ನಾಲ್ವರ ಕವನಗಳು: ಶಿದ್ರಾಮ ತಳವಾರ, ನೂರುಲ್ಲಾ ತ್ಯಾಮಗೊಂಡ್ಲು, ಮೆಲ್ವಿನ್ ಕೊಳಲಗಿರಿ, ಆಶಿತ್

ಪಯಣ

ಎಲ್ಲೋ ನಡೆಯುತ್ತಿದೆ ನನ್ನೀ ಪಯಣ
ಎಲ್ಲೆಂತೆನಗರಿವಿಲ್ಲವಾದರೂ ಇಲ್ಲೇ ಎಲ್ಲೋ
ನಡೆಯುತ್ತಿದ್ದೇನೆ,,,,,

ದಾರಿಯುದ್ದಕ್ಕೂ ಬರೀ ಕತ್ತಲು ಎಲ್ಲೆಲ್ಲೂ ಸ್ಮಶಾನ ಮೌನ
ಕಾಣದಿಹ ಈ ದಾರಿಯಲ್ಲಿ ನನಗೆ ನಾನೇ ಪ್ರಶ್ನೆ,
ಅಲ್ಲಲ್ಲಿ ನಾಯಿ ಊಳಿಡುತಿವೆ, ತಂಪು ಗಾಳಿಗೆ ಒಣಗಿದೆಲೆಗಳು
ಪಟ ಪಟ ಉದುರುವ ಸದ್ದು ಬೇರೇನಿಲ್ಲ, ಆದರೂ,,,

ಅದಾರೋ ನನ್ನ ಹಿಂಬಾಲಿಸುವಂತಿದೆ.
ಇಲ್ಲೇ ಎಲ್ಲೋ ದೂರದಲ್ಲಿ ಬೆಂಕಿ ಹೊತ್ತಿಕೊಂಡಿದೆ
ಬಹುಶ: ಹೆಣ ಸುಡುತಿರಬಹುದು ವಾಸನೆ ಮೂಗು ಕಟ್ಟುತಿದೆ
ಯಾವುದೀ ತಾಣ ? ಕೆಟ್ಟ ಕನಸಿರಬಹುದು ಅಲ್ಲವೇ ? ಆದರೂ,,,,

ಎಷ್ಟು ನಡೆದರೂ ದಾರಿಯೇ ಸವೆಯುತಿಲ್ಲವಲ್ಲ
ಮೈ ಪೂರ್ತಿ ಬೆವರಿ ತೇವವಾಗಿದೆ ತಿರುಗಿ ನೋಡುವಂತಿಲ್ಲ
ಇಲ್ಲೆ ಎಲ್ಲೋ ಈಗಷ್ಟೇ ಹಚ್ಚಿಟ್ಟ ಹಣತೆ ಆರಿಹೋಗಿದೆ
ಹೆಣದ ಕುಣಿಯ ಮೇಲಿರಿಸಿದ ಹೂ ಬಾಡಿ ಹೋಗಿದೆ,,,

ಎದುರಿಗದಾರೋ ಗುಂಡುಗಲ್ಲುಗಳ ಹೂಡಿ
ನಡುವೆ ಎಲುಬುಗಳಿಗೆ ಬೆಂಕಿ ಹಾಕಿ
ಮಾಂಸ ಬೇಯಿಸುವಂತಿದೆ ಛೀ ಹೊಲಸು ವಾಸನೆ
ಅಬ್ಬಾ ಇದಾವ ಲೋಕವೋ ದೇವರೆ,,,,,

ಒಮ್ಮೆಲೆ ಆಕ್ರಂದನ, ಕಾಣದ ಧ್ವನಿಯಲ್ಲಿ ನರಳಾಟ
ಎಲ್ಲೋ ಲಲ್ಲೆ ಹೊಡೆಯುವ ಸದ್ದು ಏನಿದೆಲ್ಲ
ಯಾಕೀ ಪಯಣ ಎಲ್ಲಗೀ ಯಾನ ಒಂದೂ ನಾನರಿಯೇ
ಜೋರಾಗಿ ಕಿರುಚಲೂ ಗಂಟಲು ಬಿಗಿದಿದೆ,,,,,

ಕಡೆಗೂ ತಿರುಗಿ ನೋಡುವ ಧೈರ್ಯ ಮಾಡಿದೆ
ಕೈ ಆಕಿ ಹಿಡಿದಿದ್ದೇ ತಡ ಮುಸುಕುಧಾರಿಯೊಬ್ಬ ಹಟಾತ್ತನೇ
ಎದ್ದು ಕಪಾಳಕ್ಕೆ ಬಾರಿಸಿದ್ದೇ ತಡ ಒಮ್ಮೇಲೆ ನಿರಾಳ
ಇದು ನಾ ಕಂಡ ಕನಸಿನ ಭೀಕರ ಮೌನ ಯಾನ,,,,
-ಶಿದ್ರಾಮ ತಳವಾರ

 

 

 

 


 "ಕೇವಲ ಮನುಷ್ಯ ಮಾತ್ರನು"

ಹೌದು ನಾನು  ಮುಸಲ್ಮಾನ.
ನನಗೆ ಯಾವುದೇ ಧರ್ಮಗಳ ಹಂಗಿಲ್ಲ.
ಏಕೆಂದರೆ,
ನಾನು ಧರ್ಮ -ಕರ್ಮಗಳನ್ನು ಅಂಟಿಸಿಕೊಂಡಿಲ್ಲ.
ಮಾನವ ಧರ್ಮವನ್ನು ಮಾತ್ರ ಪ್ರೀತಿಸುತ್ತೇನೆ, ನನ್ನಾತ್ಮದಂತೆ ಪರಿಶುದ್ಧನಾಗಿ.

ನನಗೆ ಯಾವುದೇ ಜಾತಿಗಳ ನಂಟಿಲ್ಲ.
ಏಕೆಂದರೆ,
ನಾನು ಆದಮ್ಜಾತಿನವನು
ಬೇಕಿದ್ದರೆ ತೆರೆದುನೋಡಿ 
ನನ್ನಹೃದಯವನ್ನು,
ಅಲ್ಲಿ ಜಿನುಗುತ್ತಿರುವ ನೆತ್ತರಿನ ವಾಸನೆ, ಮತ್ತದರ ಬಣ್ಣವನ್ನು.


ನಾನು ಮತ,ಪಂಥಗಳನ್ನು ಕಟ್ಟಿಕೊಂಡವನಲ್ಲ.
ಏಕೆಂದರೆ,
ನಾನು ಮನುಜ ಮತವನ್ನು ಅರಿತವನು.


ಹೌದು ನಾನು ಮುಸಲ್ಮಾನ
ಅಥವಾ ಹಿಂದೂ
ಅಥವಾ ಕ್ರೈಸ್ತ
ಅಥವಾ ಜ್ಯೆನ, ಬೌದ್ಧನೂ.
ನನ್ನೊಳಗಿನ ಮನುಷ್ಯತ್ವವನ್ನು ಅರಿಯುವ
ಒಬ್ಬ ಮನುಷ್ಯನು.
ಮನುಷ್ಯ ಮನುಷ್ಯನನ್ನು ಗುರುತಿಸುವ
ಕೇವಲ ಮನುಷ್ಯ ಮಾತ್ರನು.

-ನೂರುಲ್ಲಾ ತ್ಯಾಮಗೊಂಡ್ಲು 


 

 

 

 


ವನಮಹೋತ್ಸವ ದಿನ

ಗಿಡ
ಹಾಗೂ
ಹೊಂಡ
ಇವುಗಳ ಮಿಲನದ ವೇಳೆಗೆ
ನಾವೆಲ್ಲರೂ ನೀಡಿದ ಪುಣ್ಯ ಹೆಸರು
’ವನಮಹೋತ್ಸವ’
 

ಅವರು ’ವನಮಹೋತ್ಸವ’
ಆಚರಣೆಯ ನೆಪದಲ್ಲಿ
ಸಸಿಗಳನ್ನು ನೆಟ್ಟುಹೋದರು
ಪ್ರಸವದ ನಂತರ ತಾಯಿಯು
ಹಸುಳೆಯನ್ನು ಕಸದ ತೊಟ್ಟಿಯಲ್ಲಿ
ಆನಾಥವಾಗಿ ಎಸೆದು ಹೋಗುವ
ಪ್ರತೀಕ ಎನ್ನ ಕಣ್ಣ ಮುಂದೆ ಮೂಡಿತು
 

ಕಳೆದ ವರ್ಷ
ವನಮಹೋತ್ಸವದಂದು ನೆಟ್ಟ ಗಿಡ
ಈ ಬಾರಿ ಪ್ರಪ್ರಥಮವಾಗಿ
ಬಂದ ವರುಣನಿಗೆ ತಲೆಬಾಗಿ
ಧನ್ಯವಾದ ಸಮರ್ಪಿಸಿತು
 

