ನನ್ನೊಲವಿನ ಗೆಳತಿಗೆ…: ರಮೇಶ್ ನೆಲ್ಲಿಸರ

ನನ್ನೊಲವಿನ ಗೆಳತಿಗೆ…

ಹೌದು ನಿನಗೆ ಬರಿತಿರೋದು ಮಾರಾಯ್ತಿ ಇನ್ನು ಎಷ್ಟು ದಿನ ಅಂತಾ ಈ ಮೋಬೈಲ್ನಲ್ಲಿ ಮೆಸೇಜ್ ಟೈಪ್ ಮಾಡದು, ಅದ್ ನೋಡಿದ್ರೆ 135 ಕ್ಕಿಂತ ಜಾಸ್ತಿ ಲೆಟರ್ಸ್ ತಗೊಳಲ್ಲ 2-3 ಮೆಸೇಜ್ ಒಟ್ಟಿಗೆ ಕಳ್ಸಣ ಅಂದ್ರೆ ನಿಮ್ ಡಬ್ಬ ಊರಲ್ ನೆಟ್ವರ್ಕಾದ್ರೂ ಸಿಗ್ತದಾ? ಅದೂ ಇಲ್ಲ,ಹೋಗ್ಲಿ ಸಿಗೇ ಮಾರಾಯ್ತಿ ಸ್ವಲ್ಪ ಮಾತಾಡನಾ ಅಂದ್ರೆ ನೀನು ಅದ್ಕೂ ನಮ್ಮನೇಲ್ ಸ್ಟ್ರಿಕ್ಟು ಹಾಗೇ ಹೀಗೆ ಅಂತೀಯಾ,ಮೂರ್ -ನಾಲ್ಕ್ ಸತಿ ಸಿಕ್ಕಿದ್ರು ಅರ್ಧ ಗಂಟೆ ಮಾತಾಡ್ಸ್ ಓಡ್ತಿಯಾ,ವರ್ಷ ಆತಲೆ ಅದ್ರು ನೆನ್ಪಿಗ್  ಈ ಪತ್ರ …

ಮೊದ್ಲೇ ಹೇಳ್ಬಿಡ್ತಿನಿ ನಗ್ಬೇಡ,ನಿಂಗೊತ್ತು ನಂಗೆ ನಿನ್ನ ಚಂದ್ರ-ಹೂವು ಅಂತೆಲ್ಲಾ ಹೊಗ್ಳಾಕ್ ಬರಲ್ಲ, ಬೇಕಾರ್ ಅಮ್ಮೀss ಅಂತೀನಿ ಅಡ್ಜಸ್ಟ್ ಮಾಡ್ಕ,ಮತ್ತೆ ನೀನಂದ್ರೆ ನಂಗೆ ಇಷ್ಟ ,ಯಾಕೆ, ಏನು ನಂಗೊತ್ತಿಲ್ಲ ನೀನು ಸ್ವಲ್ಪ ಚೇಂಜು ಅಥ್ವಾ ನಂಗ್ ಅನ್ಸತ್ತೇನೋ ಮಾರಾಯ್ತಿ, ಮತ್ತೆ ಮರ್ತಿದ್ದೆ ಕಣ್ ಹೊಡಿಯದ್ ಕಲ್ತೀಯಲ್ಲ ಹಾ? ಕೇಳಿದ್ರೆ 'ನಾನೇನು ಮಾಡಿಲ್ಲಪ್ಪ ಅಂತ ನುಲಿಯದ್ ಬೇರೆ', ಏ ಹುಡ್ಗಿ ಹಿಂಗೆ ಮಾಡ್ತಿರೇ ನೀನು ಆಮೆಲ್ ಇವಳ್ಗೆ ಏನೋ ಅಗ್ಯದ್ ಅಂತ ನಿಮ್ ಅಪ್ಪಯ್ಯ ಭಟ್ರತ್ರ ಕೇಳ್ಸಕ್ ಹೋತಾರಷ್ಟೆ!.

ಖಂಡಿತ ಇದ್ ಲವ್ ಅಲ್ಲ ಅಂತಾನೇ ನಾನ್ ಸುರು ಮಾಡಿದ್ದು ಮತ್ತೆ ನೀನು ಮೆಸೇಜ್ ಮಾಡ್ತಾ ಫ್ರೆಂಡ ಅಂತ ಬೇರೆ ಸೇರ‍್ಸಿದ್ದಾ ಅದ್ಕೆ ನಾನು ಫ್ರೆಂಡಾಗ್ ಇರಾನಾ ಅನ್ಕೊಂಡ್ ಚಾಟ್ ಮಾಡ್ತಿದ್ದೆ,ಒಂದಿನ ನೀನು ಇದ್ಕಿದ್ದಂತೆ 'ಐ ಲವ್ ಯೂ' ಅಂತ ಕಳ್ಸಿದ್ದಲ್ಲ ಆಗ ನಂಗ್ ಈ ಹುಡ್ಗಿ ಬೇರೆ ಯಾರ‍್ಗೋ ಕಳ್ಸದ್ ಮೆಸೇಜ್ ನಂಗ್ ಕಳ್ಸಿದಳಾ ಅಂತ ರೀಪ್ಲೆ ಮಾಡಿದ್ರೆ ನೀನು 'ನಿಮ್ಗೇಯಾ ಕಳ್ಸಿದ್ದು ಜೊತೆಗ್ ಫ್ರೆಂಡ್ ಆ್ಯಡ್ ಮಾಡ್ಕಳಿ ಫ್ರೆಂಡ್ ಅಂತ ಒಂದಿಷ್ಟು ಸ್ಮೈಲ್ ಸಿಂಬಲ್ ಕಳ್ಸಿದ್ದೆ', ನೀನು ಬರೀ ಫ್ರೆಂಡ್ ಅಂತ ನಾನು ಎಷ್ಟ್ ಅನ್ಕಂಡ್ರು ಈ ಹಾಳಾದ್ ಹಾರ್ಟ್ ಕೇಳ್ಬೇಕಲ್ಲ,ಆಗಿದ್ ಆಗ್ಲಿ ಅಂತ ನಿಧಾನ ಲವ್ ಮಾಡಕ್ ಸ್ಟಾರ್ಟ್ ಮಾಡ್ದೆ, ಆದ್ರೆ ನನ್ ಅದೃಷ್ಟನಾ ಏನೋ ನೀನೆ ಪ್ರಪೋಸ್ ಮಾಡ್ಬಿಟ್ಟೆ!.

'ಐ ಲವ್ ಯು ' ಅಂತ ಕಳ್ಸಿದ್ ನಿಜಾನಾ? ಅಂತ ನಿಂಗ್ ರಿಫ್ಲೆ ಮಾಡ್ದೆ ನೀನು ಮೂರುಗಂಟೆ ಮೆಸೇಜ್ ಮಾಡ್ಲ,ಗಂಟೆ ಆಗ್ಲೆ ಹನ್ನೆರಡಾಗಿತ್ತು,ನಾನು ಮಲ್ಗಕ್ ಅಂತ ರೆಡಿ ಮಾಡ್ತಿರೊವಾಗ್ಲೆ ಫೋನಿನ ಮೆಸೇಜ್ ಟೋನ್ ಟಿಂಗ್ ಟಿಂಗ್ ಎಂದು ಹೊಡ್ಕನ್ತು, ನೀನೆ ಇರ್ಬೋ ದು ಅಂತ ಕನ್ಫರ್ಮ್ ಇತ್ತು.

ಅಬ್ಬಾ! ಅದ್ರಲ್ ನೀನ್ ಏನಂತ ಬರ್ದಿದ್ದೆ ನೆನ್ಪ್ ಮಾಡ್ಕ, 'ಹೂಂ ಲವ್ ಮಾಡ್ತಿದೀನಿ ಏನೀಗ ! ನೀನ್ ಮಾಡ್ತಿದಿಯೋ ಇಲ್ಲೋ ಹಾ? ಅಯ್ಯಪ್ಪ, ಎಂತ ಪ್ರಪೋಸ್ ಮಾರಾಯ್ತಿ ಹೆದ್ರಿಸ್ ಬಿಟ್ಟಿದ್ದಲ್ಲ ಅವತ್ ರಾತ್ರಿ ನಾವ್ ಮಲ್ಗೇ ಇಲ್ಲ ಅಲ್ಲ!. ನಾನು ಅದೂ ಇದು ಭವಿಷ್ಯ ಅಂತೆಲ್ಲಾ ಯೋಚ್ನೆ ಮಾಡಿ ಗಂಟೆಗೊಂದು ರೀಪ್ಲೆ ಮಾಡ್ತಿದ್ದೆ,ಅಲ್ಲೇ ಹುಡ್ಗಿ ನೀನ್ ಮಲ್ಗದಲ್ಲೇನೇ? ಅಂತೂ ನಾನು 'ಲವ್ ಯು ಟೂ ' ಅಂದಾಗ ಬೆಳ್ಗಿನ್ ಜಾವ ಐದ್ ಗಂಟೆ!, ಆಗ ನಿನ್ ಖುಷಿ ನೋಡಿ ನನ್ನೇ ನಾನು ಮರ್ತು, ಯಾಕಂದ್ರೆ ನಾನು ನಿನ್ನ ಇಷ್ಟ ಪಡ್ತಿದ್ದಿದು ಆಗ್ಲೇಯಾ ಗೊತ್ತಾಗಿದ್ದು.

ವರ್ಷಾ ಆತಲಾ ಅಬ್ಬಾ! ,ಈಗ ನೀನೆ ನನ್ ಜೀವ, ಜೀವ್ನ ಎಲ್ಲಾ ,ಐ ಲವ್ ಯು ವೆರಿಮಚ್,ನಿನ್ಜೊತೆ ಉಸ್ರು ಇರೋ ತನ್ಕ ಇರ್ಬೇಕು ಅಂತ ಆಸೆ.ಆದಷ್ಟು ನಿನ್ನತ್ರ ಬಯ್ಸ್ಕೋಬೆಕ್ ನಾನು,ನಿನ್ನ ಗೋಳ್ ಹೊಯ್ಕೋಬೇಕು, ಮತ್ತೆ ಎಲ್ಲ ಮರ್ತು ಒಂದಾಗ್ಬೇಕು,

ನಿನ್ ಪ್ರೀತಿಯ ಮುದ್ದು…


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x