ಖಾಸಗಿ ಶಾಲೆಗಳಲ್ಲಿ ಪ್ರತಿಷ್ಠಿತ ವಿದ್ಯಾರ್ಥಿಗಳೇ ಹೆಚ್ಚು, ಪೋಷಕರಿಗೂ ತಮ್ಮ ಮಕ್ಕಳ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ, ಆಡಳಿತಾಧಿಕಾರಿ, ಕಾರ್ಯಕಾರಿ ಮಂಡಳಿಯ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳೋದೆ ಒಂದು ಶ್ರೀಮಂತಿಕೆ ಎನ್ನಬಹುದು ಒಂದು ನಗರದ ಹೃದಯ ಭಾಗದಲ್ಲಿದ್ದ ಒಂದು ಪ್ರಸಿದ್ಧ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಸೇರಿದ್ದ ಮೊದಲ ವರ್ಷದಲ್ಲಿ ……………. . !
ಎಂಟನೆಯ ತರಗತಿಗೆ ಪ್ರವೇಶ ಮಾಡುವ ಕೆಲ ವಿದ್ಯಾರ್ಥಿಗಳಿಗೆ ನಾನು ಕೆಲವು ಪ್ರಶ್ನೆಗಳನ್ನು ಅವರ ಮೆಂಟಲ್ ಎಬಿಲಿಟಿ, ಮೆಮೋರಿ, ರೀಡಿಂಗ್, ರೈಟಿಂಗ್, ಜಿ. ಕೆ. ಸ್ಕಿಲ್ಸ್ ಬಗ್ಗೆ ವರ್ಕ್‍ಔಟ್ ಮಾಡಿಸಿ ಒಂದು ಕಿರು ಪರೀಕ್ಷೆ ನಡೆಸಿ ಓ. ಕೆ ಎಂದರೇ ವಿದ್ಯಾರ್ಥಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಹ. ಆತನ ಹಿಂದಿನ ವರ್ಷದ ಅಂಕಪಟ್ಟಿ, ವಯಸ್ಸು, ಜಾತಿ, ಆದಾಯ ಇವುಗಳೆಲ್ಲವೂ ಪರಿಶೀಲಿಸಿ ಗ್ರೀನ್ ಸಿಗ್ನಲ್ ಕೊಟ್ರೆ ಅವನ ಅಡ್ಮಿಷನ್ ಆಯ್ತು ಅಂತ ಪೋಷಕರಿಗು ಮತ್ತು ವಿದ್ಯಾರ್ಥಿಗೂ ಸಮಾಧಾನ.
ದಿನ ಒಂದಷ್ಟು ವಿದ್ಯಾರ್ಥಿಗಳು ಅವರ ಪೋಷಕರು ಬರುವುದು ಈ ರೀತಿಯ ಟೆಸ್ಟ್‍ಗಳಲ್ಲಿ ಭಾಗವಹಿಸುವುದು ಕ್ಲಿಕ್ ಆದ್ರೆ ಸರಿ ಇಲ್ಲ ಅಂದ್ರೆ ಇನ್ನೂ ಸ್ವಲ್ಪ ಪ್ರಿಪರೇಷನ್ ಮಾಡಿಸಿ ಮುಂದಿನ ವಾರ ಕರೆದು ತನ್ನಿ ಎಂದು ಹೇಳಿಕಳುಹಿಸಿಕೊಡಲಾಗುತ್ತಿತ್ತು. ಹೀಗಿರುವಾಗ ಇಂಟ್ರಿವ್‍ಗಾಗಿ ಒಬ್ಬ ವಿದ್ಯಾರ್ಥಿ ಹೆಸರು ಆನಂದ ಹೆಸರಿಗೆ ತಕ್ಕಹಾಗೆ ಮುಗುಳ್ನಗೆ ಬೀರುತ್ತ ನನಗೆ ‘ಗುಡ್ ಮಾರ್ನಿಂಗ್ ಅಪ್ಪಾಜಿ’ ಎಂದು ಹೇಳಿದ. ನಾನು ಒಂದು ನಿಮಿಷ ಕಲ್ಲಾಗಿ ಹೋದೆ!ಮತ್ತೆ ಅದೇ ವೇಗದಲ್ಲಿ ಆ ಹುಡುಗ ‘ಸಾರಿಸರ್ ಗುಡ್ ಮಾರ್ನಿಂಗ್ ಸರ್’ ಎಂದವನೆ ಮತ್ತೆ ಹೇಳಿದ ‘ನನಗೆ ನನ್ನ ಅಪ್ಪಾಜಿ ಈ ಶಾಲೆಗೆ ಸೇರಿಸೋದಕ್ಕೆ ಬಹಳಷ್ಟು ವಿಷಯ ಇಂಗ್ಲಿಷನಲ್ಲಿ ಹೇಳಿಕೊಟ್ಟಿದ್ದಾರೆ’ ಎಂದಾಗ ನನಗೆ ತಡೆಯಲಾರದಷ್ಟು ನಗು ಬಂದಿತು.
