ಒಂದು ಹೆಣ್ಣು ಮಗು ಹುಟ್ಟುತ್ತಾನೆ ಒಬ್ಬ ತಾಯಿ ಮತ್ತು ಮಗು ಎರಡು ಮನಸುಗಳು ಒಟ್ಟಿಗೆ ಹುಟ್ಟುತ್ತೆ.
ಹೆಣ್ಣುಮಕ್ಕಳು ಮನೆಯ ಜೀವಾಳ ಒಂದು ಹೆಣ್ಣು ಮಗು ಜನಿಸಿದೆ ಎಂದರೆ. ಪ್ರತಿದಿನವೂ ಮನೆಯಲ್ಲಿ ಜೀವಂತಿಕೆ ತುಂಬಿದಂತೆ. ಪ್ರತಿ ಹಬ್ಬವು ಸಡಗರವೇ. ಪ್ರತಿ ಸಂಭ್ರಮವು ಸಡಗರವೇ. ಹೆಣ್ಣಿನ ಮನಸ್ಸು ಸುಂದರ ಮತ್ತು ಜೀವಂತ ಒಂದು ಕುಟುಂಬವನ್ನು ತನ್ನ ಹುಟ್ಟಿನಿಂದ ತನ್ನ ಜೀವಿತದ ಕೊನೆಯವರೆಗೂ ಪ್ರೀತಿಸುವ ಕಲೆ ಹೆಣ್ಣಿಗೆ ಮಾತ್ರ ಗೊತ್ತು. ಹೆಣ್ಣು ಎಂದರೆ ಆರೈಕೆ ಮತ್ತು ಒಡನಾಟ. ಅವಳ ಕಳಕಳಿ ಮತ್ತು ಮುತುವರ್ಜಿ ದೇವರಂತೆ.
ಒಬ್ಬ ತಂದೆಯಾಗಿ ಹೆಣ್ಣುಮಕ್ಕಳು ಬಹಳ ವಿಶೇಷ ಒಂದು ಚಿಕ್ಕ ಸಂಭ್ರಮವೇ ಆಗಿರಲಿ ಅವರ ಓಡಾಟ ಹುರುಪು ಮನೆಯಲ್ಲಿ ಹರುಷ ತುಂಬಿ ಬಿಡುತ್ತೆ. ಹೆಣ್ಣು ಹುಟ್ಟಿನಿಂದ ಕೊನೆಯವರೆಗೂ ಅದೆಷ್ಟೇ ರೂಪಾಂತರಗೊಂಡರು ತನ್ನ ತವರು ಮನೆಯನ್ನು ಎಂದಿಗೂ ಕಡೆಗಣಿಸುವುದಿಲ್ಲ. ಒಂದು ಚಿಕ್ಕ ಮಗುವಾದರೂ ತನ್ನ ತಂದೆಯ ಯೋಗ ಕ್ಷೇಮ ವಿಚಾರಿಸುವ ರೀತಿ ಅತ್ಯದ್ಭುತ ಕಾಲಕ್ಕೆ ತಕ್ಕಂತೆ ಬೆಳೆದಂತೆಲ್ಲಾ. ಇನ್ನಷ್ಟು ಸದೃಢವಾದ ಅಂತ ಬಾಂಧವ್ಯ ತಂದೆ ಮಗಳ ನಡುವೆ ಬೆಳೆದುಬಿಡುತ್ತದೆ. ಮಾತುಗಳೇ ಇಲ್ಲದ ಗಟ್ಟಿತನ ಅಪ್ಪ ಮಗಳ ಸಂಬಂಧದಲ್ಲಿ ಸದಾ ಉಸಿರಾಗಿರುತ್ತದೆ.
ಹೆಣ್ಣು ತಾಯಿಯಾಗಿ ಸಹೋದರಿಯಾಗಿ ಮಗಳಾಗಿ ಸ್ನೇಹಿತೆಯಾಗಿ ಪ್ರೇಮಿಯಾಗಿ ಮಡದಿಯಾಗಿ ಅದೆಷ್ಟೇ ಜವಾಬ್ದಾರಿಗಳನ್ನು ವಹಿಸಿಕೊಂಡರು ಅವಳ ನಿಯತ್ತು ಮಾತ್ರ ಎಂದಿಗೂ ಪ್ರತಿ ಸಂಬಂಧಕ್ಕೂ ನಿಸಂದೇಶ ಪೂರ್ವಕ.
ಹೆಣ್ಣಿನ ಗೆಳೆತನವೇ ಒಂದು ಅಚ್ಚುಕಟ್ಟು ಬಹುಶಃ ಗೆಳೆತನದಲ್ಲಿ ಹೆಣ್ಣಿನ್ನಷ್ಟು ನಿಷ್ಕಲ್ಮಶವಾಗಿ ಯಾರು ನಿಭಾಯಿಸಲಾರರು. ಒಬ್ಬ ಗೆಳತಿ ತನ್ನ ಗೆಳೆಯನ ಬಗ್ಗೆ ಎಂದು ಅಪಸ್ವರ ನುಡಿಯುವುದಿಲ್ಲ ಯಾವುದೇ ಗೊಂದಲವಿದ್ದರೂ ಆತನ ವಿರುದ್ಧ ಜಿದ್ದು ಸಾಧಿಸುವುದಿಲ್ಲ. ಹೆಣ್ಣಿನ ಎದುರು ತನ್ನೆಲ್ಲ ಭಾವನೆಗಳನ್ನು ತನ್ನೆಲ್ಲ ನೋವುಗಳನ್ನು ಯಾವುದೇ ಅಂಜಿಕೆಯಿಲ್ಲದೆ ತೋಡಿಕೊಳ್ಳಬಹುದು ಅವಳೊಂದು ಕರುಣೆಯ ತೊಟ್ಟಿಲು. ಒಬ್ಬ ಗೆಳತಿಯ ಭಾವನೆಗಳಿಂದ ನಾಟಕೀಯವಾಗಿ ರುವುದಿಲ್ಲ ನಮ್ಮ ಸರಿ-ತಪ್ಪುಗಳನ್ನು ನಾಜೂಕಿನಿಂದಲೇ ತಿದ್ದುತ್ತಾ ಸರಿ ದಾರಿಯ ತೋರಿಸುವ ಶಿಕ್ಷಕಿಯು ಗೆಳತಿ. ಹೆಣ್ಣಿನ ನಂಬಿಕೆ ಗಳಿಸಲು ಮುಖವಾಡ ಹೊತ್ತವರಿಂದ ಸಾಧ್ಯವಿಲ್ಲ. ಇಬ್ಬಗೆಯ ಮನಸುಗಳನ್ನು ಬಹಳ ಸುಲಭವಾಗಿ ಗುರುತಿಸುವಂತೆ ಪ್ರವೀಣೆ ಹೆಣ್ಣು.
ಹೆಣ್ಣು ತನ್ನ ಬದುಕಿನ ಬಹುದೊಡ್ಡ ಪಾತ್ರವನ್ನು ಮಡದಿಯಾಗಿ ನಿಭಾಯಿಸುತ್ತಾಳೆ. ಹೆಂಡತಿಯ ಸ್ಥಾನ ಸುಮ್ಮನೆ ಬರುವಂತದ್ದಲ್ಲ ಅದೊಂದು ಬದಲಾವಣೆಯ ಪರ್ವ. ತಾನು ಇಲ್ಲಿಯವರೆಗೂ ಬೆಳೆದುಬಂದ ವಾತಾವರಣ ಬೆಳೆಸಿಕೊಂಡ ಹವ್ಯಾಸ ತನ್ನೊಳಗೆ ಇದ್ದಂತ ಗುಣಗಳನ್ನೆಲ್ಲ ಪರಿವರ್ತಿಸಿ ಕೊಳ್ಳಬೇಕಾದ ಒಂದು ಅನಿವಾರ್ಯ ಮನಸ್ಥಿತಿ.
ಒಂದು ಶಾಶ್ವತ ನಿಷ್ಠೆ ಯೊಂದಿಗೆ ಜೀವನದ ಕೊನೆಯವರೆಗೂ ಪಯಣಿಸಬೇಕು ದೀರ್ಘ ಜೀವನದ ಆರಂಭ. ತನ್ನ ಮನಸ್ಸಿನ ಜೊತೆಗೆ ತನ್ನ ಸಾಮರ್ಥ್ಯವನ್ನೆಲ್ಲ ಒಂದು ಕುಟುಂಬಕ್ಕಾಗಿ ಮೀಸಲಿಡಲು ಸಿದ್ಧರಾಗಬೇಕು ಈ ಜಗತ್ತಿನ ಶ್ರೇಷ್ಠ ಸಂಬಂಧವೆಂದರೆ ಗಂಡ ಹೆಂಡತಿ. ಬಹುಶಃ ಒಂದು ಹೆಣ್ಣಿನ ನಿಜವಾದ ಹೋರಾಟ ಅರ್ಪಣೆ ನೋವು ಸಾಮರ್ಥ್ಯ ಇವೆಲ್ಲವೂ ಶುರುವಾಗುವುದೇ ಹೆಂಡತಿಯೆಂಬ ಸ್ಥಾನದಿಂದ. ಇಂದಿನ ಪರಿಪೂರ್ಣತೆಯೇ ಹೆಂಡತಿ ಎಂಬ ಸ್ಥಾನದಿಂದ ಹೆಂಡತಿಯೊಬ್ಬಳು ಒಂದು ಇಡೀ ಕುಟುಂಬಕ್ಕೆ ಬುನಾದಿ.
