ನನ್ನದಲ್ಲ…?: ಜಯರಾಮ ಚಾರಿ

 ಹಾಳು ಜಯಂತ ಮತ್ತೆ ಕಾಣೆಯಾಗಿದ್ದಾನೆ. ಆತನಿಗೆ ಕಾಣೆಯಾಗುವ ಕಾಯಿಲೆ ಹೊಕ್ಕಿಬಿಟ್ಟಿದೆ ಇತ್ತೀಚೆಗೆ. ಇದು ನಾಲ್ಕನೇ ಬಾರಿ ಕಾಣೆಯಾಗುತ್ತಿರುವುದು. ಅವನ ಅಮ್ಮ ದಿಗಿಲಾಗಿದ್ದಾಳೆ. ಆಕೆಗೊಂದು ಸಾಂತ್ವನ ಹೇಳಿ ಬರುವಾಗ ಆತನ ಸ್ಟಡಿ ಟೇಬಲ್ ಮೇಲಿನ ಬಿಳಿಹಾಳೆಗಳ ಗೊಂಚಲೊಂದು ಸಿಕ್ಕಿದೆ. ಅದಕ್ಕೆ "ನನ್ನದಲ್ಲ" ಎಂಬ ಶೀರ್ಷಿಕೆಯಿದೆ. ಅದನ್ನು ಅಲ್ಲಿಯೇ ಓದದೇ ರೂಮಿಗೆ ಬಂದು ಓದಲು ಬಿಚ್ಚಿದರೆ ಅದೊಂದು ಕತೆ. ಒಬ್ಬ ಕತೆಗಾರನ ಕತೆಯಲ್ಲಿ ಆತ ಹೊಕ್ಕುವುದು ತೀರ ಸಾಮಾನ್ಯ. ಅವನು ಬಾರದಿದ್ದರೂ ಆತನ ಜಂಭ,ಸ್ವಾರ್ಥ,ದಿಗಿಲು,ದ್ವಂದ್ವ,ಹುಚ್ಚು ಆದರ್ಶಗಳು, ಅವನ ಸ್ನೇಹಿತರು, ಆತನನ್ನು ಬಿಟ್ಟು ಹೋದ ಹುಡುಗಿಯರು ಬರುವುದು ಸಾಮಾನ್ಯ.ಈ ಕತೆಯಲ್ಲಿ ನಾನು ಇದ್ದೀನಾ? ಎಂಬ ಗುಮಾನಿ ಕುದಿ ಹೊತ್ತಿ ಉರಿಯುತ್ತಿದೆ.ಬೇರೆ ದಾರಿಯಿಲ್ಲದೆ, ಓದಲು ಶುರುಮಾಡಿದ್ದೀನಿ.ಅವನು ಇಲ್ಲೇ ಇದ್ದಾನೆ ಎಂಬ ಭ್ರಮೆಯೊಂದಿಗೆ 

ಕತಾ ಶೀರ್ಷಿಕೆ: ನನ್ನದಲ್ಲ…? 

ಮತ್ತೆ ನಿದ್ರೆ ಬಾರದ ರೋಗ ಬಂದಿದೆ. ತೀರ ಇತ್ತೀಚಿನ ಎಲ್ಲ ದಿನವೂ ಸುಖನಿದ್ರೆಗಳೇ, ಎಲ್ಲ ನಿದ್ರೆಗಳಲ್ಲೂ ಸವಿಗನಸುಗಳೇ, ಎಲ್ಲ ಕನಸುಗಳಲ್ಲೂ ಅವಳೇ.

ಮನಸ್ಸು ಯಾಕೋ ಮುದುಡಿದೆ. ಜಗತ್ತೇ ಸುತ್ತಿಬರಲು ಹೊರಟವನು ಮನೆಯಲ್ಲಿನ ಮುದಿ ನಾಯಿ ನೆನೆದು ಮತ್ತೆ ಮನೆಯತ್ತ ಬಂದಂತೆ. ಅದು ಮೋಹವಾ?ಪ್ರೀತಿಯಾ? ಇಲ್ಲ ಪಲಾಯನವಾ?ಸೋಲಾ?. ರಾತ್ರಿ ಹತ್ತಾದರೂ ಅದ್ಯಾವುದೋ ಬೆಳಕು ಕಿಟಕಿಯನ್ನು ಸೀಳಿ ನಾನು ಮಲಗಿರೋ ಕೊಠಡಿಯಲ್ಲಿ ಹಬ್ಬಿದೆ. ಅದು ಬೆಳಕಿನ ಪರದೆ ಅಷ್ಟೇ. ಕೋಣೆಯ ಎಲ್ಲವೂ ಮಬ್ಬು ಮಬ್ಬಾಗಿ ಕಾಣಿಸುತ್ತಿವೆ. ಕಣ್ಣು ಕತ್ತಲಿಗೆ ಹೊಂದಿಕೊಂಡಷ್ಟು ಮಬ್ಬು ಕರಗಿ ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೇಲೆ ನೋಡಿದರೆ ಫ್ಯಾನೊಂದು ತಿರುಗುತ್ತಿದೆ. ಅಂತಹುದೊಂದು ಫ್ಯಾಯಾನೊಂದು ನಮ್ಮೊಳಗೊಂದು ಇರಬೇಕು ಅನಿಸುತ್ತಿದೆ. ಸ್ವಾರ್ಥ, ಅವಮಾನ, ಅನುಮಾನ, ದ್ವಂದ್ವ ಎಲ್ಲವನ್ನು ಗಿರಗಿರನೆ ತಿರುಗಿಸಿ ಹೊರಗೆಸೆಯುವ ಅಂತಹುದೊಂದು ಫ್ಯಾನಿರಬೇಕು. 

ಆಕೆ ನನಗೆ ಸಿಗಬಾರದಿತ್ತು. ತೀರಾ ಸಾಮಾನ್ಯವಾಗಿ,ಸುಖವಾಗಿ ನಡೆಯುತ್ತಿದ್ದ ನನ್ನ ಜೀವನ ತೀರ ತಿರುವನ್ನು ಪಡೆದುಕೊಂಡುಬಿಟ್ಟಿದೆ. ಆದರೆ ಒಂದು ರೀತಿಯಲ್ಲಿ ಆಕೆ ನನಗೆ ನಿಜವಾದ ಸ್ನೇಹ,ಪ್ರೀತಿ,ಪ್ರೇಮ,ಪ್ರಣಯ,ಮುಖವಾಡ ಎಲ್ಲವನ್ನೂ ಪರಿಚಯಿಸಿದ ಗುರು. ಆಕೆ ನನಗೆ ತುಂಬಾ ಜೀವನ ಪಾಠ ಕಲಿಸಿಬಿಟ್ಟಳು. ಅದು ನೆನೆದಾಗಲೆಲ್ಲ ಆಕೆ ಸಿಗದಿದ್ದರೆ ನನಗೆ ಎಷ್ಟೊಂದು ತಿಳಿಯದೇ ಇರುತ್ತಿತ್ತು. ಆ ವಿಚಾರದಿಂದ ಆಕೆ ನನ್ಗೆ ಗುರು, ಬರೀ ಪ್ರೇಯಸಿಯಷ್ಟೇ ಅಲ್ಲ. 

ಆಕೆಯನ್ನು ಭೇಟಿ ಮಾಡಿದ್ದು ಒಂದು ಅಚಾನಕ ಸಂಜೆಯಲ್ಲಿ ಮನೆ ಎದುರಿನ ಗಣಪನ ಗುಡಿಯಲ್ಲಿ. ಭೇಟಿ ಮುಗಿದು ಮನೆಗೆ ಬಂದರೆ. ಎಲ್ಲವನ್ನು ಗೆಳೆಯ ರವೀಶನಿಗೆ ಹೇಳುವ ನಾನು ಇದ್ದನ್ನು ಹೇಳದೆ ಒದ್ದಾಡಿ ಕೊನೆಗೆ ಅಂದು ರಾತ್ರಿಯೇ ಹೇಳಿದೆ ಆದರೆ ಹಾಗೆ ಹೇಳಿದ ಮರುಕ್ಷಣವೇ ಅಪರಾಧಿ ಭಾವ ಕಾಡುತಿತ್ತು. ಯಾಕೆಂದರೆ ನನಗೂ ಮುಂಚೆ ಅವನಿಗೆ ಆಗಷ್ಟೇ ಸ್ನೇಹಿತೆಯಾಗಿದ್ದಳು ಅವನು ಆಕೆಯ ಬಗ್ಗೆ, ಆಕೆಯ ಸೌಂದರ್ಯವನ್ನು ಹೊಗಳಿದ್ದ. ಇನ್ನೂ ಕೆಲವು ಹೇಳಿದ. ಅದಕ್ಕೆ ಅರ್ಥವಿಲ್ಲ. ಆತನಿಂದ ಆಕೆಯನ್ನು ಕಸಿದುಕೊಳ್ಳುತ್ತಿದ್ದೀನಾ?(ಅವನ ವ್ಯಕ್ತಿತ್ವಕ್ಕೆ ಅಂತಹ ಸಾವಿರ ಹುಡುಗೀರು ಸಿಕ್ಕಾರು?) ಆಕೆಯನ್ನು ತುಂಬಾ ಹಚ್ಚಿಕೊಂಡೆನಾ? ಇಲ್ಲ ನಾನೇ ಸ್ವಾರ್ಥಿ ಆದೆನಾ? ಇವತ್ತಿಗೂ ಗೊತ್ತಿಲ್ಲ, ಆದರೆ ಇವತ್ತಿಗೂ ಆ ಅಪರಾಧಿ ಭಾವ ಕಾಡುತ್ತಿದೆ.ಕಾಡುತ್ತಲೇ ಇರುತ್ತದೆ. 

ಬಿಚ್ಚಿಟ್ಟಷ್ಟು ಸುಲಭವಲ್ಲ ಮುಚ್ಚಿಡುವುದು. ಆನಂತರ ಆಕೆಯನ್ನು ಭೇಟಿ ಆದದ್ದು ಅವನಿಗೆ ಹೇಳಿದೆ.ಆದರೆ ಅವಳ ಬಗ್ಗೆ ಆತನಾಡಿದ ಮಾತುಗಳು", ನೀನು ಅವಳನ್ನು ಭೇಟಿ ಆಗಬಾರದಿತ್ತು". ಇನ್ನೊಮ್ಮೆ ಅವಳ ಬಗ್ಗೆ ಮಾತು ಬಂದಾಗ ಆತನಾಡಿದ ಮಾತು "she is a bitch". ಆ ಎರಡು ಸಂದರ್ಭ ಬಿಟ್ಟು ಇನ್ನೆಂದೂ ಅವಳ ಬಗ್ಗೆ ನಾವಿಬ್ಬರೂ ಮಾತಾಡಿದ್ದಿಲ್ಲ. ನನಗೆ ಮಾತನಾಡಲೂ ಇಷ್ಟವಿಲ್ಲ. ಯಾಕೆಂದರೆ ಅವಳಿಗಿಂತ ಅವನು ಮುಖ್ಯ. 

ಮೊದಮೊದಲು ನನಗೂ ಇಂತಹುದೇ ಗುಮಾನಿಯಿತ್ತು. ಆಕೆಯ ಧ್ವನಿಯಲ್ಲೊಂದು bitchness ಇದೆಯಾ ಅಂತ ಹುಡುಕುತ್ತಿದ್ದೆ. ಆ ಹುಡುಕುವುಕೆಯಲ್ಲಿ ನನ್ನ ನಾ ಕಳೆದುಕೊಂಡೆ. ಅವಳ ನಿಷ್ಕಲ್ಮಶ ನಗು, ಭಾರವಾದ ಒಳಹೃದಯ, ತೀರಾ ಕಾಡುವ ಅವಳ ಮೂಗುಬೊಟ್ಟು, ಸ್ಪರ್ಶಕ್ಕೆ ತುಡಿಯುವ ಕೊರಳು, ಗೋಲ್ಕಂಡಾ ವೈನ್ ಗಿಂತಲೂ ಕಿಕ್ ಕೊಡೋ ಅವಳ ನೋಟ, ಪ್ರೀತಿಯ ಮನಸಿನ ಆಳವಾದ ಅರ್ಥ ಸೂಚಿಸೋ ಅವಳ ಮುತ್ತು.ಸದಾ ಸಿಹಿಯಾಗಿರೋ ಇಲ್ಲ ಹಾಗೇ ಅನಿಸೋ ತುಟಿಗಳು. ಇವುಗಳೆಲ್ಲವೂ ನನ್ನನ್ನೂ ಮೋಹದಿಂದ ಮಮತೆ, ಕರುಣೇ ಕೊನೆಗೆ ನಲುಮೆಯತ್ತ ತಳ್ಳಿಬಿಟ್ಟವು. ಆದರೂ ನನಗೆ ಈಗಲೂ ಗುಮಾನಿ ಇದು ಮೋಹದ ಪರಮಾವಧಿ ಎಮ್ದು ಮತ್ತು ಮೇಲೆ ಹೇಳಿದಲ್ಲೆವೂ ನನ್ನ ಕಣ್ಣಿನ ಮಾಯೆಯ ಎಂದು. 

ಹಾಗಂತ ಆಕೆ ಸತಿ ಸಾವಿತ್ರಿ ಎಂದಲ್ಲ್. ಅವಳಲ್ಲೂ ಒಂದು ಚಂಚಲ ಮನಸಿದೆ ಅದು ಈ ವಯಸಲ್ಲಿ ಸಹಜ. ಅದು ಕೆಲವನ್ನು ಬಯಸಿದೆ ಎಂದೂ ಗೊತ್ತು ಅದು ತಪ್ಪೇ?ಗೊತ್ತಿಲ್ಲ. ಆಕರ್ಷಣೆ ತಪ್ಪಾದರೆ ಬದುಕು ಅಂತಹುದೇ ಸಾವಿರ ತಪ್ಪುಗಳ ಮೇಲೆ ನಿಂತಿದೆ. ಒಬ್ಬ ಹುಡುಗ ಹಲವು ಹುಡುಗಿಯರತ್ತ ಆಕರ್ಷಣೆಗೆ ಒಳಗಾಗುವುದು ಎಷ್ಟೂ ಸಹಜವೋ ಅವಳ ನಡೆ ಅಷ್ಟೇ ಸಹಜ. ಹತ್ತಾರು ಹುಡುಗಿಯರ ಶೀಲದೊಂದಿಗೆ ಚೆಲ್ಲಾಟ ಆಡೋ, ಆಡಿ ಅದನ್ನು ಸಮಜಾಯಿಸಿಕೊಳ್ಳೋ ಒಬ್ಬ ಸ್ನೇಹಿತನನ್ನು ಅವೆಲ್ಲವೂ ಸ್ನೇಹದ ಮುಂದೆ ಗೌಣ ಅನಿಸಿ ಅವನನ್ನು ಒಪ್ಪುವಾಗ. ಕೇವಲ ಮುತ್ತು ಕೊಟ್ಟಳೆಂದೋ, ಫ್ಯಾನಿನಲ್ಲಿ ಸಂದರ್ಭಕ್ಕೆ ಬಿದ್ದು ಸ್ವಲ್ಪ.. ಆಗಿ ಮಾತಾಡಿದ್ದನ್ನೇ, ಒಂದು ಆರೋಗ್ಯಕ flirt ನ್ನೇ ದೊಡ್ಡದು ಮಾಡಿ ಆಕೆಯನ್ನು bitch ಎನ್ನುವುದು ತಪ್ಪಲ್ಲವೇ? ಒಬ್ಬ ಅನಾಮಿಕ ನನಗೆ ಇದರ ಬಗ್ಗೆ ಹೇಳಿದ ಒಂದು ಮಾತು ಈಗಲೂ ನೆನಪಿದೆ." ಸೂಳೆ ಎನ್ನುವುದು ಒಂದು ಪವಿತ್ರ ಶಬ್ದ. ಅನುಮಾನಿಸಿ ಅದನ್ನು ಒಬ್ಬರಿಗೆ ಹೊರುವುದು ಅತ್ಯಾಚಾರಕ್ಕೆ ಸಮ. ಯಾಕೆಂದರೆ ಸೂಳೆಯಲ್ಲಿ ಧ್ಯಾನದಂತ ಬದ್ದತೆಯಿರುತ್ತದೆ.ಆಕೆ ನಿಸ್ವಾರ್ಥದ ಕಡಲು". 

ಆಕೆ ನನ್ನ ತೀರ ಹಚ್ಚಿಕೊಂಡಂತೆ ನಾನು ನನ್ನ ಬಗ್ಗೆ ವಿಮರ್ಶೆಗೊಳಗಾಗಿದ್ದೀನಿ. ಅವಳನ್ನು ಅನುಮಾನಿಸಿ ಅನುಮಾನಿಸಿ ಅಳಿಸಿದ್ದೀನಿ,ಅತ್ತೀದ್ದೀನಿ. ಆದರೆ ಆಕೆ ಅನುಮಾನಿಸಿದಷ್ಟು ಹತ್ತಿರವಾಗುತ್ತಿದ್ದಾಳೆ. ಅವಳು ಮೊಬೈಲ್ ಕೊಟ್ಟರೆ ಹುಚ್ಚನಂತೆ .. ನೋಡುತ್ತೇನೆ.ಅವಳ facebok password ಸಿಕ್ಕರೆ ಹಿಸ್ಟರಿಯಲ್ಲ ಜಾಲಾಡುವ ತವಕ. ಏನೂ ಸಿಗದಿದ್ದರೆ ಎಲ್ಲ ಅಳಿಸಿಬಿಟ್ಟಲಾ ಎಂಬ ಅನುಮಾನ. ಎಷ್ಟು ಬಾರಿ ಅವಮಾನಿಸಿದ್ದೇನೋ ಅಷ್ಟು ಬಾರಿ ನನ್ನಲ್ಲಿ ನೋವಾಗಿದೆ.ಇನ್ನೂ ಆಕೆಗೆ? ಈ ಅನುಮಾನದ ರೋಗ ಬಂದಿದ್ದು ಗೆಳೆಯ ರಾಜೇಶನಿಂದ ಆತ ಆಕೆ ಬಗ್ಗೆ ಕೀಳಾಗಿ ಹೇಳಿದ್ದ.ಆಕೆಯ ಬಗ್ಗೆ ಸಾವಿನಂತೆ ಕೊನೆಯವರೆಗೂ ನನ್ನ ಜೊತೆ ಇರಲು ಬಯಸುವ ಜೀವದ ಗೆಳೆಯ ಕೆಲವು ಮಾತುಗಳನ್ನು ಆಡಿದ್ದ. ಆಗಿನಿಂದ ನನ್ನ ಅನುಮಾನ ಸುರುವಾದದ್ದು.ಆದರೆ ಈ ಅನುಮಾನ ಜಾತ್ರೆಯಲ್ಲಿ ಆಕೆ ತೀರ ಹೃದಯವಾಗಿದ್ದಾಳೆ. ಕೆಲವೊಮ್ಮೆ ಬೇರೆಯವರ ದ್ರೋಹ,ಮೋಸ,ಸ್ವಾರ್ಥದಿಂದ ಘಾಸಿಯಾಗಿದೆ.ಹಾಗೇ ಘಾಸಿಯಾದಗಲೆಲ್ಲಾ ಬಗಲಿಗೆ ಕಾದಂಬರಿ ಹಿಡಿದು ಹೊತ್ತಲ್ಲದ ಹೊತ್ತಲ್ಲಿ ಮನೆಬಿಟ್ಟು ನನ್ನ ಸ್ವ-ವಿಮರ್ಶಾ ಸ್ಥಳ ಚಂದ್ರಗಿರಿಗೆ ಹೋಗಿಬಿಡುತ್ತೇನೆ. ಈ ಹಿಂದೆ ಹಾಗೆ ಹೋದದ್ದುಂಟು. ನಾಳೆ ಹೊರಡಲು ಸಿದ್ದನಾಗಿದ್ದೀನಿ.ಗೆಳೆಯ ರವೀಶ ಬೈಯುತ್ತಾನೆ.ಆತನಿಗೆ ನನ್ನ ಈ ಕಾಣೆಯಾಗುವಿಕೆ ಕರುಣೆ ಗಿಟ್ಟಿಸಿಕೊಳ್ಳುವ ಒಂದು ವಾಮಮಾರ್ಗ ನನಗೆ ನನ್ನ ದ್ವಂದ್ವಕ್ಕೆ ಕರ್ಮಮಾರ್ಗ. 

