ಹಬ್ಬ ಗಳು ಅಂದ್ರೆ ನನ್ಗೆ ತುಂಬಾ ಇಷ್ಟ, ಯಾಕೆ ಅಂದ್ರೆ ಆವತ್ತು ಸಂಭ್ರಮ ಪಡೋ ದಿನ ಹಬ್ಬಗಳ ಮಹತ್ವ ಗೊತ್ತಾಗಿದೆ ನಾನು ಇಲ್ಲಿ ಅಂದ್ರೆ ದೂರದ ಗಲ್ಫ್ ಗೆ ಬಂದ ಮೇಲೆ. ಹಬ್ಬಗಳು ನಮ್ಮತನದ ಪ್ರತೀಕ. ಇವತ್ತು ನಾವು ನಮ್ಮತನವನ ಯಾಕೋ ಬಿಟ್ಟು ಬಿಡುತಿದ್ದೇವೋ ಅಂಥ ಅನಿಸೋಕೆ ಶುರು ಆಗಿದೆ. ನಾವು ಅಂದ್ರೆ ಕನ್ನಡಿಗರೇ ಹೀಗೆನಾ ? ಯಾಕೆ ಅಂದ್ರೆ ನೀವು ಗುಜರಾತಿಗಳನ್ನ ನೋಡಿ ಎಲ್ಲಿ ಹೋದ್ರು ಅಲ್ಲಿ ಒಂದು ಸಣ್ಣ ಗುಜರಾತ್ ನ ನಿರ್ಮಿಸಿಬಿಡ್ತಾರೆ. ಆದ್ರೆ ನಾವು ಕನ್ನಡಿಗರು ನಾವು ನಮ್ಮ ಮಾತೃ ಭಾಷೆ ಆದ ಕನ್ನಡವನೇ ನಮ್ಮ ಮುಂದಿನ ಪೀಳಿಗೆಗೆ ಕಲಿಸ್ತಾ ಇಲ್ಲ. ವಿದೇಶ ಬಿಡಿ ಬೆಂಗಳೂರಿನಲ್ಲಿ ಇರೋ ಮಕ್ಕಳು ಕೂಡ ಕನ್ನಡ ಮಾತಾಡಲ್ಲ. ಮನೆಯಲ್ಲಿ ಕೂಡ ಕನ್ನಡದ ವಾತಾವರಣ ಇಲ್ಲ. ಎಲ್ಲಾ ನನ್ಗೆ ಹೇಳ್ತಾರೆ ಯಾಕೆ ನೀನು ಮಗಳ ಜೊತೆ ಇಂಗ್ಲೀಷ್ ನಲ್ಲಿ ಮಾತಾಡಲ್ಲ ಅಂಥ. ನನಗೆ ಅದರ ಅಗತ್ಯ ಇಲ್ಲ ಹೊರಗೆ ಇಂಗ್ಲೀಷ್ ಆಡೋದು ಇದ್ದಿದ್ದೇ ಮನೆಯಲ್ಲಿ ಆದ್ರೂ ಕನ್ನಡ ಇರಲಿ ಅಂಥ. ಮಾತೃ ಭಾಷೆ ಯಲ್ಲಿ ಅಭಿವ್ಯಕ್ತಿ ಸುಲಭ ಈ ವಿಷಯದಲ್ಲಿ ಹೊರನಾಡ ಕನ್ನಡಿಗರೇ ವಾಸಿ. ಇನ್ನು ಹಬ್ಬಗಳ ವಿಷಯಕೆ ಬಂದರೆ ನಮ್ಮದಲ್ಲ ದ ಹಬ್ಬವನ್ನ ನಾವೂ ಯಾಕೆ ಮಾಡಬೇಕು ? ಟಿವಿ ಸಿನಿಮಾ ನೋಡಿಕೊಂಡು ನಾವು ಎಲ್ಲಾ ಉತ್ತರ ಆಚರಣೆ ಗಳನ್ನ ನಾವು ಅಂಧಾನುಕರಣೆ ಮಾಡ್ತಾ ಇದ್ದೀವಿ.
