ನಾರಾಯಣ-ಸುಧಾ ಮೂರ್ತಿ ಕಾಲ ಇದಲ್ಲ

 

ನಾಲ್ವರು ವಿಭಿನ್ನ ವಯೋಮಾನದವರ ಜೊತೆ ಪಂಜುವಿನ ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಾಗಿ ನಡೆಸಿದ ಮಾತುಕತೆಯ ತುಣುಕುಗಳು ಇಗೋ ಸಹೃದಯಿಗಳೇ ನಿಮಗಾಗಿ..

 

ಪಂಜು

ಪ್ರೀತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ರುಕ್ಮಿಣಿ ನಾಗಣ್ಣವರ

ಎರಡು ಮನಗಳ ನಡುವಿನ ಅನನ್ಯ ಭಾವ, ನಾನೇ ನೀನು ನೀನೇ ನಾನು ಎನ್ನುವ ಅಪೂರ್ವ ಬಂಧನ. ಹೃದಯ ಸಂಗಮಗಳ ಸೇತುವೆ ಈ ಪ್ರೀತಿ..

ಪ್ರೀತಿ ಹೃದಯಗಳ ಭಾವಗೀತೆ..

ಪಂಜು

ಈ ವಿಶೇಷ ದಿನದಲ್ಲಿ ಏನಾದರು ಸಂದೇಶ ಹೇಳಲು ಬಯಸ್ತೀರ?

ರುಕ್ಮಿಣಿ ನಾಗಣ್ಣವರ

ನವ ಪೀಳಿಗೆಗೊಂದು ಮಾತು: ಪ್ರೀತಿ ಯುವ ಪರ್ವದಲ್ಲಿ ಕಾಮನ್ ಅಂತ ತಿಳಿದು ಟೈಂ ಪಾಸ್ ಲವ್ ಅಂತೆಲ್ಲಾ ಮಾಡೋಕೆ ಹೋಗಿ ನಿಮ್ಮ ಅಮೂಲ್ಯ ಸಮಯವನ್ನು ವೇಸ್ಟ್ ಮಾಡಬೇಡಿ..ಯಾರನ್ನಾದರು ಮನಸಾರೆ ಇಷ್ಟಪಟ್ಟಿದ್ದರೆ ಅವರನ್ನು ಪಡೆದುಕೊಳ್ಳಲು ನಿಮ್ಮೆಲ್ಲಾ ಎಫರ್ಟ್ ಕೊಡಿ. ಮದುವೆ ಎನ್ನುವ ಬಂಧನದಲ್ಲಿ ಒಂದಾಗಿ. ನೀವು ಮನಸ್ಸು ಮಾಡಿದ್ದಲ್ಲಿ ಎಲ್ಲವೂ ಸಾಧ್ಯ. ಪ್ರೀತಿಗೆ ಜಾತಿ ಧರ್ಮ ಅಡ್ಡ ಬರಲ್ಲವಂತೆ. ಆದ ಕಾರಣ ಪ್ರೀತಿಯ ಮೂಲಕ ಜಾತಿಯ ನಿರ್ಮೂಲನೆ ನಿಮ್ಮಿಂದ ಆಗಬೇಕು. ಪ್ರೀತಿಸಿ ಪ್ರೀತಿಸಲು ಬಿಡಿ..

ಪಂಜು

ಈಗಿನ ಕಾಲದ ಪ್ರೀತಿ ಬಗ್ಗೆ ಒಂದೆರಡು ಮಾತು ಹೇಳಿ..

