ನೀ ಎದುರಿಗೆ ಬಂದ್ರೆ ಏನೋ ಓಂಥರಾ ಖುಷಿ ಆಕ್ಕೇತಿ!: ಕಾವ್ಯ. ಎನ್

ಲೋ ಹುಡ್ಗ,
ಪ್ರೀತಿ ಪ್ರೇಮ ಎಲ್ಲ ನನ್ನಂತ ಹಳ್ಳಿ ಹುಡ್ಗಿಗೆ ಸರಿ ಬರೋದಲ್ಲ, ನನ್ನ ಕೆಲಸ್ ಏನಂದ್ರ ಓದೋದು ಅಷ್ಟೇ ಅಂತಾ ನಿರ್ಧಾರ ಮಾಡಿದ್ ನನ್ಗೆ, ಆ ವಿಸ್ಯಾನೇ ಮರೆಯಂಗೇ ಮಾಡಿದವ ನೀನು? ಅದ್ಯಾಗೆ ನಾನು ನಿನ್ನ ಪ್ರೀತಿಲಿ ಬಿದ್ನೊ ಒಂದು ತಿಳಿತಿಲ್ಲ. ವತ್ತು ಹುಟ್ಟಾದಗ್ನಿಂದ, ವತ್ತು ಬೀಳಾವರೆಗೂ ನಿಂದೆ ಜಪ. ನೀ ಎದುರಿಗೆ ಬಂದ್ರ ಏನೋ ಓಂಥರಾ ಕುಸಿ. ಒಂದು ನಿಮಿಷಕ್ಕೆ 72 ಸಾರಿ ಬಡ್ಕೊಳೋ ಹೃದಯ ನಿನ್ನ ಮೊಗ ಕಂಡಿದ್ ತಕ್ಷಣ ನೂರ್ಸಾರಿ ಬಡಿತೈತೆ. ಆಗ ಯಾವಾಗ್ಲೂ ನನ್ನದೆ ಹಾಡೋದು ಹೃದಯದಲಿ ಇದೆನಿದು ನದಿಯೊಂದು ಓಡಿದೆ.

ನನ್ಗ ನೀನ್ ತರ ಟಸ್ಸು ಪುಸ್ಸು ಅಂತಾ ಇಂಗ್ಲೀಷ್ ಭಾಷೆ ಬರವಲ್ದು ನೋಡು, ನಾ ಏನಿದ್ರೂ ಪಕ್ಕ ಹಳ್ಳಿ ಹುಡ್ಗಿ. ಒಮ್ಮೆ ಏನಾದ್ರೂ ನೀನಾ ನನ್ನ ಬಾಳ ಸಂಗಾತಿ ಅಂತಾ ನಿಶ್ಚಯ ಮಾಡುದ್ರ ಆ ದ್ಯಾವ್ರೂ ಬಂದ್ರೂ ನನ್ನ ನಿರ್ಧಾರ ಬದಲಾಗಂಗಿಲ್ಲ ನೋಡು ಮತ್ತ. ನೀನು ತುಂಬಾ ಮುಗ್ಧ, ಮುದ್ಮುದ್ದಾಗಿಯೂ ಇದ್ಯ, ಆದ್ರ ನಿಂಗ್ ವಿರುದ್ಧವಾಗಿ ಇದೀನಿ ನಾ. ಜೋತ್ಯಾಗೀನ ಗೆಳ್ತಿಯರೂ ನಂಗಾ ಜಗ್ಳಂಟೀ ಅಂತಾನಾ ಕರಿತಾರ. ಹೋಗಿರುವಾಗ ನೀ ನನ್ನ ಜೋಡಿ ಆಗ್ಯ ಅಂತಾ ಕೇಳಾಕೂ ಹೆಂಗೇಗೂ ಹಾಕ್ತಯ್ತಿ ನೋಡು. ಒಂದ್ ಮಾತ ನಿಜ ತಿಳ್ಕ ನನ್ ಎದೆವಳ್ಗ ನಿಂಗೊಬ್ಬನಿಗೆನೇ ಜಾಗ. ನಂಗ ನಾಜುಕಾಗಿ ಯಾನ್ನೂ ಹೇಳಕಾ ಬರಲ್ಲ, ಆದ್ರ ನನ್ನ ಮನಸ್ಸಾಗ್ ನೂರು ಮಾತ್ ಅವ. ನೀನಂದ್ರೆ ನಂಗ್ ಬಾಳ ಇಷ್ಟ ಕಣ್ಳ.