ವರುಷದೊಳಗೆ
ನವವಿವಾಹಿತ ವಿಧುರನಾದಂತೆ
ಕಳೆದ ವರುಷದ ವನಮಹೋತ್ಸವದ
ಗಿಡವಿಲ್ಲದ ಹೊಂಡಗಳ ವಿಳಾಪಯಾತನೆ
 

ಗೀಡಗಳ ಕಳೆದುಕೊಂಡು
ವಿಧುರನಾದ ಕಳೆದ ವರುಷದ
ವನಮಹೋತ್ಸವದ ಹೊಂಡಗಳಿಗೆ…
ಈ ವನಮಹೋತ್ಸವ ದಿನಾಚರಣೆಯ
ಸಂಧರ್ಭದಲ್ಲಿ ಮರುವಿವಾಹ
ಹೊಸ ಗಿಡಗಳೊಂದಿಗೆ…
 

ವನಮಹೋತ್ಸವ ದಿನದಂದು
ಆತಿಥಿ ಗಣ್ಯರ ಕೈಯಲ್ಲಿ
ಗಿಡವೊಂದಕೊಟ್ಟು ಫೇಸ್-ಬುಕ್ಕಿಗಾಗಿ
"ಸ್ಮೈಲ್ ಪ್ಲೀಸ್" ಎಂದು ಒಬ್ಬ
ಭಾವಚಿತ್ರ ಕ್ಲಿಕ್ಕಿಸುವಾಗ…
ಕೈಯಲ್ಲಿದ್ದ ಸಸಿಯ ಮೌನ ರೋಧನೆ
 

ಸೂರ್ಯನ ಸುಡುಬಿಸಿಲಿಗೆ
ಬಾಯಾರಿ ನರಳಾಡಿ ಯಾತನೆಯಿಂದ
ಸತ್ತ ಕಳೆದ ವರುಷದ ವನಮಹೋತ್ಸವದ
ಗೀಡಗಳ ಶವಸಂಸ್ಕಾರ
ಈ ಬಾರಿಯ ವನಮಹೋತ್ಸವ
ದಿನಾಚರಣೆಯಂದು ನಡೆಯಿತು
 

"ಆಲ್ಲಲ್ಲಿ ವನಮಹೋತ್ಸವ"
ಶೀರ್ಷಿಕೆಯ ಸುದ್ಧಿಯ ಕೆಳಗೆ
"ಹಸಿವೆಯಿಂದ ನರಳಾಡಿ ಸತ್ತ
ಎಳೆಯ ಕಂದ" ಶೀರ್ಷಿಕೆಯ
ಸುದ್ಧಿಯು ಎದೆಗೆ ಬಂದು ಒದ್ದಂತೆ
ದಿನಪತ್ರಿಕೆಯಲ್ಲಿ ಎದ್ದು ಕಾಣುತ್ತಿತ್ತು
 

ಸಾಯಂಕಾಲದ ಸುಡುಬಿಸಿಲಿಗೆ
ಚರ್ಚಿನ ಮಸಣದೆಡೆಗೆ ಸಾಗುತ್ತಿದ್ದ
ಎಳೆಯ ಕಂದಮ್ಮನ ನಿರ್ಜೀವ
ಶರೀರವನ್ನು ಕಂಡು
ವನಮಹೋತ್ಸವದ ಸಸಿಯು
ಬಾಯಾರಿ ಆಳುತ್ತಿತ್ತು
 
೧೦
ರೈತನ ಹಿತವನ್ನು ರಕ್ಷಿಸುವ
ಬೊಗಳೆ ವಾಗ್ದಾನವನ್ನು ನೀಡಿದ
ರಾಜಕೀಯ ಧುರಿಣನ ಕೈಗಳು
ಇಂದು
ವನಮಹೋತ್ಸವದ ಗಿಡವನ್ನು
ನೆಡುವಾಗ ಆದುರುತ್ತಿದ್ದವು
-ಮೆಲ್ವಿನ್ ಕೊಳಲಗಿರಿ

 

 

 

 


1. ರಾಜಕೀಯ

ನಡೆಯುವ ಮುನ್ನ ಬೀಳಿಸಲು ಹವಣಿಕೆಯು,
ಬಿದ್ದರೆ ಕೈ ತಟ್ಟಿ ಕುಣಿಯಲು ಯೋಜನೆಯು,
ಎದ್ದರೆ ಬೆನ್ನು ತಟ್ಟಿ ಹೋಗಲು ಮುನ್ಸೂಚನೆಯೂ,
ಸಿಕ್ಕರೆ ಅವಕಾಶ ನೋಡದು ಯಾರನ್ನೂ,
ತನ್ನ ಹಿಂದೆ ಜನರ ದಂಡು ಇರ ಬೇಕೆನ್ನುವುದು
ರಾಜಕೀಯವಲ್ಲದೆ ಮತ್ತೇನು? 
 