ರುಕ್ಮಿಣಿ ನಾಗಣ್ಣವರ

ಮೊದಲಿನ ಕಾಲದಲ್ಲಿ ಸಂಪರ್ಕ ಸಾಧನಗಳು ಇರಲಿಲ್ಲ. ಪ್ರಿಯಕರನ ನೋಡಬೇಕು ಮಾತನಾಡಬೇಕು ಅಂದ್ರೆ ತುಂಬಾ ಟೈಮ್ ಬೇಕಿತ್ತು. ಪ್ರೀತಿಯ ಭದ್ರ ಬುನಾದಿ ಆಗಿತ್ತು ಅಂತ ಹೇಳಬಹುದು. ತಂತ್ರಜ್ಞಾನ ಮುಂದುವರೆದಿರೋ ಪ್ರಚಲಿತ ದಿನಗಳಲ್ಲಿ ಪ್ರೀತಿ ಜಸ್ಟ್ ಹಲೋ ಅಂದ ಹಾಗೆ. ನೈಜ ಪ್ರೀತಿಯನ್ನು ಹುಡುಕುವುದು ತುಂಬಾ ಕಷ್ಟ. ಹಾಗಂತ ನೈಜ ಪ್ರೀತಿಗಳಿಲ್ಲ ಅಂತಲ್ಲ. ಇವೆ. ಮನಸ್ಸು ಚಂಚಲಗೊಳ್ಳುವ ಸಾಧ್ಯತೆಗಳು ಜಾಸ್ತಿ ಇವತ್ತಿನ ದಿನಗಳಲ್ಲಿ.

ನಾರಾಯಣ-ಸುಧಾ ಮೂರ್ತಿ ಕಾಲ ಇದಲ್ಲ ಅಣ್ಣ..

ದುಡ್ಡು ಸೌಂದರ್ಯ ಇಂದಿನ ಪ್ರೀತಿಯ ಗುಟ್ಟಾಗಿಬಿಟ್ಟಿದೆ.

 

ನಾರಾಯಣ ಮೂರ್ತಿಯವರು ಸುಧಾ ಮೇಡಂ ಕಡೆ ದುಡ್ಡು ತಕ್ಕೊಂಡಿದ್ದನ್ನೆಲ್ಲಾ ಲೆಕ್ಕ ಇಟ್ಟಿದ್ದಾರಂತೆ. ಅಂತಹ ಪ್ರಾಮಾಣಿಕ ಕಾಲ ಅದು.

ದುಡ್ಡಿರೋ ಹುಡುಗೀನ/ ಹುಡುಗನ್ನ ಎಟಿಎಂ ತರಹ ಯೂಜ್ ಮಾಡೋ ಕಾಲ ಬಂದುಬಿಟ್ಟಿದೆ.

ಆಗಿನ ಕಾಲದ ಪ್ರೀತಿ ಯಶಸ್ವಿಯಾಗದೆ ಹೋದ್ರು ಮನದಲ್ಲೇ ಅವರ ಬಗ್ಗೆ ಗೌರವ ಇರ್ತಿತ್ತು. ಆರಾಧಿಸುತ್ತಿದ್ದರು.

ಪಂಜು

ಒಂದು ಹೆಣ್ಣಾಗಿ ಒಬ್ಬ ನಿಮ್ಮ ಹುಡುಗ ಹೇಗಿರಬೇಕು ಅಂತ ಬಯಸ್ತೀರ?

ರುಕ್ಮಿಣಿ ನಾಗಣ್ಣವರ

ನನ್ನೆಲ್ಲಾ ಏಳಿಗೆಗೂ ಅವನೊಬ್ಬ ಬೆನ್ನುಲುಬಾಗಿ ನಿಲ್ಲಬೇಕು, ದುಡ್ಡಿನ ಆಸೆ ಇರಬಾರದು. ಮಾನವೀಯತೆಯಲ್ಲಿ, ಸಂಬಂಧಗಳಿಗೆ ಪ್ರಾಮುಖ್ಯತೆ ಕೊಡುವ ಉದಾತ್ತ ಮನಸ್ಸಿನವನಾಗಿರಬೇಕು. ಅವನೊಬ್ಬ ಆಶಾವಾದಿಯಾಗಿರಬೇಕು. ನನಗೆ ಅವನೊಬ್ಬ ಆದರ್ಶವಾದಿಯಾಗಿರಬೇಕು. ಎಂತಹುದೇ ಸಂದರ್ಭ ಬಂದರೂ ನನ್ನ ಹೆಗಲಿಗೆ ಹೆಗಲು ಕೊಡಬೇಕು..

ಎಲ್ಲದಕ್ಕೂ ಮೀರಿ ಇತರ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಅವನಾಗಿರಬೇಕು..

ಪಂಜು

ತುಂಬಾ ಧನ್ಯವಾದಗಳು.. ನಿಮ್ಮ ಕನಸಿನ ಹುಡುಗ ಸಿಗಲಿ.. ಪಂಜುವಿಗಾಗಿ ತಮ್ಮ ಸಮಯ ನೀಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.. ಶುಭವಾಗಲಿ..