ಕಾಲೇಜ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀ ಹಾಡಿದ್ ಹಾಡ್ ಕೇಳೀ ಲೋಕನೇ ಮರೆತಂಗೆ ಆಗಿತ್ತು. ಅವತ್ತೇ ನೋಡು ನೀನಾ ನನ್ನ ಬಾಳ ಸಂಗಾತಿ ಅಂತಾ ನಿರ್ಧರ್ಸುದೆ. ನೋಡಾಕ್ ಓಳ್ಳೆ ಸಿನಿಮಾ ಹೀರೋ ತರ ಬೆಳ್ಳಗ್ಗೆ ಇರೋ ನಿನಗೆ ಈಗಾಗಲೇ ಕಾಲೇಜ್ನಲ್ಲಿ ಅದೆಷ್ಟ್ ಹುಡ್ಗಿರು ಬಿದ್ದೋರು ಗೊತ್ತಿಲ್ಲ. ಪಾಪ ನಮ್ಮತ್ತೆ ನೀಂಗ್ ಅದೇನ್ ಅಡ್ಗಿ ಬೇಸಕ್ತಾರೋ ಗೊತ್ತಿಲ್ಲ, ಆಗಾಗ ಹುಷಾರ್ ತಪ್ತ್ಯ ಅಂತಾ ಕೇಳ್ವಿನೀ ನಮ್ಮ ಲಗ್ನ ಆತು ಅಂತಾ ಇಟ್ಕು, ದಿನಾ ರಾತ್ರಿ ನಮ್ಮ ರಾಗಿ ಮುದ್ದೆ ಉಪ್ಸಾರು ಮಾಡಿ ಇಕ್ತಿನಿ. ಒಂದೇ ತಿಂಗ್ಳಗಾ ನಮ್ಮತ್ತೆ ಆಶ್ಚರ್ಯ ಆಗ ಬೇಕು ಅಂಗ್ ನೋಡ್ಕೋತ್ತಿನಿ ನಿನ್ನ.

ಸತ್ಯ ಹೇಳಬೇಕೂ ಅಂದ್ರೆ ನಂಗೆ ಸಿಟಿ ಜೀವ್ನ ಓಂಚೂರು ಇಷ್ಟಇಲ್ಲ. ನಾನೂ ನೀನೂ ನಮ್ಮ ಹಳ್ಳಿ ಹೋಗಿ ಅಲ್ಲೆ ಸಂಸಾರ ಹುಡೋಣ. ನಮ್ಮ ಜಮೀನಲ್ಲಿಯೆ ಕೃಷಿ ಮಾಡೋಣ, ನೀನ್ ಸಿಟಿಯಲ್ಲಿ ಸುಖವಾಗಿ ಬೆಳೆದಿರೋನು ಅಲ್ವ ಕೃಷಿ ಮಾಡೋಕೆ ಬಿಟ್ರೆ ಬಿಸಿಲಾಗ ಐರಾಣಾಗ್ತಿ ನನ್ನಿಂದ ಅದನ್ನ ನೋಡೋಕ ಆಗಲ್ಲ, ನೀ ಹ್ಯಾಂಗೋ ಹಾಡ್ತಿ ನೀ ಅದನ್ನ ಮಾಡು. ಮನೀ ಜವಬ್ದಾರಿ ನಾನ ನೋಡ್ಕೋತೀನಿ. ನಾನ್ ನಮ್ಮ ಮುಂದಿನ ಜೀವನದ ಬಗ್ಗೆ ಇಷ್ಟೆಲ್ಲಾ ಕನಸ್ ಕಟ್ಟೀನಿ ಆದಷ್ಟು ಬೇಗ ನನ್ನ ಪೀರೂತಿ ಒಪ್ಕೋ, ನಿಮ್ಮ ಮನೇಲಿ ನಮ್ಮ ಲಗ್ನದ ಬಗ್ಗೆ ಮಾತಡೋಕೆ ನಿಂಗೆ ಭಯ ಆದ್ರೆ ಹೇಳು ನಾನೇ ಅತ್ತೆ ಮಾವನ್ನ ಹತ್ರ ಮಾಡ್ತಿನಿ. ಇದಕ್ಕೆ ನೀನ್ ಒಪ್ಪಿಗೆ ಇದ್ಯ ಹೇಳು.

-ಕಾವ್ಯ. ಎನ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x