂಬ ಒಮ್ಮೆ ಮೇಲೆ, ಒಮ್ಮೆ ಕೆಳಗೆ ಬಿದ್ದು ಉರಳಾಡಿ, ಹೊರಳಾಡಿ, ತನಗೆ ಸಾಕು ಸಾಕು ಅನ್ನುವಷ್ಟು ಸುಖದ ಸಂಭ್ರಮದಲ್ಲಿ ಅದ್ದಿ ಅದ್ದಿ ತಗೆಯುವ ಗಂಡನ ನೆನಪು, ನೀಲಿಯ ನೆನಪಿನ ಬುತ್ತಿಯಲ್ಲಿ ಹಳಸದೇ ಹಾಗೇ ಇತ್ತು. ಆ ನೆನಪನ್ನು ಕುಂತ-ನಿಂತಲ್ಲಿ ಆಗಾಗ ನೀಲಿ ಸವಿಯುತ್ತಲೇ ಇದ್ದಳು. ಸವಿದಷ್ಟು ಸವಿದಷ್ಟು ಆ ನೆನಪು ಸಕ್ಕರೆಯಾಗುತ್ತಿತ್ತು.ಒಂಟಿತನದ ಬೇಸರ….
ನೀಲಿಯ ಭಾವಂದಿರರು ತಮ್ಮ ತಮ್ಮ ಕೋಣೆ ಹೊಕ್ಕು, ಹೆಂಡತಿ ಮಕ್ಕಳೊಂದಿಗೆ ನಗುತ್ತ,ಆಡುತ್ತ ಇರುವುದನ್ನು ಕಣ್ಣಾರೆ ನೋಡುತ್ತಿದ್ದ ನೀಲಿಗೆ ಒಂಟಿತನದ ಬೇಸರ ಮೈ-ಮನ ತುಂಬ ಆವರಸಿಕೊಂಡು ನೆಮ್ಮದಿಯನ್ನು ನಿಗಿನಿಗಿಯಾಗಿ ಸುಡುತ್ತಿತ್ತು. ಇಡೀ ರಾತ್ರಿಯಲ್ಲ ಕಣ್ಣೀರು ಬಿಟ್ಟರೆ ಬೇರೆ ಗತಿನೇ ಇರಲಿಲ್ಲ. ಬೇರೆ ಗಂಡಸನ ಸಲಿಗೆ ಹಚ್ಚಿಕೊಳ್ಳಲು ಆಗುತ್ತಿರಲಿಲ್ಲ. ಭಾವಂದಿರರು ಭಾಳ ಬೆರಕಿ ಅನ್ನುವುದು ನೀಲಿಗೆ ಗೊತ್ತಿದ್ದ ಮಾತು. ಎಲ್ಲಿಯಾದರು ಓಡಿ ಹೋಗಬೇಕನ್ನುವ ಯೋಚನೆಗಳು ಮನದಲ್ಲಿ ಎಷ್ಟೋ ಸಲ ಮೂಡಿ, ಸದ್ದಿಲ್ಲದೇ ಕರಗಿ ಹೋಗುತ್ತಿದ್ದವು. ತನ್ನನ್ನು ಅರ್ಥಮಾಡಿಕೊಳ್ಳು ಗಂಡಸು ಸಿಗಬೇಕು, ಸಿಕ್ಕರೂ ಕದ್ದುಮುಚ್ಚಿ ನನ್ನ ತೃಪ್ತಿ ಪಡಿಸಬೇಕು, ಇದು ಎಂದೂ ಆಗದ ಮಾತು, ನನ್ನ ಸ್ಥಿತಿಯನ್ನು ಅರಿತುಕೊಳ್ಳುವವರು ಇಲ್ಲಿ ಯಾರಿದ್ದಾರೆ..? ಪ್ರಾಣಿಗಳೇ ಎಷ್ಟೋ ಶ್ರೇಷ್ಠ. ಯಾವ ಮುಚ್ಚು ಮರೆ ಇಲ್ಲದೇ, ಎಲ್ಲಂದರಲ್ಲಿ ತಮ್ಮ ಕಾಮನೆಯನ್ನು ಕರಗಿಸಿಕೊಳ್ಳುತ್ತವೆ. ಅವಕ್ಕೇ ಯಾವ ನಿರ್ಭಂದವೇ ಇಲ್ಲ. ಓ ದೇವರೇ ಈ ಒಂದು ಕಾರಣಕ್ಕಾಗಿಯಾದರೂ ನನ್ನನ್ನು ಪ್ರಾಣಿಯನ್ನಾಗಿ ಮಾಡಬಾರದಿತ್ತೇ..? ಹಾಸಿಗೆಯ ಮೇಲೆ ಅಂಗಾತ ಮಲಗಿ, ನೀಲಿ ತನ್ನ ಮನಸನ್ನು ಯಾಗದ ಕುದುರೆಯಂತೆ ಓಡಿಸುತ್ತ ಹರಿಬಿಟ್ಟಿದ್ದಳು.
ಊರ ಕಣ್ಣು..
ನೀಲಿ ಬಾಗಿ ಅಂಗಳ ಗೂಡಿಸುವಾಗ, ಪಾತ್ರೆ ಪಗಡೆ ತೊಳೆಯುವಾಗ ಅವಳ ಎದೆ ಮೇಲೆ ಅರಳಿದ ದುಂಡು ದುಂಡು ಮೊಲೆಗಳು ಇಣುಕಿ, ಕಣ್ಣು ಕುಕ್ಕುತ್ತಿದ್ದವು. ಅವಳ ಮೈಮಾಟದ ಕಾಟವನ್ನು ಸಹಿಸಿಕೊಳ್ಳಲಾಗದ ಹೋಗು ಬರುವ ಪಡ್ಡೆ ಹುಡುಗರ ಕನಸಲ್ಲಿ ನೀಲಿ ದಿನವಿಡಿ ಹಾಜರಾಗುತ್ತಿದ್ದಳು. ಅವಳ ರೂಪ, ವೈಯಾರ, ಉಕ್ಕಿ ಹರಿಯುವ ಅವಳ ಹರೆಯದ ಹೊಳೆಯಲ್ಲಿ ಈಜಾಡುವ ಪಡ್ಡೆ ಹುಡುಗರ ಚಡ್ಡಿಗಳು ದಿನವಿಡಿ ಕಾಣುವ ಸ್ವಪ್ನದಲ್ಲಿ ಒದ್ದೆಯಾಗುತ್ತಿದ್ದವು. “ಆದ್ರ ಹಿಂತಾಕಿನ ಹೆಂಡತಿಯಾಗ್ಬೇಕು, ಹೆಂಗಸಂದ್ರ ಹಿಂತಾ ಹೆಂಗಸ ಇರ್ಬೇಕು, ಹಿಂತಾ ಹೆಂಗಸಿನ ಜೋಡಿ ಒಂದ ದಿನ ಕಳದ್ರ ಸಾಕ ಸ್ವರ್ಗ ಸುಖಾನೇ ಸಿಕ್ಕಂಗ” ಎಂದು ಅಲ್ಲಲ್ಲಿ ಕುಳಿತು ಪಡ್ಡೆ ಹುಡುಗರು ನೀಲಿಯ ದ್ಯಾನ ಮಾಡುತ್ತಿದ್ದರು. “ನನ್ನ ಕೈಗೆ ಒಮ್ಮಿ ಸಿಕ್ಕರ ಸಾಕ ಗಿಂಡಿ ಕನಲ್ ಅನಸ್ತಿನಿ” ಹೀಗೊಬ್ಬನಂದ್ರೆ, ಮತ್ತೊಬ್ಬ “ಅಕಿನ ಸಾವುಮಟಾ ಹೂವಿನಂಗ ಸಾಕತೀನಿ” ಅಂತಿದ್ದ. ಇನ್ನೊಬ್ಬ “ಗಂಡ ಸತ್ತ ರಂಡಿಮುಂಡಿ ಅಕಿ, ಅಕಿ ಜೋಡಿ ಏನ್ ಮಾಡ್ಬೇಕ ಅದನಷ್ಟ ಮಾಡಿ ಕಡ್ಯಾಕ ಆಗ್ಬೇಕ” ಅಂತ ತಮಗ ಅನಿಸಿದ್ದನ್ನು ಊರ ಕಾಮುಕ ಹುಡುಗರು ಗುಜುಗುಜು ಮಾತಾಡಿ ಮಾತಾಡಿ ನೀಲಿಯ ದೇಹ ಸುಖವನ್ನು ಅನುಭವಿಸುವ ಭರದಲ್ಲಿ ಮನೆಮಾರ ಚಿಂತಿನ ಮರೆತಿದ್ದರು.
