ನೀನಿಲ್ಲದೆ…..!!: ವೆಂಕಟೇಶ ಚಾಗಿ


ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ ಗೆರೆ ಹಾಕಿದ್ದವಳೇ ನೀನು. ಆದರೆ ನೀನೇ ಆ ಗೆರೆಯನ್ನು ದಾಟಿ ಅಲಿಖಿತ ಸಂವಿಧಾನವನ್ನು ಆಗಾಗ ತದ್ದುಪಡಿ ಮಾಡುತ್ತಿದ್ದವಳೇ ನೀನು. ಕೆಲವೊಮ್ಮೆ ನಿನ್ನ ತುಂಟಾಟಗಳಿಗೆ ನಾನೇ ಮೂಗನಾಗಿಬಿಡುತ್ತಿದ್ದೆ.

ನಿಜ ನಾನೀಗ ನಿಜವಾಗಿಯೂ ಮೂಕನಾಗಿ ಮೌನಿಯಾಗಿದ್ದೇನೆ. ಪ್ರತಿ ಬಾರಿ ಈ ಹಾಳು ಮೊಬೈಲ್ ರಿಂಗಾದಗೆಲ್ಲ ನಿನೇ ಎಂದು ಭಾವಿಸುತ್ತೇನೆ. ಮೊಬೈಲ್ ಕಂಪನಿಯವರು ಕಳುಹಿಸುವ ಮೆಸೆಜ್ ಗಳೆಲ್ಲ ನಿನ್ನ ನೆನಪನ್ನೇ ಮರುಕಳಿಸುತ್ತವೆ. ಅದೇನೆ ಇರಲಿ ಈಗ ಅವೆಲ್ಲ ಸುಳ್ಳು. ಪ್ರತಿ ವರ್ಷ ಆ ದಿನದಂದು ನಿನ್ನಿಂದ ಒಂದು ಕಾಲ್ ಅಥವಾ ಮೆಸೇಜ್ ಬರಬಹುದೆಂಬ ನಿರೀಕ್ಷೆಯಲ್ಲೆ ಇರುತ್ತೇನೆ. ಆದರೆ ನನ್ನ ನಿರೀಕ್ಷೆಗಳೆಲ್ಲ ಪ್ರತಿ ಸಾರಿ ಸುಳ್ಳಾಗುತ್ತಿವೆ. ಪ್ರತಿ ವರ್ಷ ಆ ದಿನದಂದು ನಿನಗೆ ವಿಷ್ ಮಾಡುತ್ತೇನೆಂದು ನೀನು ಆ ದಿನ ಹೇಳಿದ ಮಾತನ್ನು ಕ್ಯಾಲೆಂಡರ್ ಪ್ರತಿ ವರ್ಷ ನೆನಪಿಸುತ್ತೆ. ಆದರೆ ಆ ವಿಷ್ ಮರೆಯಾಗಿ ಸುಮಾರು ವರ್ಷಗಳೇ ಕಳೆದವು. ನಿನಗೆ ನೆನಪಿದೆಯೇ ? ಓ ನಾನು ನಿನ್ನ ಮರೆತಿರುವೆ ಎಂದುಕೊಂಡಿರುವೆಯಾ ? ಖಂಡಿತ ಇಲ್ಲ . ಅದೇ ದಿನ ನಾ ನಿನಗೆ ಕೊಟ್ಟ ಮಾತಿನಂತೆ ನನ್ನ ಉಸಿರಿರುವ ವರೆಗೂ ಮರೆಯಲಾರೆ .

ಅದೆಲ್ಲಾ ಈಗ ಇತಿಹಾಸ. ಗತಿಸಿ ಹೋದ ಕಾಲದ ನೆನಪುಗಳು ಗತಿಸಲಾರವು. ಆದರೆ ನನ್ನನ್ನು ಮರೆಯುವಂತ ತಪ್ಪನ್ನು ನಾನೇನು ಮಾಡಿದೆ ? ಅದನ್ನು ನೀನೇ ಹೇಳಬೇಕು. ಪ್ರೀತಿ ಪ್ರೇಮದ ಮಾಯೆಯಿಂದ ಹೋರಹೋದರೂ ಸ್ನೇಹ ಮಾಡಿದರೆ ತಪ್ಪೇನು ? ನನ್ನ ಸ್ನೇಹ ನಿನಗೆ ಮುಳುವಾಗುವುದೇ ? ನಿನಗಿರುವ ಸ್ನೇಹಿತರ ಬಳಗದಲ್ಲಿ ನನ್ನನ್ನು ಸೇರಿಸಿಕೊಳ್ಳಲು ಸಾದ್ಯವಿಲ್ಲವೇ ? ಪ್ರೀತಿ ಪ್ರೇಮ ಇಲ್ಲದಿದ್ದರೂ ಪರವಾಗಿಲ್ಲ ನಿನ್ನ ಸ್ನೇಹವೊಂದೇ ನನಗೆ ಬೇಕು ಅಷ್ಟೇ. ನಾನೆಂದಿಗೂ ನಿನ್ನ ಸ್ನೇಹಕ್ಕೆ ಹಾತೊರೆಯುತ್ತೇನೆ. ಆ ನಿನ್ನ ಅಲಿಖಿತ ಮೂಲ ಸಂವಿಧಾನಕ್ಕೆ ನಾನೆಂದಿಗೂ ಬದ್ದ. ಈ ಜೀವನದಲ್ಲಿ ನೀನಿಲ್ಲದೇ ನಾ ಹೇಗಿರಲಿ …?!!

– ವೆಂಕಟೇಶ ಚಾಗಿ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Jayakeerthi
Jayakeerthi
5 years ago

Manada maatu tumba chennagide

1
0
Would love your thoughts, please comment.x
()
x