ಮೊನ್ನೆ ಓದಲು ಸಿಕ್ಕ ಗೆಳೆಯರೊಬ್ಬರ ಪುಸ್ತಕದಲ್ಲಿ ಇಂಗ್ಲೀಷ್ ಕವಿತೆಯೊಂದರ ಸಾಲಿತ್ತು. ಆ ಕವಿತೆಯ ಸಾಲು ತುಂಬಾ ಇಷ್ಟವಾದ ಕಾರಣ ಪೂರ್ಣ ಕವಿತೆಗಾಗಿ ಗೂಗಲ್ ಸರ್ಚ್ ಮಾಡಿದೆ. ಆ ಕವಿತೆ poetry foundation ಎಂಬ ವೆಬ್ ತಾಣದಲ್ಲಿ ಓದಲು ಸಿಕ್ಕಿತು. ಓದಲು ಸಿಕ್ಕಿದ ಕವಿತೆಯ ಜೊತೆಗೆ ಆಡಿಯೋ ಫೈಲ್ ಸಹ ಇತ್ತು. ಆ ಫೈಲ್ ಕ್ಲಿಕ್ ಮಾಡಿ ಕೇಳಿದೆ. ಇದೇ ತರಹದ ಪ್ರಯೋಗವನ್ನು ಪಂಜುವಿನಲ್ಲಿ ಯಾಕೆ ಮಾಡಬಾರದು ಎಂದುಕೊಂಡಿದ್ದೇ ನನ್ನ ಹತ್ತಿರವಿದ್ದ ಹಾಡೊಂದರ ಫೈಲ್ ಅನ್ನು ಪಂಜುವಿಗೆ ಅಪ್ ಲೋಡ್ ಮಾಡಿ ನೋಡಿದೆ. ಆ ಹಾಡು ಅಪ್ ಲೋಡ್ ಆದ ಮೇಲೆ ಪಂಜುವಿನಲ್ಲೂ ಆಡಿಯೋ ಫೈಲ್ ಅನ್ನು ಅಪ್ ಲೋಡ್ ಮಾಡಬಹುದು ಎಂಬ ಸತ್ಯ ಅರಿವಾಗುತ್ತಿದ್ದಂತೆ ತುಂಬಾ ಖುಷಿಯಾಯಿತು. ಯಾಕೆಂದರೆ ಪಂಜುವಿನ ಕಾವ್ಯಧಾರೆಯ ವಿಭಾಗದಲ್ಲಿ ಕವಿಗಳ ಕಾವ್ಯಗಳ ಜೊತೆ ಅವರದೇ ದನಿಯಲ್ಲಿ ಕಾವ್ಯ ವಾಚನ ಇದ್ದರೆ ಎಷ್ಟು ಚಂದ ಅಲ್ವಾ? ಖುಷಿಯ ಸಂಗತಿ ಎಂದರೆ ಆ ರೀತಿ ಅಪ್ ಲೋಡ್ ಮಾಡಿದ ಆಡಿಯೋ ಫೈಲ್ ಗಳನ್ನು ಪಂಜುವಿನಿಂದ ಡೌನ್ ಲೋಡ್ ಮಾಡಿಕೊಂಡು ಕೇಳಬಹುದು.
So, ಪಂಜುವಿನ ಮುಂದಿನ ಪ್ರಯೋಗ ಸಾಹಿತ್ಯಪ್ರಿಯರಿಗೆ ಸಾಹಿತ್ಯವನ್ನು ಆಡಿಯೋ ರೂಪದಲ್ಲೂ ನೀಡುವುದು ಎಂದಾಯಿತು. ಹಾಗಾದರೆ ತಡವೇಕೆ ನಿಮ್ಮ ಬಳಿ ತರಾವರಿ ಮೊಬೈಲ್ ಸೆಟ್ ಗಳಿವೆ ನೀವು ಪಂಜುವಿಗೆ ಕಳಿಸಬೇಕೆಂದಿರುವ ಕವಿತೆಗಳನ್ನು ಲೇಖನಗಳನ್ನು voice recorder ನಲ್ಲಿ ರೆಕಾರ್ಡ್ ಮಾಡಿ ನಮಗೆ ಕಳಿಸಿ. ಓದಲು ಸಮಯವಿಲ್ಲದವರು ನಿಮ್ಮ ಸಾಹಿತ್ಯವನ್ನು ಡೌನ್ ಲೋಡ್ ಮಾಡಿಕೊಂಡು ಸಮಯವಿದ್ದಾಗ ಕೇಳಿಕೊಳ್ಳಲಿ. :)))
ಪಂಜು ಇ ಮೇಲ್ ಐಡಿ ಗೊತ್ತಲ್ಲ: editor.panju@gmail.com, smnattu@gmail.com
ನಿಮ್ಮ ದನಿಗಳ ಕೇಳುವ ಕಾತುರದಲ್ಲಿ
ಪಂಜು ಬಳಗದ ಪರವಾಗಿ
ಸಂಪಾದಕ
ನಟರಾಜ್, ತುಂಬಾ ಒಳ್ಳೆಯ ಯೋಚನೆ! ಈಗಾಗಲೇ ಪ್ರಕಟವಾಗಿರುವ ಲೇಖನದ ಧ್ವನಿ ಮುದ್ರಣ ಕಳಿಸಬಹುದೆ? 🙂
ಅಂಧರಿಗೆ ವಿಶೇಷ ಅನುಕೂಲ ಕಲ್ಪಿಸಿದಂತಾಗುತ್ತದೆ.
voice recorder details please
ನಿಮ್ಮ ಬಳಿ ಮೊಬೈಲ್ ಅಥವಾ ಲ್ಯಾಪ್ ಟಾಪ್ ಇದ್ದರೆ ನಿಮ್ಮ ಸಾಹಿತ್ಯವನ್ನು ರೆಕಾರ್ಡ್ ಮಾಡಿ ಕಳಿಸಿ ಸರ್..