ಲೇಖನ

ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ: ಚೈತ್ರಾ ಎಸ್.ಪಿ.

ಗೆಳೆಯನೊಬ್ಬ ಮೆಸ್ಸೇಜ್ ಮಾಡಿದ್ದ, "ಮದ್ವೆಗೆ ಹುಡುಗನ್ನೇನಾದ್ರು ನೋಡ್ತಾ ಇದಾರೇನೆ ??", "ಇಲ್ಲಪ್ಪಾ", "ಯಾಕೋ??!!"ಎಂದು ಮರು ಪ್ರಶ್ನೆ ಹಾಕಿದ್ದೆ. "ಸುಮ್ನೆ ಕೇಳ್ದೆ, ನಾಚ್ಕೊಂಡ್ಯೇನೇ ??"ಎಂದಿದ್ದ ಆತ. ನನಗೆ ಸಿಕ್ಕಿದ್ದ ಹೊಸ ಗೆಳೆಯ. ನನ್ನ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನನ್ನ ಹಳೆಯ ಫ್ರಿಂ ಡ್ಸ್ ಅಂತ ಕರೆಸಿಕೊಂಡವರೆಲ್ಲರೂ, " ನೀನೂ ನಾಚ್ಕೊತೀಯೇನೇ ??!! ಹುಡ್ಗೀರ್ ಮಾತ್ರ ಕಣೇ ನಾಚ್ಕೊಳೋದು ", ಅಂತ ಹೇಳ್ತ ಇದ್ರೇ ವಿನಃ ಯಾರೂ ಈ ಥರ ಕೇಳಿರ್ಲಿಲ್ಲ. ಉತ್ತರಿಸುವ ಗೊಂದಲದಲ್ಲಿದ್ದ ನನ್ನ ಭಾವ ಸರಪಳಿ ಇನ್ನೆಲ್ಲೋ ಕರೆದೊಯ್ದಿತ್ತು ನನ್ನನ್ನು. ಅಮ್ಮ ಹೇಳಿದ ಮಾತು ನೆನಪಾಗ್ತಾ ಇದೆ, "ಗಂಡು ಮಕ್ಳು ಅಂತ ತಲೆ ಮೇಲೆ ಹೊರಿಸ್ತಾರೆ, ಅವ್ರಿಗಿಂತ ನಾವೇನು ಕಮ್ಮಿ ಇಲ್ಲ ಅಂತ ಸಾಧಿಸಿ ತೋರಿಸ್ಬೇಕು". ಅದ್ಯಾವ ಭಾವದಲ್ಲಿ ಅವಳಂದ ಮಾತು ನನ್ನ ತಲೆಯಲ್ಲಿ ಬೇರೂರಿತೋ ನಾ ಕಾಣೆ. ಶಾಲೆಯಲ್ಲಿ ಗಂಡು ಕುದುರೆ ಅಂತ ಕರೆಯೋ ಮಟ್ಟಿಗೆ ನನ್ನ ಹಾವ ಭಾವವನ್ನು ಆ ಮಾತು ನುಂಗಿ ಬಿಟ್ಟಿತ್ತು. ಬರೀ ತಿಂಗಳಿನ ಆ ಮೂರು ದಿನ ನೆನಪಿಸ್ತಾ ಇತ್ತು, ನೀನು ಹುಡುಗಿ ಅಂತ. 

ಮೇಕ್ ಅಪ್ ಮಾಡ್ಕೊಳೊದ್ರಲ್ಲಿ ನಿರಾಸಕ್ತಿ, ಹೊರ ವೇಷಕ್ಕಿಂತ ಮನಸ್ಸು ಮುಖ್ಯ ಅನ್ನೋ ನಂಬಿಕೆ. ಅಂದಕ್ಕಿಂತ ಆರೋಗ್ಯ ಮುಖ್ಯ ಅನ್ನೊ ಭಾವನೆ. ಎಲ್ಲ ಬಿಟ್ಟೂ ಚಪ್ಪಲಿ ಅಂಗಡಿಗೆ ಹೋದ್ರು ಬೇರೆ ಬೇರೆ ಥರದ ಸ್ಯಾಂಡಲ್ಸ್ ಕಣ್ಣಿಗೆ ಬೀಳ್ತಿದ್ವೇ ವಿನಾಃ ಹುಡ್ಗೀರ ಫ್ಲಾ ಟ್ಸ್, ಹೀಲ್ಸ್ ಗಳಲ್ಲ. ಮಾಡಿದ್ದು ಕೂಡ ಹುಡ್ಗರ ಬ್ರಾಂಚ್ ಅಂತ ಕರೆಸ್ಕೊಳೋ ಮೆಕ್ಯಾನಿಕಲ್ ಇಂಜಿನೀರಿಂಗ್ ನ. "ನಿಮ್ ಬ್ರಾಂಚ್ ನಲ್ಲಿ ಹುಡ್ಗೀರಿಲ್ವೇನೋ", ಅಂದಾಗ "ಇಲ್ಲಾ ಮಚ್ಚಾ", ಅಂತ ಹೇಳಿ ನನ್ನ ಅವರೊಂದಿಗೆ ಸೇರಿಸ್ಕೊಂಡು ಬಿಟ್ಟಿದ್ರು. ಹೀಗೆ, ಟ್ರೆಕ್ಕಿಂಗ್ 

ಅಣ್ಣಂದಿರು, ತಮ್ಮಂದಿರು, ಭಾವಂದಿರು ಹೀಗೇ ದೊಡ್ಡ ಹುಡುಗರ ಗುಂಪು ನಮ್ಮನೆಯಲ್ಲಿ. ಚಿಕ್ಕಂದಿನಿಂದಲೇ ಅವರೊಂದಿಗೆ ಕ್ರಿಕೆಟ್, ಬೈಕ್ ಸವಾರಿ ಮಾಡಿದ್ದೇ ಹೆಚ್ಚು, ಹೊರತು ಬಾರ್ಬಿ ಡಾಲ್ ಆಟವಲ್ಲ. ಅಮ್ಮ ಹೇಳಿದ ಮಾತು ನೆನಪಾಗ್ತಾ ಇದೆ, " ಗಂಡು ಮಕ್ಳು ಅಂತ ತಲೆ ಮೇಲೆ ಹೊರಿಸ್ತಾರೆ, ನಾವೇನು ಕಮ್ಮಿ ಇಲ್ಲ ಅವ್ರಿಗಿಂತ ಅಂತ ಸಾಧಿಸಿ ತೋರಿಸ್ಬೇಕು". ಅವಳಂದ ಮಾತು ಅದ್ಯಾವ ಭಾವದಲ್ಲಿ ನನ್ನ ತಲೆಯಲ್ಲಿ ಬೇರೂರಿತೋ ನಾ ಕಾಣೆ, ಶಾಲೆಯಲ್ಲಿ ಗಂಡು ಕುದುರೆ ಅಂತ ಕರೆಯೊ ಮಟ್ಟಿಗೆ ನನ್ನ ಹಾವ ಭಾವವನ್ನು ಆ ಮಾತು ನುಂಗಿ ಬಿಟ್ಟಿತ್ತು. ಬರೀ ತಿಂಗಳಿನ ಆ ಮೂರು ದಿನ ನೆನಪಿಸ್ತಾ ಇತ್ತು, ನೀನು ಹುಡುಗಿ ಅಂತ. 

ಮೇಕ್ ಅಪ್ ಮಾಡ್ಕೊಳ್ಳೋದ್ರಲ್ಲಿ ನಿರಾಸಕ್ತಿ, ಹೊರಗಿನ ವೇಷಕ್ಕಿಂತ ಒಳಗಿನ ಮನಸ್ಸು ಮುಖ್ಯ ಅನ್ನೋ ನಂಬಿಕೆ. ಅಂದಕ್ಕಿಂತ ಆರೋಗ್ಯದ ಮೇಲೆ ಏಕಾಗ್ರತೆ ಹೆಚ್ಚು. ಎಲ್ಲಾ ಬಿಟ್ಟೂ ಚಪ್ಪಲಿ ಅಂಗಡಿಗೆ ಹೋದ್ರೆ ಬೇರೆ ಬೇರೆ ಥರದ ಸ್ಯಾಂಡಲ್ಸ್ ಕಣ್ಣಿಗೆ ಬೀಳ್ತಿದ್ವೇ ವಿನಾಃ ಹುಡ್ಗೀರು ಹಾಕ್ಕೊಳೋ ಫ್ಲಾ ಟ್ಸ್, ಹೀಲ್ಸ್ ಗಳಲ್ಲ. ಮಾಡಿದ್ದೂ ಕೂಡ ಹುಡ್ಗರ ಬ್ರಾಂಚ್ ಅಂತ ಕರೆಸ್ಕೊಳೊ ಮೆಕ್ಯಾನಿಕಲ್ ಇಂಜಿನೀರಿಂಗ್ ನ. " ನಿಮ್ ಕ್ಲಾಸ್ ನಲ್ಲಿ ಹುಡ್ಗೀರಿಲ್ವೇನೋ", ಅಂದಾಗ " ಇಲ್ವೋ ಮಚ್ಚಾ", ಅಂತ ಹೇಳಿ ನನ್ನನ್ನ ಅವ್ರೊಂದಿಗೆ ಸೇರ್ಸ್ಕೊಂಡಿದ್ರು ನಮ್ ಫ್ರೆಂ ಡ್ಸ್. ಹೀಗೆ, ಟ್ರೆಕ್ಕಿಂಗ್, ಗೇರ್ ಬೈಕ್ ಓಡ್ಸೋದು, ಲೈಫ್  ಅಲ್ಲಿ ರಿಸ್ಕ್ಸ್ ತಗೋಳೋದು, ಇವೆಂಟ್ಸ್ ಹ್ಯಾಂಡಲ್ ಮಾಡೋದು… ಒಟ್ನಲ್ಲಿ ಸುತ್ತಲಿನ ವ್ಯಕ್ತಿ ಪರಿಸರದಿಂದ ಹಾಗಾಗಿದ್ದೆ. ಹಣೆಪಟ್ಟಿ ಬಂದು ಹೋಗಿತ್ತು, " ಗಂಡುಬೀರಿ ", ಅಂತ. ಸೋ ಕಾಲ್ಡ್ ರಿಲಾಟಿವ್ಸ್ ನೋಡೊ ರೀತಿನೇ ಬೇರೆ ಆಗಿತ್ತು.

ಇವೆಲ್ಲಾ ನನ್ನ ಅನುಭವಕ್ಕೆ ಬರೋ ಹೊತ್ತಿಗೆ," ಓಹ್ !! ಹುಡ್ಗೀರಂದ್ರೆ ಹೀಗೇ ಇರ್ಬೇಕಾ ??",  ಅಂತ ಅನ್ಸೋಕೆ ಶುರು ಆಯ್ತು. ತುಂಬಾ "ಡೀಸೆಂಟ್", ಅಂತ ಮುಖವಾಡ ತೊಟ್ಕೋಬೇಕಾ ?? ಅಷ್ಟಕ್ಕೂ ಈ ಡೀಸೆನ್ಸಿ ಹುಡ್ಗರ ಜೊತೆ ಇದ್ದ ತಕ್ಷಣ ಹೊರಟು ಹೋಗತ್ತ ?? ಯಾಕೆ ನಂಗೂ ಎಲ್ಲ ಹುಡ್ಗೀರ್ ಥರ ಕಾಡು ಹರಟೆ ಹೊಡೀತ, ಗಾಸಿಪ್ಸ್ ಮಾಡ್ಕೊಂಡು ಟೈಮ್ ಪಾಸ್ ಮಾಡ್ತಾ ಡ್ರೆಸ್ಸ್, ಒಡವೆ, ಮೇಕ್ ಅಪ್, ಅಡಿಗೆ ಇದ್ರಲ್ಲೆಲ್ಲಾ ಆಸಕ್ತಿ ಇಲ್ಲ ?! ಇಲ್ದೇ ಇದ್ದ ಮಾತ್ರಕ್ಕೆ ಇವೆಲ್ಲದರ ಸೋಗಿನಲ್ಲಿ ಬದುಕಬೇಕಾ !? ಹುಡುಗಿ ಆದ ಮಾತ್ರಕ್ಕೆ…..?

