ಜಗತ್ತಿನಲ್ಲಿ ತೃತೀಯ ಲಿಂಗದ ಜನರನ್ನು ಜನರೆಂದು ಬಾವಿಸದೆ ನಿರಂತರ ಶೋಷಣೆಗೆ ಒಳಪಡುವಂತ ಸಮುದಾಯ ಇದು .ಅವರಷ್ಟೆ ಶೋಷಣೆಗೆ ಒಳಗಾದ ಇನ್ನೊಂದು ಸಮುದಾಯ ಇದೆ ಅದು ದೇವದಾಸಿ ಸಮುದಾಯ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ದಲಿತ ಹೆಣ್ಣು ಮಕ್ಕಳನ್ನು ಮೇಲ್ಜಾತಿಯವರು ತಮ್ಮ ಭೋಗಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅವರನ್ನು ಹೀನಾಯವಾಗಿ ಶೋಷಣೆ ಮಾಡುವ ಪ್ರವೃತ್ತಿಯು ಇನ್ನು ಕೆಲವೊಂದು ಸ್ಥಳಗಳಲ್ಲಿ ಜೀವಂತವಾಗಿದೆ. ಅನೇಕ ಮುಗ್ಧ ಹೆಣ್ಣು ಮಕ್ಕಳು ಈ ಪಾಪದ ಪದ್ದತಿಗೆ ತಿಳಿದೋ ತಿಳಿಯದೆಯೋ ಬಲಿಯಾಗುತ್ತಿದ್ದಾರೆ. ಮೂಢನಂಬಿಕೆ ಮತ್ತು ಬಡತನ ಕಾರಣ ನೀಡಿ ಒಂದು ಹೆಣ್ಣನ್ನು ಇಂತಹ ಸ್ಥಿತಿಗೆ ತಳ್ಳುವುದು ಎಷ್ಟರ ಮಟ್ಟಗೆ ಸರಿ ಇದೆ?
ದೇವದಾಸಿ ಸಮುದಾಯದವರನ್ನು ಸಮಾಜದ ಶ್ರೇಣಿಯಲ್ಲಿ ತೀರಾ ಕೆಳಮಟ್ಟದಾಗಿ ನೋಡುತ್ತಿದ್ದಾರೆ. ಅವರಿಗೂ ಬದುಕುವ ಹಕ್ಕಿದೆ ಎಂದು ಯಾರು ಯೋಚನೆ ಮಾಡತ್ತಿಲ್ಲ. ಮೌಢ್ಯತಗೆ ಮಾರುಬಿದ್ದು ಅಮಾಯಕ ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುತ್ತಿದ್ದಾರೆ. ಒಂದು ಹೆಣ್ಣಿಗೆ ಅರಿಯದ ವಯಸ್ಸಿನಲ್ಲಿ ದೇವರ ಹೆಸರಿನಲ್ಲಿ ಮುತ್ತು ಕಟ್ಟಿ ಸುಂದರ ಬದುಕನ್ನು ಅಪಾಯಕ್ಕೆ ತಳುತ್ತಾರೆ. ಕೊನೆಗೆ ಅವರು ಮಾರಣಾಂತಿಕ ರೋಗಕ್ಕೆ ಬಲಿಯಾಗುತ್ತಾರೆ. ಇನ್ನು ಅವರಿಗೆ ಜನಿಸಿದ ಮಕ್ಕಳಿಗೆ ಯಾರುತಾನೆ ಆಶ್ರಯ ಕೊಡುತ್ತಾರೆ. ದೇವದಾಸಿ ಮಕ್ಕಳು ಎನ್ನುವ ಕಾರಣದಿಂದ ಸಮಾಜವು ತನ್ನ ತಾಯಿಯನ್ನು ನೋಡಿದ ದೃಷ್ಟಿಯಿಂದ ನೋಡುತ್ತಿದೆ. ಆ ಮಗು ಮುಂದಿನ ದಿನಗಳಲ್ಲಿ ಶಾಲೆಗೆ ದಾಖಲಾತಿಗೆ ಹೋದಾಗ ಎದುರಾಗುವ ಮೊದಲ ಪ್ರಶ್ನೆ ತಂದೆ ಯಾರು? ಅಂತಾ. ಇದನ್ನು ಕೇಳಿದಾಗ ಅವರಿಗೆ ಆಗುವ ಅವಮಾನ ಅಷ್ಟಿಷ್ಟಲ್ಲ. ಆಗವರು ತಂದೆ ಇಲ್ಲೆಂದು ತಾಯಿ ಹೆಸರು ಹೇಳಿ ದಾಖಲಾತಿ ಮಾಡುತ್ತಾರೆ. ಅದರೆ ಮಕ್ಕಳು ಅಮ್ಮನನ್ನು ಅಪ್ಪನ ಬಗ್ಗೆ ಕೇಳಿದಾಗ ಏನೊ ಒಂದು ನೆಪ ಹೇಳಿ ಸಮಾದಾನ ಪಡಿಸುತ್ತಾಳೆ. ದಿನಗಳು ಕಳೆದಂತೆ ಸಹಪಾಠಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಆಗವುದಿಲ್ಲ. ಅದೇ ನೋವಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಕೆಲವು ದೇವದಾಸಿ ಹೆಣ್ಣು ಮಕ್ಕಳು ತಮ್ಮ ಊರಲ್ಲಿ ಇಂದುಕೊಂಡು ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಬಾಂಬೆ, ಪುಣೆ, ಗೋವಾ ಮುಂತಾದ ಕಡಗೆ ವಲಸೆ ಹೋಗುತ್ತಿದ್ದಾರೆ. ಮನೆಯ ಜವಾಬ್ದಾರಿ ಇರುದರಿಂದ ಅವರು ವಲಸೆ ಹೋಗಬೇಕಾಗಿ ಬರುತ್ತದೆ. ಪ್ರತಿಯೊಬ್ಬ ತಾಯಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುವುದು ಸಹಜ. ಆದರೆ ಅವರಿಗೆ ಅಷ್ಟು ಸಾಮಥ್ರ್ಯ ಇರುವುದಿಲ್ಲ.
ಭಾರತ ದೇಶದಲ್ಲಿ ಕರ್ನಾಟಕ ದೇವದಾಸಿ ಪದ್ದತಿ ಆಚರಣೆಯಲ್ಲಿ ಮುಂಚೂಣೆಯಲ್ಲಿದೆ. ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗಿತ್ತು. ಸರ್ಕಾರವು ಈಗ ಸ್ವಲ್ಪ ಮಟ್ಟಿಗೆ ಅದನ್ನು ನಿಯಂತ್ರಣ ಮಾಡಿದೆ. ಬೆಳಗಾವಿ ಜಿಲ್ಲೆಯ ಗೋಕಾಕ, ಅವರಾದಿ, ತಿಮ್ಮಾಪೂರ, ವೆಂಕಟಾಪೂರ, ಯಾದವಾಡ ಹಾಗೂ ಬಾಗಲಕೋಟಿ ಜಿಲ್ಲೆಯ ಶಿರೋಳ,ರೂಗಿ, ಬೆಳಗಲಿ ಇತ್ಯಾದಿ ಇನ್ನೂ ಅನೇಕ ಗ್ರಾಮಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ದೇವದಾಸಿ ಮಹಿಳೆರು ಇದ್ದಾರೆ. ಇಂದು ಅವರು ಸ್ವಂತ ಕೆಲಸ ಮಾಡುಕೊಳ್ಳುತ್ತಿದ್ದಾರೆ. ಆದರೆ ಬೆರಳೆಣಿÀಕೆಯಷ್ಟು ದೇವದಾಸಿ ಮಹಿಳೆಯರು ವ್ಯೆಶ್ಯಾವಾಟಿಕೆಯನ್ನು ಮುಂದುವರಿಸಿದ್ದಾರೆ. ಕೂಲಿಗೆ ಹೋಗುವವರಿಗೆ ಕೆಲವು ದಿನಾ ಮಾತ್ರಾ ಕೆಲಸ ಸಿಗುತ್ತದೆ. ಕೆಲಸ ಸಿಗದಿದ್ದ ಪಕ್ಷದಲ್ಲಿ ಅವರಿಗೆ ದ್ಯೆನಂದಿನ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅಸ್ಯಾದವಾದ ಮಾತಾಗಿದೆ. 8 ರಿಂದ 9ನೆ ತರಗತಿಯವರೆಗೂ ಶಾಲೆಗೆ ಹೋದ ಮೇಲೆ ಮುಂದಿನ ಶಿಕ್ಷಣ ಕೊಡಿಸಲು ಪೋಷಕರಿಗೆ ತೊಂದರೆಯಾಗುತ್ತಿದೆ. ಈ ಸ್ಥಿತಿಯಲ್ಲಿ ತಾಯಿಯು ತನ್ನ ಜೊತೆ ಕೂಲಿಗೆ ಬಾ ಎಂದು ಕರೆದುಕೊಂಡು ಹೋಗುತ್ತಾರೆ. ಆಗ ಆ ಮಗು ತನ್ನ ಶಾಲೆಯನ್ನು ಅರ್ದಕ್ಕೆ ಮೊಟಕುಗೊಳಿಸಿ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತವೆ. ಶಿಕ್ಷಣ ಪಡೆಯಬೇಕೆಂಬ ಆಸೆಯು ಕೂಡಾ ನಿರಾಸೆಯಾಗುತ್ತವೆ. ಕನಸುಗಳು ಅಲ್ಲಿಯೇ ಕಮರಿ ಹೋಗುತ್ತದೆ.