ಹೇಳಿ ಕೇಳಿ ಭಾರತ ವೈವಿಧ್ಯಮಯ ದೇಶ ‘ ವಿವಿಧತೆ ಯಲ್ಲಿ ಏಕತೆ ನಮ್ಮ ಹೆಮ್ಮೆ ‘ ಅದುವೇ ನಮ್ಮ ಗುರುತು. ಎಲ್ಲಾ ಸಂಪ್ರದಾಯಗಳನ್ನ ಆಚರಣೆಗಳನ್ನ ಗೌರವಿಸೋಣ ಆದ್ರೆ ನಮ್ಮತನ ಬಿಡೋದು ಬೇಡ. ಹಿಂದೂ -ಮುಂದೆ ತಿಳಿಯದೇ ಏನೇನು ಆಚರಣೆ ಗಳನ್ನ ಮಾಡೋದು ಬೇಡ. ಏನೊಂದು ಮಾಹಿತಿ ಇಲ್ಲದೆ ಹಿನ್ನಲೆ ಗೊತ್ತಿಲದೇ (ಉತ್ತರ ಭಾರತೀಯರು ಮಾಡ್ತಾರೆ ) ಯಾರನು ಸಂಪರ್ಕಿಸದೆ (ಯಾರಾದ್ರು ಉತ್ತರ ದವರನ ಕೇಳಿ ತಿಳುದುಕೊಳ್ಳಬಹುದಿತ್ತು ) ಕೆಲ ಗೆಳತಿಯರು ಹಿಂದಿ ಸಿನಿಮಾ ನೋಡಿ ಕರ್ವಾ ಚೌತ್ ಆಚರಣೆ ಮಾಡಿದರು ಅದು ಕೇವಲ ಫ್ಯಾಷನ್ ಆಯಿತೆ ಹೊರತು ಅರ್ಥಪೂರ್ಣ ಆಚರಣೆ ಆಗಲಿಲ್ಲ. ಯಾಕೆ ಕರ್ವಾ ಚೌತ್ ಬೇಕು ? ನಮ್ಮಲೇ ಭೀಮನ ಅಮಾವಾಸ್ಯೆ ಇದೆ. ಇದು ಗಂಡನ ಪೂಜೆ ಮಾಡೋ ಹಬ್ಬವೇ. ಈ ನಡುವೆ ನಿಜವಾದ ಸಂಪ್ರದಾಯ ಹೋಗಿ ಬರಿ ಆಡಂಬರ ಮತ್ತೆ ಹೊರ ಅನುಕರಣೆ ಯೇ ಎಲ್ಲಾ ಕಡೆ ಕಂಡು ಬರ್ತಾ ಇದೆ. ಇತೀಚಿನ ವರ್ಗೆ ಮದುವೆ ಗಳಲ್ಲಿ ಮೆಹಂದಿ ಕಾಯಕ್ರಮ ಇರ್ತ ಇರ್ಲಿಲ್ಲ ಇವತ್ತು ಎಲ್ಲಾ ಮದುವೆ ಗಳಲ್ಲಿ ಮೆಹಂದಿ, ಇರಲೇಬೇಕು ಮತ್ತೆ ಜರಿ ಡಾನ್ಸ್ ಯಾವುದಕ್ಕು ಏನು ಅರ್ಥ ಇಲ್ಲ ಕೇವಲ ಶೋಕಿ. ಟಿವಿ ಸಿನಿಮಾ ನೋಡಿಕೊಂಡು ನಾವು ಎಲ್ಲಾ ಉತ್ತರ ಆಚರಣೆಗಳನ್ನ ನಾವು ಅಂಧಾನುಕರಣೆ ಮಾಡ್ತಾ ಇದ್ದೀವಿ.
ಇವತ್ತು ನಾವು ನಮ್ಮತನ್ನ ವನ ಉಳಿಸಿಕೋ ಳ್ಳೋದೇ ದೊಡ್ಡ ಸವಾಲಾಗಿದೆ. ಇವತ್ತು ಭಾಷೆ, ನಮ್ಮ ಹಬ್ಬಗಳು, ಅಷ್ಟೇ ಯಾಕೆ ನಮ್ಮ ಸಾಂಪ್ರದಾಯಿಕ ತಿನ್ನಿಸುಗಳು ಎಲ್ಲಾ ಎಲ್ಲಿ ಮರೆಯಾಗುತೊ ಅಂಥ ಆತಂಕ ಇದೆ, ನಾನು ಮೊದಲೆ ಹೇಳಿದ ಹಾಗೆ ಇವತ್ತು ನಾವು ನಮ್ಮ ಮಾತೃ ಭಾಷೆಯ ಮಕ್ಕಳಿಗೆ ಕಲಿಸಬೇಕು ಕನ್ನಡಿಗರಾದ ನಮಗೆ ಯಾಕೆ ಅಷ್ಟು ಇಂಗ್ಲೀಷ್ ಮೋಹ ಇದು ಅರ್ಥ ಆಗ್ದೇ ಇರೋ ವಿಷಯ. ನನ್ನ ಮಕ್ಕಳು ಕನ್ನಡ ದಲ್ಲೇ ಸ್ಪಷ್ಟ ವಾಗಿ ಮಾತಾಡ್ತಾರೆ ಇದು ನನ್ಗೆ ಹೆಮ್ಮೆಯ ವಿಷಯ. ತಮಿಳು ಮಲಯಾಳಿ ಜನರಿಂದ ನಾವು ಭಾಷಾಭಿಮಾನ ಕಲಿಯಬೇಕಿದೆ. ಪರಿಚಿತರ ಮಗ ‘ನಾನು ಆಂಟಿ ನ ಆಸ್ಕ್ ಮಾಡಿ ಚಾಕ್ಲೆಟ್ ಮಿಲ್ಕ್ ಟೇಕ್ ಮಾಡಿದೆ ‘ ಅಂದಾಗ ಏನು ಹೇಳ್ತಾ ಇದ್ದಾನೆ ಅಂಥ ಅರ್ಥ ಆಗ್ಲಿಲ್ಲ ಅವನು ಹೇಳಿದು ನನ್ನ ಕೇಳಿ ಅಲ್ಲಿ ಇದ್ದ ಚಾಕ್ಲೆಟ್ ಮಿಲ್ಕ್ ತೆಗುದುಕೊಂಡೆ ಅಂಥ. ನಾವು ಇಂಗ್ಲೀಷ್ ಮೋಹ ದಲ್ಲಿ ಮಕ್ಕಳಿಗೆ ಎಂತ ಭಾಷೆ ಯನ ಕಲಿಸ್ತಾ ಇದ್ದೀವಿ ಇದರಿಂದ ಯಾವ ಭಾಷೆ ಕೂಡ ಬರಲ್ಲ. ನಾನು ಮಗಳಿಗೆ ಈ ತರ ಕಂಗ್ಲಿಷ್ ಮಾತಾಡೋಕೆ ಬಿಡಲ್ಲ.
ನಮ್ಮ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಯುಗಾದಿ ನಮ್ಮ ಸೊಗಡಿನ ಹಬ್ಬ ನಾವು ಇವತ್ತಿನ ಬ್ಯುಸಿ ಬದುಕಿನಲ್ಲಿ ಹಬ್ಬಗಳನ್ನ ಮರೆತರೆ ನಾಳೆ ನಮ್ಮ ಮುಂದಿನ ಪೀಳಿಗೆ ಒಳ್ಳೆ ಸಂಸ್ಕೃತಿ ಸಂಸ್ಕಾರಗಳಿಂದ ವಂಚಿತ ರಾಗುತ್ತಾರೆ. ಇವತ್ತು ಸ್ಕೂಲ್ ನಲ್ಲಿ ಹ್ಯಾಲೋವಿನ್ ಡೇ ಇದೆ ನಾಳೆ ಇವೆ ನಮ್ಮ ಹಬ್ಬಗಳು ಅಂಥ ಮಕ್ಕಳಿಗೆ ಅನಿಸಿಬಿಟ್ಟರೆ ಅದು ನಮ್ಮ ದುರಂತ.
ಇನ್ನು ತಿಂಡಿ ಗಳ ಬಗ್ಗೆ ಹೇಳೋದೇ ಬೇಡ ಇವತ್ತು ಮನೆಯಲ್ಲಿ ಅಡುಗೆ ಮಾಡೋದೆ ದುಸ್ತರ ಅನ್ನೋ ಹಾಗೆ ಆಗಿದೆ, ಹೋಟೆಲ್ ನಲ್ಲಿ ಪಾರ್ಸೆಲ್ ತಂದು ತಿನ್ನೋದೇ ಆಗಿದೆ ಇವತ್ತು ಬೆಂಗಳೂರನಲ್ಲೇ ಬೆಳಗ್ಗೆ ಎಲ್ಲಾ ದರ್ಶಿನಿ ಗಳಲ್ಲೂ ಕ್ಯೂ ಇರುತ್ತೆ, ಮತ್ತೆ ವೀಕ್ ಎಂಡ್ ಬಂತು ಅಂದ್ರೆ ಎಲ್ಲಾ ಹೋಟೆಲ್ ಗಳಲ್ಲಿ ಮಾಲ್ ನ ಫುಡ್ ಕೋರ್ಟ್ ನಲ್ಲಿ ಕಾಲು ಇ ಡೋಕೆ ಆಗ್ದೇ ಇರೋವಷ್ಟು ರಶ್ ಇರುತ್ತೆ. ಮತ್ತೆ ಹೊಸ ಟ್ರೆಂಡ್ ಅಂದ್ರೆ ಪಿಜ್ಜಾ ಬರ್ಗರ್ ಮ್ಯಾಕ್ ಡಿ ನಲ್ಲಿ ತಿನೊಂದೇ ಒಂದು ಸ್ಟೇಟಸ್ ಅಂಥ ಆಗಿದೆ. ಇದು ಎಲ್ಲಾ ಕಡೆ ಒಂದೇ ತರ ಆಗಿದೆ ದುಬೈ ಬೆಂಗಳೂರು ವ್ಯತ್ಯಾಸ ಇಲ್ಲ. ಮ್ಯಾಕ್ ಡಿ ಯಲ್ಲಿ ಕಿಡ್ಸ್ ಮೀಲ್ ಗೆ ಮುಗಿ ಬೀಳೋ ಸಣ್ಣ ಮಕ್ಕಳು ಹೋದ ವರ್ಷ ಮಗಳ ಸ್ಪೋರ್ಟ್ಸ್ ಡೇ ಅಂಥ ಮುಂಬೈ ನಲ್ಲಿ ಸ್ಟೇಡಿಯಂ ಗೆ ಹೋಗಿದ್ದೆ ಮನೆ ಇಂದ ತಿಂಡಿ ತಂದಿದ್ದು ನಾನು ಒಬ್ಬಳೇ ಇರಬೇಕು ನೋಡ್ತಾ ನೋಡ್ತಾ ಇದ್ದ ಹಾಗೆ ಅಲ್ಲಿ ಮೂರೂ ನಾಲ್ಕು ಟೆಂಟ್ಗಳು ಅಲ್ಲಿ ಬಂತು ಅದರಲ್ಲಿ ಡೊಮಿನೋಸ್ ಫಿಜ್ಜಾ ಒಂದೇ ಒಂದು ಪಿಜ್ಜಾ ಕೂಡ ಉಳಿಯದೆ ಹೋಯ್ತು.
ಇವತ್ತು ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈಸ್ ನಮ್ಮ ಸಾಂಪ್ರದಾಯಿಕ ತಿಂಡಿ ಗಳಿಗೆ ಸವಾಲು ಹಾಕ್ತಾ ಇವೆ, ಪಾಯಸ ದ ಬದಲು ಪ್ಯಾಸ್ಟ್ರಿ,ಐಸ್ ಕ್ರೀಮ್ ಬಂದಿದೆ ಇನ್ನು ಅನೇಕ ಸಿಹಿ ತಿಂಡಿಗಳು ಎಲ್ಲಿ ಇಲ್ಲ ವಾಗುತೊ. ಮನೆ ಯಲ್ಲಿ ಹೋಳಿಗೆ ಮಾಡೋ ಸಹನೆ ಇವತ್ತು ಯಾರಿಗೂ ಇಲ್ಲ ಎಲ್ಲ ರೆಡಿಮೇಡ್ ಯುಗಾದಿಗೆ ಸಿಗ್ತಾ ಇದ್ದ ಹೋಳಿಗೆ ಇವತ್ತು ವರ್ಷ ವಿಡಿ ಸಿಗುತ್ತೆ ಆದ್ರೆ ಆಹಾರವನ್ನು ಯಾವ ರೀತಿ ತಯಾರು ಮಾಡ್ತಾರೆ ಅನ್ನೋದು ಅಷ್ಟೇ ಮುಖ್ಯ. ಹೆಚ್ಚುತ್ತಿರೋ ಅರೋಗ್ಯ ಸಮಸ್ಯೆ ಗಳಿಗೆ ನಮ್ಮ ಬದಲಾದ ಆಹಾರ ಮತ್ತು ಹೊರಗಿನ ತಿನ್ನೋ ಅಭ್ಯಾಸ ಮೂಲ ಕಾರಣ. ಮನೆ ಅಡಿಗೆ ತಿಂದು ಅರೋಗ್ಯ ದಿಂದ ಇರೋಣ. ನಾವು ನಮ್ಮ ತನ್ನವನ ಉಳಿಸಿಕೊಳ್ಳೋಣ ನಮ್ಮ ಭಾಷೆ ನಮ್ಮ ಹಬ್ಬ ನಮ್ಮ ಸಂಪ್ರದಾಯ ಪಾಲಿಸೋಣ ಮುಂದಿನ ಪೀಳಿಗೆಗೆ ತಲುಪಿಸೋಣ ನಾವು ನಾವಾಗಿರೋಣ ಅಂಧ ಅನುಕರಣೆ ಬೇಡ.
-ಸ್ಮಿತಾ ಮಿಥುನ್