ಹಾಗೆಂದ ಮಾತ್ರಕ್ಕೆ ನನ್ನೊಳಗಿರೋದು ಹುಡುಗೀನೆ ಕಣ್ರೋ… ನನಗೂ ಸೀರೆ ಉಟ್ಟು ಅದಕ್ಕೊಪ್ಪುವ ಜುಮುಕಿ ಹಾಕಿ, ಕಾಲ್ಗೆಜ್ಜೆಯ ಸದ್ದಿನಿಂದ ಮನೆಯೆಲ್ಲಾ ಓಡಾಡಬೇಕೆಂಬ ಆಸೆಯಿದೆ. ತಮ್ಮನಿಗೆ ಭಾವ ಹಂಚಿಕೊಳ್ಳೋ ಅಕ್ಕ ನನ್ನಲ್ಲೂ ಇದ್ದಾಳೆ. ತಂಗಿಗೆ ಪ್ರೀತಿಯ ಗೆಳತಿಯಾಗಬಲ್ಲೆ. ಗೆಳೆಯನಿಗೆ ತಾಯಿಯ ನೆನಪಾದಾಗಲೆಲ್ಲ ಹಣೆ ತಟ್ಟಿ ಮಡಿಲಲ್ಲಿ ಮಲಗಿಸಿಕೊಳ್ಳುವ ಪ್ರೀತಿಯ ತಾಯಿ ನಾನಾಗಬಲ್ಲೆ. ಗೆಳತಿ ನನ್ನ ಬಿಟ್ಟು ಹೋದ್ಲು ಅಂತ ಅತ್ತ ಆ ಕಣ್ ಕಂಬನಿಗಳನ್ನ ಒರೆಸಿ, ದಣಿದ ಗೆಳೆಯನ ತಲೆಗೆ ಆಸರೆಯಾಗುವ ಹೆಗಲಿದೆ ನನ್ನಲ್ಲೂ. ದುಂಡು ಮಲ್ಲಿಗೆಯ ಘಮಕ್ಕೆ ಮನ ಸೋತಿದೆ. ಮದರಂಗಿಯ ಪರಿಮಳ ಮನ ಕಲಕಿದೆ. ರಸಿಕ ಕವಿಗಳ ಪದ್ಯವನ್ನೋದಿ ನಾಚಿ ಕೆನ್ನೆ ಕೆಂಪಾಗಿದೆ. ಮಲೆನಾಡಿನ ಗಿರಿ ಸೌಂದರ್ಯಕ್ಕೆ ಮೂಕ ವಿಸ್ಮಿತಳಾಗುತ್ತೇನೆ ಪ್ರತೀ ಬಾರಿ. ಪ್ರಥಮ ಮಳೆಗೇಳುವ ಮಣ್ಣಿನ ಸುವಾಸನೆಗೆ ಭೂ ತಾಯಿಗೆ ತಲೆ ಬಾಗಿ ನಮಸ್ಕರಿಸಿದ್ದೇನೆ. ನನ್ನ ವಿಷಯದಲ್ಲಿ ತಪ್ಪು ಮಾಡಿದ ಅದೆಷ್ಟೋ ವ್ಯಕ್ತಿಗಳನ್ನ ತಪ್ಪು ಮಾನವ ಸಹಜ ಗುಣವೆಂದು ಕ್ಷಮಿಸಿದ್ದೇನೆ. ನಮ್ಮ ಮನೆಯ ಪುಟ್ಟ ಪಾರ್ಥನಿಗೆ ತಾಯಿಯಾಗಿದ್ದೇನೆ. ನನ್ನದೇ ಮಗುವಿನ ತನುಗಂಧವನ್ನು ಆಘ್ರಾಣಿಸುತ್ತಾ ಪಡೆಯುವ ಆ ತಾಯ್ತನದ ಸುಖವನ್ನು ಮಾತಿನಲ್ಲಿ ವರ್ಣಿಸಲಾಗದೆ ಚಡಪಡಿಸುತ್ತಿದ್ದೇನೆ. 

ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ. ಪ್ರೀತಿಸಿದೆ, ಪ್ರೀತಿಯ ಅರಿವಿಲ್ಲದೆ. ಕಣ್ಣೀರಿಟ್ಟೆ, ಕಾರಣ ತಿಳಿಯದೆ. ಇಂದು ಬರೆಯುತ್ತಿದ್ದೇನೆ, ಯಾಕೆಂದರೆ ಕೂಗಿ ಹೇಳಬೇಕೆನಿಸಿದೆ ನನಗೆ, ನಾನೂ ಹೆಣ್ಣು ಎಂದು…..

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

7 thoughts on “ನಾನೂ ನಾಚಿದೆ, ನಾಚಿಕೆಯೆಂದು ತಿಳಿಯದೆ: ಚೈತ್ರಾ ಎಸ್.ಪಿ.

  1. story is narrated very beautifully, touches many aspects of a gender perception in the society. was there a copy/paste problem? some things are repeated

  2. ha ha chennaagide……….a0ti0tha heNNu naanalla…nanna0tha heNNu yarU illa ! haaDu nenapaaitu 🙂

     

Leave a Reply

Your email address will not be published. Required fields are marked *