ಲೇಖನ

ದೋನಿಯ ತಪ್ಪು ಯಾವುದು ?: ರಘು ಕೆ.ಟಿ.

ಭಾರತ ತಂಡಕ್ಕೆ 2011 ರಿಂದ ದೋನಿ ನಾಯಕತ್ವ ವಹಿಸಿಕೊಂಡಾಗಿನಿಂದ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಭಾರತವು ಅನೇಕ ಯಶಸ್ವಿಗಳನ್ನು ಗಳಿಸಿ, ವಿಶ್ವ ದರ್ಜೆಯ ತಂಡವಾಗಿ ಹೊರಹೊಮ್ಮಿತು. ದೋನಿ ಮಾಡಿದ ಹಲವಾರು ತಂತ್ರಗಾರಿಕೆ, ಬದಲಾವಣೆಗಳು, ಕೈಗೊಂಡ ನಿರ್ಧಾರಗಳಿಂದ ಭಾರತವು 20-20 ವಿಶ್ವಕಪ್, ವಿಶ್ವಕಪ್-2011 ಸೇರಿದಂತೆ ಎಲ್ಲ ಪ್ರಮುಖ ಪಂದ್ಯಾವಳಿಗಳನ್ನು ಜಯಿಸಿ ವಿಶ್ವ ಖ್ಯಾತಿಯನ್ನು ಗಳಿಸಿತ್ತು. ಆಗ ಎಲ್ಲ ಪತ್ರಿಕಾ ಮಾಧ್ಯಮದವರು, ಹಿರಿಯ ಆಟಗಾರರು ದೋನಿಯ ನಿರ್ಧಾರಗಳಿಗೆ ಬೆಂಬಲ ಮತ್ತು ಶ್ರೇಷ್ಠ ನಾಯಕರೆಂದು ಹಾಡಿ ಹೊಗಳಿದರು.

ಆದರೆ ಬಾಂಗ್ಲಾ ದೇಶದ ವಿರುದ್ಧ ಕೇವಲ ಒಂದು ಏಕದಿನ ಸರಣಿ ಸೋತಿರುವುದಕ್ಕೆ ನಾಯಕತ್ವದ ಬದಲಾವಣೆಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಈ ಸರಣಿಯಲ್ಲಿ ದೋನಿ ಬ್ಯಾಟಿಂಗ್ ಹಾಗೂ ಕೀಪಿಂಗ್, ನಾಯಕತ್ವವನ್ನು ಚೆನ್ನಾಗಿಯೇ ಮಾಡಿರುತ್ತಾರೆ. ಅವರ ಬಗ್ಗೆ ಟೀಕಿಸಿರುವ ಕೊಹ್ಲಿ ತಮ್ಮ ಬ್ಯಾಟಿಂಗ್ ನಿಂದ ರನ್ ಮಳೆ ಹರಿದುಬರದಿರುವ ಬಗ್ಗೆ ಮಾತನಾಡದೇ ಕೇವಲ ದೋನಿಯ ಕೆಲವೊಂದು ನಿರ್ಧಾರಗಳೇ ಕಾರಣ ಎಂದು ಹೇಳಿರುವುದು ಬೇಸರದ ಸಂಗತಿ. ಕೊಹ್ಲಿಯನ್ನು ಎಲ್ಲ ಹಂತಗಳಲ್ಲಿಯೂ ಬೆಂಬಲಿಸಿ ನಿಂತ ದೋನಿಯ ವಿರುದ್ಧವೇ ಈಗ ಉಪನಾಯಕ ತಿರುಗಿಬಿದ್ದಿರುವುದು ಭಾರತ ತಂಡದ ಡ್ರೆಸಿಂಗ್ ರೋಮ್ನಲ್ಲಿನ ವಾತಾವರಣ ಸರಿಯಿಲ್ಲ ಮತ್ತು ತಂಡದಲ್ಲಿ ಗುಂಪುಗಾರಿಕೆ ಇರುವುದು ಜಗತ್ತಿಗೆ ತೋರಿಸುತ್ತಿದೆ. ವಿಶ್ವದ ಎಲ್ಲ ತಂಡಗಳ ಡ್ರೆಸಿಂಗ್ ರೋಮ್ ವಾತಾರಣಕ್ಕೆ ಹೋಲಿಸಿದ್ದರೇ ಭಾರತವೇ ಉತ್ತಮವೆನ್ನುವ ಭಾವನೆ ಎಲ್ಲರಲ್ಲಿತ್ತು. ಆದರೆ ಈಗ ಎಲ್ಲವೂ ಹರಿದ ಗಾಳಿಪಟದಂತಾಗಿದೆ.

ಮೊದಲು ಭಾರತೀಯ ತಂಡದವರೆಲ್ಲರೂ ಒಂದೇ ಎಂಬ ಭಾವನೆಯಿಂದ ಆಟವಾಡಿದರೇ ಮಾತ್ರ ಗೆಲ್ಲುವ ಸಾಧ್ಯ. ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ದೋನಿಯ ಬಗ್ಗೆ ಪ್ರಶ್ನಿಸುವವರು ತಂಡದಲ್ಲಿರುವ ಇತರ ಆಟಗಾರರ ಪ್ರದರ್ಶನವನ್ನು ಸಹ ಗಮನಿಸಬೇಕು. ಹಲವಾರು ಆಟಗಾರರು ಕೆಲವು ತಿಂಗಳುಗಳಿಂದಲೂ ಸರಿಯಾಗಿ ಆಟವಾಡದಿದ್ದರೂ ಅವರನ್ನು ಏಕೆ ತಂಡಕ್ಕೆ ಆಯ್ಕೆ ಮಾಡುತ್ತಿದ್ದಾರೆ ಹಾಗೂ ಆಯ್ಕೆಗೊಂಡವರೆಲ್ಲರನ್ನು ಏಕೆ ತಂಡದಲ್ಲಿ ಆಡಿಸುತ್ತಿಲ್ಲ..? ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋಗಬಹುದು, ಇಲ್ಲಿ ಯಾರು ಅವರವರ ಹಿತಕ್ಕಾಗಿ ಆಟವಾಡುತ್ತಿಲ್ಲ, ಎಲ್ಲರೂ ಭಾರತಕ್ಕಾಗಿಯೇ ಆಟವಾಡುತ್ತಿದ್ದೇವೆಂಬ ಭಾವನೆಯನ್ನು ಬೆಳೆಸಿಕೊಂಡು, ಪಂದ್ಯಗಳನ್ನು ಗೆದ್ದು ಭಾರತ ಕೀರ್ತಿಯನ್ನು ವಿಶ್ವದಾದ್ಯಂತ ತನ್ನ ಬಾವುಟವನ್ನು ಹಾರಿಸಬೇಕು ಎಂಬುದು ಪ್ರತಿಯೊಬ್ಬ ಭಾರತೀಯರ ಆಶಯ.

-ಕೆ.ಟಿ.ಆರ್. ಬೆಂಗಳೂರು.    

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *