ಬದುಕಿನ ಮೊದಲ ಹನ್ನೆರಡು ವರ್ಷಗಳನ್ನು ಹಾಸನದಲ್ಲಿ ಕಳೆದಿರುವ ಸಿಂಧು ಪದವಿಯವರೆಗೆ ಓದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಕರ್ನಾಟಕ ವಿಶ್ವ ವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕೆ.ಡಿ.ಸಿ.ಸಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಪತಿ ಚಂದ್ರಶೇಖರ ಮತ್ತು ಮಗಳು ಸಿಂಚನಳೊಂದಿಗೆ ಶಿರಸಿಯಲ್ಲಿ ವಾಸವಾಗಿದ್ದಾರೆ.
ಇವರ ನಗುತ್ತೇನೆ ಮರೆಯಲ್ಲಿ ಕವನ ಸಂಕಲನ ೨೦೧೦ರಲ್ಲಿ ಹಾಗೂ ಕನಸಿನ ಕಾಡಿಗೆ ಕಥಾಸಂಕಲನ ೨೦೧೪ರಲ್ಲಿ ಪ್ರಕಟಗೊಂಡಿದೆ. ಇವರ ಮತ್ತೊಂದು ಕವನ ಸಂಕಲನ "ರಸ್ತೆಯಲ್ಲಿ ಮೇ ಫ್ಲವರ್" ಈ ತಿಂಗಳು ಬಿಡುಗಡೆಯಾಗುತ್ತಿದೆ.
ಪುಸ್ತಕ ಬಿಡುಗಡೆಯ ದಿನಾಂಕ: 18.01.2015 ಸಂಜೆ 4 ಗಂಟೆಗೆ
ಸ್ಥಳ: ನಯನ ಸಭಾಂಗಣ, ಗಣೇಶ ನೇತ್ರಾಲಯ, ದೇವಿಕೆರೆ ರಸ್ತೆ, ಶಿರಸಿ..
*****