ಆಕೆಯನ್ನು ಬಿಟ್ಟು ಹೋಗಲು ಮನಸಿಲ್ಲ.ಆಕೆ ನಾನು ಕಂಡಂತೆ ಬದಲಾಗುತ್ತಿದ್ದಾಳೆ.ಅದು ನನ್ನ ಭ್ರಮೆಯೂ ಇರಲೂಬಹುದು.ನನ್ನ ಪ್ರೀತಿಸುತ್ತಿದ್ದಾಳೆ,ನನ್ನ ಮದುವೆಯಾಗೋ ಹುಚ್ಚು ಹಂಬಲವಿದೆ. ನಾ ಬಾರದ ದಿನಗಳಲ್ಲಿ,ಭೇಟಿಯಾಗದ ಕ್ಷಣಗಳಲ್ಲಿ,ಅನುಮಾನಿಸಿದ ಗಳಿಗೆಗಳಲ್ಲಿ ಅತ್ತಿದ್ದಾಳೆ, ಕೊರಗಿದ್ದಳೆ.ನನ್ನ ಬಿಡಬೇಡ ಎಂದು ಶರ್ಟು ಬಿಗಿ ಹಿಡಿದು ಎದೆ ಮೇಲೆ ಅತ್ತಿದ್ದಾಳೆ.ಅವಳ ಮೊದಲ ಪ್ರೀತಿ ಅದು ಸತ್ತ ಪರಿ ಹೇಳಿಕೊಂಡಿದ್ದಾಳೆ.ಆಗಾಗ್ಗೆ ಖುಷಿ,ಗಾಬರಿಗೆ ಮೂರ್ಛೆ ಬೀಳುವ ರೋಗವನ್ನು ,ಆ ರೋಗಕ್ಕೆ ಹಿಂಸಿಸೋ ಅವಳ ಅಪ್ಪನ ಕ್ರೌರ್ಯ,ಬೇಜವಬ್ದಾರಿತನ ಹೇಳಿಕೊಂಡಿದ್ದಾಳೆ. ಆಕೆಯನ್ನು bitch ಎಂದವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾಳೆ(ಇದು ನನ್ನ ತೀರ ಕಾಡುವ ಸಂಗತಿ). ಮಗುವಿನ ಮನಸ್ಸು,ಮುಗ್ದತೆಯಿದೆ.ಎಲ್ಲರಿಗೂ ಹೊಂದಿಕೊಳ್ಳುವ ಅವಳ ಪರಿ bitchness ಹೇಗಾದೀತು?.ಇವೆಲ್ಲಾ ಗೊತ್ತಿದ್ದರೂ ಆಕೆಯನ್ನು ಈಗಲೂ ಅನುಮಾನಿಸುತ್ತೇನೆ. ಅದನ್ನೂ ಬಿಡಲೂ ಯತ್ನಿಸಿ ಯತ್ನಿಸಿ ಸೋತಿದ್ದೇನೆ.ಹಾಗೇಯೆ ಅವಳ ಪ್ರೀತಿಯನ್ನು ಮೋಹ ಎಂದೂ ಬಿಡಲೂ ಇನ್ನೂ ಯತ್ನಿಸುತ್ತಿದ್ದೇನೆ.ಸದಾ ನನಗೆ ಒಳಿತು ಬಯಸೋ ಗೆಳೆಯರಿಗೋಸ್ಕರ ಅವಳನ್ನು ಬಿಡಲೇಬೇಕಾಗಿದೆ.ಆದರೆ ಅದು ಸರಿಯಾ?ತಪಾ? ದಿನಾ ರಾತ್ರಿ ಅವಳ ಮೇಲಿನ ಆರೋಪ ಸುಳ್ಳಿರಲಿ ಎಂದೂ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. 

ಇದೆಲ್ಲ ನನ್ನ ಭಾವುಕತನದ ತಿಕ್ಕಲುತನವಾ ಎಂದೆನಿಸುತ್ತದೆ.ಹಾಗೇ ಎನಿಸಿದಾಗಲೆಲ್ಲ ನನ್ನ ಚಂದ್ರಗಿರಿಗೆ ಹೊರಡಲು ಅನುವಾಗುತ್ತೀನಿ.ಈಗಲೂ ಅವಳ ಬಗ್ಗೆ ಅನುಮಾನದ ಬುಗ್ಗೆ ಎದ್ದಿದೆ.ನನ್ನ ಮನದಲ್ಲಿ ಅವಳ ಪ್ರೀತಿ ನಿಜವಿರಲಿ, ಅವಳ ಮೇಲಿನ ಆರೋಪ ಸುಳ್ಳಿರಲಿ,ಸಾಯೋವರೆಗೂ ಬಯ್ಯುತ್ತಾಲಾದರೂ ನನ್ನ ಗೆಳೆಯರು ನನ್ನೊಂದಿಗಿರಲಿ ಎಂದೇ ಬಯಸುತ್ತಾ ಬಗಲಿಗೆ ಜೋಗಿಯ "ನದಿ ನೆನಪಿನ ಹಂಗು". ಸಿಕ್ಕಿಸಿಕೊಂಡಿದ್ದೀನಿ. ಯಾಕೋ ಈ ಪದಗಳೆಲ್ಲ ನನ್ನದಲ್ಲ ಅನಿಸುತ್ತಿದೆ. ಅದಕ್ಕೆ ಮಯೂರಕ್ಕೆ ಕಳಿಸಲು ಕತೆಯಂತೆ ಬರೆದು "ನನ್ನದಲ್ಲ" ಎಂಬ ಶೀರ್ಷಿಕೆ ಇಟ್ಟು ತೆರಳುತ್ತಿದ್ದೀನಿ.

 *****                                                               ‍

 ಜಯಂತನ ಕತೆ ಮುಗಿದಿದೆ. ಸಾಲು ಸಾಲು ಪ್ರಶ್ನೆಗಳನ್ನು ಹುಟ್ಟುಹಾಕಿ…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Naveen
Naveen
11 years ago

Its so nice chari…..
E ninna kavite-Kate galanna munduvaresu….
All the best…

1
0
Would love your thoughts, please comment.x
()
x