ನನ್ನ ಹೆಸರು ಶ್ರೀನಿಧಿ. ನಾನು ಹುಟ್ಟಿದು ಶಿವಮೊಗ್ಗದಲ್ಲಿ. ಬಾಲ್ಯ, ವಿದ್ಯಾಭ್ಯಾಸ ಎಲ್ಲಾ ಶಿವಮೊಗ್ಗಾದಲ್ಲೇ. ಇಂಜಿನಿಯರಿಂಗ್ ಪದವೀಧರ. ಕಳೆದ 4 ವರ್ಷಗಳಿಂದ ಒಂದು ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗ. ತಂದೆ ತಾಯಿ ಹಾಗೂ ಒಬ್ಬ ಅವಳಿ ಸಹೋದರನಿದ್ದು ಸದ್ಯಕ್ಕೆ ಅವಿವಾಹಿತ. ನನ್ನ ಮೊದಲ ಲೇಖನಕ್ಕೆ ಈ ಕಿರು ಪರಿಚಯ ಸಾಕು ಎಂದು ನನ್ನ ಅನಿಸಿಕೆ.
ಕನ್ನಡ ಬ್ಲಾಗ್ ಬರೆಯುವ ಚಾಳಿ ಶುರುವಾದದ್ದು ಒಂದು ಸಣ್ಣ ಕಥೆ.
ಆಗ ನಾನಿದದ್ದು ಚನ್ನೈನಲ್ಲಿ. ಸ್ನೇಹಿತರೊಂದಿಗಿದ್ದ ನನಗೆ ಮನೆಯಲ್ಲಿ ಕನ್ನಡ ಬಳಕೆ ಇತ್ತೇ ಹೊರತು ಮನೆಯಿಂದ ಹೊರಗೆ ವಿವಿಧ ಬಾಷೆಗಳು ಕಿವಿಗೆ ಬೀಳುತಿದ್ದವು. ಇಂಗ್ಲೀಷ್ ಸಾಮಾನ್ಯವಾದರೆ ತಮಿಳು ಹಾಗೂ ತೆಲುಗು ಹೆಚ್ಚಾಗಿತ್ತು. ಹೊಸದಾದ ಉದ್ಯೋಗ. ಏನೋ ಸಾಧಿಸಬೇಕೆಂಬ ಮಹದಾಸೆ. ಈ ಜಂಜಾಟದಲ್ಲಿ ಕನ್ನಡ ಬರವಣಿಗೆ ಇರಲಿ ಓದುವ ಯೋಚನೆಯೂ ಸಹ ಇರಲಿಲ್ಲ. ಹೀಗೆ ಸಾಗಿತ್ತು ಏಕತಾನತೆಯ ಜೀವನ.
ನನ್ನ ಉದ್ಯೋಗದಲ್ಲಿದ್ದ ವಿಶೇಷತೆ ಅಂದರೆ ಆಫೀಸಿನಲ್ಲಿ ಎಲ್ಲಾ ಸಹೋದ್ಯೋಗಿಗಳಿಗೆ ಒಂದಲ್ಲ ಒಂದು ಹವ್ಯಾಸ. ಒಬ್ಬರಿಗೆ ಓದುವುದಾದ್ರೆ ಇನ್ನೊಬರಿಗೆ ಸಿನಿಮಾ ಮತ್ತೊಬ್ನದು ಹುಡ್ಗೀರ್ ಚಿಂತೆ. ಅವರು ಅದರ ಬಗ್ಗೆ ತಿಂಡಿ ಕಾಫೀಗ್ ಹೋದಾಗಲೆಲ್ಲ ಚರ್ಚಿಸುತ್ತಿದ್ದರು. ನಾನು ರಾಜಕೀಯ, ಕ್ರೀಡೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸ್ತಾ ಇದ್ದೆ. ಕೆಲಸದ ವಿಷಯ ಬಿಟ್ಟು ನಾನು ಬಹಳವಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಹೀಗೆ ಒಂದು ದಿನ ಪುಸ್ತಕಗಳ ಬಗ್ಗೆ ಬಹಳ ಚರ್ಚೆಯಾಯಿತು. ಆ ಚರ್ಚೆಯಲ್ಲಿ ನಾನು ಬರೀ ಕೇಳುಗ. ಬಹಳ ವಿಷಯಗಳು ತಿಳಿದವು. ಪುಸ್ತಕ ಒಬ್ಬ ಒಳ್ಳೆಯ ಸಂಗಾತಿ ಎಂದು ಒಬ್ಬ ಸಹೋದ್ಯೋಗಿ ತಿಳಿಸಿದ. ನಾನೂ ಏಕೆ ಪುಸ್ತಕಗಳನ್ನು ಓದಬಾರದು ಅಂತ ಅನ್ನಿಸ್ತು. ಸಂಜೆ ಮನೆಗೆ ಬಂದು ಮನೆಯ ಹತ್ತಿರವಿದ್ದ ಒಂದು ಪುಸ್ತಕ ಮಳಿಗೆಗೆ ಹೋದೆ.
ಆಗ ನಾನು ಇದ್ದದು ಚೆನ್ನೈ ಆದ್ದರಿಂದ ಆ ಮಳಿಗೆಯಲ್ಲಿ ಇದ್ದದು ಕೇವಲ ಇಂಗ್ಲೀಷ್ ಪುಸ್ತಕಗಳು. ನನ್ನ ಕಿವಿಗೂ ಬಹಳ ಕೇಳಿಸಿದ ಒಂದು ಪದ ಕಣ್ಣಿಗೆ ಬಿತ್ತು. "ALCHEMIST". ಆ ಪುಸ್ತಕವನ್ನು ಕೊ೦ಡು ಓದಲು ಪ್ರಾರಂಭಿಸಿದೆ. ಮುಗಿಸಿದ್ದು ಬಹಳಾ ನಿಧಾನವಾಗಿ ಅನ್ನೋದು ಬೇರೆ ವಿಷಯ. ಅಂತೂ ಹೀಗೆ ನಾನು ಒಬ್ಬ ಓದುಗನಾಗಿ ಬೀಗಿದೆ.
ನಂತರದಲ್ಲಿ ನನ್ನ ಓದುವ ಗೀಳಿಗೆ ಸಹಕಾರಿಯಾದದ್ದು ನನ್ನ ಸಹೋದರ ಶ್ರೀವಲ್ಲಭ. ಅವನು ಬಹಳ ಕನ್ನಡ ಹಾಗೂ ಇಂಗ್ಲೀಷ್ ಪುಸ್ತಕಗಳನ್ನು ಕೊಂಡು ಓದಲು ಶುರು ಮಾಡಿದ್ದ. ಅವನು ಆಗ ಬೆಂಗಳೂರಿನಲ್ಲಿ ಇದ್ದುದರಿಂದ ನಾನು ಬೆಂಗಳೂರಿಗೆ ಬಂದಾಗಲೆಲ್ಲ ಒಂದೊಂದು ಕನ್ನಡ ಪುಸ್ತಕ ಕೊಂಡು ಓದಲು ಪ್ರಾರಂಭಿಸಿದೆ. ನಂತರ ಬೆಂಗಳೂರಿಗೆ ಶಿಫ್ಟ್ ಆದಮೇಲೆ ಕೆಲ ದಿನಗಳು ನಾನು ಹಾಗೂ ನನ್ನ ಅಣ್ಣಾ ಇಬ್ಬರೂ ಶನಿವಾರ ಬಂತೆಂದರೆ ಸ್ವಪ್ನ ಬುಕ್ ಹೌಸ್ ನಲ್ಲಿ ಯಾವ ಹೊಸ ಕನ್ನಡ ಪುಸ್ತಕ ಬಂದಿದೆ ಎಂದು ಹುಡುಕಿ ಅದನ್ನ ಕೊಂಡು ಓದುವುದು ಹವ್ಯಾಸವಾಯಿತು. ಹೀಗೆ ಕೆಲ ಪುಸ್ತಕ ಹಾಗೂ ಗೊತಿಲ್ಲದ ಲೇಖಕರ ತಿಳಿದುಕೊಂಡೆ.
ಮೊದಲು ಪುಸ್ತಕಗಳಲಿದ್ದ ವಿಷಯದ ಬಗ್ಗೆ ಆಸಕ್ತಿ ಇತ್ತು. ಕೆಲ ದಿನಗಳ ನಂತರ ನನ್ನ ಆಸಕ್ತಿಯು ತಿರುಗಿದ್ದು ವಿಷಯಕ್ಕಿಂತ ಹೆಚ್ಚು ಬರವಣಿಗೆಯ ಶೈಲಿಯ ಬಗ್ಗೆ. ಗಿರೀಶ್ ಕಾರ್ನಾಡ್ ಬರೆದ 'ಆಡಾಡತ ಆಯುಷ್ಯ' ಒಬ್ಬ ದೊಡ್ಡ ಬರಹಗಾರನ ಶೈಲಿಯದಾದರೆ ಅನಂತ್ ನಾಗ್ ಬರೆದ 'ನನ್ನ ತಮ್ಮ ಶಂಕರ' ಪುಸ್ತಕವು ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಬರೆಯಬಹುದು ಎಂಬುದರ ಉದಾಹರಣೆ. ಸೋಮನಾಥ ಚಟರ್ಜೀ ಬರೆದ ಪುಸ್ತಕ 'Keeping in Faith' ಹೇಗೆ ಒಬ್ಬ ರಾಜಕಾರಣಿ ತನ್ನ ಜೀವಮಾನದಲ್ಲಿ ನಡೆದ ಘಟನೆಗಳ್ಳನು ಪುಸ್ತಕದ ರೀತಿಯಲ್ಲಿ ಚಿತ್ರಿಸಬಹುದು ಎಂಬುದಕ್ಕೆ ಒಂದು ನಿದರ್ಶನ.
ಕನ್ನಡದಲ್ಲಿ ಬರೆಯಬೇಕೆಂಬ ನನ್ನ ಆಸೆಗೆ ಕ್ಯಾಟಲಿಸ್ಟ್ ಆದದ್ದು ನಾ ಓದಿದ ಬ್ಲಾಗುಗಳು. ಕೆಲವು ವ್ಯಕ್ತಿಗಳ ಬರವಣಿಗೆ ಓದಿದ ಮೇಲೆ ನಾನು ಬರೆಯಲೇಬೇಕೆಂದು ಆನ್ನಿಸಿತು. ಪ್ರಶಾಂತ್ ಅಡೂರ್ ಅದರಲ್ಲಿ ಮೊದಲೆನೆಯವ್ರು. ಅವರು ಬರೆಯುವ ಸರಳವಾದ ಉತ್ತರ ಕರ್ನಾಟಕ ಭಾಷೆಯ ಲೇಖನಗಳು ದೈನಂದಿನ ವಿಷಯದ ಎಲ್ಲರ ಜೀವನದಲ್ಲೂ ನಡೆಯುವ ಆಗುಹೋಗುಗಳಾದರೂ ಆ ಲೇಖನಗಳಲ್ಲಿ ಏನೋ ವಿಶೇಷತೆ. ಇನ್ನೊಬ್ಬ ವ್ಯಕ್ತಿ ಅರವಿಂದ್ ಋತ್ವಿಕ್. ಅರವಿಂದ್ ಬ್ಲಾಗ್ ಬರೆಯುವುದು ಇಂಗ್ಲೀಷ್ ನಲ್ಲಿ. ಅರವಿಂದ್ ಬರೆದ 'A Journey to Remember ' ಹಾಗೂ 'Symbol of modern women' ತುಂಬಾ ಇಂಟ್ರೆಸ್ಟಿಂಗ್ ಆಗಿದ್ದು ಜೀವನಕ್ಕೆ ತುಂಬಾ ಹತ್ತಿರವಾಗಿದೆ.
ಇಷ್ಟೆಲ್ಲಾ ಬರೆದ ಮೇಲೆ ಅಂತೂ ನಾನು ನನ್ನ ಮೊದಲ ಲೇಖನ ಬರೆದೆ ಎಂಬ ತೃಪ್ತಿ. ಬರೆಯುವ ವಿಷಯದಲ್ಲಿ ನಾನಿನ್ನು ಅಂಬೆಗಾಲಿಡುತಿರುವ ಚಿಕ್ಕ ಮಗು. ಮನಸಿಗೆ ಅನ್ನಿಸಿದ ಕೆಲ ವಿಷಯಗಳನ್ನು ಹಾಗೆ ಲ್ಯಾಪ್‌ಟಾಪ್ ನಲ್ಲಿ ಕನ್ನಡ ಟೈಪಿಂಗ್ ಸಾಫ್ಟ್‌ವೇರ್ನಲ್ಲಿ ಸ್ಪೆಲಿಂಗ್ ಮಿಸ್ಟೇಕ್ ಸರಿಮಾಡುತ್ತಾ ಬರೆದದ್ದು.
ಇನ್ನೂ ಬರೆಯಬೇಕೆಂಬ ಆಸೆಯೊಂದಿಗೆ…….
– ಶ್ರೀನಿಧಿ ಜೋಯ್ಸ್
ಶುಭವಾಗಲಿ ಶ್ರೀನಿಧಿ ಜೋಯ್ಸ್. ಚೆಂದಾಗಿ ಬರೆದಿದ್ದೀರಿ.
ಧನ್ಯವಾದಗಳು ಅಖಿಲೇಶ್..
all the very best
thank you amardeep..
channaagide…..
thank you…
Sooperb Bro 🙂 (Y)
thank you prashasti….
ಬರೆಯಬೇಕೆ೦ಬ ನಿಮ್ಮ ಆಶಯಕ್ಕೆ ಇ೦ಬು ದೊರೆತು ನೀವು ಬರೆಯಲು ಪ್ರಾರ೦ಭಿಸಿದ ಅನುಭವ ಸೊಗಸಾಗಿ ಮೂಡಿದೆ. ಅಭಿನ೦ದನೆಗಳು ಶ್ರೀನಿಧಿಯವರೆ 🙂