2. ನಡೆ
ನಡೆಯ ದಾರಿಯೂ ಹೇಗಿದ್ದರೇನು,
ನಡೆವ ಲಯವು ಸರಿಯಾಗಿರಲಿ,
ದಾರಿ ತಪ್ಪಲು ಕಾರಗಳಿರಬಹುದು ಅನೇಕ,
ಲಯ ತಪ್ಪಲು ಕಾರಣ ಕೊಡದಿರಿ ಬಹುತೇಕ,
ದಾರಿ ತಪ್ಪಿದಲ್ಲಿ ಮುನ್ನಡೆಯಬಹುದು 
ಗುರಿಯ ದಿಕ್ಕಿನತ್ತ,
ಲಯ ತಪ್ಪಿದಲ್ಲಿ ಬದಲಾದಿತು ಗುರಿಯ ದಿಕ್ಕು!!!
 
3. ಟೋಲ್

ರೋಡ್ ಸರಿ ಇದ್ರೆ ಟೋಲ್ ಇರತ್ತೆ,
ಯಾಕೆ ಇಸ್ಟು ಟೋಲ್ ಅಂತ ಅಂದ್ರೆ, ಹೇಳ್ತಾರೆ ಹಿಂಗೆ,
ಸ್ಪೀಡ್ ಆಗಿ ಹೋಗ್ಲಿಕ್ಕೆ ಎಂಟ್ರೀಗೆ ಹಾಕ್ತೀವಿ ಟೋಲ್ ಟಿಕೆಟ್,
ಸ್ಪೀಡ್ ಜಾಸ್ತಿ ಹೋದ್ರೆ ಎಗ್ಸಿಟ್ ಮುಂಚೆ ನಿಮಗೆ ಟೋಲ್ ಫ್ರೀ ಟಿಕೆಟ್,
ರೋಡ್‌ನಲ್ಲಿ ನಿಮಗೆ ನೀವೇ ಹಾಕೋಳಿ ಸ್ಪೀಡ್ ಲಿಮಿಟ್!!!
 -ಆಶಿತ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
noorullathyamagondlu
noorullathyamagondlu
8 years ago

ಕವನ ಪ್ರಕಟಿಸಿದ ಪಂಜು ಸಂಪಾದಕರಿಗೆ ಧನ್ಯವಾದಗಳು.

ಆಶಿತ್
ಆಶಿತ್
8 years ago

ಕವನ ಪ್ರಕಟಿಸಿದ ಪಂಜು ಸಂಪಾದಕರಿಗೆ ಧನ್ಯವಾದಗಳು….

Bidaloti Ranganath
Bidaloti Ranganath
8 years ago

“ಬೇಕಿದ್ದರೆ ತೆರೆದು ನೋಡಿ ಹೃದಯವನ್ನು ಅಲ್ಲಿ ಜಿನುಗುತ್ತಿರುವ ರಕ್ತ ಮತ್ತು ಅದರ ಬಣ್ಣ”ಈಗೆ ಬರೆಯುವ ನೂರುಲ್ಲಾ ಅವರ ಸೃಜನ ಶೀಲತೆಯು ಕಾವ್ಯದುದ್ದಕ್ಕೂ ಕಾಣಬಹುದು.ಇನ್ನು ಕವನದಲ್ಲಿ ಕಾಣುವಂತೆ ಮನುಷ್ಯರಲ್ಲಿ ಮನುಷ್ಯರ ಕಾಣುವ ಚಿಂತನೆ ಈ ವರ್ತಮಾನದ ನ್ಯೂನ್ಯತೆಯನ್ನು ಎತ್ತಿ ತೋರಿಸುತ್ತಿದೆ.

Bidaloti Ranganath
Bidaloti Ranganath
8 years ago

ಪಯಣ ಕವನ ಚನ್ನಾಗಿದೆ.

4
0
Would love your thoughts, please comment.x
()
x