*******

 

ಪಂಜು

ಪ್ರೀತಿ ಅಂದ್ರೆ…. ನಿಮ್ಮ ಅಭಿಪ್ರಾಯ ತಿಳಿಸಿ..

ಪೂರ್ಣಿಮಾ

ಪ್ರೀತಿ………
ಬೇರೆಯವರಿಗೆ ನಾವು ಕೊಡಬಹುದಾದ ಸುಂದರ ಉಡುಗೊರೆ
ಪ್ರೀತಿ….
ಬೇರೆಯವರು ನಮ್ಮಿಂದ ಕದಿಯಬಹುದಾದ ಅತ್ಯಮೂಲ್ಯ ಭಾವನೆ

ಪಂಜು

ಆಮೇಲೆ?

ಪೂರ್ಣಿಮಾ

ಪ್ರೀತಿನ ಜಾಸ್ತಿ ಡಿಫೈನ್ ಮಾಡಬಾರದು. ಅದನ್ನು ಜಸ್ಟ್ ಫೀಲ್ ಮಾಡಬೇಕು..

ಪ್ರೀತಿ..

ನಮ್ಮ ಕಲ್ಪನೆಗೆ ನಿಲುಕದ ಒಂದು ಸುಂದರ ಭಾವನೆ..

ಪಂಜು

ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು..

 

******

ಪಂಜು

ಪ್ರೇಮ ಎಂದರೆ ಏನು ಭರತ್?

ಭರತ್ ಯಶ್

ಪ್ರೇಮ ಅಂದರೆ ಎರಡು ಹೃದಯ ಸೇರಿ ಒಂದೇ ಹೃದಯವಾಗಿ ಒಂದೇ ರೀತಿ ಯೋಚನೆ ಮಾಡುವುದು. ಎಲ್ಲರ ಪ್ರೀತಿ ಒಂದೇ ರೀತಿ ಆಗಿರುವುದಿಲ್ಲ. ಅದು ಅವರವರ ಭಾವಕ್ಕೆ ತಕ್ಕಂತೆ ಇರುತ್ತದೆ.

ಪಂಜು

ಯಾರನ್ನಾದರು ಲವ್ ಮಾಡಿದ್ದೀಯ ಗುರು? 🙂

ಭರತ್ ಯಶ್

ಯಾಕಣ್ಣ? ಎಲ್ಲರನ್ನೂ ಲವ್ ಮಾಡ್ತೀನಿ ಅಣ್ಣ.. ನಿಮ್ಮನ್ನೂ ಸಹ.. ಪ್ರೇಮದ ಅರ್ಥ ತುಂಬಾ ವಿಶಾಲ ಅಲ್ಲವೇ..

ಪಂಜು

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು..

*******

ಪಂಜು

ಶುಭೋದಯ

ಉಪೇಂದ್ರ ಪ್ರಭು

🙂

ಪಂಜು

ಪ್ರೀತಿ ಬಗ್ಗೆ ನಿಮ್ಮ ಸಂದರ್ಶನ ಇರುತ್ತೆ..

ಉಪೇಂದ್ರ ಪ್ರಭು

ದಯವಿಟ್ಟು ಬೇಡ. ಆ ಪದದ ಅರ್ಥ ಇನ್ನೂ ಹುಡುಕುತ್ತಿದ್ದೇನೆ. ನಾನು ಸಂದರ್ಶನ ಕೊಟ್ರೆ ಅರ್ಥವಿಲ್ಲದ್ದು ಆಗುತ್ತದೆ…

ಪಂಜು

ಬಹುಶಃ ನಿಮ್ಮದು ಪ್ರೇಮ ವಿವಾಹ ಅಂದುಕೊಳ್ತೇನೆ..

ಉಪೇಂದ್ರ ಪ್ರಭು

ಇದು (ನೀವೀಗ ಮಾಡುತ್ತಿರುವುದು) live ಸಂದರ್ಶನ ಇದ್ದಂತಿದೆ!!!