ನದಿ ಸ್ನಾನ….
ಊರ ಮುಂದ ಹರಿಯುವ ಘಟಪ್ರಭಾ ನದಿಗೆ ದಿನಾಲು ನೀಲಿ ಓಣಿಯ ನಾಕಾರು ಹೆಂಗಸರೊಂದಿಗೆ ಕೂಡಿಕೊಂಡು ಬಟ್ಟೆ ತೊಳೆಯಲು ಹೋಗುತ್ತಿದ್ದಳು. ನೀಲಿ ಮನೆ ಬಾಗಿಲ ದಾಟಿ, ನದಿಯತ್ತ ಮುಖಮಾಡುವುದೇ ತಡಾ, ಊರಿನ ಪಡ್ಡೆ ಹುಡುಗರ ದಂಡು, ನೀಲಿ ಹೋಗುವ ಮೊದಲೇ ನದಿಯಲ್ಲಿ ಹೋಗಿ ‘ಧುಡುಮ್’ ಅಂತ ಜಿಗಿದು ಈಜು ಹೊಡೆಯುತ್ತಿದ್ದರು.
ನೀಲಿ ನದಿಯಲ್ಲಿ ತನ್ನ ಸೀರಿ ಎತ್ತಿ ಕಚ್ಚೆಹಾಕಿಕೊಳ್ಳುವುದನ್ನು, ಅವಳು ಕಚ್ಚೆಕಟ್ಟಿಕೊಂಡಾಗ ಅವಳ ನುಣುಪಾದ ಬಾಳೆದಿಂಡಿನಂತ ತೊಡೆಗಳು ನೀರಿನ ಸ್ಪರ್ಶಕ್ಕೆ ಮತ್ತಷ್ಟು ಹೊಳುಪು ಉಕ್ಕುಸುತ್ತಿರುವುದನ್ನು ಹುಡುಗರೆಲ್ಲ ಕೆಕ್ಕರಿಸಿಕೊಂಡು ನೋಡಿ ರಾತ್ರಿ ಕನಸಿಗೆ ಬೇಕಾಗುವ ಎಲ್ಲ ಹದವನ್ನು ಅವಳ ದೇಹದ ಮೂಲೆ ಮೂಲೆಗಳಿಂದ ಹುಡಕಿ ಹುಡುಕಿ ಹದಗೊಳಿಸುವ ಹುಚ್ಚಿನಲ್ಲಿದ್ದರು.
ನೀಲಿಗೆ ಹುಡುಗರು ಅವಳೆದರು ಹುಚ್ಚೆದ್ದು ಕುಣಿಯುತ್ತಿರುವ ಅರಿವು ಇದ್ದರೂ ಏನೂ ಅರಿಯದಂತೆ ಅವಳ ಕಣ್ಣುಗಳು ಎತ್ತೆತ್ತೆಲೋ ದೃಷ್ಠಿಯನ್ನು ತೂರಿಬಿಡುತ್ತಿದ್ದವು.
ನಿಲುಕದ ನಕ್ಷತ್ರ….
ಇಷ್ಟೆಲ್ಲಾ ಸಾಹಸ ಮಾಡಿದರೂ, ನೀಲಿಯನ್ನು ದಕ್ಕಿಸಿಕೊಳ್ಳಲು ಊರಿನ ಯಾವ ಗಂಡ್ಸಿಗೂ ಧೈರ್ಯ ಆಗಲಿಲ್ಲ, ಹೆಣ್ಣು ಒಲಿದು ಬಂದರೇ ಏನೆಲ್ಲವನ್ನು ಕೊಟ್ಟಾಳು.. ಒಲೆಯದೇ ಇದ್ದರೇ.. ? ಈ ಹೆಣ್ಣು ಒಲಿಯುವ ಮಾತೇ ಇಲ್ಲ ಇವಳಿಗೆ ಭಾವನೆಗಳೇ ಇಲ್ಲಾ.. ಈ ಹೆಂಗಸು ಗಂಡನ ಸಾವಿನಿಂದ ಚಿಂತೆ ಹಚ್ಚಿಕೊಂಡು, ತನ್ನ ಹರೆಯವನ್ನೇ ಹತ್ಯೆಮಾಡಿಕೊಂಡಿದ್ದಾಳೆ. ಇವಳ ಹಿಂದೆ ನಾವು ಹುಚ್ಚನಾಯಿಂತೆ ಅಲೆಯುವುದು ವ್ಯರ್ಥ, ಬಲತ್ಕಾರವಾಗಿ ಅವಳನ್ನು ಅನುಭವಿಸಲು ಮುಂದಾದರೇ.. ಮುಗಿತು ನಮ್ಮಗತಿ. ಅವಳ ಭಾವಂದಿರು ನಮ್ಮನ್ನು ಕಾಲಲ್ಲಿ ಹಾಕಿ ಹೊಸಗಿ ಬಿಡ್ತಾರೆ. ಇದು ಊರ ಹುಡುಗರ ನೀಲಿಯ ಕುರಿತಾದ ಕೊನೆಯ ಮಾತಾಯಿತು. ನೀಲಿ ಪಡ್ಡೆ ಹುಡುಗರಿಗೆ ನಿಲುಕದ ನಕ್ಷತ್ರವಾಗಿಯೇ ಉಳಿದಳು. ಕೆಲವು ದಿನಗಳಾದ ಮೇಲೆ ಹುಡುಗರು, ನದಿ ಸ್ನಾನಕ್ಕೆ ಹೋಗುವುದನ್ನು ನಿಲ್ಲಿಸಿದರು, ಸುಮ್ ಸುಮ್ಮನೇ ನೀಲಿಯ ಮನೆಯ ಹಿಂದೆ ಮುಂದೆ ಸುಳಿದಾಡುವುದನ್ನು ಬಿಟ್ಟು ತನ್ನಗೆ ತಮ್ಮ ಪಾಡಿಗೆ ತಾವು ತಮ್ಮ ಕೆಲಸದಲ್ಲಿ ಕಳೆದು ಹೋದರು.
ಹೆಂಗಸರ ಮಾತು….
“ಇಷ್ಟ ಸಣ್ಣ ವಯ್ಯಸ್ಸಿದ್ರೂ ನಮ್ಮ ಗೌಡರ ನೀಲವ್ವ, ಮನಸನಿಂದ ಎಷ್ಟ ಹಸನ ಅದಾಳ ನೋಡ.. ಒಬ್ಬರ ಜೋಡಿನು ಸುಮ್ಮ-ಸುಮ್ಮನ ಮಾತಾಡಿದಾಕಿ ಅಲ್ಲಾ.. ಹರೆದ ಕಾಲಕ್ಕ ಗಂಡಸತ್ತರೂ ಇನ್ನೊಬ್ಬ ಗಂಡಸೀನ ಕಣ್ಣೆತ್ತಿ ನೋಡುವ ಗೋಜಿನ್ಯಾಕಿ ಅಲ್ಲ.. ದೇವತಿಯಂತಾಕಿ ನಮ್ಮ ನೀಲವ್ವಗೌಡತಿ” ಊರ ಹೆಂಗಸರ ಮಾತಾಡು ಮಾತು ಹರಿದು ಬಂದು ನೀಲಿಯ ಭಾವಂದಿರ ಕಿವಿ ಹೊಕ್ಕಾಗ ನೀಲವ್ವನ ಮೇಲೆ ಭಾವಂದಿರರ ಅಭಿಮಾನ, ಪ್ರೀತಿ, ವಾತ್ಸಲ್ಯ ಹೊಳೆಯಾಗಿ ಹರೆಯಿತು. ಊರ ಹೆಂಗಸರಾಡುವ ಮಾತು ಕೇಳಿದ ನೀಲವ್ವನ ನೆಗ್ಯಾನ್ಯಾರೂ ಹಿರಿಹಿರಿ ಹಿಗ್ಗಿದರು. ಈಗಿನ ಕಾಲದಾಗ ಗಂಡ ಸತ್ತ ಹೆಂಗಸ್ರು ಬೀದಿನಾಯಿ ಹಂಗ ಎಲ್ಲಿ ಬೇಕಾದಲ್ಲಿ ಅಡ್ಯಾಡ್ತಾವ, ಎಲ್ಲರಿಗೂ ಹಾಸಗಿ ಹಾಸ್ತಾವ, ದಾರಿ ಮ್ಯಾಲಿನ ದಂಟಿನ ಗತೆ ಬದಕಿ, ಇದ್ದಬಿದ್ದ ಮರ್ಯಾದಿ ಮೂಲಿಗುಂಪ ಮಾಡ್ತಾವ, ಆದ್ರ ನಮ್ಮ ನೀಲವ್ವ ಹಂಗಲ್ಲಾ.. ಗಂಡ ಸತ್ತ ಎರಡ ವರಸ ಮುಗದ ಮೂರಕ್ ಜಿಗದ್ರೂ ತನ್ನ ಮೈ-ಮನಸ್ ಹದ್ದಬಸ್ತನ್ಯಾಗ ಇಟಗೊಂದಾಳ. ಹೆಂಗಸಂದ್ರ ಹಿಂಗರ್ಬೇಕು..ದೇವತೆ ಹಂಗ ಎಂದು ನೀಲಿಯ ನೆಗ್ಯಾನಿಗಳು ಗುಣಗಾನ ಮಾಡಿದ್ರು.
ನುಣುಪುಗಲ್ಲು…
ಅಂದು ನದಿಯಲ್ಲಿ ಬಟ್ಟಿ ತೊಳೆಯುವಾಗ ಅವಳ ಅಂಗಾಲಿಗೆ ಒಂದು ಕಲ್ಲು ತಾಗಿತು. ಬಟ್ಟೆ ತೊಳೆಯುವುದನ್ನು ಬಿಟ್ಟು ನೀರಲ್ಲಿ ಕೈಯಾಡಿಸಿ, ಆ ಕಲ್ಲನ್ನು ಕೈಗೆತ್ತಿಕೊಂಡಳು. ನುಣುಪು-ನುಣಪಾದ ಆ ಕಲ್ಲು ಶೀಶ್ನದ ಆಕಾರದಲ್ಲಿ ಇರುವುದನ್ನು ಕಂಡು ಅವಳಿಗೆ ಆ ಕಲ್ಲಿನ ಮೇಲೆ ಎಂಥದ್ದೋ ಒಂದು ವ್ಯಾಮೋಹ ಹುಟ್ಟಿಕೊಂಡಿತು. ಯಾರಿಗೂ ಗೊತ್ತಾಗದಂತೆ ನೀಲಿ ಆ ಕಲ್ಲನ್ನು ಬುಟ್ಟಿಯ ತಳಕ್ಕೆ ನೂಕಿ, ಬಟ್ಟೆ ತೊಳೆಯ ತೊಡಗಿದಳು, ಆಗ ಅವಳ ಚಿತ್ತವೆಲ್ಲವೂ ಆ ಕಲ್ಲಿನತ್ತಲೇ ಇತ್ತು. ನೀಲಿ ಆ ಕಲ್ಲನ್ನು ತಗೆದು ಬುಟ್ಟಿಯಲ್ಲಿ ಇಡುವುದನ್ನು ಮಗ್ಗಲಿದ್ದ ಹೆಂಗಸು ನೋಡಿ, “ಪಾಪ..ನೀಲವ್ವ ನದ್ಯಾಗಿನ ಕಲ್ಲ, ದೇವರಾಗೀವ್ರಾ ಮಾಡಾಕ ತಗೊಂದಿರ್ಬೇಕ” ಎಂದು ಅದರತ್ತ ಹೆಚ್ಚು ಗಮನ ಹರಿಸದೆ ತನ್ನ ಬಟ್ಟಿ ತೊಳೆಯುವ ಗದ್ದಲದಲ್ಲಿ ಮುಳಗಿದ್ದಳು. ಮತ್ತೊಬ್ಬ ಹೆಂಗಸು ನೀಲವ್ವ ಕಲ್ಲು ಬುಟ್ಟಿಯಲ್ಲಿಟ್ಟಿದ್ದು ಗಮನಿಸಿದ್ದಳು. ಮನಿಯಲ್ಲಿ ಹುಡುಗರಿಗೆ ಆಟಾ ಆಡಾಕ ವೈತಿರ್ಬೇಕೆಂದು ಆ ಕಲ್ಲಿನ ಉಸಾಬರಿ ಮಾಡ್ದೇ ಅವಳೂ ತನ್ನ ಪಾಡಿಗೆ ತಾ ಬಟ್ಟೆ ತೊಳೆಯುತ್ತಿದ್ದಳು.
