ನಿಮ್ಮ ಗಮನಕ್ಕೆ

ಬ್ಲೂ ವೇವ್ಸ್ : ನಿಕ್ಷೇಪ- 2014 : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ

ಕನ್ನಡ ಯುವ ಬರಹಗಾರರ ಸಾಮಾಜಿಕ ಜಾಲತಾಣದ ಸಾಹಿತ್ಯ ವೇದಿಕೆ ಬ್ಲೂ ವೇವ್ಸ್ (ನೀಲಿ ಅಲೆಗಳು) ಫೇಸ್ಬುಕ್ ಪೇಜ್ ಬಳಗದ ವತಿಯಿಂದ ಕನ್ನಡದ ಯುವ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಕ್ಷೇಪ – 2014 (ನವ ಚಿಂತನೆಗಳ ಅಗೆತ) ಎಂಬ ಸ್ಪರ್ಧೆಯಡಿ ಏಳು ಪ್ರಸಕ್ತ ವಿದ್ಯಮಾನಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾವಂತ ಸೃಜನಶೀಲ ಯುವ ಬರಹಗಾರರು ಇದರಲ್ಲಿ ಪಾಲ್ಗೊಳ್ಳಬಹುದು. 

ವಿಷಯಗಳು ಇಂತಿವೆ.
೧. ಮಾಧ್ಯಮ – ಪೂರ್ವಾಗ್ರಹ ಮತ್ತು ನೈತಿಕತೆ
೨. ಶಿಕ್ಷಣ ವ್ಯವಸ್ಥೆ ಲೋಪದೋಷಗಳು ಮತ್ತು ಸುಧಾರಣೆ ಮಾರ್ಗಗಳು
೩. ಅಲ್ಪಸಂಖ್ಯಾತ ಮತ್ತು ದಲಿತರ ಹಿನ್ನೆಡೆ ಮತ್ತು ಪರಿಹಾರೋಪಾಯಗಳು
೪. ಪ್ರಸಕ್ತ ಮತ್ತು ನನ್ನ ಕನಸಿನ ಭಾರತ
೫. ಯುವಜನತೆ – ಅಭಿರುಚಿಗಳು, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ
೬. ಭಾರತದಲ್ಲಿ ಭಯೋತ್ಪಾದನೆ – ಮೂಲಗಳು ಮತ್ತು ನಿಗ್ರಹ ಮಾರ್ಗಗಳು.
೭. ಯುವಜನತೆ -ಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ 

ಬಹುಮಾನಗಳ ವಿವರ:
• ಮೊದಲ ಬಹುಮಾನ ರೂ.25,000 ಮತ್ತು ಪ್ರಶಸ್ತಿ ಪತ್ರ
• ದ್ವೀತಿಯ ಬಹುಮಾನ ರೂ.15,000 ಮತ್ತು ಪ್ರಶಸ್ತಿ ಪತ್ರ
• ತೃತೀಯ ಬಹುಮಾನ ರೂ10,000 ಮತ್ತು ಪ್ರಶಸ್ತಿ ಪತ್ರ
• ಭಾಗವಹಿಸಿದ ಉತ್ತಮ ಬರಹಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. 

ಸ್ಪರ್ಧೆಯ ನಿಯಮಗಳು:
• ಲೇಖನ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು),• ಕನಿಷ್ಟ 1500 ಪದಗಳದ್ದಾಗಿರಬೇಕು.• ಲೇಖನ ಕೃತಿ ಚೌರ್ಯವಾಗಿರಬಾರದು.
• ಒಬ್ಬರು ಎಲ್ಲ ವಿಷಯಗಳ ಮೇಲೆ ಬರೆಯಬಹುದು. (ಆದರೆ ಪ್ರತ್ಯೇಕವಾಗಿ ಕಳುಹಿಸತಕ್ಕದ್ದು).• ವಯೋಮಿತಿ 16 ರಿಂದ 30 ವಯಸ್ಸು.
• ಲೇಖನದೊಂದಿಗೆ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ವಿಳಾಸ ಮತ್ತು ಫೇಸ್ಬುಕ್ ಖಾತೆಯ ಲಿಂಕ್ ಕಳುಹಿಸತಕ್ಕದ್ದು.
• ಲೇಖನವನ್ನು ಕಳುಹಿಸಬೇಕಾದ ಕೊನೆಯ ದಿನಾಂಕ 15 ಡಿಸೆಂಬರ್ 2014.
• 19 ಡಿಸೆಂಬರ್ 2014 ಕ್ಕೆ ಫಲಿತಾಂಶ ಪ್ರಕಟ.
• ಸ್ವೀಕೃತ ಉತ್ತಮ ಬರಹಗಳನ್ನು ಪ್ರಕಟಿಸುವ ಹಕ್ಕು ಸಂಯೋಜಕರದ್ದಾಗಿರುತ್ತದೆ.• ಲೇಖಕರು ಪೂರ್ಣವಾಗಿ ಸಿದ್ಧವಾದ ತಮ್ಮ ಲೇಖನವನ್ನು ಸ್ಪಷ್ಟ ಕೈಬರಹ (ಸ್ಕ್ಯಾನ್ ಮಾಡಿದ ಇಮೇಜ್ ಅಥವಾ ಪಿಡಿಎಫ್ ರೂಪದಲ್ಲಿ) ಯಾ ನುಡಿ/ಬರಹ/ಯೂನಿಕೋಡ್ ರೂಪದಲ್ಲಿ ಬೆರಳಚ್ಚಿಸಿ admin@bluewavespage.com ಇಮೇಲ್ ಗೆ ಕಳುಹಿಸಿ ಕೊಡಬೇಕು. 

ಫಲಿತಾಂಶ ವಿವರಗಳು :
• ಬಹುಮಾನ ವಿಜೇತ ಬರಹಗಾರರ ಹೆಸರನ್ನು ಬ್ಲೂ ವೇವ್ಸ್ ಪೇಜ್,ಸಾಮಾಜಿಕ ತಾಣಗಳಲ್ಲಿ ಮತ್ತು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
• ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು 21 ಡಿಸೆಂಬರ್ 2014 ರಂದು ನಡೆಯುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ: www.facebook.com/BlueWavesPage

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x