ಸರ್ಕಾರವು 1984 ರಲ್ಲಿ “ದೇವದಾಸಿ ನಿರ್ಮೂಲನಾ ಕಾಯ್ದೆ”ಯನ್ನು ಜಾರಿಗೆ ತಂದಿದೆ. ಅದು ಕೆಲವೊಂದು ಕಡೆಯಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಿದ್ದರೂ ಸಹ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿಲ್ಲ. ಸರ್ಕಾರ ಪಿಂಚಣಿ, ಸಬ್ಸಿಡಿಯಲ್ಲಿ ಧನಸಹಾಯ ಮಾಡಿ ಅವರಿಗೆ ಸ್ವಾವಲಂಬನೆ ಜೀವನ ನಡೆಸಲು ಅವಕಾಶ ಮಾಡಿ ಕೊಟ್ಟಿದೆ. ಅದು ಎಷು ಜನರಿಗೆ ಸಿಗುತ್ತಿದೆ ಎಂದು ನೋಡಬೇಕಿದೆ. ದೇವದಾಸಿ ಮಹಿಳೆಯರು ಇರುವ ಗ್ರಾಮಗಳನ್ನು ಗುರ್ತುಸಿ ಅವರ ಬಗ್ಗೆ ಹಾಗೂ ಅವರ ಮಕ್ಕಳ ಶಿಕ್ಷಣದ ಬಗ್ಗೆ ಸರ್ವೆ ಮಾಡಬೇಕು ಆಗ ನ್ಯೆಜವಾದ ಸ್ಥಿತಿ ಅರ್ಥವಾಗುತ್ತದೆ. ಬಜೆಟ್‍ನಲ್ಲಿ ಮಂಡನೆಯಾಗುವ ಹಣವು ಅವರ ಕೈಗೆ ಸೇರುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ಸಿಗುತ್ತಿದೆ. ಇದರಿಂದ ಅವರು ತಕ್ಕ ಮಟ್ಟಿನ ಜೀವನ ನಡೆಸಲು ಸಾದ್ಯವೇ? ಸರ್ಕಾರಗಳು ಯಾವುದೇ ಯೋಜನೆಗಳು ತಂದರೂ ಸಹ ಅವು ಇಲ್ಲಿಯವರೆಗೂ ತಲುಪುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಯಾರನ್ನು ನಂಬಿ ಇವರುಗಳು ಬದುಕಬೇಕಾಗಿದೆ. ಸರ್ಕಾರ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದು ಅವರನ್ನು ರಕ್ಷಿಸುವ ಕೆಲಸ ಮಾಡಿದಾಗ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದಾಗಿದೆ.
-ಜಯಶೀ ಎಸ್ ಎಚ್.
ಹೌದು. ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳುವೆ. ಹಿಂದಿನಷ್ಟು ಈಗ ಈ ಸಮಸ್ಯೆ ಇಲ್ಲವಾದರೂ, ಕೆಲವು ಹಳ್ಳಿಗಳಲ್ಲಿ ಇನ್ನೂ ಇದೆ. ಅದನ್ನು ಪೂರ್ತಿ ಕಿತ್ತೆಸೆಯಲು ಸಮಾಜದ ಎಲ್ಲರೂ ಮುಂದಾಗಬೇಕು. ಬರೀ ಕಾನೂನು ಕ್ರಮದಿಂದ ಸಾಧ್ಯವಾಗದು…