ದನಿಯಾಗದ ಹನಿಗಳು
೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!
೨.
ದುಃಖ ಸತ್ಯಗಳು
ನನ್ನ ನೋಡಿ
ನಗುತಿದೆ;
ದುಃಖ ಮರೆಯಲು
ನಾನೂ..!
೩.
'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?'
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'
ಉತ್ತರಿಸಿತು ಕಣ್ಣು.
೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ
ಮರದ ಬೇರುಗಳು
ಭೂಗರ್ಭದಲಿ ಬಿಗಿದಪ್ಪಿದವು..!
-ಹುಸೇನ್ ಎನ್
ತಂಗಾಳಿ..
ಪ್ರಿಯೆ ನೀನಿಲ್ಲದ ಜೀವನ ,
ಭಾವನೆಗಳಿರದ ಬರಿಯ ಪದಗಳ ಕವನ ,
ಬಾ ಬೇಗ ಬಾಡಿರುವ ಬದುಕಿಗೆ ಮರಳಿ ,
ಬೀಸಿದಂತೆ ಬರಡು ಭೂಮಿಯಲ್ಲಿ ತಂಗಾಳಿ…
-ಶೀತಲ್
ಗೌರವ
ನಾಲಗೆ ಸಡಿಲಾಗಿ
ಮಾತು ಹಗುರಾದಾಗ
ಗಳಿಸಿದ್ದೆಲ್ಲಾ
ಮಣ್ಣುಪಾಲು!
-ಹರಿಪ್ರಸಾದ್ ಎ.
ಜ್ಞಾನಾರ್ಜನೆ
ಕೆಲವಂ ಬಲ್ಲವರಂ ಕಾಡಿ
ಕೆಲವಂ ಬಲ್ಲವರಂ ಬೇಡಿ
ಕೆಲವು ಬಲ್ಲವರಂ ಕಾಡಿ, ಬೇಡಿ
ಮತ್ತೆ ಕೆಲವರಂ ಕಾಡಬೇಡಿ
ಇನ್ನು ಕೆಲವರು ಬೇಡ ಬಿಡಿ…
-ಉಪೇಂದ್ರ ಪ್ರಭು
ದನಿಯಾಗದ ಹನಿಗಳು -by -ಹುಸೇನ್ ಎನ್
ತಂಗಾಳಿ.-by -ಶೀತಲ್
ಗೌರವ-by -ಹರಿಪ್ರಸಾದ್ ಎ.
ಜ್ಞಾನಾರ್ಜನೆ-by -ಉಪೇಂದ್ರ ಪ್ರಭು
alla hanigavanagalu uttamavagive.
attracts the readers. by inner meanings.
ಗೌರವ-thumba istavaythu
ಎಲ್ಲ ಹನಿಗಳೂ ಅರ್ಥಭರಿತವಾಗಿವೆ.
ಎಲ್ಲವೂ ಇಷ್ಟವಾದವು…
ಎಲ್ಲಾ ಹನಿಗಳೂ ತಣಿಸುತ್ತವೆ…
All are superb.
Upendra sir, "ಬೇಡ ಬಿಡಿ" made me laugh:) Good Punch.
ಹನಿಗಳು ತೊಟ್ಟಿಕ್ಕುತ್ತಿವೆ….
ರುಚಿಯೊಂದಿಗೆ….ಚೆನಗನಾಗಿವೆ…ಧನ್ಯವಾದಗಳು !
ಎಲ್ಲವೂ ಇಷ್ಟವಾದವು, especially ದನಿಯಾಗದ ಹನಿಗಳ ಮೌನ ಕಾಡುವಂತಿದೆ…
ಮೆಚ್ಚಿದ ಮಹನೀಯರಿಗೆ ಧನ್ಯವಾದಗಳು .. ಪಂಜುವಿನ ಅಖಾಡಕ್ಕೆ ಕರೆ ತಂದ ನಟರಾಜಣ್ಣನಿಗೆ ಹ್ರಿದಯಸ್ಪರ್ಶಿ ಧನ್ಯವಾದ ..
Ella hanigalu sundara… thanks for sharing with us…