ಮಕ್ಕಳ ಲೋಕ

ನಮ್ಮ ಪುಟ್ಟಿ: ವೆಂಕಟೇಶ ಚಾಗಿ

ನಮ್ಮ ಪುಟ್ಟಿ

(ಮಕ್ಕಳ ಕವನ)

ನಮ್ಮ ಪುಟ್ಟಿಯ ಚಂದದ ಆಟ
ನೋಡಲು ಎಷ್ಟು ಸುಂದರ
ಪುಟ್ಟಿ ಜೊತೆಗೆ ಆಟವನಾಡಲು
ಬರುವನು ಬಾನಿಗೆ ಚಂದಿರ..!!

ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ
ಆಡಿಸಿ ನಗುತ ನಲಿಯುವಳು
ಗೊಂಬೆಗೆ ಬಣ್ಣದ ಅಂಗಿಯ ಹಾಕಿ
ಲಾಲಿಸಿ ಅಳುವ ಮರೆಯುವಳು !!

ಪುಟ್ಟ ಪುಟ್ಟ ಹೆಜ್ಜೆಗಳಿಡುತ
ಓಟದ ಆಟವ ಆಡುವಳು
ಓಡುವ ಅವಳ ಹಿಡಿದು ಬಿಟ್ಟರೆ
ಖುಷಿಯಲಿ ಕೇಕೆ ಹಾಕುವಳು ||

ಪಾಠ ಓದಲು ಕುಳಿತರೆ ನಾನು
ತನಗೂ ಪುಸ್ತಕ ಕೇಳುವಳು
ಚಿತ್ರವ ನೋಡಿ ಪುಟಗಳ ತಿರುವಿ
ಓದನು ಕ್ಷಣದಲಿ ಮುಗಿಸುವಳು ||

ಊಟ ಮಾಡುವ ರೀತಿ ಚಂದ
ನನಗೂ ತುತ್ತನು ನೀಡುವಳು
ತಿನ್ನುವ ಹಣ್ಣನು ಕಸಿದುಕೊಂಡರೆ
ನೆಲಕೆ ಬಿದ್ದು ಗೋಳಾಡುವಳು ||

ನಮ್ಮನೆ ಚೆಲುವೆ ಪುಟಾಣಿ ಪುಟ್ಟಿ
ಮಹಾರಾಣಿಯು ಅವಳೆ ನಮ್ಮನೆಗೆ
ನನ್ನ ಮುದ್ದಿನ ಪ್ರೀತಿಯ ಪುಟ್ಟಿ
ಅವಳಿದ್ದರೆ ಬೇರೆ ಬೇಡೆನಗೆ ||

ವೆಂಕಟೇಶ ಚಾಗಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *