ಲೇಖನ

ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ: ರೂಪ ರಾವ್


ನನ್ನ ಪ್ರೀತಿಯ ವಿಕಿಗೆ,

 
ನೆನ್ನೆ ನೀನು ಐ ಲವ್ ಯು ಸುಮಾ ಅಂದಾಗ ಎಷ್ಟು ಖುಷಿಯಾಯ್ತು ಗೊತ್ತಾ ಮಾತಾಡೋಕೆ ಆಗಲಿಲ್ಲ. ಒಂದು ವರ್ಷದಿಂದ ಪ್ರೀತ್ಸೋ ಪ್ರೀತ್ಸೋ ಅಂತ ನಿನ್ನ ಹಿಂದೆ ಬಿದ್ದಿದ್ದ ನನ್ನನ್ನ ಫ್ರೆಂಡ್ ಆಗೇ ನೋಡ್ತಿದ್ದ ನೀನು ಇದ್ದಕಿದ್ದ ಹಾಗೆ ಬೇಸಿಗೆಕಾಲದ ಮಳೆ ಥರ ಪ್ರೀತಿಸ್ತೀನಿ ಅಂದ್ರೆ……. ಒಂದು ಕ್ಷಣ ಎದೆ ಝಲ್ಲೆಂತು… ಪ್ರೀತಿಸಿದ ಹುಡುಗನ ಬಾಯಲ್ಲಿ ಇಂಥ ಮಾತು ಕೇಳುವಾಗಿನ ಸ್ವರ್ಗ ಸುಖವೇ ಬೇರೆ ಕಣೋ..ಅಂತಹ ಗಾಳೀಲಿ ತೇಲ್ತಾ ತೇಲ್ತಾ ನಗ್ತಾ  ಇದ್ದ ಹಾಗೆ …
 
ನೀನೇ ಇನ್ನೊಂದು ಮಾತು ಹೇಳಿದೆ.
ವಸು ನೆನ್ನೆ ನನ್ನ ಕೂರಿಸ್ಕೊಂಡು ಬುದ್ದಿ ಹೇಳಿದ್ಳು….
 
ವಸು ಯಾರಂತ ಗೊತ್ತು ನಂಗೆ ನೀನು ಪೂಜಿಸೋಳು. ನೀನು ಪ್ರೀತಿಸೋಳು. ಆದರೆ ಆಕೆಗೆ  ಮಾತ್ರ ಅವಳು ನಿನ್ನ ವೆಲ್ ವಿಶರ್ ಅಷ್ಟೆ ಅದನ್ನ ನೀನೆ ನಂಗೆ ಹೇಳಿದ್ದೆ……
 
ನಾನು ನಿನ್ನ ಪ್ರಶ್ನೆ ಮಾಡೋಹಾಗೆ ನೋಡಿದ್ದಕ್ಕೆ ನೀನು…
ಹೌದು ಸುಮಾ, ನೆನ್ನೆ ವಸು ತುಂಬಾ ಹೇಳಿದ್ಳು. ಸುಮ ಒಳ್ಳೆ ಹುಡುಗಿ. ಅವಳು ನಿನ್ನ್  ಚೆನ್ನಾಗಿ ನೋಡ್ಕೋತಾಳೆ . ತುಂಬಾ ಚೆನ್ನಾಗಿದಾಳೆ…..
 
ಹೇ ನಿನಗೆ ಗೊತ್ತಿಲ್ವೇನೋ ಇವೆಲ್ಲಾ ನನ್ನ ಬಗ್ಗೆ? ವಸುಗೆ ಗೊತ್ತಿರೋ ಅಷ್ಟು ನನ್ ಬಗ್ಗೆ ನಿನಗೆ ಗೊತ್ತಿಲ್ವಾ? ನಂಗೆ ಅವಮಾನ ಆಗ್ತಿತ್ತು. ಹೇಳ್ಬೇಕು ಅನ್ಕೊಂಡೆ………
 
ಆದರೆ ಅಪರೂಪಕ್ಕೆ ಸಿಕ್ಕ ನಿನ್ನ್ ಪ್ರೀತಿ ಎಲ್ಲಿ ಕಳ್ಕೋತೀನೋ ಅಂತ ಮಾತಾಡಲಿಲ್ಲ.. ನೀನು ನನ್ನ ತಬ್ಕೊಂಡಾಗಲೂ ಏನೂ ಅನ್ನಿಸಲಿಲ್ಲ. ಯಾಕೋ ನಿನ್ನ ಪ್ರೀತಿಸ್ಬೇಕು ಅಂತ ಆ ಕ್ಷಣಕ್ಕೆ ಅನಿಸಲೇ ಇಲ್ಲ..  ಒಳ್ಳೆ ಮರದ ಕೊರಡು ಗೋಡೆಗೆ ಒರಗಿದ ಹಾಗೆ ಒರಗಿದ್ದೆ. ಅಷ್ಟೆ. ಆದರೆ ಅಲ್ಲಿ ನಿನ್ ಹತ್ರ ಏನೂ ಹೇಳೋಕೆ ಆಗಲಿಲ್ಲ. ರಾತ್ರಿ ಎಲ್ಲಾ ಯೋಚನೆ ಮಾಡಿದೆ , ಒಬ್ಬ ವಸು ನನ್ನ ಜೀವನದ ಬಗ್ಗೆ ನಿರ್ಧಾರ ಮಾಡೋ ಅಂತ  ಮಟ್ಟದಲ್ಲಿ ಇಟ್ಟಿದೀನಾ ನಾನು ಅಂತ… ಇವತ್ತು ಅವಳು ಹೇಳಿದ್ದಕ್ಕೆ ಒಪ್ಪಿಕೊಂಡವ ನೀನು ನಾಳೆ ಅವಳು ಲೋ ಸುಮ ಸರಿ ಇಲ್ಲ ಅಂದ್ರೆ ನಂಬಲ್ಲ ಅಂತ ಏನು ಗ್ಯಾರೆಂಟಿ? ಅಂತ ಒಬ್ಬರ ಬಿಕ್ಷೆ ಯಾಗಿ ಇಲ್ಲ ಕೃಪೆ ಇಂದ ಒಲಿದ  ಪ್ರೀತಿಯ ಆಯಸ್ಸು ಎಷ್ಟು ದಿನಾ ಅಂತ……
 
ಸಾರಿ ವಿಕಿ ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ. ನಾನು ನಿನ್ನ ಪ್ರೀತಿಸೋದಿಲ್ಲ. ಪ್ರೀತಿಗೆ ಸ್ವಂತ ವಿಚಾರ, ಯೋಚನೆ. ಇರಬೇಕು ಅದಿಲ್ಲದ ನಿಂಗೆ ವಸೂನೆ ಸರಿ. ಅವಳನ್ನೇ ಒಲಿಸಿಕೋ…
ಇನ್ನು ಮೇಲೆ ಪ್ರೀತಿಸೋ ಅನ್ನೋದಿಲ್ಲ..
ಬಾಯ್
ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ: ರೂಪ ರಾವ್

  1. ಅವರು ಆಕೆ ಹೇಳಿದ್ ಮಾತ್ರಕೆ ನಿಮ್ಮ ಪ್ರೀತಿನಾ ಒಪ್ಪ್ಲಿಲ್ಲ ಅನ್ಸತ್ತೆ ಬದಲಾಗಿ ಅವರಲ್ಲಿ ನಿಮ್ ಬಗ್ಗೆ ಹುದುಗಿದ್ದ್ ಪ್ರೀತಿನ ಆಕೆ ಮಾತುಗಳು ಬೆಳಕಿಗೆ ತಂದಿರೋ ಸಾದ್ಯತೆನು ಇರ್ಬೊದಲ್ವ…….
    ಎಸ್ಟೋ ಸಾರಿ ನಾವು ಏನಾದ್ರೂ ತಗೋಬೇಕಾದ್ರೆ ನಮ್ಮ ಸ್ನೇಹಿತರು, ಬಂಧುಗಳ ಸಲಹೆ ಪಡಿತೀವಿ ಹಾಗಂತ ಅದಕ್ಕೆ ಅವರ ನಿರ್ಧಾರನೇ ಪ್ರಮುಖವಾಗಿರೋದಿಲ್ಲ………ದುಡುಕಿ ಏನೇನೋ ನಿರ್ಧಾರ ತಗೋಬಾರ್ದಿತು..

  2. ಸಾರಿ ವಿಕಿ ನಾನು ನಿನ್ನ ಮಿಸ್ ಮಾಡಿಕೊಂಡರೂ ಪರವಾಗಿಲ್ಲ. ನಾನು ನಿನ್ನ ಪ್ರೀತಿಸೋದಿಲ್ಲ…………..
    ಅಂತ ಸಂಭೋದಿಸಿರೋರು ಪತ್ರದ ಶುರುವಿನಲ್ಲಿ "ನನ್ನ ಪ್ರೀತಿಯ ವಿಕಿಗೆ" ಅಂತ ಹೇಳಿರೋದ್ರಲ್ಲಿ ಇರೋ ಪ್ರೀತಿ ವ್ಯಕ್ತವಾಗ್ತಿದೆ 🙂 🙂

Leave a Reply

Your email address will not be published. Required fields are marked *