ಹೆಣ್ಣಿನ ತಾಯಿ ರೂಪ ಮತ್ತು ಸಹೋದರಿಯ ರೂಪ ಈ ಬದುಕಿಗೆ ಕರುಣೆ ಎಂದರೆ ಏನೆಂದು ಪರಿಚಯಿಸಲು ದೇವರು ಸೃಷ್ಟಿ ಮಾಡಿದಂಥ ಒಂದು ಅದ್ಭುತ ಸಂಬಂಧ ತಾಯಿ ಮತ್ತು ಸಹೋದರಿ ಇವೆರಡು ಬೇರೆಬೇರೆಗಳಲ್ಲ. ಒಬ್ಬ ಮಗನ ಬಗ್ಗೆ ತಾಯಿ ತೋರಿಸುವ ಕಾಳಜಿ ಜೊತೆಗೆ ಒಂದು ಮಗುವಿಗಾಗಿ ತಾಯಿ ಹೋರಾಡುವ ರೀತಿ ಒಬ್ಬ ಸಹೋದರ ನಿಗಾಗಿ ಸಹೋದರಿಯರು ಅಷ್ಟೇ ಕಾಳಜಿಯನ್ನು ಹೋರಾಟವನ್ನು ನಿಷ್ಕಲ್ಮಶ ವಾಸ್ತಲ್ಯವನ್ನ ಹೊಂದಿರುತ್ತಾರೆ. ಅದೆಂದಿಗೂ ಬದಲಾಗದ ಕರುಳು ಬಳ್ಳಿಯ ಸಂಬಂಧ.
ಪ್ರೇಯಸಿ ಬಹುಶಃ ಹೆಣ್ಣಿನ ಸುಂದರ ರೂಪ. ಒಂದು ಭಾವನೆಗಳ ಜಿಗಿತ ಪ್ರೇಮ. ನನ್ನ ಪಾಲಿಗೆ ಒಬ್ಬ ಪ್ರೇಮಿಯಾಗಿ ಹೆಣ್ಣು ದೇವತೆಯಂತೆ. ಪ್ರೀತಿಯ ಹುಟ್ಟೇ ಹೆಣ್ಣು. ತನ್ನೆಲ್ಲ ಭಾವನೆಗಳನ್ನು ಈ ಜಗತ್ತಿನ ಎದುರು ಮುಚ್ಚಿಡುತ್ತಾ ಮನದೊಳಗೆ ಖುಷಿಪಡುವ ಅವಳ ಪ್ರೀತಿಯ ನೋಟವೆ ಚಂದ. ತನ್ನ ಪ್ರೇಮಿಗಲ್ಲದೆ ಇನ್ಯಾರಿಗೂ ತನ್ನ ಭಾವನೆಗಳು ಅರ್ಥವಾಗದಂತೆ ತೋರಿಸುವ ರೀತಿ ಇದೆಯಲ್ಲ ಅದೊಂದು ಅದ್ಭುತ. ಪ್ರೀತಿ ಮಾತುಗಳಲ್ಲ ಮೌನದಲಿ ಇದೆಯೆಂದು ಅರಿಯಲು ಒಬ್ಬ ಪ್ರೇಯಸಿಯ ಕಣ್ಣುಗಳನ್ನು ನೋಡಬೇಕು. ಪ್ರೀತಿಯ ಬಗ್ಗೆ ನಾ ಇಂದಿಗೂ ಮೂಕ. ಅದನ್ನು ವಿವರಿಸಲು ಪ್ರಚಾರಪಡಿಸಲು ಎಂದೆಂದಿಗೂ ಅಸಾಧ್ಯ ಕೇವಲ ಅನುಭವಿಸಬೇಕು ಅಷ್ಟೇ ಅದೆಲ್ಲವನ್ನು ಕಲಿಸಿದ್ದು ಪ್ರೇಯಸಿಯೇ.
ಹೆಣ್ಣು ಈ ಜಗದ ಆದಿ ಈ ಜಗದ ಅಂತ್ಯ ಈ ಜಗದ ಜೀವಂತಿಕೆ ಅದನ್ನು ಕೇವಲ ಪದಗಳಿಂದ ಆಗಲಿ. ಮಾತುಗಳಿಂದ ಆಗಲಿ. ಎಂದಿಗೂ ಪರಿಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ ಪ್ರತಿಯೊಂದು ಹೆಣ್ಣು ಜನ್ಮಕ್ಕೆ ನಾನೆಂದೂ ಚಿರಋಣಿ.
–ನಿಮ್ಮೊಳಗೊಬ್ಬ ನಾರಾಯಣ