ಲೇಖನ

ದೋಸ್ತಿ ಖಾತೆಯವರಿಂದ ಕತೆ ಮಾತು ಆಹ್ವಾನ

kate-maatu-invitation
ಬೆಳಗಾವಿಯಲ್ಲಿ ಒಂದಷ್ಟು ಕತೆಗಾರರು ಸೇರಿ ಒಬ್ಬರ ಕತೆಗಳ ಬಗ್ಗೆ ಇನ್ನೊಬ್ಬರು ಮಾತನಾಡುವ ವಿಶಿಷ್ಟ "ಕತೆ ಮಾತು" ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.  ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಜೊತೆಗೆ ಲಗತ್ತಿಸಲಾಗಿದೆ.  

ಕಾರಣ, ಸಹೃದಯರಾದ ತಾವು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ.

ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ.

13ನೇ ನವೆಂಬರ್ 2016,  ಕೇಂದ್ರ ಗ್ರಂಥಾಲಯ, ಡಿ.ಸಿ. ಕಂಪೌಂಡ್, ಬೆಳಗಾವಿ

ಕಾರ್ಯಕ್ರಮದ ಆಶಯ:
ಸಮಕಾಲೀನ ಕತೆಗಾರ ಗೆಳೆಯರು ಕೂತು ಪರಸ್ಪರರ ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುವ ತನ್ಮೂಲಕ ಹೊಸ ಹೊಳಹುಗಳನ್ನು ಅರಿಯುವ ಚಿಕ್ಕ ಪ್ರಯತ್ನ. 

ಒಬ್ಬರು ತಮ್ಮ ಮೆಚ್ಚಿನ ಸಹಲೇಖಕನ ಮೆಚ್ಚಿದ ಕತೆಯೋ, ಕತೆ ಸಂಕಲನವೋ ಅಥವಾ ಅವರು ಬರೆದೆಲ್ಲ ಕತೆಗಳ ಬಗ್ಗೆಯೋ ಅರ್ಧ ಗಂಟೆ ಮಾತನಾಡುವುದು. ಹೀಗೆ ಸೇರಿದ ಎಲ್ಲ ಕತೆಗಾರರ ಬಗ್ಗೆ ಮಾತುಕತೆ ಮಾಡುವುದು.

ಇದನ್ನು ಅನೌಪಚಾರಿಕವಾಗಿ ಮಾಡುವ ಉದ್ದೇಶ ಇರುವುದರಿಂದ ಇಲ್ಲಿ ಎಲ್ಲರೂ ಸಮಭಾಗಿಗಳು. ಅಧ್ಯಕ್ಷ, ಅತಿಥಿ ಕುರ್ಚಿಗಳು ಇರುವುದಿಲ್ಲ. 

ಈ ಕತೆ ಮಾತು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದೇವೆ. ೧೩ನೇ ತಾರೀಖು ಬೆಳಿಗ್ಗೆ ೯ರಿಂದ ನಾಲ್ಕು ಗೋಷ್ಠಿಗಳಲ್ಲಿ, ಬೆಳಿಗ್ಗೆ ಎರಡು ಗೋಷ್ಠಿ, ಊಟದ ನಂತರ ಎರಡು‌ ಗೋಷ್ಠಿ. ಹೀಗೆ ಒಂದು ದಿನಪೂರ್ತಿ ಎಲ್ಲರೂ ಸೇರುವ ಕಾರ್ಯಕ್ರಮ.

ಕಾರ್ಯಕ್ರಮಕ್ಕೆ ಇರುವ ಮಹತ್ತರ ಉದ್ದೇಶ ಸಮಕಾಲೀನ ಕತೆಗಾರರನ್ನು ಸೇರಿಸಿ ಒಬ್ಬರನ್ನೊಬ್ಬರು ಬೇರೆ ಬೇರೆ ಕೋನಗಳಿಂದ ನೋಡುವುದಷ್ಟೆ.

ಧನ್ಯವಾದಗಳೊಂದಿಗೆ,

ತಮ್ಮ ವಿಶ್ವಾಸಿ,

ಪಿ. ಮಂಜುನಾಥ, ಇಂದ್ರಕುಮಾರ ಎಚ್.ಬಿ., ಮಯೂರ ಬರಗಾಲೆ, ಪ್ರವೀಣ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *