ಪ್ರಕಟಣೆ 1
ಜ್ಞಾನಡಮರು ಪ್ರಕಾಶನವು ದ್ವಿತೀಯ ವರ್ಷ ಪೂರೈಸಿದ ಸವಿನೆನಪಿಗಾಗಿ ಸಹಕಾರ ತತ್ವದಡಿಯಲ್ಲಿ ರಾಜ್ಯಮಟ್ಟದ ಚೌಪದಿಗಳ ಅಪೂರ್ವ ಸಂಕಲನ ಹೊರತರಲು ಚಿಂತನೆ ನಡೆಸಿದ್ದು, ಆಸಕ್ತ ಹಿರಿಯ-ಕಿರಿಯ ಕವಿಗಳು ಸ್ವರಚಿತ ೬ ಚೌಪದಿಗಳನ್ನು ಮೊಗೇರಿ ಶೇಖರ ದೇವಾಡಿಗ ಸಂಪಾದಕರು ಜ್ಞಾನಡಮರು ಪ್ರಕಾಶನ, ಮೊಗೇರಿ ಕೆರ್ಗಾಲ್ (ಅಂಚೆ) ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-೫೭೬೨೧೯ ಮೊ: ೯೯೧೬೧೮೦೪೯೫ ಈ ವಿಳಾಸಕ್ಕೆ ಮಾರ್ಚ್ ೨೮ ೨೦೧೫ ರೊಳಗೆ ೨ ಸ್ವವಿಳಾಸ ಬರೆದ ಅಂಚೆ ಲಕೋಟೆಯನ್ನು ಲಗತ್ತಿಸಿ ಕಳುಹಿಸಲು ಕೋರಲಾಗಿದೆ. ಇ-ಅಂಚೆ ಮೂಲಕ
ಕಳುಹಿಸುವವರು ನುಡಿ ತಂತ್ರಾಂಶದಲ್ಲಿ ಟೈಪಿಸಿ ಕಳುಹಿಸಬಹುದು.
ಇ-ಅಂಚೆ: shekharadevadiga2013@gmail.com
ನಿಯಮಗಳು
ಕವನಗಳು ನಾಲ್ಕು ಸಾಲುಗಳನ್ನು ಹೊಂದಿರಬೇಕು (ಚೌಪದಿ)
ಸ್ವಂತ ರಚನೆಯ ಬಗ್ಗೆ ಸ್ವದೃಢೀಕರಣವಿರಬೇಕು.
ಪ್ರಕಟಿಸಲು ಅನುಮತಿಯನ್ನು ಲಿಖಿತವಾಗಿ ನೀಡತಕ್ಕದ್ದು.
*****
ಪ್ರಕಟಣೆ 2
ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ – 2015
ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರಿಂದ ಕರ್ನಾಟಕದ ಉದಯನ್ಮೋಖ ಹಾಗೂ ಎಲೆಮರೆಯ ಕವಿಗಳನ್ನು ಬೆಳಕಿಗೆ ತರುವ ಸದುದ್ದೇಶದಿಂದ " ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ – 2015" ಹಮ್ಮಿಕೊಳ್ಳಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವನಗಳನ್ನು ಕಳುಹಿಸಬಹುದಾಗಿದೆ.
ಸೂಚನೆಗಳು
01. ಕವಿತೆಗಳು 30 ಸಾಲುಗಳು ಮೀರಿರಬಾರದು.
02. ಕವಿಗಳು ತಮ್ಮ ಕವಿತೆಗಳ ಜೊತೆಯಲ್ಲಿ ತಮ್ಮ ಇತ್ತೀಚಿನ ಪೋಟೋ, ಅಂಚೆ ವಿಳಾಸ, ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
03. 2015ರ ಏಪ್ರಿಲ್ ತಿಂಗಳಿನಲ್ಲಿ ಫಲಿತಾಂಶ ಘೋಷಿಸಲಾಗುವುದು.
04. ಕವಿತೆಗಳು ಕಳುಹಿಸಲು ಕೊನೆಯ ದಿನಾಂಕ ಜನವರಿ 05, 2015
ಕವನಗಳು ಕಳುಹಿಸಬೇಕಾದ ವಿಳಾಸ
ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಹೆಚ್ ಎಸ್ ಗಾರ್ಡನ್, ಚಿಕ್ಕಬಳ್ಳಾಪುರ – 562 101
ನುಡಿ ತಂತ್ರಾಂಶದಲ್ಲಿ ಟೈಪಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. jeevanprakashana@gmail.com
ಹೆಚ್ಚಿನ ಮಾಹಿತಿಗಾಗಿ 9901982195/9901928906 ನಂಬರ್ ಗೆ ಸಂಪರ್ಕಿಸಲು ಕೋರಲಾಗಿದೆ.
*****
ಪ್ರಕಟಣೆ 3
*****