ಆನಂದನ ಇಂಟ್ರಿವ್ ಮಾಡಿದೆ. ಕೆಲವು ಉತ್ತರ ಹೇಳಿದ್ರೆ ಕೆಲವುಕ್ಕೆ ಮೌನ ಜತೆಗೆ ತುಂಟ ನಗು ನಾಳೆ ಹೇಳ್ತಿನಿ ಎನ್ನುವ ಆನಂದನ ಮುಖದಲ್ಲಿ ಸದಾ ನಗುವು ಸ್ವಲ್ಪ ಹಾಸ್ಯ ಪ್ರವೃತ್ತಿಯು ಇದ್ದಿತು. ಸರಿ ಆತನ ಡಾಕ್ಯೂಮೆಂಟ್ಸ್ ಎಲ್ಲಾ ಪರಿಶೀಲಿಸಿ ಫೀ, ಡೊನೆಷನ್ ಕಟ್ಟಲು ಅವರ ತಂದೆಯವರನ್ನು ಮತ್ತು ತಾಯಿಯವರನ್ನು ಕರೆದೆ. ‘ಆನಂದನಿಗೆ ನಮ್ಮ ಶಾಲೆ ಇಷ್ಟವಾಗಿದ್ದರೆ ನೀವು ಅಡ್ಮಿಷನ್ ಮಾಡಿಸಿ’ ಎನ್ನುತಿದ್ದಂತೆ ‘ನಾನು ಇದೇ ಶಾಲೆಯಲ್ಲಿ ಓದ್ತಿನಿ ಅಪ್ಪಾಜಿ’ ಎಂದು ಅವರ ತಂದೆಯ ಎದುರಿಗೆ ಮತ್ತೊಮ್ಮೆ ಶಾಲೆಯ ಹೆಡ್ ಮಾಸ್ಟರ್ ಆಗಿರುವ ನನಗೆ ಹೇಳಿದ. ನಾನು ಇನ್ನೊಂದು ನಿಮಿಷ ಕಲ್ಲಾದೆ!! ಮತ್ತೆ ಮುಗುಳ್ನಗೆ, ಅವರ ತಂದೆಯವರು ಆನಂದನ ನೋಡಿ ಕಣ್ಣಲ್ಲೆ ಗದರಿಸಿ ನನಗೆ ಅವನ ಬಗ್ಗೆ ಹೇಳಿದರು.
‘ಸ್ವಲ್ಪ ತುಂಟ, ಸ್ವಲ್ಪ ಚೇಷ್ಟೆ, ಸ್ವಲ್ಪ ತರಲೆ ಸರ್ ಎಂದಾಗಲು ಇಲ್ಲಿ ಅಪ್ಪಾಜಿ ಸುಳ್ಳು ಎಂದ ಆನಂದ ನಾನು ಹೀಗೆ ಅವನ ಮಾತುಗಳು ಕೇಳಿದಾಗಲೆಲ್ಲ ಹುಡುಗಾಟ, ತುಂಟತನ, ಇರಬೇಕು ಎಲ್ಲದಕ್ಕು ಮಿಗಿಲಾಗಿ ನೀನು ನಮ್ಮ ಈ ಶಾಲೆಗೆ ನಂ. 1 ಸ್ಟೂಡೆಂಟ್ ಆಗ್ಬೇಕು’ ಎಂದಾಗಲು ‘ಸರಿ ಅಪ್ಪಾಜಿ’ ಎಂದ!!! ತಲೆ ತಗ್ಗಿಸಿಯೋ! ಆನಂದನ ತಂದೆ ‘ಥ್ಯಾಂಕ್ಸ್ ಸರ್’ ಎಂದು ಹೇಳಿ ಅಡ್ಮಿಷನ್ ಮಾಡಿಸಿ ಕರೆದು ಹೋಗುತ್ತಿದ್ದಾಗಲೂ ದಾರಿಯುದ್ದಕ್ಕೂ ಅವನಿಗೆ ಬುದ್ಧಿವಾದ ಹೇಳುತ್ತಾ ಹೋದರು. ಅಷ್ಟರಲ್ಲೇ ಆನಂದ ನನ್ನ ಮಗನಾಗಿ ಶಾಲೆಯಲ್ಲಿ ಖ್ಯಾತಿ ಪಡೆದಿದ್ದ.
ಶಾಲೆಯ ಪ್ರಾರಂಭದ ದಿನ ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಗುಡ್ ಮಾರ್ನಿಂಗ್ ಸರ್, ವೆಲ್‍ಕಮ್ ಸರ್ ಎಂದು ಒಟ್ಟಾರೆ ಹೇಳಿದಾಗ ನಾನು ಸಹ ಪ್ರತಿ ನಮಸ್ಕಾರ ಮಾಡಿ ಕೂಡಿಸಿದೆ. ನಾನು ಕುಳಿತುಕೊಂಡೆ. ನನ್ನ ದೃಷ್ಠಿ ಅಚಾನಕ್ಕಾಗಿ ಆನಂದನ ಮೇಲೆ ಬಿತ್ತು. ನೋಡಿ ಸುಮ್ಮನಾದೆ, ‘ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆಯ ಪ್ರಥಮ ದಿನ ನೀವೆಲ್ಲರು ಅತ್ಯಂತ ಉತ್ಸಾಹದಿಂದ ಬಂದಿದ್ದಿರಿ ನಿಮ್ಮ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಂದ ಮತ್ತು ಶಿಕ್ಷಕ ಬಳಗದವರಿಂದ ಆತ್ಮೀಯ ಸ್ವಾಗತ’ ಎಂದೆ. ಎಲ್ಲಾ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದವು. ಮತ್ತೆ ಮಾತನಾಡೋಕೆ ಹೋರಟ ನನಗೆ ಒಂದು ಕಿರಿಕ್ ಪಾರ್ಟಿ ನನಗೆ ತೊಂದರೆ ಎಂದೆನ್ನಿಸಿತು, ನೋಡಿದರೇ ಆನಂದ ಇನ್ನೂ ಚಪ್ಪಾಳೆ ತಟ್ಟುತ್ತಲೆ ಇದ್ದಾನೆ. ‘ಸಾಕಪ್ಪ ಚಪ್ಪಾಳೆ ಸ್ವಲ್ಪವಾದರು ಉಳಿಸು ಮುಂದೆ ಬೇಕಾಗುತ್ತೆ’ ಎಂದೆ, ಅವನು ತಕ್ಷಣ ಎದ್ದು ‘ಸಾರಿ ಅಪ್ಪಾಜಿ’ ಎಂದಾಗ ಎಲ್ಲರು ಜೋರಾಗಿ ನಗೋಕೆ ಶುರುಮಾಡಿದರು, ಆನಂದನ ಹಾಸ್ಯ ಲಹರಿ ಎಲ್ಲರಿಗೂ ಪರಿಚಯವಾಯ್ತು.
ತರಗತಿಯಲ್ಲಿ ಪ್ರಶ್ನೆ ಕೇಳಿದರೆ ಉತ್ತರ ಹೇಳದಿದ್ದಾಗ, ಪನಿಷ್ಮೆಂಟ್ ಕೊಡುತ್ತಿದ್ದಾಗ ‘ಸಾರಿ ಅಪ್ಪಾಜಿ’ ಎಂದು ನನಗೆ ಖುಷಿಮಾಡಿ ಬಿಡುತ್ತಿದ್ದ. ಸಾಧಾರಣವಾಗಿ ಓದುತ್ತಿದ್ದ, ಒಂದು ವರ್ಷ ನನಗೆ ಬೇಕಾಯ್ತು ಅವನಿಂದ ಅಪ್ಪಾಜಿ ಎಂಬ ಪದ ಬಿಡಿಸಿ ಸರ್ ಅಂತ ಹೇಳೋ ಹಾಗೆ ಮಾಡಲು ನನಗೆ ಸಾಕಾಗಿ ಹೋಯ್ತು. ಆದರೂ ಆನಂದನ ಮುಗ್ಧ ಮನಸ್ಸು ನನಗೆ ತುಂ¨ ಇಷ್ಟವಾಯ್ತು, ಟೆಸ್ಟ್‍ಗಳಲ್ಲಿಯೂ 40, 50, ಶೇಕಡವಾರು ಫಲಿತಾಂಶ ಇಂಪ್ರು ಆಗ್ತಾನೆ ಆಗ್ತಾನೆ ಅಂತಲು 8-9ನೇ ತರಗತಿಗಳಿಗೆ ಪ್ರೊಮೊಟೆಡ್ ಆದ, ನಾನು ಕನ್ನಡ ವಿಷಯ ಬೋಧಿಸುತ್ತಿದ್ದೆ. ಹಾಸ್ಯದ ಸಂದರ್ಭ ಬಂದಾಗ ನನಗೆ ಆನಂದನ ನಗುವೆ ಮೊದಲು ಕೇಳಿಬರುತ್ತಿದ್ದುದು ಶಾಲಾ ಪ್ರವಾಸದಲ್ಲಿಯೂ ನನ್ನ ಪಕ್ಕದಲ್ಲಿದ್ದುಕೊಂಡೆ ನನ್ನ ಲಗೇಜ್ ಜೋಪಾನ ಮಾಡುವುದು, ನನಗೆ ನೀರು ತಂದು ಕೊಡುವುದು, ನನ್ನ ಸಣ್ಣ-ಪುಟ್ಟ ಕೆಲಸದಲ್ಲಿಯು ತೋರಿಸುತ್ತಿದ್ದ ಆಸಕ್ತಿಗೆ ನಾನು ಬೆರಗಾಗುತ್ತಿದ್ದೆ. ನಾನು ಅವನಿಗೆ ಚನ್ನಾಗಿ ಓದಿ ಮುಂದುವರೆದು ದೊಡ್ಡ ಅಧಿಕಾರಿಯಾಗಬೇಕು ಎಂದೆಲ್ಲಾ ಹೇಳುತ್ತಾ ಅನೇಕ ಮಾಹಿತಿ ಅವನಿಗೆ ಕೊಡುತ್ತಿದ್ದೆ. ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟುಬಿಡುತ್ತಿದ್ದ. ಹುಡುಗಾಟದ ಹುಡುಗ ನಮ್ಮ ಆನಂದ ಎಲ್ಲರ ಅಚ್ಚು-ಮೆಚ್ಚು ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಶಾಲೆಯ ಎಲ್ಲಾ ಶಿಕ್ಷಕರು, ಮಿಸ್‍ಗಳು ನನ್ನ ಮಗ ಅಂತಲೆ ಹೇಳುತ್ತಿದ್ದರು.
ಪೋಷಕರ ಸಭೆಯಲ್ಲಿ ನಾವು ಶಿಕ್ಷಕರು ಸಾಮಾನ್ಯವಾಗಿ ಎಲ್ಲ ಮಕ್ಕಳು ಶಾಲೆಯಲ್ಲಿರುವಾಗ ನಮ್ಮ ಮಕ್ಕಳೆ, ಅವರ ಬಗ್ಗೆ ನಾವು ವಿಶೇಷ ಕಾಳಜಿ ವಹಿಸುತ್ತೇವೆ ಮತ್ತು ಉತ್ತಮ ವಿದ್ಯಾರ್ಥಿ, ಉತ್ತಮ ವ್ಯಕ್ತಿತ್ವ, ಮತ್ತು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೆ ಏನೆಲ್ಲ ಪ್ರಯತ್ನಗಳು ನಡೆಸಬೇಕು ಅನ್ನೋ ವಿಚಾರವಾಗಿ ಅಧಿಕವಾಗಿ ನಾವು ಪ್ರತಿಯೊಬ್ಬ ವಿದ್ಯಾರ್ಥಿಗೂ ಮಾರ್ಗದರ್ಶನ ಮಾಡುತ್ತೇವೆ ಎಂಬ ಭರವಸೆ ಸದಾ ನೀಡುತ್ತಿದ್ದೇವು.
ಶಾಲೆಯಲ್ಲಿ ಆನಂದನ ಮೂರನೇ ವರ್ಷ ಅಂದರೆ, ನಮ್ಮ ಆನಂದ ಈಗ SSಐಅ ಎಲ್ಲರು ಹೇಳುತ್ತಿದ್ದ ವಾಕ್ಯವೇನೆಂದರೆ, ಚೆನ್ನಾಗಿ ಓದು, ನಿರಂತರ ಅಭ್ಯಾಸವಿರಲಿ, ಎಲ್ಲಾ ಟೆಸ್ಟ್‍ಗಳಲ್ಲಿಯೂ ಚನ್ನಾಗಿ ಬರಿ, ಪಾಠ-ಪ್ರವಚನ ಚನ್ನಾಗಿ ಗ್ರಹಿಸು, ಪ್ರತಿ ವಿಷಯವನ್ನು ಸರ್ ಪ್ರತ್ಯೇಕವಾಗಿ ಅಧ್ಯಯನ ಮಾಡು ಎಂಬ ಶಕ್ತಿ ಮಂತ್ರಗಳನ್ನು ಹೇಳಿ ಹೇಳಿ ಅವನಲ್ಲಿ ಉತ್ಸಾಹ ತುಂಬುತ್ತಿದ್ದೆ. ಮನೆಯಲ್ಲಿಯೂ ಓದು, ಓದು, ಓದು, ಟ್ಯೂಷನ್‍ನಲ್ಲಿಯೂ ಓದು, ಓದು, ಓದು. ಶಾಲೆಯಲ್ಲಿಯೂ ಓದು, ಓದು, ಓದು. ಆನಂದನಿಗೆ ಎಸ್. ಎಸ್. ಎಲ್. ಸಿ. ಪರೀಕ್ಷೆ ಎಂ. ಎ. ಪರೀಕ್ಷೆ ತರಹ ಅನಿಸುತ್ತಿತ್ತು. ಹೆದರಿಕೊಂಡು ನನ್ನಲ್ಲಿ ಹೇಳಿಕೊಳ್ಳುತ್ತಿದ್ದ ಮಾತುಗಳು ಎಂದರೇ, ‘ಅಪ್ಪಾಜಿ ನಾನು ಪಾಸಾಗ್ತಿನಾ? ಏನೇ ಆದರೂ ನಿಮ್ಮನ್ನು ನೋಡೋಕೆ ದಿನಾ ಬರ್ತಿನಿ! ಫೋನ್ ಮಾಡ್ತಿನಿ, ನಿಮ್ಮ ಮನೆಗೆ ಬರ್ತಿನಿ’ ಎನ್ನುವ ಜನವರಿಯಿಂದ ಮಾರ್ಚ ಈ ಮೂರು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಹೆವಿ ಸರ್ಕಸ್, Spl Class Test, Preparatory exam ಹೀಗೆ ಹತ್ತು ಹಲವು ಅಭ್ಯಾಸಗಳು, Group Discussion, dictation, ಪದ್ಯಗಳ ಕಂಠಪಾಠ ಸಾಕಾಗಿ ಹೋಗ್ತಿತ್ತು. ಆನಂದ ಚೆನ್ನಾಗಿ ಹಗಲು-ರಾತ್ರಿ ಬೆವರಿಳಿಸುತ್ತಿದ್ದನು. ನಾನು ಅಲ್ಲಲ್ಲೆ ಭರವಸೆ ನೀಡುತ್ತಿದ್ದೆ, ಧೈರ್ಯ ತುಂಬುತ್ತಿದ್ದೆ ಅವನಿಗೂ ನನ್ನ ಮಾತು ವೇದ ಆಗಿತ್ತು.
ವಾರ್ಷಿಕ ಪರೀಕ್ಷೆಯ ದಿನ ಬಂದೆ ಬಿಡ್ತು. ಅಂದು 8-30 ಗೆ ಶಾಲೆಗೆ ಬಂದು ನನ್ನ ಕಾಲಿಗೆ ನಮಸ್ಕರಿಸಿ ನನ್ನ ಆಶೀರ್ವಾದ ಪಡೆದ. ನಾನು ಮೊದಲ ದಿನ ನನ್ನ ಜೊತೆಗೆ ಬಾ exam Center ಎಂದು ಕರೆದುಕೊಂಡು ಹೋದೆ. ಅಲ್ಲಿ ನನ್ನ ಪರಿಚಯದ ಶಿಕ್ಷಕರಿಗೆ ನಮಸ್ಕರಿಸಿ, ‘ನನ್ನ ಮಗ ಹೆಸರು ಆನಂದ ಈ ದಿನ ಪರೀಕ್ಷೆಯ ಮೊದಲ ದಿನ ಅಲ್ಲವೆ ಕರೆದುಕೊಂಡು ಬಂದೆ. ’ಎನ್ನಲು ಆನಂದ ಎಲ್ಲರಿಗೂ ನೋಡಿದ, ಗಾಬರಿಯಾಗಿದ್ದ, ಅವರೆಲ್ಲ ಸಮಾಧಾನ ಪಡಿಸಿದರು. ‘ಸರಿ ಆನಂದ ಚೆನ್ನಾಗಿ ಬರೆ Wish you all success ಎಂದು ಹೇಳಿ ¸ಸಿ ಯು’ ಎಂದು ಹೊರಟಾಗ ಆನಂದನ ತಂದೆ ಬಂದ್ರು ಎಲ್ಲರ ಎದುರಿಗೆ Admisson Ticket ಮರ್ತು ಬಂದವ್ನೆ, ಪರೀಕ್ಷಾ ಭಯ ಸ್ವಲ್ಪ ಜಾಸ್ತಿ ಸರ್ ನನ್ನ ಮಗನಿಗೆ’ಎಂದಾಗ ಅಲ್ಲಿದ್ದ ಶಿಕ್ಷಕರು ಒಂದು ನಿಮಿಷ ಕರೆಂಟ್ ಹೊಡೆದ್ದಂಗೆ ಶಾಕ್ ಆಗಿ ನಿಂತರು. (ಯಾಕೆಂದರೆ ಆನಂದನ ನಿಜವಾದ ಅಪ್ಪ ಯಾರು ಎಂದು) ಅಷ್ಟರಲ್ಲೇ ನಾನು ಮಾತಿಗಿಳಿದೆ, ಶಾಲೆಯಲ್ಲಿದ್ದಾಗ ಆನಂದ ನನ್ನ ಮಗ ಒಳ್ಳೆ ಹುಡುಗ ಗುರು-ಹಿರಿಯರಿಗೆ ಗೌರವ ಕೊಡ್ತಾನೆ, ದೇವರ ಆಧ್ಯಾತ್ಮಿಕ ವಿಚಾರ ಇಷ್ಟ ಪಡುತ್ತಾನೆ ಎಂದೆ ಅಷ್ಟರಲ್ಲೆ exam bell ಹೊಡೆಯಿತು. ಆನಂದ ಚೆನ್ನಾಗಿ ಪರೀಕ್ಷಾ ಬರೆದು ಪಾಸಾದ ನಂತರ ಪಿ. ಯು. ಸಿ ನಂತರ ಡಿಗ್ರಿ, ಮಾಸ್ಟರ್ ಡಿಗ್ರಿ, ಅನಿಮೇಷನ್, ಸರ್ಕಾರಿ ಅಧಿಕಾರಿಯಾದರೂ ಇವತ್ತಿಗೂ ನಾನು ಅವನಿಗೆ ಅಪ್ಪಾಜಿಯಾಗಿಯೊ ಉಳಿದುಕೊಂಡಿದ್ದೇನೆ, ಆನಂದ ಮದುವೆಯಾಗಿ ಒಂದು ಪುಟ್ಟ ಆನಂದನಿಗೆ ತಂದೆಯಾಗಿ ಸುಖ-ಜೀವನ ನಡೆಸುತ್ತಿದ್ದಾನೆ.
ಶಿಕ್ಷಣ ಕ್ಷೇತ್ರದಲ್ಲಿ ನಂಬಿಕೆ, ವಿಶ್ವಾಸ, ಭರವಸೆಗಳು ಗುರು ಶಿಷ್ಯರ ನಡುವೆ ಅರ್ಥೈಸಿಕೊಂಡಾಗ, ಕಲಿಕಾಸಕ್ತಿ ಹೆಚ್ಚುತ್ತೆ, ಮುಂದಿನ ಕನಸುಗಳಿಗೆ ಗುರುವೇ ಒಬ್ಬ ಮಾರ್ಗದರ್ಶಕನಾಗುತ್ತಾನೆ. ಸಮಾನತೆಯಿಂದ ಕಲಿಕೆಯಲ್ಲಿ ಎಲ್ಲರೂ ಒಂದೇ ಎಂಬ ತತ್ವ ಪಾಲಿಸುತ್ತಾ ನಾವು ಬೆಳೆ ಬೆಳೆದಂತೆ ವ್ಯಕ್ತಿತ್ವ ವಿಕಸನವಾಗಿ ಮಾನವೀಯ ಗುಣ ಮೌಲ್ಯಗಳನ್ನು ಬದುಕಿನುದ್ದಕ್ಕೂ ಪಾಲಿಸುತ್ತಾ ರಾಷ್ಟ್ರಕ್ಕೆ ಗೌರವ ತರುವಂತಹ ಕೆಲಸ ಕಾರ್ಯಗಳನ್ನು ಮಾಡಲಿ. ನಾವೆಲ್ಲರು ಮುಂದೆ ವಿಕಾಸದ ಹಾದಿಯಲ್ಲಿ ಮಿನುಗುವ ನಕ್ಷೇತ್ರಗಳು, ನನ್ನ ಶುಭ ಹಾರೈಕೆ ನನ್ನ ಎಲ್ಲಾ ಓದುಗರ ಚೇತನಗಳಿಗೆ ದೇವರು ಸದಾ ಅನುಗ್ರಹಿಸಲಿ.
-ಹೆಚ್. ಷೌಕತ್ ಆಲಿ, ಮದ್ದೂರು
ಓರ್ವ ಶಿಕ್ಷಕ; ಪರುಷಮಣಿ, ಪರ ಚಿತ್ತಾಪಹಾರಿ ಯಾಗುವುದು ಆತನ ಬೊಧನಾ ಶೈಲಿಯಲ್ಲಿ ಸುಸಂಸ್ಕಾರ ಹಾಗೂ ಸನ್ನಡತೆಯಯಿಂದ .
ವಿದ್ಯಾರ್ಥಿಗಳನು ತನ್ನ ಮಕ್ಕಳಂತೇ ಕಾಣುವುದು ಪ್ರಾಮಾಣಿಕ ಮನಸಿನ ವ್ಯಕ್ತಿತ್ವ ದಿಂದ. ಶೌಕತ ಅಲಿ ಸರ್ ರಲ್ಲಿ ಇರುವ
ಅದೊಂದು ಸುಶೀಲತೆ ಸಾಕು, ಶಿಲೆಯೊಂದು ಸಂಸ್ಕಾರ ಪಡೆದು ಪೂಜಾರ್ಹ ಮೂರ್ತಿಯಾಗುವುದರಲ್ಲಿ
ಆಶ್ಚರ್ಯ ವೇನಿಲ್ಲ.ಈ ಸಂಗತಿ ಪೊಷಕ ಆಡಳಿತ ಮಂಡಳಿ ಶಿಕ್ಷಕ ಸಮುದಾಯ ವಿದ್ಯಾರ್ಥಿ ಲೋಕ ಗಳಿಗೂ ಅನ್ವಯಿಸ ಬಹುದಾದುದು.
ರೋಚಕ ಅನುಭವದ ಬೋಧನೆಯ ಪಾಠ
ಸುಂದರ ಬರಹ .