ಎಲ್ಲರೂ ಬಟ್ಟೆ ತೊಳೆದುಕೊಂಡು ಮನೆಯತ್ತ ನಡಿದರು. ನೀಲವ್ವ ಅವರಿಗಿಂತ ಒಂದು ಹೆಜ್ಜೆ ಹಿಂದೆ ಸರಿದು, ಬುಟ್ಟಿಯ ತಳಗಿರುವ ಆ ಕಲ್ಲನ್ನು ತಡಿಕ್ಯಾಡಿ ಹಿಡಿದುಕೊಂಡಳು. ಅವಳ ಮನದ ಅದಾವದೋ ಮೂಲೆಯಲ್ಲಿ ಒಂದು ನೆಮ್ಮದಿ ಸಿಕ್ಕಂತೆ ಅನಿಸತೊಡಗಿತು.
ಮನೆಗೆ ಹೋಗಿ ಬಟ್ಟೆಯನ್ನು ಒಣಹಾಕಿ, ಆ ಕಲ್ಲನ್ನು ಯಾರ ಕಣ್ಣಿಗೂ ಸೋಕದಂತೆ, ಒಯ್ದು ತಾನು ಮಲಗುವ ಕೋಣಿಯಲ್ಲಿ ಬಚ್ಚಿಟ್ಟಳು. ರಾತ್ರಿ ಬರುವುದನ್ನೇ ಕಾಯುತ್ತ ಕುಳಿತ ನೀಲಿಯ ಮನದಲ್ಲಿ ನೂರೆಂಟು ವಿಚಾರಗಳು ಸುರಳಿ ಸುತ್ತಿಕೊಂಡಿತು. ಎಲ್ಲರೂ ಮಲಗಿದ ಮೇಲೆ ಬಚ್ಚಿಟ್ಟ ಆ ನುಣುಪು ಕಲ್ಲನ್ನು ಹೊರತೆಗೆದು ನೋಡಿ, ಮೈ ಮರೆತಳು. ಗಂಡಸರ ಶೀಶ್ನದಂತಿದ್ದ ಆ ಕಲ್ಲನ್ನು ನೀಲಿ ಬೆರಗಾಗಿ ಮತ್ತೆ ಮತ್ತೆ ನೋಡಿದಳು. ಸತ್ತು ಹೋದ ಗಂಡ ನೆನಪಾದ, ಅವನು ಮದುವೆಯಾದ ರಾತ್ರಿ ಕೊಟ್ಟ ಸುಖ ನೆನಪಾಯಿತು, ಗಂಡನ ಗುಂಗಿನಲ್ಲಿ ನೀಲಿ ತನ್ನ ಮೈಮೇಲಿರುವ ಒಂದೊಂದೆ ಬಟ್ಟೆಯನ್ನು ಕಿತ್ತೆಸೆದು, ಆ ನುಣುಪು ಕಲ್ಲೇ ತನ್ನ ಗಂಡನೆಂದು ಭಾವಿಸಿಕೊಂಡು, ತನ್ನ ಸುಖ ಕೇಂದ್ರಲ್ಲಿ ಅದನ್ನು ಅದ್ದಿ ಅದ್ದಿ ತಗೆಯುತ್ತ ನೀಲಿ ಅಂದು ಪರಮಾನಂದವನ್ನು ಅನುಭಸಿ ನಿದ್ರೆಗೆ ಜಾರಿದ್ದಳು. ಬೆಳಗಾದಾಗ ನೀಲಿಯ ಮೋತಿಯ ಮೇಲೆ ಮಂದಹಾಸದ ನಗೆ ಅರಳಿಕೊಂಡಿತ್ತು.
–ತಿರುಪತಿ ಭಂಗಿ