ಪಂಜು

ಇಲ್ಲ ಸರ್

ಉಪೇಂದ್ರ ಪ್ರಭು

ಪ್ರೇಮ ವಿವಾಹದ ಅರ್ಥ ಗೊತ್ತಿಲ್ಲ. ಆ ವಯಸ್ಸಿನಲ್ಲಿ ಚೆನ್ನಾಗಿರೋ ಯಾರನ್ನು ನೋಡಿದ್ರೂ 'ಇವಳಾದೀತು' ಅಂದ್ಕೊಳ್ಳೋ ಹುಚ್ಚುತನ. ನಾನು ಆ ಥರಾ ಅಂದ್ಕೊಳ್ತಿದ್ದೆ, ಅಷ್ಟೆ. ನನ್ನ ಬಗ್ಗೆ ಯಾರೂ 'ಇವನಾದೀತು' ಅಂದ್ಕೊಳ್ಳಲೇ ಇಲ್ಲ! ಕೊನೆಗೊಬ್ಳು ಸಿಕ್ಕಿದ್ಲು. ಮನೆಯಲ್ಲಿ ಬೇಡ ಅನ್ಲಿಲ್ಲ. ಮದುವೆ ಆಗ್ ಹೋಯ್ತು

ಪಂಜು

ಸೂಪರ್.. ಹಂಗೆ ಇನ್ನೊಂಚೂರು ಹೇಳಿಬಿಡಿ..

ಉಪೇಂದ್ರ ಪ್ರಭು

ನನಗೆ ’ಬಾಲವಿಧವೆ”ಯನ್ನು ಮದುವೆಯಾಗಿ ’ಅಗ್ಗ’ದ ದೊಡ್ಡ ಜನ ಆಗ್ಬೇಕೆಂಬ ಆಸೆ ಇತ್ತು. ತಂದೆ ತಾಯಿ ಮನಪೂರ್ವಕ ಒಪ್ಪದಿದ್ದರೂ, ಕಡ್ಡಿ ತುಂಡುಮಾಡುವಂತೆ ’ಬೇಡವೇ ಬೇಡ’ ಅನ್ನುತ್ತಿರಲಿಲ್ಲ. ಜಾತಿ ಮತ, ದೇವರು ದಿಂಡರುಗಳನ್ನು ಸ್ವಲ್ಪ ದೂರ ಇಟ್ಟವನು ನಾನು. ಕೊನೆಗೂ ಆ ಆಸೆ ಕೂಡಿ ಬರಲಿಲ್ಲ. ಅಥವಾ ಅಷ್ಟು ಕಾಯುವ ತಾಳ್ಮೆ ನನ್ನಲ್ಲಿರಲಿಲ್ಲ.

ವಿಧವೆಗೆ ಬಾಳು ಕೊಡುವುದೆಂದರೆ ಅದೊಂದು ಸಾಧನೆ, ಸಾರ್ಥಕತೆ ಅಂದ್ಕೊಂಡಿದ್ದವನು ನಾನು. ಈಗ್ಲೂ ಯಾರಾದ್ರೂ ಆ ಕೆಲಸ ಮಾಡಿದ್ರೆ ಖುಷಿಯಾಗುತ್ತೆ.

ಪಂಜು

ಒಳ್ಳೆಯ ಚಿಂತನೆ ನಿಮ್ಮದು. ಇಂದಿನ ಯುವ ಜನತೆಗೆ ನಿಮ್ಮ ಕಿವಿ ಮಾತು ಏನು?

ಉಪೇಂದ್ರ ಪ್ರಭು

ಇಂದಿನ ಯುವ ಜನತೆಗೆ ಕಿವಿ ಕಡಿಮೆ ಕೇಳಿಸುತ್ತೆ. ನಮ್ಮ ಮಾತಂತೂ ಕೇಳುವುದೇ ಇಲ್ಲ. 'ನಿಮಗೊಂದೂ ಅರ್ಥ ಆಗೋಲ್ಲ' ಅನ್ನೋರಿಗೆ, ನಮ್ಮ ಝಮಾನಾದಲ್ಲಿ 'ಹಮ್ ಕಿಸೀಸೆ ಕಮ್ ನಹೀ ಥೆ' ಅಂದ್ರೆ ' ಲೊಳಳೊಟ್ಟೆ' ಅಂತಾರೆ.

ಪಂಜು

ಗುರುಗಳೇ, ನೀವು ಎಲ್ಲಾ ಪ್ರಶ್ನೆಗೂ ಏನಾದರು ಉಲ್ಟಾ ಹೇಳ್ತೀರ?

ನಿಮ್ಮ ಕಾಲದ ಲವ್ ಹೇಗಿತ್ತು ಅದನಾದ್ರು ಹೇಳಿ?

ಉಪೇಂದ್ರ ಪ್ರಭು

ಗುರುಗಳಿಗೆ ಪ್ರಶ್ನೆ ಕೇಳಿದರೆ ಉತ್ತರ ಗೊತ್ತಿಲ್ಲದ 'ಬೇಚಾರಾ ಗುರು' ಇನ್ನೇನು ಮಾಡಲು ಸಾಧ್ಯ  ?

ನಮ್ಮ ಕಾಲದಲ್ಲಿ 'ಲವ್' ಇರಲಿಲ್ಲ. ಅವಶ್ಯಕತೆ ಇತ್ತು. ಈಗ ಅವಶ್ಯಕತೆ ಇಲ್ಲ. ಮೂರು ದಿನದ ಲವ್ ಇದೆ, easily transferable. ಆಗ ಕೂಡಾ ಅದಿತ್ತೇನೊ… ಅದರೆ ಈಗಿನ ಭಂಡ ಧೈರ್ಯ ಇರಲಿಲ್ಲ.

ಪಂಜು

ಇಷ್ಟೊಂದು ಒಗಟಾಗಿ ಹೇಳಿದ್ರೆ ನಾವು ಹೆಂಗೆ ಅರ್ಥ ಮಾಡಿಕೊಳ್ಳೋದು?

ಉಪೇಂದ್ರ ಪ್ರಭು

ಪ್ರೇಮಿಗಳ ದಿನ ವರ್ಷಕ್ಕೊಮ್ಮೆ ಯಾಕೆ ಬರಬೇಕು? ದಿನಾ ಯಾಕೆ ಬರಬಾರ್ದು? ಬಸ್ ಕಂಡಕ್ಟರ್ ಹೇಳೋ ಹಾಗೆ change ತನ್ನಿ…

ಅಂದ ಹಾಗೆ 'ಪ್ರೇಮ್ ರೋಗ್' ಬಗ್ಗೆ ನಿಮ್ಮ ಅಭಿಪ್ರಾಯ???

ಪಂಜು

ಮುಂದೆ

ಪ್ರೀತಿಯ ಬಗೆಗಿನ ನನ್ನ ಅಭಿಪ್ರಾಯಗಳ ದಾಖಲಿಸಿರುವ ಪುಸ್ತಕವನ್ನು 2014 ರಲ್ಲಿ ತಮ್ಮ ಕೈಗಿಡುವೆ..

ಉಪೇಂದ್ರ ಪ್ರಭು

ನೀವು ಬರೆಯುವುದಾದರೆ ಒಂದು subject ಕೊಡ್ತೇನೆ. ವಸ್ತುನಿಷ್ಠವಾಗಿ ಬರೆಯಲು ಪ್ರಯತ್ನಿಸಿ: ಹದಿಹರೆಯದ ಹುಚ್ಛು ಮನಸ್ಸಿನ ಹತ್ತಾರು ಮುಖಗಳು (ಹುಚ್ಛು ಮನಸ್ಸಿನ ಹತ್ತು ಮುಖಗಳು -ಎಂದು ಈಗಾಗಲೇ ಬಂದಿದೆ. ಅದಕ್ಕೇ 'ಹದೆಹರೆಯದ' ಮತ್ತು 'ಹತ್ತಾರು' ಸೇರಿಸಿ)

It will be a best seller…

ಪಂಜು

ಗುರುಗಳೇ, ನಮಗೆಲ್ಲಾ ಯಾಕೆ ಬುದ್ದಿವಾದ ಹೇಳೋ ಕೆಲಸ..? 🙂

ಉಪೇಂದ್ರ ಪ್ರಭು

ನಮಗೆ ವಾದ ಮಾಡೋಕೆ ಬರಲ್ಲ. ಅದಕ್ಕೇ ಬುದ್ಧಿ'ವಾದ'

ನೀವು ಅನುಭವಿಸಿದ್ದನು ಬರೆಯಿರಿ..

ಪಂಜು

ಟ್ರೈ ಮಾಡ್ತೀನಿ.. ಆಗಾಗ ಹೀಗೆ ಪ್ರೀತಿ ಬಗ್ಗೆ ಒಂದೊಂದು ಪ್ರಶ್ನೆ ಕೇಳಿ ತಲೆ ತಿನ್ನುತ್ತೇನೆ..  ನಿಮ್ಮ ಸಮಯಕ್ಕಾಗಿ ಧನ್ಯವಾದಗಳು..

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Upendra
Upendra
11 years ago

ತಿದ್ದುಪಡಿ: ಹುಚ್ಛು  -> ಹುಚ್ಚು, best seller -> bestseller

nihaarika
nihaarika
11 years ago

chennnagide…

ಆತ್ರಾಡಿ ಸುರೇಶ ಹೆಗ್ಡೆ

"ಸುಧಾ – ನಾರಾಯಣ ಮೂರ್ತಿ ಕಾಲ ಇದಲ್ಲ"

ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರ
ಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರ

ಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆ 
ಎಲ್ಲರೂ ಸದಾಕಾಲ ಪ್ರೀತಿಸುತ್ತಾ  ಪ್ರೀತಿಗಾಗಿ ಹಾತೊರೆಯುವವರೇ!

Utham Danihalli
11 years ago

Yelara mathu chenagidhe panjuge shubhavagali

PARTHASARATHY N
11 years ago

ಎಲ್ಲರು ಸಂದರ್ಶನಗಳು ಚೆನ್ನಾಗಿವೆ ಬಿಚ್ಚುಮಾತು ಹಿಡಿಸಿತು. ಹಾಗೆ ಆತ್ರಾಡಿಯವರ ಮಾತು ಅನುಮೋದಿಸುವೆ 
ಪ್ರೀತಿಗೆ ವಯಸ್ಸಿನ ಸಂಕೋಲೆ ಏಕೆ ?

ಶರತ್ ಚಕ್ರವರ್ತಿ
ಶರತ್ ಚಕ್ರವರ್ತಿ
11 years ago

ಎಲ್ಲರ ಉತ್ತರಗಳು ಚನ್ನಾಗಿವೆ, ಇಲ್ಲಿ ವಯೋ ಮಾನದ ಪ್ರಶ್ನೆ ಅಲ್ಲ, ಕಾಲದ ಪ್ರಶ್ನೆ. ಜಗತ್ತು ಸಂಕುಚಿತ ಆದಷ್ಟು ಯುವಪೀಳಿಗೆ ಪ್ರೀತಿಯ ಗಾಡ ಪ್ರಭಾವದಿಂದ ವಂಚಿತವಾಗಿದೆ. ಕಾಯುವಿಕೆ ಎಂಬ ಸುಂದರ ಪ್ರಕ್ರಿಯೆ ಇಂದು ಕಣ್ಮರೆ ಆಗಿದೆ. ನೋಡಬೇಕು ಎನಿಸಿದಾಗ ಜೊತೆಯಲ್ಲಿಯೇ ಕುಳಿತು ಮಾತನಾಡುತ್ತಿರುವಂತಹ ಅನುಭವ ನಮ್ಮ ಆಧುನಿಕ ತಂತ್ರಗಾರಿಕೆ ಇಂದ ಸಾಧುವಾಗಿದೆ. ಆದ್ದರಿಂದ ಪ್ರೀತಿಯ ಗಾಡ ಅನುಭೂತಿ ಇಂದಿನ ಪ್ರೇಮಿಗಳಿಗೆ ಇಲ್ಲ ಎಂದೇ ಹೇಳಬಹುದು. ಕೇವಲ ಒಣ ಆದರ್ಶಗಳೇ ಪ್ರೀತಿಯಾಗುವುದಿಲ್ಲ.

ನವೀನ್ ಮಧುಗಿರಿ
ನವೀನ್ ಮಧುಗಿರಿ
11 years ago

ಪ್ರೀತಿಯ ಕುರಿತು ನನ್ನ ಅಭಿಪ್ರಾಯ- ಪ್ರೀತಿಯೆಂದರೆ ಇಷ್ಟೇ, ನಂಬಿಕೆ & ಕಾಳಜಿ…

trackback

[…] ಸವಿಯನ್ನು ಸವಿಯಲು ಕ್ಲಿಕ್ಕಿಸಿ: https://www.panjumagazine.com/?p=785 Share this:TwitterFacebookLike this:Like Loading… This entry was posted on July 22, 2013, in […]

8
0
Would love your thoughts, please comment.x
()
x