
ನಿನ್ನ ಬಗ್ಗೆ ಬರೆಯಲು ಈಗ ಏನೂ ಉಳಿದಿಲ್ಲ ಆದರೂ ಬರೇಯುತ್ತೇನೆ. ನಿನ್ನ ಹೆಸರಿನಲ್ಲಿ ಬರೆದಿಟ್ಟ ಒಂದಿಷ್ಟು ಪತ್ರಗಳ ಬಗ್ಗೆ ಕೆಣುಕಿ ಕಾಡಿ ನನ್ನನ್ನ ಈ ಪ್ರೀತಿಗಾಳಕ್ಕೆ ಸಿಲುಕಿಸಿ ನೀನು ಮಾತ್ರ ಗೆದ್ದವರ ಸಾಲಿನಲ್ಲಿ ನಿಂತು ನಗುತ್ತಿ, ಆದರೂ ಬೇಜಾರಿಲ್ಲ. ನಾನು ಯಾವಾಗಲೊ ನಿನಗೆ ಸೋತಿದ್ದೇನೆ. ಗೆದ್ದ ನಿನ್ನ ಹಸಿವು ತೀರಿತು ಆದರೆ ಸೋತವನ ಹಂಬಲ ಮಾತ್ರ ನೀ ಬಿಟ್ಟು ಹೋದ ಗಳಿಗೆಯಿಂದ ವಿಲ ವಿಲ. ನಾನಾಗಿ ನಿನಗೆ ಬರೆದ ಅದೆಷ್ಟೋ ಪತ್ರಗಳಲ್ಲಿ ನಿನ್ನನ್ನ ಒಂದು ಮಾತು ತೆಗಳಲಿಲ್ಲ ಕೂತಲ್ಲೇ ನಿನ್ನ ಹಸಿವಿನ ಕಣ್ಣುಗಳಿಗೆ ಬಣ್ಣ ತುಂಬಿದ್ದೇ ತಪ್ಪಾಯ್ತೇನೋ ಕಡೇ ಪಕ್ಷ ನೀನು ತಿರುಗಿಯೂ ನೋಡಲಿಲ್ಲ.
ಹತ್ತಿರದಿಂದ ಅರ್ಥೈಸಿಕೊಂಡವಳು ನೆತ್ತಿ ಸವರದೆ ಬಿಟ್ಪು ಹೋಗುವಾಗ ನೀನಾಡಿದ ಮಾತುಗಳು ಈಗಲೂ ನನ್ನ ಎದೆಯಲ್ಲಿ ಶಾಸನ ಬರೆದಿಟ್ಟಂತೆ ಬೊಬ್ಬೆಹಾಕುತ್ತಿವೆ. ಎಲ್ಲದರಲ್ಲೂ ನಿನ್ನಿಷ್ಟಕ್ಕೆ ತಕ್ಕಂತೆ ನಾನು ಬದಲಾದರೂ ನಿನ್ನ ಈ ಬದಲಾವಣೆ ನಾನು ಈಗಲೂ ಸಹಿಸುವುದಿಲ್ಲ. ಧಿಕ್ಕಾರ ಕೂಗಲೂ ವಿರೋಧಿಗಳೇ ಆಗಬೇಕಿಲ್ಲ, ಎದೆಯಲ್ಲಿ ಉಳಿದವಳು ಹೆಸರಿಗಷ್ಟೇ ಅಂದಾಗ ದಿಕ್ಕಾಪಾಲದವನು ನಾನು. ದಿಕ್ಕರಿಸಿ ಹೋದವಳ ಮೇಲೆ ದಿಕ್ಕಾರದ ಕೂಗಿನಲ್ಲೂ ಒಂಥರಾ ಒಪ್ಪಿಗೆಯ ಪ್ರೀತಿ ಇದೆ. ನಾನಾಗಿಯೇ ಚೇತರಿಸಿಕೊಳ್ಳಲು ನಂಬುಗೆಯ ಬೆಲೆ ನಿಂಗೆ ಗೊತ್ತಾಗಬೇಕು . ನಿನ್ನ ಬೇಕು ಬೇಡಿಕೆಗಳ ಬಗ್ಗೆ ನಾನು ತೆಲೆಕೆಡಿಸಿಕೊಂಡವನಲ್ಲ ನನಗದು ಈಗಲೂ ಬೇಡಿಕೆ ಅಲ್ಲ. ಕಣ್ಣಿಗೆ ಬಿದ್ದ ಕಸ ಅಂತಾ ಒರೆಸಿಕೊಳ್ಳುತೇನೆ. ನನ್ನ ನಗೆ ಮಾಸಿದರೂ ಪರವಾಗಿಲ್ಲ, ಆಕಸ್ಮಿಕವಾಗಿ ಮಾಸದ ನನ್ನ ನೆನಪು ಹಿಂಡು ಹಿಂಡಾಗಿ ಬಂದು ದಂಡೆತ್ತಿದರೂ ನಿನ್ನ ನಗುವಿಗೆ ಹಾನಿ ಆಗದಿರಲಿ. ನಾನು ಮಾಡಿದ್ದು ನಿಜ ಪ್ರೀತಿ ಕಪಟ ನಾಟಕ. ಪಾತ್ರದ ರೂವಾರಿಯೂ ನಾನಲ್ಲ ಘಳಿಗೆಗೊಮ್ಮೆ ನೆನಪಾಗುತ್ತಿ. ಅತೀ ಬೇಗ ನಿನ್ನಂತೆ ಮರವಿನ ಶಕ್ತಿ ಆ ದೇವರೂ ನನಗೂ ನೀಡಲಿ.
ನೆಮ್ಮದಿ ಹುಡುಕಿ ಹೋಗಲು ಇದೊಂದೆ ದಾರಿ ಅನ್ಸತ್ತೆ. ನಾನಗೇ ದಾರಿ ಹುಡುಕಿ ಕೊಳ್ಳುವ ಪ್ರಯತ್ನದ ಮುಂದೆ ಹೊಸದೊಂದು ಜೀವನದ ತಿರುವು ಅರಿವು ಮಾಡಿಸಿದಕ್ಕೆ ಧನ್ಯವಾದ. ಮಳೆಗೆ ಕೊಡೆ ಅವಶ್ಯಕತೆಯಂತೆ ಈಗ ನನ್ನೀ ಕಥೆ. ಬೆವರ ಹನಿಗಳಿಗಿಂತ ಕಣ್ಣಹನಿಯ ಪಾಠ ನಸುನಗುತಾ ಕಲಿಸಿದ ನಿನಗೆ ಬೆನ್ನುಸವರಿ ಭೇಷ್ ಅನ್ನಬೇಕು. ದಣಿದವನ ನೋವಿಗಿಂತ ಹೆಣಗಾಡುವವನ ಪರಿ ಕಡೆಗೂ ಇನ್ನಾರಿಗೂ ಬಾರದಿರಲಿ. ಬದುಕು ನಿಶ್ಚಳ ಅನಿಸಿದಾಗಲೆಲ್ಲ ನೀ ನೆನಪಾಗುತ್ತಿ. ಕಣ್ಣಿಗೆ ಕತ್ತಲು ಕವಿದಾಗ ನೀ ನೆನಪಾಗುತ್ತೀ. ಎತ್ತರಕೆ ಏರಬೇಕೆಂದವನಿಗೆ ಬುದ್ಧನನ್ನು ಬೇಟಿ ಮಾಡಿಸಿ ನನ್ನ ಆಸೆಗಳನ್ನೆಲ್ಲಾ ನಿರಾಕರಿಸಿದೆ. ಈ ಮಾತಿನಲ್ಲಿ ನಿನಗೆ ಸಿಡಿಮಿಡಿ ಅನಿಸ್ಸಿದ್ರೇ ಕ್ಷಮಿಸಿಬಿಡು ನಿನ್ನ ಸೋತು ಮುಖ ನೋಡಲು ನನಗಿಷ್ಟವಿಲ್ಲ. ಈ ಹಾಳೆಯಲ್ಲಿ ಬರೆದ ನನ್ನೀ ಗೋಳಿಗೆ ಕಿವಿಕೋಡಬೇಡ ಈ ಇಡೀ ಕಾಗದ ನಿನ್ನ ಬೈದ ರೂಪದಲ್ಲಿದೆ ಈ ಅಕ್ಷರಗಳ ಅಪಸ್ವರಕೆ ನಾನೇ ಹೊಣೆ.
ಗುಂಡಿ ಕಂಡು ಬಾವಿಗೆ ಬಿದ್ದವ ನಾನು. ನಿನ್ನದೆ ಜಪಕೆ ಇಲ್ಲಿ ಪ್ರೀತಿ ಮಾತ್ರ ಪ್ರತ್ಯಕ್ಷದರ್ಶಿ ಖುಷಿ ಕೊಡುವೆ ಜೀವನದುದ್ದಕ್ಕೂ ಅಂತಾ ಅನ್ಕೊಂಡಿದ್ದೆ. ನಿನ್ನದೆ ಖುಷಿಗೆ ನೀ ಬಿಟ್ಟು ಹೋದ ಘಳಿಗೆಯನ್ನು ನಾನು ಜೀವನದದ್ದಕ್ಕೂ ನೆನಪಿಡಿಬೇಕು. ಸಾಯುವ ಕಾಲಕೂ ನಿನ್ನ ನೆನಪಿರದೆ ಇರಲಾರೆನೇನೋ. ನಿಜಕ್ಕೂ ನಿಜ ಪ್ರೀತಿ ಅರಿವು ಮಾಡಿಸಿದೆ. ನಿನ್ನದೆ ಬಿಂಬದ ಹಂಬಲದಲ್ಲಿದ್ದವನ ನಶೆ ಇಳಿಸಿದೆ. ಆದರೂ ಮನಸ್ಸು ಕೊರೆಯುತ್ತೆ. ಕಷ್ಪಕ್ಕೆ ನೂಕಿ ಹೋದವಳು ನೀನು. ಹೊಸದೊಂದು ನೋವಿನ ಅರಿವು ಇದರ ಮುಂದೆ ಏನೂ ಅಲ್ಲ. ನೀ ಕೊಂಡುಕೊಂಡ ಮುಖವಾಡದ ಅಂಗಡಿಯಲ್ಲಿ ನನಗೊಂದನ್ನು ಕೊಡಿಸು, ತಿದ್ದಿ ತೀಡಿ ನಿಜ ಬಣ್ಣಕ್ಕೆ ತರಲು ಪ್ರಯತ್ನಿಸಿಸುತ್ತೇನೆ.
ಇಂತಿ
ನಿನ್ನ
ದೂರದೂರಿನವ.
–ಮಹಾಂತೇಶ್. ಯರಗಟ್ಟಿ
ನಿನ್ನ ಬರಹ ಅದ್ಭುತ ಸಾಲುಗಳು ಗೆಳೆಯ
ತುಂಬಾ ತುಂಬಾನೇ ಚೆನ್ನಾಗಿದೆ ಸರ್.ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟಂತಿದೆ.