ನನ್ನವಳು: ಗಿರಿಜಾ ಜ್ಞಾನಸುಂದರ್

girija-jnanasundar
  
ಎಲ್ಲೋ ತುಂಬಾ ಸದ್ದು ಕೇಳಿಸುತ್ತಿರುವಂತೆ ಅನುಭವ. ಕಣ್ಣು ತೆರೆಯಲು ಆಗುತ್ತಲೇ ಇಲ್ಲ. ರೆಪ್ಪೆಗಳು ತುಂಬಾ ಭಾರ. ತನ್ನ ಮೈ ತನ್ನ ಮತ್ತೆ ಕೇಳುತ್ತಿಲ್ಲ ಅನ್ನಿಸುತ್ತಿದೆ. ತನ್ನಷ್ಟಕ್ಕೆ ತಾನು ಅತಿ ನೋವು ಅನುಭವಿಸುತ್ತಿದೆ. ಸುತ್ತಲೂ ಮಷೀನ್ ಗಳ ಶಬ್ದ. ತನಗೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಂಡ ಮೇಲೆ ತಿಳಿಯುತ್ತಿದೆ ನಾನು ಆಸ್ಪತ್ರೆಯಾ ಐ ಸೀ ಯು ವಾರ್ಡ್ನಲ್ಲಿದ್ದೀನಿ ಎಂದು. ಎದೆನೋವೆಂದು ಹೇಳಿದ್ದೊಂದೇ ನೆನಪು. ಆಮೇಲೇನಾಯಿತೋ ಗೊತ್ತಿಲ್ಲ. ಆಸ್ಪತ್ರೆ ನನ್ನನ್ನು ಆಲಂಗಿಸಿದೆ. ತನ್ನ ಅರೋಗ್ಯ ಹದಗೆಟ್ಟಿದೆ ಎಂದು ತಿಳಿಯುತ್ತಿದೆ. ಮೈ ತುಂಬಾ ವೈರ್ ಗಳು, ಸೂಜಿ, ನೋವು ಏನಿದೆಲ್ಲ. ಜೀವನದಲ್ಲಿ ಒಂದು ದಿನವೂ ನೋವು ಎಂದು ಮಲಗಿರಲಿಲ್ಲ ನಾನು. ಎಂಥಹ ಗಂಡಸು ಎಂದು ಆಶ್ಚರ್ಯ ಪಡುವಂತೆ ಇತ್ತು ತನ್ನ ಆರೋಗ್ಯ. ಅಂತಹದರಲ್ಲಿ ವಯಸ್ಸಾದ ಕಾಲದಲ್ಲಿ ಇದೇನು ತನಗೆ ಇಂತಹ ಕರ್ಮ…. ಛೆ! ತಾನು ಯಾರ ಕೈಲೂ ಸೇವೆ ಮಾಡಿಸಿಕೊಳ್ಳಬಾರದು ಎಂದು ಯೋಚಿಸುತ್ತಿದ್ದಾಗಲೇ ನರ್ಸ್ ಒಬ್ಬಳು ಬಂದು "ಹೇಗಿದ್ದೀರಾ ಮನೋಹರ್ ಗಾಯಕ್ವಾಡ್?" ಎಂದು ಮಾತನಾಡಿಸಿದಳು. "ನಾನು ಚೆನ್ನಾಗಿದ್ದೀನಿ, ನನ್ನನ್ನು ಮನೆಗೆ ಕಳಿಸಿ" ಎಂದು ಹೇಳಿದೆ. ಆದರೆ ಅವಳು ಸುಮ್ಮನೆ ಮುಗುಳ್ನಕ್ಕು ಹೊರಟು ಹೋದಳು. 

picture1

ಮೈ ಮೇಲೆ ಆಸ್ಪತ್ರೆಯ ಗೌನ್ ಒಂದು ಬಿಟ್ಟರೆ ಬೇರೇನಿಲ್ಲ. ತುಂಬಾ ಅಸಹ್ಯ ಅನ್ನಿಸುತ್ತಿದೆ. ಅವರು ಕೊಟ್ಟಿರುವ ಬಟ್ಟೆ ಏನನ್ನೂ ಮುಚ್ಚಲು ಸಾಲದು. ಆಗಾಗ ಮನೆಯವರು ಬಂದು ಹೋಗುತ್ತಾರೆ. ಆಗೆಲ್ಲ ತನ್ನ ಪರದಾಟ ಯಾರಿಗೆ ಹೇಳುವುದು. ಸರೋಜಾ ಯಾಕೋ ನನ್ನ ಬಳಿ ಇರುತ್ತಲೇ ಇಲ್ಲ. ಸರೋಜಾ ಬಂದಾಗ ಸ್ವಲ್ಪ ಸಮಾಧಾನ ಅನ್ನಿಸುತ್ತದೆ. ಅವಳು ನನ್ನ ಮೈ ಸವರಿ ಮಾತಾಡಿಸಿದಾಗ ಏನೋ ಒಂಥರಾ ಹಿತ. ಅವಳು ನನ್ನ ಹೆಂಡತಿ ಹೌದು ಆದರೆ ಅದಕ್ಕಿಂತ ಹೆಚ್ಚು ಅನ್ನಿಸುತ್ತಿತ್ತು ಇತ್ತೀಚಿಗೆ. ಮಗ ರಘು ತನ್ನ ಹೆಂಡತಿ ಮೋಹಿನಿ ಜೊತೆ ಬಂದು ಹೋಗುತ್ತಿದ್ದ. ಅವನು ತನ್ನ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದ. ಆದರೂ ಯಾಕೋ ಅದರಲ್ಲಿ ಏನೋ ಕಡಿಮೆ ಇದೆ ಅನ್ನಿಸುತ್ತಿತ್ತು. ಮಗಳು ಕಲ್ಪನಾ ಸಹ ತನ್ನ ಪರಿವಾರದೊಂದಿಗೆ ಬಂದು ಹೋಗುತ್ತಿದ್ದಳು. ಅವಳ ಮಗು ಸಿರಿ ತನ್ನ ಮುದ್ದು ಮಾತಿನಿಂದ ಮನಸ್ಸಿಗೆ ಹಿತ ಉಂಟುಮಾಡುತ್ತಿತ್ತು. ಆದರೂ ಸರೋಜಾ ಇಲ್ಲದಿದ್ದರೆ ಯಾಕೋ ತುಂಬಾ ಖಾಲಿ ಖಾಲಿ ಅನ್ನಿಸುತ್ತಿತ್ತು. ೬೮ ವರ್ಷ ವಯಸ್ಸಾಗಿದ್ದರೂ ಇನ್ನೂ ಯೌವ್ವನ ಇದ್ದಂತೆ ಅನ್ನಿಸುತ್ತಿತ್ತು ಅವಳ ಜೊತೆ ಇದ್ದರೆ. ಏನಿದು ಭಾವನೆ… ನನ್ನ ಹೆಂಡತಿಯನ್ನು ನಾನು ಪ್ರೀತಿಸುವುದು ತಪ್ಪೇ? ಇಲ್ಲವೆಂದಮೇಲೆ ಅವಳ ಸನಿಹಕ್ಕೆ ತಾನು ಹಾತೊರೆವುದು ಸಹಜ. ತಾನು ಐ ಸೀ ಯು ನಲ್ಲಿ ಇರುವವರೆಗೂ ಇದೆ ರೀತಿ ಇರುತ್ತದೆ ಎಂದು ತಿಳಿದು ಬೇಸರವಾಯಿತು. ಅಷ್ಟಕ್ಕೋ ತನಗೇನಾಗಿದೆ? ರಿಪೋರ್ಟ್ ಪಕ್ಕದಲ್ಲೇ ಇತ್ತು, ತೆಗೆದು ನೋಡಿದೆ… ಕಾರ್ಡಿಯಾಕ್ ಅರೆಸ್ಟ್  ಒಹ್ ತನಗೆ ಹೃದಯಾಘಾತ ಆಗಿತ್ತೇ? ಅದನ್ನೇ ಯೋಚಿಸುತ್ತಿದ್ದೆ.. ನಿದ್ದೆ ಬಂದದ್ದೇ ತಿಳಿಯಲಿಲ್ಲ.

ಇನ್ನೆಷ್ಟು ದಿನ ಈ ಹಿಂಸೆ? ಸರಿಯಾಗಿ ಬಟ್ಟೆಯಿಲ್ಲ, ಊಟವಿಲ್ಲ, ಮನೆಯವರೊಂದಿಗೆ ಮಾತನಾಡಲು ಬಿಡುವುದಿಲ್ಲ. ಸ್ನೇಹಿತರೆಲ್ಲ ಬಂದು ಒಂದು ಕ್ಷಣ ವಿಚಾರಿಸಿಕೊಂಡು ಹೋಗುತ್ತಾರೆ. ಅವರು ಬಂದರಲ್ಲ ಅಂತ ಖುಷಿ ಒಂದು ಕಡೆ.. ತಾನು ಇಂತಹ ಪರಿಸ್ಥಿತಿಯಲ್ಲಿ ಇದ್ದೀನಲ್ಲ ಎಂದು ನೋವು ಇನ್ನೊಂದೆಡೆ. ಆದರೆ ತನ್ನ ಎದೆಯಲ್ಲಿ ನೋವು ಆಗಾಗ ಬಂದು ಹೋಗುತ್ತಲೇ ಇತ್ತು. ನನಗೆ ಹಾಕಿದ್ದ ಮಷೀನ್ ಗಳು ನನ್ನ ಪರಿಸ್ಥಿತಿಯನ್ನು ಹೇಳುತ್ತಿದ್ದವು. ಹಾಗಾಗಿ ಡಾಕ್ಟರ್ ಒಂದೇ ಸಮನೆ ಔಷಧಿಗಳನ್ನು ಕೊಡುತ್ತಲೇ ಇದ್ದರು. 

ನೆನಪುಗಳು ಆಗಾಗ ಬಂದು ಹೋಗುತ್ತಿದ್ದವು. ತಾನು ಸರೋಜಾಳನ್ನು ಮದುವೆಯಾದ ಹೊಸತು. ತೀರಾ ಚಿಕ್ಕ ಹುಡುಗಿ ಅವಳು. ಇಪ್ಪತ್ತರ ಆಸುಪಾಸು. ನಾನು ಕೆಲಸಕ್ಕೆ ಸೇರಿ ೩ ವರ್ಷಗಳಾಗಿತ್ತು. ಕಟ್ಟುಮಸ್ತಾಗಿದ್ದೆ. ಅವಳಂತೂ ನೋಡಲು ಎಳೆಯ ಮಲ್ಲಿಗೆಯ ಬಳ್ಳಿಯಂತಿದ್ದಳು. ಅಷ್ಟೇ ಹಿತವಾಗಿದ್ದಳು ಸಹ. ಅವಳ ಮಾತು, ನಗು, ನೋಟ, ಕೋಪ ಎಲ್ಲವು ಬಹಳ ಚೆನ್ನಾಗಿತ್ತು. ಒಮ್ಮೊಮ್ಮೆ ಚಿಕ್ಕ ಮಗುವಿನಂತೆ ಹಠ ಮಾಡುತ್ತಿದ್ದಳು. ಅವಳನ್ನು ಪೀಡಿಸುವುದು ನನಗೆ ಇಷ್ಟವಾದ ಕೆಲಸ. ಅವಳ ಹುಸಿ ಕೋಪ ನನಗೆ ತುಂಬಾ ಮಜವೆನಿಸುತ್ತಿತ್ತು. ಕೆಲವೊಮ್ಮೆ ತುಂಬಾ ಕೋಪ ಮಾಡಿಕೊಂಡು ಅವಳ ಮೇಲೆ ಕೈ ಮಾಡಿದ್ದುಂಟು. ಅದಕ್ಕಾಗಿ ತಾನು ಎಷ್ಟು ಪಶ್ಚಾತ್ತಾಪ ಪಟ್ಟಿದ್ದೇನೋ ಲೆಕ್ಕವಿಲ್ಲ. ಅವಳು ನನ್ನನ್ನು ಎಷ್ಟು ಬೇಗ ಕ್ಷಮಿಸಿ, ನನಗೆ ಇಷ್ಟವಾದ ತಿಂಡಿ ಮಾಡಿದಾಗ ತನ್ನ ಕಪಾಳಕ್ಕೆ ಬಾರಿಸಿದಂತೆ ಆಗುತ್ತಿತ್ತು. ಅವಳ ಕಣ್ಣೋಟ ಎಲ್ಲವನ್ನೂ ಮೀರಿದ್ದು. ಎಂಥಹ ಹೊಳಪು ಆ ಕಣ್ಣುಗಳಲ್ಲಿ. ತನಗೆ ಎರಡು ಮಕ್ಕಳಾಗಿದ್ದು ತಿಳಿಯಲೇ ಇಲ್ಲ. ಅವಳು ತನ್ನನ್ನೂ ಒಂದು ಮಗುವಂತೆ ನೋಡಿಕೊಳ್ಳುತ್ತಿದ್ದಳು. ಅದು ಹೇಗೆ ಅವಳಿಗೆ ಅಷ್ಟೊಂದು ಶಕ್ತಿ ಕೊಟ್ಟಿದ್ದಾನೆ ಆ ದೇವರು. ತುಂಬಾ ಮೋಸಗಾರ ಅವನು… ಎಲ್ಲ ಒರಟುತನ ತನಗೆ ಕೊಟ್ಟು, ಒಳ್ಳೆಯ ಗುಣಗಳನ್ನೆಲ್ಲ ಅವಳಿಗೆ ಕೊಟ್ಟಿದ್ದಾನೆ. ಅವಳನ್ನು ನನ್ನ ಕಣ್ಣ ತುಂಬಾ ತುಂಬಿಕೊಂಡು ಮೆಚ್ಚುವುದು ನನ್ನ ಪ್ರತಿದಿನದ ಕೆಲಸವಾಗಿತ್ತು. ಮಕ್ಕಳನ್ನು ತುಂಬಾ ಆಸಕ್ತಿಯಿಂದ, ಶ್ರದ್ಧೆಯಿಂದ ಬೆಳೆಸಿದ್ದಳು ನನ್ನ ಸರೋಜಾ. ಅವಳ ಜೊತೆ ಜೀವನ ನಡೆಸುತ್ತಾ ನಾನು ಬಹಳಷ್ಟು ಕಲಿತಿದ್ದೇನೆ. ಆದರೆ ಅವಳನ್ನು ಬಹಳಷ್ಟು ನೋಯಿಸಿದ್ದೇನೆ ಎನ್ನುವುದೂ ಗೊತ್ತು. ತನ್ನ ತಪ್ಪುಗಳಿಗೆ ಕ್ಷಮೆ ಕೇಳೇ ಇಲ್ಲ. ಕೇಳಬೇಕೆಂದು ಅನ್ನಿಸಲೇ ಇಲ್ಲ. ಆದರೆ ಇವತ್ತೇಕೋ ಅವಳನ್ನು ಕ್ಷಮೆ ಕೇಳಬೇಕು ಅನ್ನಿಸುತ್ತಿದೆ. ಯಾಕೆ? 
ಮಕ್ಕಳು ನನ್ನನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಜೀವನದುದ್ದಕ್ಕೂ ತನ್ನ ನೆರಳಾಗಿ ಬಂದಿದ್ದ ಸರೋಜಾ ಮಕ್ಕಳು ತನ್ನ ಬಗ್ಗೆ ತುಂಬಾ ಗೌರವ ಭಾವ ಬರುವಂತೆ ಬೆಳೆಸಿದ್ದಳು. ಸೊಸೆಯಾಗಲಿ ಅಳಿಯನಾಗಲಿ ನನ್ನ ಬಗ್ಗೆ ಒಂದು ಮಾತಾಡಲು ಅವಕಾಶ ಕೊಟ್ಟಿರಲಿಲ್ಲ ಅವಳು. ಸಮಾಜದಲ್ಲಿ ಒಂದು ಸ್ಥಾನವನ್ನು ತಂದು ಕೊಟ್ಟಿದ್ದಳು. ನನ್ನ ಕೋಪ, ಒರಟುತನ, ಅಸಡ್ಡೆ, ಬೇಜವಾಬ್ದಾರಿತನ ಎಲ್ಲವನ್ನೂ ನನಗೆ ಗೊತ್ತಿಲ್ಲದಂತೆ ಸರಿಪಡಿಸಿದಳು. ನನ್ನ ಅಪ್ಪ ಅಮ್ಮ ನನ್ನನ್ನಗಲಿ ಹೋದಾಗ ನನ್ನನ್ನು ಮಗುವಿನಂತೆ ಸಮಾಧಾನ ಮಾಡಿದವಳು. ನನ್ನ ಆಫೀಸ್ ನಲ್ಲಿ ಬಡ್ತಿ ಸಿಕ್ಕಾಗ ನನಗಿಂತ ಹೆಚ್ಚು ಸಂಭ್ರಮಿಸಿದವಳು. ನನ್ನ ನೋವಿಗೆ ಔಷಧಿ ಅವಳು. ನನ್ನೆಲ್ಲ ಜೀವನದುದ್ದಕ್ಕೂ ನನ್ನ ಉಸಿರಾಗಿ ಇದ್ದಾಳೆ. ಅವಳನ್ನು ನಾನು ಬಹಳ ನಿಕೃಷ್ಟವಾಗಿ ಕಂಡಿದ್ದೇನೆ. ಅವಳಿಗೆ ಯಾವುದೇ ರೀತಿಯ ಸುಖವನ್ನು ನೀಡಿಲ್ಲ. ಅವಳ ಮನಸ್ಸಿಗೆ ಹಿತ ನೀಡಿಲ್ಲ. ಒಂದಷ್ಟು ಕಾಲ ಅವಳೊಡನೆ ಕೂತು ಸಂತೋಷದಿಂದ ಮಾತನ್ನಾಡುವ ಸಮಯ ನನಗೆ ಬೇಕು. ಅದಕ್ಕಾಗಿ ನಾನು ಏನನ್ನಾದರೂ ಮಾಡಲು ಸಿದ್ಧ. ಆದರೆ ಇವತ್ತು ನನ್ನ ಕೊನೆಯ ಘಳಿಗೆಯೇ?  

ಅವಳು ನನ್ನ ಜೀವನ ಸಂಗಾತಿಯಾಗುವಂತೆ ದೇವರು ನನಗೆ ಆಶೀರ್ವಾದ ಮಾಡಿದ್ದಾನೆ. ಅವಳಿಲ್ಲದ ಜೀವನ ನನಗೆ ಶಿಕ್ಷೆ. ಅದನ್ನು ಊಹಿಸಲು ನನಗೆ ಕಷ್ಟ. ಆದರೆ ಇವತ್ತು ಯಾಕೋ ನನಗೆ ಅವಳ ಬರುವಿಕೆಗೆ ಕಾಯುವುದು ತುಂಬಾ ಕಷ್ಟವಾಗುತ್ತಿದೆ. ನನ್ನ ಶಕ್ತಿ ನನ್ನನ್ನು ಕೈಬಿಟ್ಟು ಹೋಗುತ್ತಿದೆ ಅನ್ನೋ ಭಾವನೆ. ನನ್ನ ಸುತ್ತಲೂ ಇರುವ ಮಷೀನ್ ಗಳು ಬಹಳ ಸದ್ದು ಮಾಡುತ್ತಿವೆ. ಆಸ್ಪತ್ರೆಯಲ್ಲಿರುವ ನರ್ಸ್ ಗಳೆಲ್ಲ ನನ್ನ ಸುತ್ತುವರೆದು ಏನೇನೋ ಮಾಡುತ್ತಿದ್ದಾರೆ. ಡಾಕ್ಟರ್ ನನ್ನನ್ನು ಬಿಟ್ಟು ಕದಲುತ್ತಿಲ್ಲ. 

ಓ ದೇವರೇ ನನ್ನನ್ನು ಇಷ್ಟು ಬೇಗ ಕರೆಸಿಕೊಳ್ಳಬೇಡ. ನನಗೆ ನನ್ನ ಸರೋಜನನ್ನು ಬಿಟ್ಟು ಹೋಗಲು ಇನ್ನೂ ಮನಸ್ಸಾಗಿಲ್ಲ. ದಯವಿಟ್ಟು ನನಗೆ ಇನ್ನೊಂದಷ್ಟು ಕಾಲಾವಕಾಶ ಮಾಡಿಕೊಡು ಎಂದು ಕೇಳಿಕೊಳ್ಳುತ್ತಿದ್ದೇನೆ. ಮಕ್ಕಳನ್ನು ಒಂದು ಘಟ್ಟಕ್ಕೆ ತರುವುದರಲ್ಲಿ ದಣಿದಿದ್ದೇನೆ. ಇವತ್ತು ನನ್ನ ಜೀವನದ ಕೊನೆಯ ದಿನಗಳನ್ನು ಸರೋಜಾನ ಜೊತೆ ಆರಾಮವಾಗಿ ಕಳೆಯಬೇಕು ಅನ್ನುವಷ್ಟರಲ್ಲಿ ಈ ರೀತಿ ನನ್ನ ಕರೆಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಸಂತೋಷದ ದಿನಗಳಿಗೆ ಅವಕಾಶ ಕೊಡಲಾರೆಯಾ?? ಗೋಗರೆಯುತ್ತಿದ್ದೇನೆ. ಸ್ವಲ್ಪ ಹೊತ್ತು ಸ್ಥಬ್ಧ. ಎಲ್ಲವು ನಿಶಬ್ದ. ಮಷೀನ್ ಗಳ ದ್ವನಿಯಿಲ್ಲ. ಡಾಕ್ಟರ್ , ನರ್ಸ್ ಗಳ ಸದ್ದಿಲ್ಲ. 

ಎಲ್ಲರೂ ಸುತ್ತ ನಿಂತಿದ್ದಾರೆ. ತನ್ನವರೆಲ್ಲ ತನ್ನ ಬಳಿ ಒಟ್ಟಿಗೆ ಬಂದಿರುವುದು ಸಂತೋಷ. ಆದರೆ ನಾನು?? ಹೌದು.. ಆಶ್ಚರ್ಯ ಪಡುವ ರೀತಿಯಲ್ಲಿ ಬದುಕುಳಿದಿದ್ದೀನಿ. ಡಾಕ್ಟರ್ ಗಳು ಕೂಡ ಆಶ್ಚರ್ಯ ಪಡುವ ರೀತಿ. ಒಹ್ ! ನನ್ನ ಕೂಗು ದೇವರಿಗೆ ಕೇಳಿಸಿತೇ? ನನ್ನ ಸರೋಜಾ ನನ್ನ ಕೈ ಹಿಡಿದು ನನ್ನ ಪಕ್ಕ ಕೂತಿದ್ದಾಳೆ. ಅವಳ ಸನಿಹ, ಅಷ್ಟೇ ಸಾಕು ನನಗೆ. ನನ್ನ ಸರೋಜಾಳ ಜೊತೆ ಒಂದೆರಡು ದಿನ ಹಿತವಾಗಿ ಕಳೆದು ಅವಳಿಗೆ ಒಳ್ಳೆಯ ಸಂಗಾತಿಯೆನ್ನಿಸಿಕೊಳ್ಳುವೆ. 



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
suresh
suresh
7 years ago

super madam,, nice one,, keep writing, its much required,, all the very best.

Prem kumar
Prem kumar
7 years ago

Very Interesting Story, Keep it Up.

 

Umashankar Huskur
Umashankar Huskur
7 years ago

The Story tells more about a persons living Style in Society with his family. The responsibilities to be borne by a Husband,Father to his family he needs to dedicate when required..As the proverb says Forba Every true Success of a man is behind a Women..A women can bring success in a men's life or can also ruins is life too.

 

Jayaprada
Jayaprada
7 years ago

Very well written and  explained  Girija . . . The  difficulties of a modern living …

All the best 

 

Meera
Meera
7 years ago

Very touching story…Narration is too good…Waiting for more stories like this from Ms.Girija

Prathibha
Prathibha
7 years ago

A very touching story.. Surely people recollect a lot of things at this point of time.. Nicely expressed..

Vimalabl
Vimalabl
7 years ago

Reminds the importance of human relationships and the sweetness of being with each other at all times.

GIRIJA JNANASUNDAR
GIRIJA JNANASUNDAR
6 years ago

Hi friends,

Thank you very much for your encouragement. My heartfelt thanks for reading and sharing your valuable inputs. 

8
0
Would love your thoughts, please comment.x
()
x